ಭಾರತ ಮತ್ತು ಶ್ರೀಲಂಕಾ ಇವೆರಡೂ ದೇಶಗಳ ನಡುವಿನ ಹಿಂದೂ ಮಹಾಸಾಗರದಲ್ಲಿರುವ ರಾಮಸೇತುವೆಯು ಹಿಂದೂಗಳ ಧಾರ್ಮಿಕ ಬಾಂಧವ್ಯದ ವಿಷಯವಾಗಿದೆ. ರಾಮಸೇತುವೆಯೊಂದಿಗೆ ರಾಮಭಕ್ತರ ಶ್ರದ್ಧೆಯು ಜೋಡಿಸಲ್ಪಟ್ಟಿದೆ. ಭಾರತೀಯ ಪುರಾಣಶಾಸ್ತ್ರಾನುಸಾರ ಸೀತಾಮಾತೆಯನ್ನು ಶೋಧಿಸಲು ರಾಮೇಶ್ವರಮ್‌ನಿಂದ ಶ್ರೀಲಂಕಾಗೆ ಹೊರಟ ಶ್ರೀರಾಮನು ವಾನರರ ಸಹಾಯದಿಂದ ದಿವ್ಯವಾದಂತಹ ಈ ಸೇತುವೆಯನ್ನು ನಿರ್ಮಿಸಿದ್ದನು ಮತ್ತು ರಾವಣನ ಮೇಲೆ ದಾಳಿ ಮಾಡಿದ್ದನು. ಹಾಗಾಗಿ ಇದು ಮಹತ್ವ ಪಡೆದಿದೆ. ಇಂತಹ ಆಶಯದ ಅನೇಕ ಸಂದರ್ಭಗಳು ದೊರಕಿದರೂ ತಥಾಕಥಿತ ಧರ್ಮವಾದಿಗಳಿಗೆ ‘ಈ ರಾಮಸೇತುವೆ ಸತ್ಯವಾಗಿದೆಯೇ ಅಥವಾ ಸುಳ್ಳೋ ?’, ಎಂದು ಪ್ರಶ್ನೆ ಮೂಡಿಯೇ ಮೂಡುತ್ತದೆ. ಇಂದಿನ ಯುಗವು ವಿಜ್ಞಾನಯುಗವಾಗಿರುವುದರಿಂದ ಪ್ರತಿಯೊಂದು ಪ್ರಶ್ನೆಯನ್ನು ವಿಜ್ಞಾನದ ತಕ್ಕಡಿಯಲ್ಲಿಯೇ ಅಳೆಯಲಾಗುತ್ತದೆ. ಆದ್ದರಿಂದ ಸದ್ಯ ಈ ರಾಮಸೇತುವೆಯ ಅಸ್ತಿತ್ವವೂ ಸಂಶೋಧನೆಯ ತಕ್ಕಡಿಯಲ್ಲಿ ಅಳೆಯಲ್ಪಡಲಿದೆ. ಭಾರತೀಯ ಪುರಾತತ್ವ ವಿಭಾಗವು ರಾಮಸೇತುವೆಯ ಸಂದರ್ಭದಲ್ಲಿ ಸಂಶೋಧನೆಗೆ ಮೊದಲ ಬಾರಿಗೆ ಸಮ್ಮತಿಯನ್ನು ನೀಡಿದೆ. ‘ಶ್ರೀರಾಮನು ಇರಲೇ ಇಲ್ಲ’ ಅಥವಾ ‘ರಾಮನು ರಾಮಸೇತುವೆಯನ್ನು ಕಟ್ಟಲೇ ಇಲ್ಲ’, ಎಂದು ಹೇಳುವವರಿಗೆ ಸಂಶೋಧನೆಗೆ ದೊರಕಿದ ಸಮ್ಮತಿ ಎಂದರೆ ಕಪಾಳಮೋಕ್ಷವೇ ಎಂದು ಹೇಳಬಹುದು. ಹೀಗಿದ್ದರೂ, ಸಂಶೋಧನೆಯು ಪ್ರಾರಂಭವಾದ ನಂತರ ತಥಾಕಥಿತ ಪ್ರಗತಿಪರರು ಅಥವಾ ಹಿಂದೂದ್ವೇಷಿಗಳಿಗೆ ಹೊಟ್ಟೆನೋವು ಆರಂಭವಾಗಿ ಅವರು ಪುನಃ ರಾಮಸೇತುವೆಯ ಅಸ್ತಿತ್ವದ ಕುರಿತು ಖಂಡಿತ ಟೀಕಿಸುವರು. ಸಂಶೋಧನೆಯ ಅಂತರ್ಗತ ಸಮುದ್ರದ ನೀರಿನಡಿಯಲ್ಲಿ ವಿಶೇಷ ಯೋಜನೆ (ಠಿಡಿoರಿeಛಿಣ)ಯನ್ನು ಹಮ್ಮಿಕೊಳ್ಳಲಾಗಲಿದೆ. ಆ ಮಾಧ್ಯಮದಿಂದ ರಾಮಸೇತುವಿನ ಪ್ರಾಚೀನತೆಯನ್ನು ಪರಿಶೀಲಿಸಲಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ರಾಮಸೇತುವೆಯ ಉದ್ದ ೪೮ ಕಿಲೋಮೀಟರ್‌ನಷ್ಟು ಇದೆ. ರಾಮಸೇತುವೆಯನ್ನು ಯಾವಾಗ ನಿರ್ಮಿಸಲಾಯಿತು ? ಅದರಲ್ಲಿ ಕಲ್ಲುಗಳ ಜೋಡಣೆ ಹೇಗಿದೆ ? ರಾಮಸೇತುವೆಯ ಕಾಲದಲ್ಲಿ ಅಲ್ಲಿ ವಸತಿ ಇತ್ತೇ ? ಇಂತಹ ಕೂಲಂಕುಷ ದೃಷ್ಟಿಯಿಂದ ಸಾಗರದ ಆಳಕ್ಕೆ ಹೋಗಿ ಅಧ್ಯಯನ ಮಾಡಲಾಗುವುದು.
ಹಿಂದೂದ್ವೇಷಿ ಪುರಾತತ್ವ ವಿಭಾಗ !
ರಾಮಸೇತುವೆ ಮಾನವನಿರ್ಮಿತವಾಗಿತ್ತೋ ಅಥವಾ ನಿಸರ್ಗನಿರ್ಮಿತವಾಗಿತ್ತೋ, ಎಂಬುದರ ಶೋಧಕ್ಕಾಗಿ ವಿವಿಧ ಸಂಸ್ಥೆಗಳಿಂದ ಈ ಹಿಂದೆಯೂ ಅನೇಕ ಬಾರಿ ಬೇಡಿಕೆಯನ್ನು ಮಾಡಲಾಗಿತ್ತು. ೨೦೦೭ ರಲ್ಲಿ ಭಾರತೀಯ ಪುರಾತತ್ವ ವಿಭಾಗವು ರಾಮಸೇತುವೆಯ ಸಂದರ್ಭದಲ್ಲಿ ಯಾವುದೇ ಪುರಾವೆಯು ಸದ್ಯ ಲಭ್ಯವಿಲ್ಲವೆಂದು ಹೇಳಿತ್ತು; ಆದರೆ ನಾಸಾನ ಸಂಶೋಧಕರು ‘ರಾಮಸೇತುವೆ ಪ್ರಾಚೀನವಾಗಿದ್ದು ನಿಸರ್ಗನಿರ್ಮಿತವಲ್ಲ’, ಎಂದು ಒಪ್ಪಿಕೊಂಡಿತು. ೨೦೧೭ ರಲ್ಲಿ ಅಮೇರಿಕಾದ ‘ಸೈನ್ಸ್ ಚ್ಯಾನಲ್’ ವಾಹಿನಿಯ ವಾರ್ತೆಯಲ್ಲಿಯೂ ವಿಜ್ಞಾನಿಗಳು ಭಾರತ ಮತ್ತು ಶ್ರೀಲಂಕಾದಲ್ಲಿರುವ ರಾಮಸೇತುವೆ ೭ ಸಾವಿರ ವರ್ಷ ಪ್ರಾಚೀನವಾಗಿರುವುದಾಗಿ ಹೇಳಿದ್ದಾರೆ. ಈ ಎಲ್ಲ ಘಟನೆಗಳು ರಾಮಸೇತುವಿನ ವಾಸ್ತವಿಕತೆಯ ಕುರಿತು ಸಾಕ್ಷ ನೀಡಲು ಇದು ತಕ್ಕುದಾಗಿದೆ. ಯಾವ ಸತ್ಯವು ವಿದೇಶಿಗಳಿಗೆ ಅರಿವಾಗುತ್ತದೋ, ಅದು ಭಾರತೀಯರಿಗೆ ಇಷ್ಟು ವರ್ಷಗಳ ನಂತರವೂ ತಿಳಿಯಲಿಲ್ಲ, ಇದು ದುರ್ದೈವವೇ ಆಗಿದೆ. ರಾಮಸೇತುವೆ ಭಾರತಕ್ಕೆ ಸಂಬಂಧಿಸಿದ್ದರೂ ಆ ಕುರಿತು ಸಂಶೋಧನೆ ಮಾಡಲು ಭಾರತೀಯ ಪುರಾತತ್ವ ವಿಭಾಗವು ಇಷ್ಟು ವರ್ಷಗಳ ಕಾಲ ಅಕ್ಷಮ್ಯ ದುರ್ಲಕ್ಷ ಮಾಡಿತು. ಇದರಿಂದಲೇ ಪುರಾತತ್ವ ವಿಭಾಗಕ್ಕೆ ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಎಷ್ಟು ಮೌಲ್ಯವಿದೆ, ಎಂದು ಕಂಡು ಬರುತ್ತದೆ.
ಪುರಾತತ್ವ ವಿಭಾಗವು ಹಿಂದೂಗಳಲ್ಲಿ ಕ್ಷಮೆ ಕೇಳಬೇಕು. ಇದಕ್ಕೂ ಮೊದಲು ಅನೇಕ ಘಟನೆಗಳಲ್ಲಿ ಪುರಾತತ್ವ ವಿಭಾಗದ ಹಿಂದೂದ್ವೇಷಿ ವ್ಯವಸ್ಥೆಯು ಕಂಡು ಬಂದಿತ್ತು. ಮಥುರಾ (ಉತ್ತರಪ್ರದೇಶ) ದಲ್ಲಿ ಹಳ್ಳ ತೋಡುವ ಕೆಲಸದ ಸಮಯದಲ್ಲಿ ೨ ಸಾವಿರ ವರ್ಷಗಳ ಹಿಂದಿನ ಅಗ್ನಿದೇವತೆಯ ಮೂರ್ತಿಯು ಸಿಕ್ಕಿತ್ತು; ಆದರೆ ಪುರಾತತ್ವ ವಿಭಾಗವು ಮೂರ್ತಿಯ ಸಂಶೋಧನೆಯನ್ನು ಮಾಡದೇ ವಶಕ್ಕೆ ತೆಗೆದುಕೊಳ್ಳಲೂ ನಿರಾಕರಿಸಿತು. ಪುಣೆಯ ಲೋಹಗಡ ಕೋಟೆಯ ಮೇಲೆ ಉರುಸ್-ಎ-ಶರೀಫ್‌ವನ್ನು ಆಚರಿಸಲಾಗುವ ಬಗ್ಗೆ ಹಿಂದುತ್ವನಿಷ್ಠರು ಪುರಾತತ್ವ ವಿಭಾಗಕ್ಕೆ ಪತ್ರದ ಮೂಲಕ ಪೂರ್ವಕಲ್ಪನೆಯನ್ನು ನೀಡಿದ್ದರು; ಆದರೆ ವಿಭಾಗವು ಉರುಸ್‌ನ ಆಯೋಜಕರಿಗೆ ಪತ್ರವನ್ನು ಕಳುಹಿಸಿ ಕೇವಲ ಅರಿವು ಮಾಡಿಕೊಟ್ಟರು. ಪ್ರತ್ಯಕ್ಷದಲ್ಲಿ ಉರುಸ್ ಆಚರಿಸುತ್ತಿರುವಾಗ ಪುರಾತತ್ವ ವಿಭಾಗವು ಯಾವುದೇ ಕಾರ್ಯಾಚರಣೆ ಮಾಡಲಿಲ್ಲ. ರಾಮಜನ್ಮಭೂಮಿಯಲ್ಲಿ ದೇವಸ್ಥಾನವಿರುವ ಕುರಿತು ಪುರಾವೆಗಳು ೧೯೭೬ – ೭೭ ನೇ ಇಸ್ವಿಯಲ್ಲಿಯೇ ದೊರಕಿದ್ದವು; ಆದರೆ ಪುರಾತತ್ವ ವಿಭಾಗದ ಸಾಮ್ಯವಾದಿ ವಿಚಾರಗಳ ಓರ್ವ ಪ್ರಮುಖನು ಅದನ್ನು ಮುಚ್ಚಿ ಹಾಕಿದನು. ಸರಿಯಾದ ಸಮಯಕ್ಕೆ ಪುರಾವೆಯನ್ನು ನೀಡಿದ್ದರೆ, ಇಷ್ಟು ದೊಡ್ಡ ಐತಿಹಾಸಿಕ ಸಂಘರ್ಷ ಮಾಡುವ ಪ್ರಮೇಯ ಬರುತ್ತಿರಲಿಲ್ಲ. ಈ ಎಲ್ಲ ಘಟನೆಗಳಿಂದ ಪುರಾತತ್ವ ವಿಭಾಗದ ಹಿಂದೂದ್ವೇಷಿ ಮುಖವಾಡವೇ ಪ್ರತಿ ಬಾರಿ ಎದುರಿಗೆ ಬರುತ್ತದೆ. ಇದು ಮೇಲಿಂದ ಮೇಲೆ ಘಟಿಸುತ್ತಿದ್ದರೆ, ಪುರಾತತ್ವ ವಿಭಾಗವನ್ನೇ ವಿಸರ್ಜಿಸಬೇಕಾಗುತ್ತದೆ. ದೇವಸ್ಥಾನಗಳು ಅಥವಾ ಪುರಾತನ ವಾಸ್ತುಗಳ ಜೋಪಾಸನೆ ಮತ್ತು ಸಂವರ್ಧನೆ ಮಾಡಲು ಹಿಂದೂಗಳೇ ಈಗ ಪುರಾತತ್ವ ವಿಭಾಗಕ್ಕೆ ಮುಂದಾಳತ್ವ ವಹಿಸಲು ಬೆಂಬತ್ತಬೇಕು. ಕಾಲದ ಪ್ರವಾಹದಲ್ಲಿ ಹಿಂದೂಗಳ ಇಂತಹ ಅನೇಕ ವಿಷಯಗಳು ಕಣ್ಮರೆಯಾಗಿವೆ; ಆದರೆ ಅವುಗಳನ್ನು ಉಳಿಸಿಡಲು ಪ್ರಯತ್ನ ಮಾಡುವುದು ಆವಶ್ಯಕವಾಗಿದೆ.
ವಿಜ್ಞಾನವಾದಿ ಮತ್ತು ಪುರಾಣದಲ್ಲಿನ ಸತ್ಯ
‘ಸಮುದ್ರದ ಮೇಲೆ ಕಲ್ಲುಗಳ ಸೇತುವೆಯನ್ನು ಕಟ್ಟುವುದು ಅಸಾಧ್ಯವಾಗಿದೆ’, ಎಂದು ಅನೇಕರು ಟೀಕಿಸಿದ್ದರು; ಆದರೆ ಹೀಗೆ ಹೇಳುವವರ ಹೇಳಿಕೆಗೆ ಆಧಾರವಾದರೂ ಎಲ್ಲಿತ್ತು ? ಹಿಂದೂ ಧರ್ಮದ ಯಾವುದಾದರೊಂದು ವಿಷಯವು ಮುಂದೆ ಬಂದರೆ, ಟೀಕಿಸುವುದು ಮತ್ತು ಆ ವಿಷಯವನ್ನು ಹೇಗೆ ಅಸತ್ಯವಾಗಿದೆ ಮತ್ತು ಅಯೋಗ್ಯವಾಗಿದೆ, ಎಂದು ಹೇಳುವುದು, ಇಂತಹ ಹಿಂದುದ್ವೇಷಿ ಮಾನಸಿಕತೆಯನ್ನು ಇಟ್ಟುಕೊಳ್ಳುವರ ಹೇಳಿಕೆಗಳ ಮೇಲೆ ಯಾರು ವಿಶ್ವಾಸವಿಡುವರು ? ‘ವಾಲ್ಮೀಕಿ ರಾಮಾಯಣ’ದಲ್ಲಿ ಶ್ರೀರಾಮನು ಸಮುದ್ರದ ಮೇಲೆ ಈ ಸೇತುವೆಯನ್ನು ಹೇಗೆ ಕಟ್ಟಿದನು ?, ಎಂಬುದರ ಸಮಂಜಸ ವಾದ ವರ್ಣನೆಯನ್ನು ನೀಡಲಾಗಿದೆ. ವಾಲ್ಮೀಕಿಯವರು ಋಷಿಗಳಾಗಿದ್ದರು. ಆದ್ದರಿಂದ ಅವರ ಬರವಣಿಗೆಯ ಸತ್ಯತೆಯನ್ನು ಪರಿಶೀಲಿಸುವ ಆವಶ್ಯಕತೆಯೇ ಇಲ್ಲ. ಟೀಕಾಕಾರರೂ ವಾಲ್ಮೀಕಿ ರಾಮಾಯಣವನ್ನು ಓದುವ ಪರಿಶ್ರಮ ತೆಗೆದುಕೊಳ್ಳಬೇಕು. ಶ್ರೀರಾಮನ ಮೇಲೆ ಅಪಾರ ಶ್ರದ್ಧೆ ಇಟ್ಟು ದಿವ್ಯವಾದ ರಾಮ ಸೇತುವೆಯನ್ನು ನಿರ್ಮಿಸಿದ ಆಗಿನ ವಾನರರೂ ಜ್ಞಾನಿಗಳಾಗಿದ್ದರು. ಆದರೆ ಇಂದಿನ ಕಾಲದ ವಿಜ್ಞಾನವಾದಿಗಳಿಗೆ ಸತ್ಯ ತಿಳಿಯ ದಿರುವುದು ದುಃಖದಾಯಕವಾಗಿದೆ. ರಾಮಸೇತುವೆಯನ್ನು ಕಟ್ಟುವ ಮತ್ತು ರಾಮಾಯಣವು ಘಟಿಸುವ ಅವಧಿಯೂ ಕೆಲವು ಸಂಶೋಧನಕಾರರ ದೃಷ್ಟಿಯಿಂದ ಸಮಾನವೇ ಆಗಿದೆ. ರಾಮಸೇತುವೆಗಾಗಿ ಉಪಯೋಗಿಸಲಾದ ಕಲ್ಲುಗಳು ನೀರಿನಲ್ಲಿ ತೇಲುತ್ತವೆ. ಇದರ ಹಿಂದಿನ ಕಾರಣವನ್ನು ಜಗತ್ತಿನಾದ್ಯಂತದ ದೊಡ್ಡ ದೊಡ್ಡ ವಿಜ್ಞಾನಿಗಳಿಗೆ ಸಂಶೋಧನೆ ಮಾಡಿಯೂ ಸಿಕ್ಕಿಲ್ಲ ಅಥವಾ ಆ ಕುರಿತು ಸಮಾಧಾನಕರ ನಿಷ್ಕರ್ಷವನ್ನೂ ತೆಗೆಯಲಾಗಿಲ್ಲ. ಆದ್ದರಿಂದ ಪುರಾಣದ ವಿಷಯಗಳ ಬಗ್ಗೆ ಯಾರೂ ಹೀಯಾಳಿಸಬಾರದು ಅಥವಾ ‘ಅದು ಕಥೆಯಾಗಿತ್ತು’, ಎಂದೂ ಸಂಬೋಧಿಸಬಾರದು. ಮುಂಬರುವ ಪೀಳಿಗೆಗೆ ಈ ಪ್ರಾಚೀನ ಜ್ಞಾನದ ಉಪಯೋಗ ಮಾಡಿಕೊಡುವುದು ಶ್ರೇಯಸ್ಕರವಾಗಿದೆ.
ಈಗ ಆದಷ್ಟು ಬೇಗನೆ ರಾಮಸೇತುವೆಯ ಸಂಶೋಧನೆ ಆರಂಭವಾಗಲಿದೆ. ರಾಮಸೇತುವೆಯು ರಾಮಾಯಣದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ರಾಮಸೇತುವೆಯ ಸಂಶೋಧನೆಯ ಮಾಧ್ಯಮದಿಂದ ರಾಮಾಯಣವನ್ನು ಪುನಃ ಅನುಭವಿಸಲು ಸಾಧ್ಯವಾಗಲಿದೆ. ಶ್ರೀರಾಮಮಂದಿರದ ನಿರ್ಮಿತಿಯ ಸಂಘರ್ಷಕ್ಕೆ ನ್ಯಾಯ ದೊರಕಿಸಲು ಅನೇಕ ದಶಕಗಳು ಬೇಕಾದವು. ಅದರ ಪುನರಾವೃತ್ತಿ ರಾಮಸೇತುವಿನ ಸಂದರ್ಭದಲ್ಲಿ ಘಟಿಸಬಾರದು, ಎಂದು ರಾಮಭಕ್ತರ ಅಪೇಕ್ಷೆಯಾಗಿದೆ. ಪುರಾತತ್ವ ವಿಭಾಗವು ರಾಮಸೇತುವೆಯ ಹಿಂದಿನ ಸತ್ಯವನ್ನು ಮತ್ತು ಅದರ ಆಧ್ಯಾತ್ಮಿಕ ಮಹತ್ವವನ್ನು ಆದಷ್ಟು ಬೇಗನೆ ಎಲ್ಲರೆದುರು ತರಬೇಕು. ಹೀಗಾದಾಗಲೇ ಶ್ರೀರಾಮಮಂದಿರದಂತೆ ರಾಮಸೇತುವೆಗೂ ನಿಜವಾದ ಅರ್ಥದಲ್ಲಿ ನ್ಯಾಯವು ದೊರಕಿತು, ಎಂದಾಗುವುದು.