ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ದೇವರು ಎಲ್ಲೆಡೆ ಇದ್ದಾನೆ ಪ್ರತಿಯೊಬ್ಬರಲ್ಲಿಯೂ ಇದ್ದಾನೆ, ಎಂಬುದು ಹಿಂದೂ ಧರ್ಮದ ಬೋಧನೆಯಾಗಿರುವುದರಿಂದ ಹಿಂದೂಗಳಿಗೆ ಇತರ ಪಂಥೀಯರನ್ನು ದ್ವೇಷಿಸಲು ಕಲಿಸುವುದಿಲ್ಲ.

ಎಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಏನಾಗಬಹುದೆಂಬುದನ್ನು ಬುದ್ಧಿಯನ್ನು ಉಪಯೋಗಿಸಿ ಹೇಳುವ ಪಾಶ್ಚಾತ್ಯರು ಮತ್ತು ಎಲ್ಲಿ ಯುಗಾನುಯುಗಗಳ ಬಗ್ಗೆ ಹೇಳುವ ಜ್ಯೋತಿಷ್ಯಶಾಸ್ತ್ರ.

ಕಷ್ಟದ ಸಮಯದಲ್ಲಿ ಸಹಾಯವಾಗಲೆಂದು ನಾವು ಬ್ಯಾಂಕಿನಲ್ಲಿ ಹಣವನ್ನು ಇಡುತ್ತೇವೆ. ಅದರಂತೆ ಸಂಕಟದ ಸಮಯದಲ್ಲಿ ಸಹಾಯವಾಗಲೆಂದು ಸಾಧನೆಯ ಸಂಗ್ರಹವು ನಮ್ಮಲ್ಲಿರುವುದು ಆವಶ್ಯಕವಾಗಿದೆ. ಅದುದರಿಂದ ಸಂಕಟದ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ.

ಯುಗಾನುಯುಗಗಳಿಂದ ಸಂಸ್ಕೃತದ ವ್ಯಾಕರಣವು ಇದ್ದ ಹಾಗೆಯೇ ಇದೆ. ಅದರಲ್ಲಿ ಯಾರೂ ಏನನ್ನೂ ಬದಲಾಯಿಸಲಿಲ್ಲ. ಇದರ ಕಾರಣವೆಂದರೆ ಅದು ಮೊದಲಿನಿಂದಲೂ ಪರಿಪೂರ್ಣವಾಗಿದೆ. ತದ್ವಿರುದ್ಧ ಜಗತ್ತಿನ ಎಲ್ಲ ಭಾಷೆಗಳ ವ್ಯಾಕರಣವು ಬದಲಾಗುತ್ತಾ ಇರುತ್ತದೆ.

ಅಧ್ಯಾತ್ಮದ ಅಧ್ಯಯನ ಮತ್ತು ಸಾಧನೆಯನ್ನು ಮಾಡಿದ ಮೇಲೆಯೇ ವಿಜ್ಞಾನವು ಶಿಶುವಿಹಾರದ ಶಿಕ್ಷಣದಂತಿದೆ ಎಂದು ತಿಳಿಯುತ್ತದೆ.

ದೇವಸ್ಥಾನಗಳಲ್ಲಿಯ ಕೆಲಸಗಾರರು ದರ್ಶನಾರ್ಥಿಗಳಿಗೆ ದರ್ಶನವನ್ನು ಮಾಡಿಸುವುದು ಬಿಟ್ಟು ಬೇರೇನು ಮಾಡುತ್ತಾರೆ ? ಅವರು ದರ್ಶನಾರ್ಥಿಗಳಿಗೆ ಧರ್ಮಶಿಕ್ಷಣವನ್ನು ನೀಡಿದ್ದರೆ, ಸಾಧನೆಯನ್ನು ಕಲಿಸಿದ್ದರೆ, ಹಿಂದೂಗಳ ಮತ್ತು ಭಾರತದ ಸ್ಥಿತಿಯು ಈ ರೀತಿಯಾಗಿ ದಯನೀಯವಾಗುತ್ತಿರಲಿಲ್ಲ.

ಬೇರೆ ಧರ್ಮದವರ ಮೇಲೆ ಅಧಿಕಾರ ನಡೆಸುವುದು ಇತರ ಪಂಥೀಯರ ಧ್ಯೇಯವಿರುತ್ತದೆ. ಆದರೆ ಈಶ್ವರಪ್ರಾಪ್ತಿಯು ಹಿಂದೂಗಳ ಧ್ಯೇಯವಾಗಿರುತ್ತದೆ. –

(ಪರಾತ್ಪರ ಗುರು) ಡಾ.ಆಠವಲೆ