೧. ‘ನಾಮಜಪಾದಿ ಉಪಾಯಗಳನ್ನು ಮಾಡುವಾಗ ಹೋರಾಡುವ ವೃತ್ತಿಬೇಕು ಮತ್ತು ಅದನ್ನು ಜಿಗುಟುತನದಿಂದ ಮಾಡಬೇಕು. ಉಪಾಯವನ್ನು ಮಾಡುವಾಗ ನಾಮ ಜಪವನ್ನು ಮಾಡುತ್ತಾ ಶರೀರದ ಮೇಲೆ ಬಂದಿರುವ ಆವರಣವನ್ನೂ ತೆಗೆಯಬೇಕು.
೨. ‘ಪ್ರಾಣಶಕ್ತಿವಹನ’ ಪದ್ಧತಿಗನುಸಾರ ಉಪಾಯವನ್ನು ಹುಡುಕುವುದು’, ಇದನ್ನೂ ಹೋರಾಡುವ ವೃತ್ತಿಯಿಂದಲೇ ಮಾಡಬೇಕು, ಹೀಗೆ ಮಾಡಿದರೆ ಮಾತ್ರ ಪರಿಣಾಮಕಾರಿ ಉಪಾಯವಾಗುತ್ತದೆ ಮತ್ತು ಉಪಾಯದ ಫಲನಿಷ್ಪತ್ತಿ ಹೆಚ್ಚಾಗುತ್ತದೆ.
೩. ಎಲ್ಲಕ್ಕಿಂತ ಹೆಚ್ಚು ತೊಂದರೆದಾಯಕ ಶಕ್ತಿ(ಕಪ್ಪು ಶಕ್ತಿ)ಯು ಹೊಟ್ಟೆಯ ಟೊಳ್ಳಿನಲ್ಲಿ ಸಂಗ್ರಹವಾಗಿರುತ್ತದೆ. ಶರೀರದಲ್ಲಿನ ತೊಂದರೆದಾಯಕ ಶಕ್ತಿಯನ್ನು ಕೈಗಳಿಂದ ಕೆಳಗಿನಿಂದ ಮೇಲೆ ತೆಗೆಯಬೇಕು. ಇದರಿಂದ ಹೊಟ್ಟೆಯಲ್ಲಿನ ತೊಂದರೆದಾಯಕ ಶಕ್ತಿ ಕಣ್ಣು ಮತ್ತು ಬಾಯಿಯ ಮೂಲಕ ಹೊರಬೀಳುತ್ತದೆ. ಆಗ ತೇಗು ಮತ್ತು ಆಕಳಿಕೆಗಳು ಬರುವ ಪ್ರಮಾಣ ಹೆಚ್ಚಾಗಿರುತ್ತದೆ.
೪. ಕಣ್ಣುಗಳಿಂದ ತೊಂದರೆದಾಯಕ ಶಕ್ತಿಯನ್ನು ಹೆಚ್ಚು ಸಮಯ ತೆಗೆಯಬೇಕು. ಕಣ್ಣುಗಳಲ್ಲಿ ತೊಂದರೆದಾಯಕ ಶಕ್ತಿಯನ್ನು ತೆಗೆದ ನಂತರ ನಿಧಾನವಾಗಿ ಹೊಟ್ಟೆಯಲ್ಲಿ ತೊಂದರೆದಾಯಕ ಶಕ್ತಿಯು ಕಡಿಮೆಯಾಗುತ್ತದೆ.
೫. ಸಂಪೂರ್ಣ ಶರೀರ ಹಗುರವೆನಿಸುವವರೆಗೆ ಆವರಣವನ್ನು ತೆಗೆಯಬೇಕು. ಒಂದು ಬಾರಿ ಶರೀರದಿಂದ ಆವರಣವನ್ನು ತೆಗೆದರೆ, ೪ – ೫ ಗಂಟೆ ನಮ್ಮ ಸೇವೆ ಪರಿಣಾಮಕಾರಿಯಾಗಿ ಮತ್ತು ವೇಗದಿಂದ ಆಗುತ್ತದೆ.
೬. ಕಡಿಮೆ ಸಮಯದಲ್ಲಿ ಹೆಚ್ಚು ಫಲನಿಷ್ಪತ್ತಿಯನ್ನು ಪ್ರಾಪ್ತಮಾಡಿಕೊಳ್ಳಲು ಜಿಗುಟುತನದಿಂದ ಮತ್ತು ತಳಮಳದಿಂದ ಉಪಾಯವನ್ನು ಕಂಡು ಹಿಡಿಯಬೇಕು.
೭. ನಾವು ಉಪಾಯಗಳನ್ನು ಮಾಡುವಲ್ಲಿ ಸಾತತ್ಯವನ್ನು ಇಟ್ಟುಕೊಂಡರೆ ತೊಂದರೆಯು ಕಡಿಮೆಯಾಗಿ ನಮಗೆ ಆದಷ್ಟು ಬೇಗನೆ ಭಗವಂತನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ.
ಮೇಲಿನ ಅಂಶಗಳ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಪರಿಣಾಮಕಾರಿ ಉಪಾಯಗಳನ್ನು ಮಾಡೋಣ.’
– ಶ್ರೀ. ಶಂಕರ ನರುಟೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೯.೨೦೨೦)