ಮಕ್ಕಳಾಟದಲ್ಲಿ ಒಂದು ಗುಂಪಿನ ವಿರುದ್ಧ ಇನ್ನೊಂದು ಗುಂಪು ಸೋಲುತ್ತಿರುವಾಗ, ಆ ಇನ್ನೊಂದು ಗುಂಪು ಕುತಂತ್ರದಿಂದ ನಿಯಮಗಳನ್ನು ಉಲ್ಲಂಘಿಸುವ ಕೃತ್ಯ ಮಾಡುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ. ಇದನ್ನು ಮೋಸದಾಟ ಎಂದು ಹೇಳುತ್ತಾರೆ. ಅದು ಮಕ್ಕಳ ಆಟವಾಗಿರುವುದರಿಂದ ಆ ವೃತ್ತಿಯ ಕಡೆ ಗಾಂಭೀರ್ಯದಿಂದ ಯಾರೂ ನೋಡುವುದಿಲ್ಲ ಹಾಗೂ ಅವರ ಕೃತಿಯ ಕಡೆ ಮನೋರಂಜನೆ ಎಂದು ನೋಡಲಾಗುತ್ತದೆ. ಇದೇ ರೀತಿ ದೊಡ್ಡವರ ಬಗ್ಗೆ ಆದಾಗ ಏನಾಗುತ್ತದೆ, ಎಂಬುದು ಅಮೇರಿಕಾದ ಸಂಸತ್ತಿನಲ್ಲಿ ರಿಪಬ್ಲಿಕನ್ ಪಕ್ಷದ ಸಾವಿರಾರು ಗೂಂಡಾಗಳ ಆಕ್ರೋಶದಿಂದ ಕಾಣಿಸುತ್ತದೆ. ಪ್ರಜಾಪ್ರಭುತ್ವದ ಡಂಗುರ ಸಾರುವ ಹಾಗೂ ಜಗತ್ತಿನ ಮಹಾಶಕ್ತಿಯಾಗಿರುವ ಅಮೇರಿಕಾದಲ್ಲಿ ರಿಪಬ್ಲಿಕನ್ ಪಕ್ಷದ ಸಾವಿರಾರು ಗೂಂಡಾಗಳು ಸಂಸತ್ತಿನಲ್ಲಿ ನುಗ್ಗಿ ಹಿಂಸಾಚಾರ ಮಾಡಿದ್ದರಿಂದ ಅಮೇರಿಕಾದ ಮಾನ ಹರಾಜಾಯಿತು. ಈ ಹಿಂಸಾತ್ಮಕ ಕೃತ್ಯಕ್ಕೆ ರಿಪಬ್ಲಿಕನ್ ಪಕ್ಷದ ನಾಯಕ ಹಾಗೂ ಅಮೇರಿಕಾದ ಪದಚ್ಯುತವಾಗಲಿರುವ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಿದ್ದರು.
ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡೆಮೊಕ್ರೆಟಿಕ್ ಪಕ್ಷದ ನಾಯಕ ಜೊ ಬಾಯಡನ ಇವರು ಜನವರಿ ೨೦ ರಂದು ರಾಷ್ಟ್ರಾಧ್ಯಕ್ಷ ಸ್ಥಾನದ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಅವರ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾಯಿತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಆಗುವುದಿತ್ತು. ಆ ಸಮಯದಲ್ಲಿ ಚುನಾವಣೆಯಲ್ಲಿ ಸೋಲುಂಡಿದ ರಿಪಬ್ಲಿಕನ್ ಪಕ್ಷದ ಟ್ರಂಪ್ ಬೆಂಬಲಿಗರು ಪ್ರಜಾಪ್ರಭುತ್ವದ ಪ್ರತೀಕವೆಂದೆನಿಸಿರುವ ವಾಶಿಂಗ್‌ಟನ್ ಡಿ.ಸಿ.ಯ ಕ್ಯಾಪಿಟಲ್ ಕಟ್ಟಡದೊಳಗೆ ನುಗ್ಗಿ ಹಿಂಸಾಚಾರ ಮಾಡಿದರು. ಈ ಹಿಂಸಾಚಾರದಲ್ಲಿ ಕಡಿಮೆ ಪಕ್ಷ ೪ ಜನರು ಸಾವಿಗೀಡಾದರೆ, ಅನೇಕ ಜನರು ಗಾಯಗೊಂಡರು. ಈ ನಾಟಕ ೫ ಗಂಟೆಗಳ ಕಾಲ ನಡೆಯುತ್ತಿತ್ತು. ಈ ಸಮಯದಲ್ಲಿ ಆಂದೋಲನಕಾರರು ಹಾಗೂ ಪೊಲೀಸರ ನಡುವೆ ಚಕಮಕಿ ನಡೆಯಿತು. ಹಿಂಸಾತ್ಮಕವಾಗಿದ್ದ ಆಂದೋಲನಕಾರರನ್ನು ತಡೆಗಟ್ಟಲು ಪೊಲೀಸರು ಅವರ ಮೇಲೆ ಬಂದೂಕನ್ನು ನೆಟ್ಟರು. ಇನ್ನೊಂದೆಡೆ ಆಕ್ರೋಶಗೊಂಡ ಸಮೂಹದಿಂದ ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಸಿನೆಟ್ ಸದಸ್ಯರು ತಮ್ಮ ತಮ್ಮ ಮೇಜಿನ ಕೆಳಗೆ ಅಡಗಿ ಕುಳಿತಿದ್ದರು. ಅಮೇರಿಕಾದಲ್ಲಿ ಇದೇ ಮೊದಲಬಾರಿ ಈ ರೀತಿಯ ಚಿತ್ರಣ ನೋಡಲು ಸಿಕ್ಕಿತು. ಈ ಘಟನೆ ಎಂದರೆ ಅಮೇರಿಕಾದ ಗೃಹಯುದ್ಧದ ರೂಪದಲ್ಲಿ ಇತ್ತು ಎಂದು ಹೇಳಬಹುದು. ನಾವು ನಮ್ಮ ದೇಶದಲ್ಲಿ ಇದನ್ನು ಅನೇಕ ಬಾರಿ ಅನುಭವಿಸಿದ್ದೇವೆ. ನಿರ್ಗಮಿತರಾಗಲಿರುವ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಮೇಲೆ ಈ ಹಿಂಸಾಚಾರದ ದೋಷಾರೋಪಣೆಯನ್ನು ಮಾಡಲಾಯಿತು. ಟ್ರಂಪ್ ಇವರ ಪ್ರಚೋದನಾಕಾರಿ ಭಾಷಣದ ನಂತರ ಈ ಹಿಂಸಾಚಾರವಾಯಿತು ಎಂದು ಮಾಜಿ ರಾಷ್ಟ್ರಾಧ್ಯಕ್ಷ ಬರಾಕ ಓಬಾಮಾ ಹೇಳಿದರು. ಇದು ದೇಶವಿರೋಧಿ ಕೃತ್ಯ ಎಂದು ಬಾಯಡೆನ ಹೇಳಿದರು. ಅದರಿಂದಾಗಿ ಟ್ರಂಪ್‌ನ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ‘ಬ್ಲಾಕ್ ಮಾಡಲಾಯಿತು. ಇದರೊಂದಿಗೆ ಫೇಸ್‌ಬುಕ್ ಹಾಗೂ ಯುಟ್ಯೂಬ್ ಕೂಡ ಟ್ರಂಪ್ ಇವರ ಕೆಲವು ವಿಡಿಯೋಗಳನ್ನು ತೆಗೆದುಹಾಕಿತು. ಅಮೇರಿಕಾದ ಇತಿಹಾಸದಲ್ಲೇ ಇದೇ ಪ್ರಥಮಬಾರಿ ದೇಶದ ಹಾಲಿ ರಾಷ್ಟ್ರಾಧ್ಯಕ್ಷರ ಸಂದರ್ಭದಲ್ಲಿ ನಡೆದಿರುವುದು ಗಮನಕ್ಕೆ ಬಂದಿತು. ಮತ ಎಣಿಕೆಯಾಗಿ ಟ್ರಂಪ್ ಇವರು ಪರಾಭವಗೊಂಡಿರುವುದು ತಿಳಿಯುತ್ತಿದ್ದಂತೆ ಅವರು ನಾನು ಅಮೇರಿಕಾದ ಅಧಿಕಾರವನ್ನು ಸಹಜವಾಗಿ ಬಿಡುವುದಿಲ್ಲ ಎಂದು ಹೇಳಿದ್ದರು. ಇದರ ಅರ್ಥ ಅಧಿಕಾರದಲ್ಲಿ ಉಳಿದುಕೊಳ್ಳಲು ಟ್ರಂಪ್ ಯಾವ ಮಟ್ಟಕ್ಕೂ ಹೋಗಲು ಸಿದ್ಧ, ಎಂಬುದು ಸ್ಪಷ್ಟವಾಗಿತ್ತು. ಅದರ ಪರಿಣಾಮದಿಂದಲೇ ಹಿಂಸಾಚಾರವಾಗಿದೆ. ಇವೆಲ್ಲವುಗಳಿಂದ ಡೊನಾಲ್ಡ್ ಟ್ರಂಪ್ ಇವರ ಸರ್ವಾಧಿಕಾರಿ ವೃತ್ತಿ ಬೆಳಕಿಗೆ ಬಂದಿದೆ. ವಿಶೇಷವೆಂದರೆ ಇದೇ ಟ್ರಂಪ್ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್‌ನನ್ನು ‘ಅನ್ಯಾಯಿ ಸರ್ವಾಧಿಕಾರಿ, ‘ವಿಲಕ್ಷಣ ಎಂದು ಹೇಳಿದ್ದರು ಹಾಗೂ ಆ ದೇಶದ ಮೇಲೆ ದಾಳಿ ಮಾಡಲಾಗುವುದು ಎಂದು ಅನೇಕ ಬಾರಿ ಎಚ್ಚರಿಕೆಯನ್ನೂ ನೀಡಿದ್ದರು. ಇಂದು ಅದೇ ಕಿಂಗ್ ಜೊಂಗ್‌ನ ನಡೆಯನ್ನು ಅನುಸರಿಸುತ್ತಿರುವ ಟ್ರಂಪ್ ಇವರಿಗೆ ಯಾವ ಬಿರುದನ್ನು ಕೊಡಬೇಕು ?, ಇದು ಅಮೇರಿಕಾದ ಜನರೇ ನಿರ್ಧರಿಸುವರು.
ಅಮೇರಿಕಾಗೆ ಕಪಾಳಮೋಕ್ಷ !
ಜಗತ್ತಿನ ಯಾವುದೇ ದೇಶದಲ್ಲಿ ಸ್ವಲ್ಪ ಹಿಂಸಾಚಾರವಾದರೂ ಅಮೇರಿಕಾವು ಕೂಡಲೇ ಪ್ರಜಾಪ್ರಭುತ್ವದ ಡಂಗುರ ಸಾರುತ್ತಾ ಅವರಿಗೆ ಪುಕ್ಕಟ್ಟೆ ಸಲಹೆ ನೀಡುತ್ತಾ ತನ್ನನ್ನು ಧನ್ಯನೆಂದುಕೊಳ್ಳುತ್ತದೆ. ವಿಶೇಷವಾಗಿ ನಮ್ಮ ದೇಶಕ್ಕೆ ಇದರ ಅನೇಕ ಅನುಭವಗಳು ಸಿಕ್ಕಿದೆ. ದೇಶದ ಆಂತರಿಕ ಆಂದೋಲನಗಳು, ವಿಶೇಷವಾಗಿ ಪ್ರಗತಿಪರರ ಆಂದೋಲನದಿಂದ ಅಮೇರಿಕಾಗೆ ಚಿಂತೆಯಾಗುತ್ತಿತ್ತು ಹಾಗೂ ಭಾರತದ ಆಂತರಿಕ ಪ್ರಶ್ನೆಗಳಲ್ಲಿ ಮೂಗು ತೂರಿಸುತ್ತಾ ‘ಪ್ರಜಾಪ್ರಭುತ್ವವು ಅಪಾಯದಲ್ಲಿದೆ, ‘ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗುತ್ತಿದೆ, ‘ಅಲ್ಪಸಂಖ್ಯಾತರ ಅಧಿಕಾರದ ಮೇಲೆ ಗದಾಪ್ರಹಾರವಾಗುತ್ತಿದೆ, ಎಂದು ಕೂಗಾಡುತ್ತದೆ. ಇಲ್ಲಿಯ ಕೆಲವು ಸಣ್ಣ ಸಂಸ್ಥೆಗಳು, ಸಂಘಟನೆಗಳು ಹೀಗೆ ವರದಿಗಳನ್ನು ತಯಾರಿಸಿ ಪ್ರಸಾರ ಮಾಧ್ಯಮಗಳ ಮೂಲಕ ಅವುಗಳನ್ನು ಪ್ರಕಟಿಸುತ್ತವೆ. ಈ ಮೂಲಕ ಭಾರತದ ಅಪಾರ ಮಾನಹಾನಿಯನ್ನು ಮಾಡಲು ಅಮೇರಿಕಾವು ಪ್ರಯತ್ನಿಸುತ್ತಿದೆ. ಈಗ ಟ್ರಂಪ್ ಅವರ ಬೆಂಬಲಿಗರ ಹಿಂಸಾಚಾರದಿಂದಾಗಿ ಅಮೇರಿಕಾದ ಪ್ರಜಾಪ್ರಭುತ್ವದ ಮರ್ಯಾದೆ ಕಳಚಿ ಬಿದ್ದಿದೆ, ‘ಈಗ ನಿಜವಾಗಿಯೂ ಯಾರ ಪ್ರಜಾಪ್ರಭುತ್ವ ಅಪಾಯದಲ್ಲಿದೆ ?, ಎಂಬುದು ಜಗತ್ತಿಗೆ ತಿಳಿಯಿತು. ಅಷ್ಟೇ ಅಲ್ಲ ವರ್ಣಭೇದದ ವಾಗ್ವಾದದಲ್ಲಿ ಎಷ್ಟೋ ಶ್ವೇತವರ್ಣದ ಪೊಲೀಸರು ಕಪ್ಪು ಜನರನ್ನು ನಡುರಸ್ತೆಯಲ್ಲಿ ಹೇಗೆ ಹಿಸುಕಿ ಸಾಯಿಸಿದ್ದಾರೆ ? ಎಂಬುದನ್ನು ಎಲ್ಲ ಜಗತ್ತು ನೋಡಿದೆ. ಇದೇ ಅಮೇರಿಕಾದ ಪ್ರಜಾಪ್ರಭುತ್ವವೇ ? ಇದರಿಂದ ಅಮೇರಿಕಾದ ಪ್ರಜಾಪ್ರಭುತ್ವ ವ್ಯವಸ್ಥೆಯು ಕೇವಲ ಹೆಸರಿಗೆ ಮಾತ್ರವಿದೆ, ಅಲ್ಲಿ ಸರ್ವಾಧಿಕಾರವಿದೆ ಎಂಬುದನ್ನು ಈ ಘಟನೆಗಳು ಹೇಳುತ್ತವೆ. ಆದ್ದರಿಂದ ಯಾವಾಗ ನಾವು ಇತರರಿಗೆ ಉಪದೇಶವನ್ನು ಕೊಡುತ್ತೇವೆಯೋ, ಆಗ ಮೊದಲು ನಮ್ಮ ದೇಶದಲ್ಲಿ ಏನಾಗುತ್ತಿದೆ, ಎಂಬುದನ್ನು ಅಮೇರಿಕಾವು ಮೊದಲು ನೋಡಬೇಕು ಇಲ್ಲದಿದ್ದರೆ ಕಪಾಳಮೋಕ್ಷ ಆಗುತ್ತಲೇ ಇರುವುದು.
ಸಂಸತ್ತಿನ ಘಟನೆಯ ನಂತರ ಡೊನಾಲ್ಡ್ ಟ್ರಂಪ್ ಇವರನ್ನು ಪದಚ್ಯುತಗೊಳಿಸುವ ಕಾರ್ಯಕ್ಕೆ ವೇಗ ಸಿಕ್ಕಿದೆ. ಈ ಹಿಂಸಾಚಾರದ ನಂತರವೂ ಅಮೇರಿಕನ್ ಕಾಂಗ್ರೆಸ್ ಸಂಸತ್ತಿನ ಕೆಲಸವನ್ನು ಪುನಃ ಮೊದಲಿನಂತೆ ಆರಂಭಿಸಿ ಜೊ ಬಾಯಡೆನ್ ಇವರ ವಿಜಯದ ಮೇಲೆ ಮುದ್ರೆಯೊತ್ತಿತು. ಇಷ್ಟೇ ಅಲ್ಲ, ಈ ಹಿಂಸೆಗಾಗಿ ಟ್ರಂಪ್ ಇವರನ್ನು ಕಾರಣರನ್ನಾಗಿ ಮಾಡಿ ಅವರ ಮೇಲೆ ಮೊಕದ್ದಮೆಯನ್ನು ಹೂಡಿ ಕ್ರಮ ಕೈಗೊಳ್ಳಲು ಆರಂಭಿಸಿದೆ. ಇಂತಹ ವಿಲಕ್ಷಣ ವ್ಯಕ್ತಿಯ ರಾಜಕೀಯ ಕಾರ್ಯವೈಖರಿಯ ಅಂತ್ಯವು ಹೀಗೆ ಅವಮಾನಕಾರಿಯಾಗುತ್ತದೆ. ಟ್ರಂಪ್ ಇವರನ್ನು ಪದಚ್ಯುತಗೊಳಿಸಿ ಅವರ ಮೇಲೆ ಮೊಕದ್ದಮೆಯನ್ನು ಆರಂಭವಾಗುವ ತನಕ ಅಮೇರಿಕಾದ ಅಳಿದುಳಿದ ಮಾನವೂ ಹರಾಜಾಗುವುದು.
ಸೋಲು ಮನಸ್ಸಿಗೆ ಚುಚ್ಚಿದೆ, ಇದು ಅರ್ಥವಾಗಬಹುದು; ಆದರೆ ಅದನ್ನು ಇಂತಹ ಪದ್ದತಿಯಿಂದ ವ್ಯಕ್ತಪಡಿಸುವುದು ಅತ್ಯಂತ ಅಯೋಗ್ಯವಾಗಿದೆ. ಈ ಹಿಂಸಾಚಾರದ ನಂತರ ಅಮೇರಿಕನ್ ಕಾಂಗ್ರೆಸ್ ಬಾಯಡೆನ್ ಇವರ ವಿಜಯದ ಮೇಲೆ ಮುದ್ರೆಯೊತ್ತಿದ ಮೇಲೆಯೂ ಟ್ರಂಪ್ ಇವರು ಚುನಾವಣೆಯ ತೀರ್ಪನ್ನು ಸ್ವೀಕಾರ ಮಾಡುವುದಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ. ಒಟ್ಟಾರೆ ಪರಾಜಯವನ್ನು ಒಪ್ಪಿಕೊಳ್ಳದ ಹಿಂಸಾತ್ಮಕ ನೀತಿಯನ್ನು ಅನುಸರಿಸಿದ್ದರಿಂದ ಡೊನಾಲ್ಡ್ ಟ್ರಂಪ್‌ನ ಹೆಸರು ಅಮೇರಿಕಾದಲ್ಲಿ ಮಾತ್ರವಲ್ಲ, ಸಂಪೂರ್ಣ ಜಗತ್ತಿನ ಇತಿಹಾಸದಲ್ಲೇ ಶಾಶ್ವತವಾದ ಕಪ್ಪು ಪಟ್ಟಿಯಲ್ಲಿ ಸೇರಿದೆ, ಎಂಬುದು ಮಾತ್ರ ಅಷ್ಟೇ ಸತ್ಯವಾಗಿದೆ !