‘ಸನಾತನ ಪ್ರಭಾತ ಕಾರ್ಯದ ಉದ್ದೇಶವು ವ್ಯವಸಾಯಿಕ, ಅಂದರೆ ಹಣಗಳಿಸಲು ಅಲ್ಲ, ಅದರ ಕಾರ್ಯದ ಉದ್ದೇಶವು ಒಂದು ಉದಾತ್ತ ಧ್ಯೇಯ ಅಂದರೆ ಈಶ್ವರೀ ರಾಜ್ಯದ ಸ್ಥಾಪನೆಗೆ ಸಂಬಂಧಿಸಿದೆ. ಸನಾತನ ಪ್ರಭಾತದ ಅಡಿಪಾಯವನ್ನು ಪರಾತ್ಪರ ಗುರು ಡಾ. ಆಠವಲೆಯವರು ರಚಿಸಿದ್ದರಿಂದ ಅದರ ಕಾರ್ಯವು ಚಿರಂತ, ಮೂಲ ಈಶ್ವರೀ ತತ್ತ್ವಕ್ಕೆ ಸಂಬಂಧಪಟ್ಟಿದೆ. ಸನಾತನ ಪ್ರಭಾತವನ್ನು ಸಾಧಕರು ‘ಸಾಧನೆ ಎಂದು ನಡೆಸುತ್ತಿರುವುದರಿಂದ ಅದರಲ್ಲಿ ರಜ-ತಮಯುಕ್ತ ಸ್ಪಂದನಗಳಿಲ್ಲ. ಅದರಲ್ಲಿ ಮೂಲತಃ ಸಾತ್ತ್ವಿಕತೆಯಿರುವುದರಿಂದ ತನ್ನಿಂದತಾನೇ ಅದರ ಅಸ್ತಿತ್ವದಿಂದಲೇ ವಾತಾವರಣವು ಶುದ್ಧವಾಗುತ್ತದೆ. ಅದರಿಂದ ಎಲ್ಲರಿಗೂ ಆಧ್ಯಾತ್ಮಿಕ ಲಾಭವಾಗುತ್ತಿದೆ.
ಈಶ್ವರನ, ಪರಾತ್ಪರ ಗುರು ಡಾಕ್ಟರರ, ಹಾಗೆಯೇ ಅನೇಕ ಸಂತರ ಕೃಪಾಶೀರ್ವಾದದಿಂದ ಸನಾತನ ಪ್ರಭಾತದ ಕಾರ್ಯ ಮುಂದುವರಿಯುತ್ತಿದೆ. ಅದರ ಮೇಲೆ ಧರ್ಮದ್ರೋಹಿಗಳಿಂದ‘ನಿರ್ಬಂಧಗಳಂತಹ ಸಂಕಟಗಳು ಬಂದರೂ ಅದರ ಈಶ್ವರೀ ಕಾರ್ಯದಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗಿಲ್ಲ: ಈಶ್ವರನ, ಪರಾತ್ಪರ ಗುರು ಡಾಕ್ಟರರ, ಹಾಗೆಯೇ ಅನೇಕ ಸಂತರ ಕೃಪಾಶೀರ್ವಾದದಿಂದ ಸನಾತನ ಪ್ರಭಾತದ ಕಾರ್ಯವು ನಡೆಯುತ್ತಿರುವುದರಿಂದ ಆರ್ಥಿಕ ನಷ್ಟವನ್ನು ಸಹಿಸಿಯೂ ಮತ್ತು ಅದರ ಮೇಲೆ ಧರ್ಮದ್ರೋಹಿಗಳಿಂದ ‘ನಿರ್ಬಂಧಗಳಂತಹ ಸಂಕಟಗಳು ಎದುರಾದರೂ ಅದರ ಈಶ್ವರೀ ಕಾರ್ಯದಲ್ಲಿ ಯಾವುದೇ ರೀತಿಯ ವ್ಯತ್ಯಯವುಂಟಾಗಿಲ್ಲ, ತದ್ವಿರುದ್ಧ ಅದರ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು ಅದರಲ್ಲಿ ವೃದ್ಧಿಯೂ ಆಗುತ್ತಿದೆ.
– ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.