ಗಾಯತ್ರಿಮಂತ್ರದ ಪಠಣವನ್ನು ಭಾವಪೂರ್ಣವಾಗಿ ಮಾಡಿದ್ದರಿಂದ ಸಾಧಕರಿಗಾದ ಆಧ್ಯಾತ್ಮಿಕ ಲಾಭ !

ನಾಮಜಪ ಮತ್ತು ಮಂತ್ರೋಪಚಾರ ಇವುಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ  ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯೂ.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಸೌ. ಸ್ವಾತಿ ಸಣಸ

‘ನಮಗೆ ಗಾಯತ್ರಿಮಂತ್ರ ಗೊತ್ತಿದೆ. ನಮ್ಮಲ್ಲಿನ ಬಹಳಷ್ಟು ಜನರು ಈ ಪ್ರಚಲಿತ ಮಂತ್ರದ ಜಪವನ್ನೂ ಮಾಡುತ್ತಾರೆ. ಈ ಮಂತ್ರವನ್ನು ವಿಶ್ವಾಮಿತ್ರಋಷಿಗಳು ರಚಿಸಿದ್ದಾರೆ ಮತ್ತು ಇದು ಸೂರ್ಯದೇವರಿಗೆ ಸಂಬಂಧಿಸಿದ ಮಂತ್ರವಾಗಿದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಆಗುವ ಪರಿಣಾಮಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯೂ.ಎ.ಎಸ್.) ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಗಾಯತ್ರಿಮಂತ್ರ : ‘ಓಂ ಭೂರ್ಭುವಃ ಸ್ವಃ ತತ್ಸವಿತುರ್‌ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ |

ಅರ್ಥ : ನಾವು ದೈದಿಪ್ಯಮಾನ ಭಗವಾನ ಸವಿತಾ (ಸೂರ್ಯ) ದೇವರ ಆ ತೇಜದ ಧ್ಯಾನವನ್ನು ಮಾಡುತ್ತೇವೆ. ಅದು (ತೇಜ) ನಮ್ಮ ಬುದ್ಧಿಗೆ ಪ್ರೇರಣೆಯನ್ನು ನೀಡಲಿ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆಗಳಿಲ್ಲದ ಸಾಧಕ, ಇವರಿಬ್ಬರೂ ೧೦೮ ಬಾರಿ ಗಾಯತ್ರಿ ಮಂತ್ರವನ್ನು ಪಠಿಸಿದರು. ಅವರು ಗಾಯತ್ರಿಮಂತ್ರವನ್ನು ಪಠಿಸುವ ಮೊದಲು ಮತ್ತು ಪಠಿಸಿದ ಬಳಿಕ ‘ಯೂ.ಎ.ಎಸ್. ಉಪಕರಣದ ಮೂಲಕ ಅವರ ಪರೀಕ್ಷಣೆಯನ್ನು ಮಾಡಲಾಯಿತು. ಗಾಯತ್ರಿಮಂತ್ರದ ಪಠಣದಿಂದ ಸಾಧಕರ ಮೇಲಾಗಿರುವ ಪರಿಣಾಮವನ್ನು ಮುಂದೆ ನೀಡಲಾಗಿದೆ.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ  ಊರ್ಜೆಯ ಸಂದರ್ಭದಲ್ಲಿ ನೀರಿಕ್ಷಣೆಯ  ವಿಶ್ಲೇಷಣೆ  – ಗಾಯತ್ರಿಮಂತ್ರ ಪಠಣದ ಪರೀಕ್ಷಣೆಯಲ್ಲಿ ಇಬ್ಬರೂ ಸಾಧಕರ ಮೇಲೆ ಬಹಳ ಸಕಾರಾತ್ಮಕ ಪರಿಣಾಮವಾಯಿತು : ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕ ಇವರಲ್ಲಿ ಮಂತ್ರಪಠಣದ ಮೊದಲು ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಊರ್ಜೆಗಳಿದ್ದವು.  ಅವರು ಮಂತ್ರಪಠಣವನ್ನು ಮಾಡಿದ ಬಳಿಕ ಅವರಲ್ಲಿ ನಕಾರಾತ್ಮಕ ಊರ್ಜೆ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಅಥವಾ ಇಲ್ಲವಾಗಿ, ಅವರಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾಯಿತು. ಇದು ಮುಂದೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

ಟಿಪ್ಪಣಿ : ‘ಔರಾ ಸ್ಕ್ಯಾನರ್ ೪೫ ಅಂಶದ ಕೋನವನ್ನು ಮಾಡಿತು, ಆದುದರಿಂದ ಪ್ರಭಾವಲಯವನ್ನು ಅಳೆಯಲು ಸಾಧ್ಯವಾಗಲಿಲ್ಲ. ‘ಔರಾ ಸ್ಕ್ಯಾನರ್ ೧೮೦ ಅಂಶದ ಕೋನವನ್ನು ಮಾಡಿದರೆ ಮಾತ್ರ ಪ್ರಭಾವಲಯವನ್ನು ಅಳೆಯಲು ಬರುತ್ತದೆ.

೨.  ನಿಷ್ಕರ್ಷ

ಗಾಯತ್ರಿಮಂತ್ರದ ಪಠಣದಿಂದ ಸಾಧಕರ ಮೇಲೆ ಬಹಳ ಸಕಾರಾತ್ಮಕ ಪರಿಣಾಮವಾಯಿತು.

೩. ಪರೀಕ್ಷಣೆಯ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಗಾಯತ್ರಿದೇವಿ : ‘ಗಾಯತ್ರಿದೇವಿಯು ಸರಸ್ವತಿ, ಮಹಾಲಕ್ಷ್ಮಿ ಮತ್ತು ಪಾರ್ವತಿ ಈ ಮೂವರೂ ದೇವತೆಗಳ ಸಂಯುಕ್ತ ರೂಪವಾಗಿದ್ದಾಳೆ. ಅವಳು ಆದಿಶಕ್ತಿಸ್ವರೂಪಳಾಗಿದ್ದಾಳೆ. ಸವಿತ್ರನಿಂದ (ಸೂರ್ಯನಿಂದ) ಗಾಯತ್ರಿಗೆ ಮತ್ತು ಗಾಯತ್ರಿಯಿಂದ ೧೨ ಆದಿತ್ಯರಿಗೆ ತೇಜವನ್ನು ಪ್ರದಾನಿಸಲಾಗುತ್ತದೆ. ಸ್ಥೂಲದಲ್ಲಿ ಕಣ್ಣಿಗೆ ಕಾಣಿಸುವ ಸೂರ್ಯನಿಗೂ ತೇಜವನ್ನು ನೀಡುವ ಶಕ್ತಿ ಗಾಯತ್ರಿಯೇ ಆಗಿದ್ದಾಳೆ. ಅವಳಲ್ಲಿ ಸೂರ್ಯನಿಗಿಂತ ಹದಿನಾರು ಪಟ್ಟು ಹೆಚ್ಚು ಶಕ್ತಿಯಿದೆ. (ಆಧಾರ: ಸನಾತನ ಸಂಸ್ಥೆಯ ಜಾಲತಾಣ : https://www.sanatan.org/mr/a/9477.html)

೩ ಆ. ಗಾಯತ್ರಿಮಂತ್ರ : ‘ಗಾಯತ್ರಿಮಂತ್ರವು ಸಿದ್ಧ ಮಂತ್ರವಾಗಿದೆ. ಗಾಯತ್ರಿಮಂತ್ರದ ಉಚ್ಚಾರಣೆಯಿಂದ ವಿವಿಧ ದೇವತೆಗಳ ಅಪ್ರಕಟ ಸ್ವರೂಪದಲ್ಲಿರುವ ಶಕ್ತಿ ಮತ್ತು ಚೈತನ್ಯ ಪ್ರಕಟವಾಗಿ ಕಾರ್ಯನಿರತವಾಗುತ್ತದೆ. ಗಾಯತ್ರಿಮಂತ್ರದ ಉಚ್ಚಾರಣೆಯಿಂದ ವಾಣಿ ಶುದ್ಧವಾಗುತ್ತದೆ. ಗಾಯತ್ರಿಮಂತ್ರದ ಉಚ್ಚಾರಣೆಯಿಂದ ಪ್ರಾಣವಹನದಲ್ಲಿನ ತೊಂದರೆಗಳು ದೂರವಾಗಿ ದೇಹದಲ್ಲಿರುವ ರಕ್ತವಾಹಿನಿಗಳು, ೭೨ ಸಾವಿರ ನಾಡಿಗಳು ಮತ್ತು ಪ್ರತಿಯೊಂದು ಜೀವಕೋಶದ ಶುದ್ಧಿಯಾಗಿ ಜೀವದ ಅಂತರ್ಬಾಹ್ಯ ಶುದ್ಧಿಯಾಗುತ್ತದೆ. (ಆಧಾರ: ಸನಾತನ ಸಂಸ್ಥೆಯ ಜಾಲತಾಣ – https://www.sanatan.org/mr/a/9477.html)

೩ ಇ. ಪರೀಕ್ಷಣೆಯಲ್ಲಿ ಇಬ್ಬರೂ ಸಾಧಕರು ಗಾಯತ್ರಿಮಂತ್ರದ ಪಠಣವನ್ನು ಭಾವಪೂರ್ಣವಾಗಿ ಮಾಡಿದ್ದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ  ಲಾಭವಾಯಿತು : ಪರೀಕ್ಷಣೆಯಲ್ಲಿ ಇಬ್ಬರೂ ಸಾಧಕರು ಗಾಯತ್ರಿಮಂತ್ರದ ಪಠಣವನ್ನು ಭಾವಪೂರ್ಣವಾಗಿ ಮಾಡಿದ್ದರಿಂದ ಅವರಿಗೆ ಮಂತ್ರಪಠಣದಿಂದ ಅಪಾರ ಚೈತನ್ಯ ದೊರಕಿತು. ಇದರಿಂದ ಅವರಲ್ಲಿ ನಕಾರಾತ್ಮಕ ಊರ್ಜೆ ಬಹಳಷ್ಟು ಕಡಿಮೆಯಾಗಿ ಅಥವಾ ಇಲ್ಲವಾಗಿ ಅವರಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

– ಸೌ. ಸ್ವಾತಿ ವಸಂತ ಸಣಸ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೯.೧೧.೨೦೨೦)

ವಿ-ಅಂಚೆ : [email protected]

ಗಾಯತ್ರಿಮಂತ್ರದ ಪಠಣವನ್ನು ಮಾಡುವಾಗ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಿಗೆ ಬಂದಿರುವ ಅನುಭೂತಿಗಳು

‘೧೫.೧೧.೨೦೨೦ ರಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ‘ಗಾಯತ್ರಿ ಮಂತ್ರದ ಪಠಣ ಮಾಡುವಾಗ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನ ಮೇಲೆ ಏನು ಪರಿಣಾಮವಾಗುತ್ತದೆ ?, ಎಂದು ನೋಡಲು ಒಂದು ಪ್ರಯೋಗವನ್ನು ಮಾಡಲಾಯಿತು. ಆ ಸಮಯದಲ್ಲಿ ನನಗೆ (ಶ್ರೀ. ಧೈವತ ವಿಲಾಸ ವಾಘಮಾರೆ) ಮುಂದಿನ ಅನುಭೂತಿಗಳು ಬಂದವು .

೧. ಗಾಯತ್ರಿ ಮಂತ್ರದ ಪಠಣವನ್ನು ಪ್ರಾರಂಭಿಸಿದ ಕೂಡಲೇ ನನಗೆ ನನ್ನ ತಲೆಯ ಸುತ್ತಲೂ ಸಂವೇದನೆಗಳ ಅರಿವಾಗತೊಡಗಿತು.

೨. ಮಂತ್ರವನ್ನು ಪಠಿಸುವಾಗ ನನ್ನ ತಲೆಯ ಮೇಲೆ (ನೆತ್ತಿಯ ಸ್ಥಳ ದಲ್ಲಿ) ಚಕ್ರಾಕಾರವಾಗಿ ಏನೋ ತಿರುಗುತ್ತಿರುವುದು ಅರಿವಾಯಿತು.

೩. ಸ್ವಲ್ಪ ಸಮಯದ ಬಳಿಕ ನನಗೆ ತಡೆದುಕೊಳ್ಳಲಾಗದಷ್ಟು ನಿದ್ದೆ ಬರತೊಡಗಿತು.

೪. ಪ್ರಯೋಗ ಮುಗಿದ ಬಳಿಕ ನನ್ನ ಮನಸ್ಸಿನಲ್ಲಿ‘ ಓಂ ಓಂ ನಮೋ ಭಗವತೆ ವಾಸುದೇವಾಯ ಓಂ ಓಂ | ಎನ್ನುವ ನಾಮಜಪ ತನ್ನಿಂದತಾನೇ ಆಗತೊಡಗಿತು. ಕಳೆದ ಒಂದೂವರೆ ತಿಂಗಳಿನಲ್ಲಿ ಪ್ರಯತ್ನಿಸಿದರೂ ನನಗೆ ನಾಮಜಪವನ್ನು ಮಾಡಲು ಸಾಧ್ಯವಾಗು ತ್ತಿರಲಿಲ್ಲ. ಗಾಯತ್ರಿಮಂತ್ರ ಪಠಣದ ಬಳಿಕ ನಾಮಜಪ ನಿರಾಯಾಸವಾಗಿ ಆಗತೊಡಗಿತು.

– ಶ್ರೀ. ಧೈವತ ವಿಲಾಸ ವಾಘಮಾರೆ, ಸನಾತನ ಆಶ್ರಮ, ರಾಮನಾಥಿ, ಗೋವಾ(೧೭.೧೧.೨೦೨೦)