ಆಹಾರ ಮತ್ತು ಆಚಾರಗಳಿಗೆ ಸಂಬಂಧಿಸಿದ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯೂ.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಮೊದಲು ಗೃಹಿಣಿಯರು ಪಾಕಕಲಾ ಪ್ರವೀಣರೂ ಮತ್ತು ಸಾತ್ತ್ವಿಕರೂ ಆಗಿದ್ದರು. ಅವರ ಆಚಾರವಿಚಾರಗಳು ಸಾತ್ತ್ವಿಕವಾಗಿದ್ದವು, ಆದುದರಿಂದ ಅವರು ತಯಾರಿಸುತ್ತಿದ್ದ ಅಡುಗೆ ಸಾತ್ತ್ವಿಕ ಮತ್ತು ರುಚಿಕರವಾಗಿರುತ್ತಿತ್ತು. ನಮ್ಮ ಅಜ್ಜಿಯು ತಯಾರಿಸಿದ ಸಾತ್ತ್ವಿಕ ಅಡುಗೆಯ ರುಚಿ ಇಂದಿಗೂ ನಮಗೆ ನೆನಪಾಗುತ್ತದೆ. ಸದ್ಯದ ವಿಜ್ಞಾನಯುಗದಲ್ಲಿ ಮಾನವ ಜೀವನ ಅತ್ಯಂತ ಗಡಿಬಿಡಿಯ ಮತ್ತು ಒತ್ತಡದಿಂದ ಕೂಡಿದೆ. ಹಾಗೆಯೇ ವಾತಾವರಣದಲ್ಲಿ ರಜ-ತಮದ ಪ್ರಮಾಣವೂ ತುಂಬಾ ಹೆಚ್ಚಾಗಿದೆ. ಮಾನವನ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲೆ ಇದರ ಪರಿಣಾಮವಾಗುತ್ತದೆ. ಇತ್ತೀಚೆಗೆ ಅನೇಕ ಜನರಿಗೆ ಮನೆಯಲ್ಲಿ ತಯಾರಿಸಿದ ಸಾತ್ತ್ವಿಕ ಮತ್ತು ಸಪ್ಪೆಯ (ಕಡಿಮೆ ಖಾರವಿರುವ) ಪದಾರ್ಥಗಳಿಗಿಂತ ಉಪಾಹಾರಗೃಹಗಳಲ್ಲಿ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಮಸಾಲೆಯುಕ್ತ ಮತ್ತು ಖಾರದ ಪದಾರ್ಥಗಳನ್ನು ತಿನ್ನಲು ಬಹಳ ಇಷ್ಟವಾಗುತ್ತದೆ. ಹಾಗೆಯೇ ಮನೆಯಲ್ಲಿಯೂ ಅಡುಗೆಯನ್ನು ತಯಾರಿಸುವಾಗ ಪಲ್ಯ, ಸಾರು, ಕೋಸಂಬರಿ, ಚಟ್ನಿ ಇತ್ಯಾದಿ ಪದಾರ್ಥಗಳಲ್ಲಿ ಖಾರದ ಪ್ರಮಾಣ ಅಧಿಕವಿರುವುದು ಎಲ್ಲೆಡೆ ಕಂಡು ಬರುತ್ತದೆ. ‘ಅಡುಗೆಯನ್ನು ತಯಾರಿಸುವಾಗ ಆಹಾರ ಪದಾರ್ಥಗಳಲ್ಲಿ ಖಾರವನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಿದರೆ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಪರಿಣಾಮವಾಗುತ್ತದೆ ?, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್) ಎಂಬ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಓರ್ವ ಸಾಧಕಿ, ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಶೇ. ೬೬ ರಷ್ಟು ಮಟ್ಟವನ್ನು ತಲುಪಿದ ಓರ್ವ ಸಾಧಕಿ, ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಓರ್ವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಶೇ. ೬೮ ರಷ್ಟು ಮಟ್ಟವನ್ನು ತಲುಪಿರುವ ಓರ್ವ ಸಾಧಕಿ ಹೀಗೆ ಒಟ್ಟು ೪ ಜನ ಸಾಧಕರು ಭಾಗವಹಿಸಿದ್ದರು. ಈ ಪರೀಕ್ಷಣೆಯಲ್ಲಿ ಒಟ್ಟು ೩ ಪ್ರಯೋಗಗಳನ್ನು ಮಾಡಲಾಯಿತು. ಮೊದಲನೇಯ ಪ್ರಯೋಗದಲ್ಲಿ ಸಾಧಕರಿಗೆ ಬಟಾಟೆಯ ‘ಖಾರದ ಪಲ್ಯ (ಬಟಾಟೆಗಳನ್ನು ಹೋಳು ಮಾಡಿ ತಯಾರಿಸಿದ ಪಲ್ಯ), ಎರಡನೇಯ ಪ್ರಯೋಗದಲ್ಲಿ ‘ಮಧ್ಯಮ ಖಾರದ ಪಲ್ಯ ಮತ್ತು ಮೂರನೇಯ ಪ್ರಯೋಗದಲ್ಲಿ ‘ಖಾರವನ್ನು ಹಾಕದೇ ತಯಾರಿಸಿದ ಪಲ್ಯಯನ್ನು ತಿನ್ನಲು ಕೊಡಲಾಯಿತು.(ಮಧ್ಯಮ ಖಾರದ ಪಲ್ಯದ ತುಲನೆಯಲ್ಲಿ ಖಾರದ ಪಲ್ಯದಲ್ಲಿ ಖಾರದ ಪುಡಿಯ ಪ್ರಮಾಣ ದುಪ್ಪಟ್ಟಿತ್ತು) ಮೂರೂ ಪ್ರಯೋಗಗಳಲ್ಲಿ ಸಾಧಕರು (ಪ್ರತಿಯೊಬ್ಬರೂ ಒಂದು ಬಟ್ಟಲು) ಪಲ್ಯವನ್ನು ತಿನ್ನುವ ಮೊದಲು, ಹಾಗೆಯೇ ತಿಂದ ೨೦ ನಿಮಿಷಗಳ ಬಳಿಕ ‘ಯೂ.ಎ.ಎಸ್. ಉಪಕರಣದ ಮೂಲಕ ಅವರ ನಿರೀಕ್ಷಣೆಯನ್ನು ಮಾಡಲಾಯಿತು. ಈ ಎಲ್ಲ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು. ಈ ಮೂರೂ ಪ್ರಕಾರದ ಪಲ್ಯವನ್ನು ತಿಂದುದರಿಂದ ಸಾಧಕರ ಮೇಲಾಗಿ ರುವ ಪರಿಣಾಮವನ್ನು ಮುಂದೆ ನೀಡಲಾಗಿದೆ.
೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ – ಖಾರದ ಪಲ್ಯವನ ತಿಂದ ಬಳಿಕ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮವಾಗುವುದು. ಮಧ್ಯಮ ಖಾರದ ಪಲ್ಯವನ್ನು ತಿಂದ ಬಳಿಕ ಅವರ ಮೇಲೆ ಸ್ವಲ್ಪ ಸಕಾರಾತ್ಮಕ ಪರಿಣಾಮವಾಗುವುದು, ಹಾಗೆಯೇ ಖಾರ ಹಾಕದೇ ತಯಾರಿಸಿದ ಪಲ್ಯವನ್ನು ತಿಂದ ಬಳಿಕ ಅವರ ಮೇಲೆ ಅತ್ಯಧಿಕ ಸಕಾರಾತ್ಮಕ ಪರಿಣಾಮವಾಗುವುದು : ಇದು ಮುಂದೆ ನೀಡಿರುವ ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.
ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು.
೧. ಖಾರದ ಪಲ್ಯದಲ್ಲಿ ಅತ್ಯಧಿಕ ನಕಾರಾತ್ಮಕ ಊರ್ಜೆಯಿದ್ದು ಅತ್ಯಲ್ಪ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಖಾರದ ಪಲ್ಯದ ತುಲನೆಯಲ್ಲಿ ಮಧ್ಯಮ ಖಾರದ ಪಲ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಹಾಗೂ ಸ್ವಲ್ಪ ಅಧಿಕ ಸಕಾರಾತ್ಮಕ ಊರ್ಜೆ ಕಂಡು ಬಂದಿತು.
೨. ಖಾರವನ್ನು ಹಾಕದೇ ತಯಾರಿಸಿದ ಪಲ್ಯದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಕಂಡು ಬರಲಿಲ್ಲ. ಹಾಗೆಯೇ ಉಳಿದೆರಡು ಪಲ್ಯಗಳ ತುಲನೆಯಲ್ಲಿ ಅಧಿಕ ಸಕಾರಾತ್ಮಕ ಊರ್ಜೆ ಕಂಡು ಬಂದಿತು.
೩. ಸಾಧಕರು ಖಾರದ ಪಲ್ಯವನ್ನು ತಿಂದಿದ್ದರಿಂದ ಅವರಲ್ಲಿ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿ, ಅವರಲ್ಲಿದ್ದ ಸಕಾರಾತ್ಮಕ ಊರ್ಜೆ ಕಡಿಮೆಯಾಯಿತು.
೪. ಸಾಧಕರು ಮಧ್ಯಮ ಖಾರದ ಪಲ್ಯವನ್ನು ತಿಂದಿದ್ದರಿಂದ ಅವರಲ್ಲಿದ್ದ ನಕಾರಾತ್ಮಕ ಊರ್ಜೆ ಸ್ವಲ್ಪ ಕಡಿಮೆಯಾಗಿ ಅವರಲ್ಲಿದ್ದ ಸಕಾರಾತ್ಮಕ ಊರ್ಜೆಯಲ್ಲಿ ಸ್ವಲ್ಪ ಹೆಚ್ಚಳವಾಯಿತು.
೫. ಸಾಧಕರು ಖಾರವನ್ನು ಹಾಕದೇ ತಯಾರಿಸಿದ ಪಲ್ಯವನ್ನು ತಿಂದಿದ್ದರಿಂದ ಅವರಲ್ಲಿನ್ದ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಅವರಲ್ಲಿದ್ದ ಸಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾಯಿತು.
೨. ನಿಷ್ಕರ್ಷ
ಖಾರದ ಪಲ್ಯವನ್ನು ತಿಂದಿದ್ದರಿಂದ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮವಾಯಿತು. ಮಧ್ಯಮ ಖಾರದ ಪಲ್ಯವನ್ನು ತಿಂದಿದ್ದರಿಂದ ಅವರ ಮೇಲೆ ಸ್ವಲ್ಪ ಸಕಾರಾತ್ಮಕ ಪರಿಣಾಮವಾಯಿತು. ಹಾಗೆಯೇ ಖಾರವನ್ನು ಹಾಕದೇ ತಯಾರಿಸಲಾದ ಪಲ್ಯವನ್ನು ತಿಂದಿದ್ದರಿಂದ ಅವರ ಮೇಲೆ ಅತ್ಯಧಿಕ ಸಕಾರಾತ್ಮಕ ಪರಿಣಾವಾಯಿತು.
೩.ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಪರೀಕ್ಷಣೆಯಲ್ಲಿ ಖಾರದ ಪಲ್ಯ ಮತ್ತು ಮಧ್ಯಮ ಖಾರದ ಪಲ್ಯದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡು ಬಂದಿರುವುದರ ಕಾರಣಗಳು: ಪರೀಕ್ಷಣೆಯಲ್ಲಿನ ಖಾರದ ಮತ್ತು ಮಧ್ಯಮ ಖಾರದ ಪಲ್ಯಗಳಲ್ಲಿ ನಕಾರಾತ್ಮಕ ಊರ್ಜೆ ಕಂಡು ಬಂದಿತು. ಆದರೆ ಖಾರವನ್ನು ಹಾಕದೇ ತಯಾರಿಸಿದ ಪಲ್ಯದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ ಹಾಗೂ ಉಳಿದೆರಡು ಪಲ್ಯಗಳ ತುಲನೆಯಲ್ಲಿ ಹೆಚ್ಚು ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇದರ ಕಾರಣವೆಂದರೆ, ಕೆಂಪು ಖಾರದಲ್ಲಿ (ಕೆಂಪು ಮೆಣಸಿನಕಾಯಿಗಳಲ್ಲಿ) ತಮೋಗುಣವಿರುತ್ತದೆ. ಖಾರದ ಮೂಲಕ (ಕೆಂಪು ಮೆಣಸಿನಕಾಯಿಗಳಿಂದ) ಹೊರಹೊಮ್ಮುವ ತಮೋಗುಣಿ ಸ್ಪಂದನಗಳ ಕಡೆಗೆ ವಾತಾವರಣದಲ್ಲಿರುವ ಅನಿಷ್ಟಶಕ್ತಿಗಳು ಶೀಘ್ರಗತಿಯಲ್ಲಿ ಆಕರ್ಷಿಸಲ್ಪಡುತ್ತವೆ. ಅಡುಗೆಯನ್ನು ತಯಾರಿಸುವಾಗ ಆಹಾರ ಪದಾರ್ಥಗಳಲ್ಲಿ ಖಾರವನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಿದರೆ ಆ ಪದಾರ್ಥಗಳ ಕಡೆಗೆ ಕೆಟ್ಟ ಶಕ್ತಿಗಳು ಆಕರ್ಷಿಸಲ್ಪಡುವುದರಿಂದ ಆ ಪದಾರ್ಥಗಳು ನಕಾರಾತ್ಮಕ ಸ್ಪಂದನಗಳಿಂದ ತುಂಬಿಕೊಂಡು ಪದಾರ್ಥಗಳಲ್ಲಿರುವ ಸಾತ್ತ್ವಿಕತೆ ಕಡಿಮೆಯಾಗುತ್ತದೆ. ನಕಾರಾತ್ಮಕ ಸ್ಪಂದನಗಳು ತುಂಬಿದ ಪದಾರ್ಥಗಳನ್ನು ಸೇವಿಸುವುದರಿಂದ ವ್ಯಕ್ತಿಯ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲೆ ತೊಂದರೆದಾಯಕ ಸ್ಪಂದನಗಳ ಆವರಣ ಬರುತ್ತದೆ. ಇದರಿಂದ ವ್ಯಕ್ತಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಾಗುತ್ತವೆ ಅಥವಾ ಇರುವ ತೊಂದರೆಗಳು ಹೆಚ್ಚಾಗುತ್ತವೆ. ಇದರ ಅನುಭವವೇ ಪರೀಕ್ಷಣೆಯಿಂದ ಕಂಡು ಬಂದಿತು.
೩ ಆ. ಖಾರದ ಪಲ್ಯವನ್ನು ತಿಂದಿದ್ದರಿಂದ ಪರೀಕ್ಷಣೆಯಲ್ಲಿ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮವಾಗುವುದು: ಪರೀಕ್ಷಣೆಯಲ್ಲಿನ ನಾಲ್ಕೂ ಜನ ಸಾಧಕರಲ್ಲಿ ಪ್ರಾರಂಭದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯಿತ್ತು. ಖಾರದ ಪಲ್ಯವನ್ನು ತಿಂದ ಬಳಿಕ ಅವರಲ್ಲಿ ನಕಾರಾತ್ಮಕ ಊರ್ಜೆಯು ಹೆಚ್ಚಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಯಿತು. (ಖಾರದ ಪಲ್ಯವನ್ನು ತಿಂದಿದ್ದರಿಂದ ಅವರಿಗಾಗಿರುವ ತೊಂದರೆಗಳ ವಿವರಗಳನ್ನು ವಿಷಯ ‘೪ ರಲ್ಲಿ ನೀಡಲಾಗಿದೆ) ಇದರಿಂದ ಅವರಿಗೆ ಖಾರದ ಪಲ್ಯವನ್ನು ತಿಂದಿದ್ದರಿಂದ ಆಧ್ಯಾತ್ಮಿಕ ದೃಷ್ಟಿಯಿಂದ ಹಾನಿಯಾಗಿದ್ದು ಗಮನಕ್ಕೆ ಬರುತ್ತದೆ.
೩ ಇ. ಮಧ್ಯಮ ಖಾರದ ಪಲ್ಯವನ್ನು ತಿಂದಿದ್ದರಿಂದ ಪರೀಕ್ಷಣೆಯಲ್ಲಿನ ಸಾಧಕರ ಮೇಲೆ ಸ್ವಲ್ಪ ಸಕಾರಾತ್ಮಕ ಪರಿಣಾಮವಾಗುವುದು : ಖಾರದ ಪಲ್ಯದ ತುಲನೆಯಲ್ಲಿ ಮಧ್ಯಮ ಖಾರದ ಪಲ್ಯದಲ್ಲಿ ನಕಾರಾತ್ಮಕ ಊರ್ಜೆ ಅಲ್ಪಪ್ರಮಾಣದಲ್ಲಿದ್ದು, ಸಕಾರಾತ್ಮಕ ಊರ್ಜೆ ಸ್ವಲ್ಪ ಹೆಚ್ಚಿದೆ. ಸಾಧಕರು ಮಧ್ಯಮ ಖಾರದ ಪಲ್ಯವನ್ನು ತಿಂದಿದ್ದರಿಂದ ಅವರಲ್ಲಿನ ನಕಾರಾತ್ಮಕ ಊರ್ಜೆ ಸ್ವಲ್ಪ ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಸ್ವಲ್ಪ ಹೆಚ್ಚಳವಾಯಿತು. ಇದರಿಂದ ಮಧ್ಯಮ ಖಾರದ ಪಲ್ಯವನ್ನು ತಿಂದಿದ್ದರಿಂದ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಆಧ್ಯಾತ್ಮಿಕ ಲಾಭವಾಗಿರುವುದು ಕಂಡು ಬಂದಿತು.
೩ ಈ. ಖಾರವನ್ನು ಹಾಕದೇ ತಯಾರಿಸಲಾದ ಪಲ್ಯವನ್ನು ತಿಂದಿದ್ದರಿಂದ ಸಾಧಕರ ಮೇಲೆ ಅತ್ಯಧಿಕ ಸಕಾರಾತ್ಮಕ ಪರಿಣಾಮ ವಾಯಿತು : ಖಾರವನ್ನು ಹಾಕದೇ ತಯಾರಿಸಲಾದ ಪಲ್ಯದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಉಳಿದೆರಡು ಪಲ್ಯಗಳ ತುಲನೆಯಲ್ಲಿ ಅಧಿಕ ಸಕಾರಾತ್ಮಕ ಊರ್ಜೆಯಿದೆ. ಈ ಪಲ್ಯವನ್ನು ತಿಂದಿದ್ದರಿಂದ ಸಾಧಕರಿಗೆ ಆಹಾರದಿಂದ ಊರ್ಜೆಯು ಲಭಿಸಿ ಅವರ ಸುತ್ತಲೂ ಇದ್ದ ಕಪ್ಪು ಆವರಣವು ಕಡಿಮೆಯಾಯಿತು. ಹಾಗೆಯೇ ಅವರಲ್ಲಿದ್ದ ಸಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾಯಿತು. ಇದರಿಂದ ಖಾರವನ್ನು ಹಾಕದೇ ತಯಾರಿಸಿದ ಪಲ್ಯವನ್ನು ತಿಂದಿದ್ದ ರಿಂದ ಅವರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭವಾಗಿರುವುದು ಕಂಡು ಬಂದಿತು.
೪. ಖಾರದ ಪಲ್ಯ, ಮಧ್ಯಮ ಖಾರದ ಪಲ್ಯ ಮತ್ತು ಖಾರವನ್ನು ಹಾಕದೇ ತಯಾರಿಸಿದ ಪಲ್ಯಗಳನ್ನು ತಿಂದ ಬಳಿಕ ಪರೀಕ್ಷಣೆಯಲ್ಲಿ ಸಾಧಕರಿಗೆ ಗಮನಕ್ಕೆ ಬಂದ ಅಂಶಗಳು
ಸ್ವಲ್ಪದರಲ್ಲಿ, ‘ಆಹಾರ ಪದಾರ್ಥಗಳಲ್ಲಿ ಅಧಿಕ ಪ್ರಮಾಣದಲ್ಲಿ ಖಾರವನ್ನು ಉಪಯೋಗಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಹಾನಿಕರವಾಗಿದೆ, ಎನ್ನುವುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸಿದ್ಧವಾಯಿತು. ಖಾರದ ಪದಾರ್ಥಗಳನ್ನು ನಿರಂತರವಾಗಿ ತಿನ್ನುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಆಗುತ್ತವೆ. ಇದರಿಂದ ಅಡುಗೆಯನ್ನು ಮಾಡುವಾಗ ಊಟದ ಪದಾರ್ಥಗಳಲ್ಲಿ ಖಾರವನ್ನು ಅತ್ಯಲ್ಪ (ಕಡಿಮೆ) ಪ್ರಮಾಣದಲ್ಲಿ ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವಾಗಿದೆ ಎನ್ನುವುದು ಗಮನಕ್ಕೆ ಬರುತ್ತದೆ.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ ( ೯.೧೨.೨೦೨೦)
ವಿ-ಅಂಚೆ : [email protected]