ಪತ್ರಿಕೋದ್ಯಮದ ವಿಷಯದಲ್ಲಿ ಯಾವುದೇ ಶಿಕ್ಷಣ ಪಡೆಯದಿದ್ದರೂ ಸನಾತನ ಪ್ರಭಾತದ ಸುದ್ದಿಗಾರರ ಮತ್ತು ಸಂಪಾದಕರ ಲೇಖನದಿಂದ ರಾಷ್ಟ್ರ ಮತ್ತು ಧರ್ಮಗಳ ಪರಿಣಾಮಕಾರಿ ಜಾಗೃತಿಯಾಗುವುದು !

ಪರಾತ್ಪರ ಗುರು ಡಾ. ಆಠವಲೆ

‘ಸದ್ಯ ದೇಶದಾದ್ಯಂತ ದಿನಪತ್ರಿಕೆ ಮತ್ತು ಸುದ್ದಿ ವಾಹಿನಿಗಳು ಅಧಿಕ ಸಂಖ್ಯೆಯಲ್ಲಿವೆ. ಈ ಪ್ರಸಾರ ಮಾಧ್ಯಮಕ್ಕಾಗಿ ಕೆಲಸ ಮಾಡುವ ಹೆಚ್ಚಿನ ಸುದ್ದಿಗಾರರು ಮತ್ತು ಸಂಪಾದಕರು ಪತ್ರಿಕೋದ್ಯಮದಲ್ಲಿ ವಿಶೇಷ ಶಿಕ್ಷಣ ಪಡೆದಿರುತ್ತಾರೆ; ಆದರೂ ಈ ಪತ್ರಕರ್ತರಿಂದ ಇಂದಿನವರೆಗೆ ಜನರ ಮನಸ್ಸಿನಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಪ್ರೀತಿ ನಿರ್ಮಾಣ ಮಾಡಲು ಆಗಲಿಲ್ಲ ಅಥವಾ ಸಮಾಜವನ್ನು ಸಾಧನೆಯ ಕಡೆಗೆ ಹೊರಳಿಸಲು ಆಗಲಿಲ್ಲ. ಇದರಿಂದ ಈ ಪತ್ರಕರ್ತರ ಒಟ್ಟು ಸ್ವರೂಪವನ್ನು ನೋಡಿದರೆ, ‘ಯಾವ ಸುದ್ದಿ ಮುದ್ರಿಸಿದರೆ, ದಿನಪತ್ರಿಕೆಗಳ ಮಾರಾಟ ಹೆಚ್ಚಾಗುವುದು, ಹಿತಚಿಂತಕರನ್ನು ಹೇಗೆ ಸಮಾಧಾನ ಪಡಿಸುವುದು’, ಈ ಬಗ್ಗೆಯೇ ಪ್ರಾಮುಖ್ಯತೆಯಿಂದ ವಿಚಾರ ಮಾಡಲಾಗುತ್ತದೆ; ಆದರೆ ‘ಸನಾತನ ಪ್ರಭಾತ’ದ ವಿಚಾರವೇ ಬೇರೆ ಇದೆ. ಸತ್ತ್ವಗುಣಾಧಿಷ್ಠಿತ ರಾಷ್ಟ್ರರಚನೆಯ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ಯೇಯವಿಟ್ಟು ಕಾರ್ಯ ಮಾಡುವ ಸನಾತನ ಪ್ರಭಾತದ ಸುದ್ದಿಗಾರರು ಮತ್ತು ಸಂಪಾದಕರು ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಯಾವುದೇ ಶಿಕ್ಷಣ ಪಡೆಯದಿದ್ದರೂ ಅವರು ರಾಷ್ಟ್ರ ಮತ್ತು ಧರ್ಮಗಳ ಹಿತಕ್ಕಾಗಿ ವಿವಿಧ ವಿಷಯಗಳ ಅಧ್ಯಯನ ಮಾಡಿ, ಹಾಗೆಯೇ ದಿನನಿತ್ಯ ಘಟಿಸುವ ಘಟನೆಗಳ ಸುದ್ದಿಗಳನ್ನು ಸಿದ್ಧಪಡಿಸಿ ಅಭ್ಯಾಸಪೂರ್ಣವಾಗಿ ಮಂಡಿಸುತ್ತಾರೆ. ಇದರಿಂದ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಪರಿಣಾಮವಾಗುತ್ತಿದೆ. ಸನಾತನ ಪ್ರಭಾತಕ್ಕೆ ಈಶ್ವರ ಮತ್ತು ಸಂತರ ಆಶೀರ್ವಾದ ಲಭಿಸಿರುವುದರಿಂದ ಅದು ಚೈತನ್ಯಮಯವಾಗಿದೆ. ಈ ಚೈತನ್ಯದ ಪರಿಣಾಮದಿಂದ ಸನಾತನ ಪ್ರಭಾತ ಓದಿದರೆ ಹಿಂದೂಗಳಲ್ಲಿ ಜಾಗೃತಿಯಾಗಿ ಧರ್ಮಾಚರಣೆ ಮಾಡುತ್ತಿದ್ದಾರೆ. ಹಾಗೆಯೇ ಸಂಘಟಿತರಾಗಿ ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಸಹಿತ ಇತರ ಸಮವಿಚಾರ ಸಂಘಟನೆಗಳ ಧರ್ಮಕಾರ್ಯದಲ್ಲಿ ಸಹಭಾಗಿಯಾಗಿದ್ದಾರೆ. ಇದೇ ಸನಾತನ ಪ್ರಭಾತದ ಪತ್ರಕರ್ತರ ಕಳೆದ ೨೦ ವರ್ಷಗಳ ವ್ಯಾಪಕ ಕಾರ್ಯಗಳ ಫಲಶೃತಿಯಾಗಿದೆ.’

– (ಪರಾತ್ಪರ ಗುರು) ಡಾ. ಆಠವಲೆ