ವಿವಾಹಿತ ಮಹಿಳೆಯೊಂದಿಗಿನ ವಾಸ್ತವ್ಯವು ‘ಲಿವ್ ಇನ್’ ಅಲ್ಲ; ವ್ಯಭಿಚಾರದ ಅಪರಾಧವಾಗಿದೆ! – ಅಲಹಾಬಾದ್ ಉಚ್ಚ ನ್ಯಾಯಾಲಯ

ದೇಶದ ನೈತಿಕತೆ ಇಷ್ಟು ರಸಾತಳಕ್ಕೆ ಹೋಗಿದೆ, ಅದನ್ನು ಉಳಿಸಿಕೊಳ್ಳಲು ನ್ಯಾಯಾಲಯವು ಇಂತಹ ಆದೇಶವನ್ನು ನೀಡಬೇಕಾಗುತ್ತದೆ!

ಅಲಹಾಬಾದ್ ಉಚ್ಚ ನ್ಯಾಯಾಲಯ

ಪ್ರಯಾಗರಾಜ (ಉತ್ತರಪ್ರದೇಶ) – ವಿವಾಹವಾಗಿರುವಾಗ ಇತರ ಪುರುಷರೊಂದಿಗೆ ಪತಿ-ಪತ್ನಿಯಂತೆ ವಾಸಿಸುವುದು ‘ಲಿವ್ ಇನ್ ರಿಲೆಶನ್’ ಎಂದಾಗುವುದಿಲ್ಲ. ಅದು ವ್ಯಭಿಚಾರ ಮಾಡಿದಂತಹ ಅಪರಾಧವಾಗಿದೆ. ಇದಕ್ಕಾಗಿ ಪುರುಷರು ಅಪರಾಧಿಗಳಾಗುತ್ತಾರೆ ಎಂದು ಇಲ್ಲಿನ ಅಲಹಾಬಾದ್ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಇದರೊಂದಿಗೆ ನ್ಯಾಯಾಲಯವು ಹಾಥರಸ ಜಿಲ್ಲೆಯ ಸಾಸನಿಯ ಆಶಾದೇವಿ ಮತ್ತು ಅರವಿಂದ ಇವರ ಅರ್ಜಿಯನ್ನು ತಿರಸ್ಕರಿಸಿದೆ. ಆಶಾದೇವಿ ಇವರಿಗೆ ಮಹೇಶಚಂದ್ರ ಇವರೊಂದಿಗೆ ವಿವಾಹವಾಗಿತ್ತು. ಇವರಿಬ್ಬರ ನಡುವೆ ವಿಚ್ಛೇದನೆಯಾಗಿರಲಿಲ್ಲ. ಆದರೂ ಆಶಾದೇವಿ ಇವರು ಪತಿಯಿಂದ ಬೇರ್ಪಟ್ಟು ಇನ್ನೊಬ್ಬ ಪುರುಷನೊಂದಿಗೆ ವಾಸಿಸುತ್ತಿದ್ದಾರೆ. ಆಶಾದೇವಿ ಇವರು ಮಹೇಶಚಂದ್ರ ಇವರ ವಿವಾಹಬದ್ಧ ಪತ್ನಿಯಾಗಿದ್ದಾರೆ. ಆದರೂ ಅವರು ಅರವಿಂದ ಇವರೊಂದಿಗೆ ಪತಿ-ಪತ್ನಿಯಂತೆ ವಾಸಿಸುತ್ತಿದ್ದಾರೆ. ಆಶಾ ದೇವಿ ಇವರು ತಮ್ಮ ಅರ್ಜಿಯಲ್ಲಿ ತಾವಿಬ್ಬರೂ ‘ಲಿವ್ ಇನ್’ ನಲ್ಲಿ ವಾಸಿಸುತ್ತಿದ್ದೇವೆ, ಅದಕ್ಕಾಗಿ ನಮಗೆ ನಮ್ಮ ಕುಟುಂಬದವರಿಂದ ರಕ್ಷಣೆ ನೀಡಬೇಕು’ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಅದಕ್ಕೆ ನ್ಯಾಯಾಲಯವು ವಿವಾಹವಾದ ಮಹಿಳೆಯೊಂದಿಗೆ ಧರ್ಮ ಪರಿವರ್ತನೆ ಮಾಡಿ ವಾಸಿಸುವುದು ಸಹ ಅಪರಾಧವಾಗಿದೆ. ಕಾನೂನುಬಾಹಿರ ಸಂಬಂಧವನ್ನಿಟ್ಟುಕೊಳ್ಳುವ ಪುರುಷನು ಅಪರಾಧಿಯಾಗಿದ್ದಾನೆ. ಕೇವಲ ಕಾನೂನಿನ ಮಾನ್ಯತೆ ಇರುವ ಸನ್ನಿವೇಶಗಳಲ್ಲಿ ಮಾತ್ರ ರಕ್ಷಣೆಯನ್ನು ಒದಗಿಸಬಹುದು. ಯಾವುದೇ ಅಪರಾಧಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.