ವಿವಿಧ ಉಪಾಸನೆಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಇಡೀ ವಿಶ್ವಕ್ಕೆ ಪ್ರಕಾಶ, ಊರ್ಜೆ (ಶಕ್ತಿ) ಮತ್ತು ಚೈತನ್ಯವನ್ನು ನೀಡುವ ದೇವತೆ ಎಂದರೆ ಸೂರ್ಯನಾರಾಯಣ ! ಹಿಂದೂ ಧರ್ಮದಲ್ಲಿ ಸೂರ್ಯೋಪಾಸನೆಗೆ ಅಸಾಧಾರಣ ಮಹತ್ವವಿದೆ. ‘ಆರೋಗ್ಯಂ ಭಾಸ್ಕರಾತ್ ಇಚ್ಛೇತ್, ಅಂದರೆ ಸೂರ್ಯನಿಂದ ಆರೋಗ್ಯದ ಇಚ್ಛೆಯನ್ನು ಮಾಡಬೇಕು, ಅಂದರೆ ‘ಸೂರ್ಯೋಪಾಸನೆಯನ್ನು ಮಾಡಿ ಆರೋಗ್ಯವನ್ನು ಪಡೆಯ ಬೇಕು, ಎನ್ನುವ ಸುವಚನವಿದೆ. ಹಿಂದೂಗಳ ದಿನವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸೂರ್ಯಾಸ್ತದ ಬಳಿಕ ಮುಗಿಯುತ್ತದೆ. ಆದ್ದರಿಂದ ನಮ್ಮ ಭರತಭೂಮಿಯ ಋಷಿಮುನಿಗಳು, ಸಿದ್ಧ ಮಹಾತ್ಮರು ಹಾಗೂ ಸಂತರು ಸೂರ್ಯೋಪಾಸನೆಯ ನಿಯಮಗಳನ್ನು ಹಾಕಿಕೊಟ್ಟಿದ್ದಾರೆ. ಸೂರ್ಯೋದಯಕ್ಕೂ ಮೊದಲು ಎದ್ದು ಸ್ನಾನ ಮಾಡಿ ಉದಯಿಸುತ್ತಿರುವ ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು ಪ್ರತಿದಿನ ನಮಸ್ಕಾರ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ಚೆನ್ನಾಗಿರುತ್ತದೆ. ‘ಸೂರ್ಯನಿಗೆ ಅರ್ಘ್ಯವನ್ನು ಕೊಡುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಲಾಭವಾಗುತ್ತದೆ ?, ಎನ್ನುವುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ೧೬.೧೧.೨೦೨೦ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಯ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಆಧ್ಯಾತ್ಮಿಕ ತೊಂದರೆಯಿರುವ (ಟಿಪ್ಪಣಿ) ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ ಇವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ನೀಡಿದಾಗ ಅವರ ಮೇಲಾದ ಪರಿಣಾಮವನ್ನು ಮುಂದೆ ನೀಡಲಾಗಿದೆ.
ಟಿಪ್ಪಣಿ : ಆಧ್ಯಾತ್ಮಿಕ ತೊಂದರೆ : ಆಧ್ಯಾತ್ಮಿಕ ತೊಂದರೆ ಎಂದರೆ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಅಧಿಕ ಪ್ರಮಾಣದಲ್ಲಿರುವುದೆಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ. ೪೯ ರಷ್ಟು ಇರುವುದೆಂದರೆ ಮಧ್ಯಮ ತೊಂದರೆ ಮತ್ತು ನಕಾರಾತ್ಮಕ ಸ್ಪಂದನಗಳು, ಶೇ. ೩೦ ಕ್ಕಿಂತ ಕಡಿಮೆಯಿರುವುದೆಂದರೆ ಮಂದ ಆಧ್ಯಾತ್ಮಿಕ ತೊಂದರೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ, ಕೆಟ್ಟ ಶಕ್ತಿಗಳ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳ ಪರಿಹಾರವನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಹೇಳಬಹುದು.
೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ನಿರೀಕ್ಷಣೆಯ ವಿಶ್ಲೇಷಣೆ – ಸೂರ್ಯನಿಗೆ ಅರ್ಘ್ಯವನ್ನು ನೀಡುವುದರಿಂದ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕ ಇವರ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಆಗುತ್ತದೆ: ಇದು ಮುಂದೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.
ಟಿಪ್ಪಣಿ ೧ : ಸೂರ್ಯೋದಯದ ಸಮಯಕ್ಕಿಂತ (ಉದಯಿಸುವ ಸೂರ್ಯನಿಗಿಂತ) ಸೂರ್ಯಾಸ್ತದ ಸಮಯದಲ್ಲಿ (ಅಸ್ತನಾಗುವ ಸೂರ್ಯನ) ಸೂರ್ಯನ ತೇಜವು ಸ್ವಲ್ಪ ಕಡಿಮೆಯಾಗುತ್ತದೆ, ಇದರಿಂದ ಸಕಾರಾತ್ಮಕ ಊರ್ಜೆಯ ಹೆಚ್ಚಳವು ತುಲನಾತ್ಮಕವಾಗಿ ಸೂರ್ಯೋದಯಕ್ಕಿಂತ ಸೂರ್ಯಾಸ್ತದ ಸಮಯದಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ.
ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
೧. ಸೂರ್ಯನಿಗೆ ಅರ್ಘ್ಯವನ್ನು ನೀಡಿದ್ದರಿಂದ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿರುವ ‘ಇನ್‌ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ನಕಾರಾತ್ಮಕ ಊರ್ಜೆಗಳು ಇಲ್ಲವಾಗಿ ಅವನ ಸಕಾರಾತ್ಮಕ ಊರ್ಜೆಯು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಳವಾಯಿತು.
೨. ಸೂರ್ಯನಿಗೆ ಅರ್ಘ್ಯವನ್ನು ನೀಡಿದ್ದರಿಂದ ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕನಲ್ಲಿ ‘ಇನ್‌ಫ್ರಾರೆಡ್ ಈ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವನ ಸಕಾರಾತ್ಮಕ ಊರ್ಜೆಯು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಳವಾಯಿತು.
೨. ನಿಷ್ಕರ್ಷ
ಈ ವೈಜ್ಞಾನಿಕ ಪರೀಕ್ಷಣೆಯಿಂದ ‘ಸೂರ್ಯನಿಗೆ ಅರ್ಘ್ಯವನ್ನು ನೀಡಿದರೆ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ, ಎಂಬುದು ಸಿದ್ಧವಾಯಿತು.
೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಸೂರ್ಯನಿಗೆ ಅರ್ಘ್ಯವನ್ನು ನೀಡಿದ್ದರಿಂದ ಪರೀಕ್ಷಣೆಯಲ್ಲಿದ್ದ ಸಾಧಕರಿಗೆ ಬಹಳಷ್ಟು ಚೈತನ್ಯ ದೊರಕುತ್ತದೆ: ಸೂರ್ಯನಲ್ಲಿ ಪ್ರಚಂಡ ಪ್ರಮಾಣದಲ್ಲಿ ತೇಜ ಮತ್ತು ಊರ್ಜೆಯಿದೆ. ಸೂರ್ಯನ ತೇಜೋಮಯ ಕಿರಣಗಳಿಂದ ವಾಯುಮಂಡಲವು ಶುದ್ಧ ಮತ್ತು ಪವಿತ್ರವಾಗುತ್ತದೆ. ಸೂರ್ಯನ ಉಪಾಸನೆಯಿಂದಾಗಿ ಉಪಾಸಕನಿಗೆ ಸೂರ್ಯನ ಚೈತನ್ಯವು ಸಿಗುತ್ತದೆ. ಸಾಧಕರು ಪರೀಕ್ಷಣೆಯಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯದೇವರಿಗೆ ಭಾವಪೂರ್ಣವಾಗಿ ಅರ್ಘ್ಯವನ್ನು ನೀಡಿದ್ದರಿಂದ ಅವರಿಗೆ ಸೂರ್ಯನಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯವು ದೊರಕಿತು. ಇದರಿಂದ ಅವರಲ್ಲಿದ್ದ ನಕಾರಾತ್ಮಕ ಊರ್ಜೆಯು ಇಲ್ಲವಾಗಿ ಅವರಲ್ಲಿ ಸಕಾರಾತ್ಮಕ ಊರ್ಜೆಯು ಗಣನೀಯವಾಗಿ ಹೆಚ್ಚಳವಾಯಿತು. ಇದರಿಂದ ‘ಹಿಂದೂ ಧರ್ಮದಲ್ಲಿ ಸೂರ್ಯ ನಾರಾಯಣ ಮತ್ತು ಸೂರ್ಯೋಪಾಸನೆಗೆ ಏಕೆ ಅಸಾಧಾರಣ ಮಹತ್ವವನ್ನು ನೀಡಲಾಗಿದೆ ಎಂಬುದು ಗಮನಕ್ಕೆ ಬರುತ್ತದೆ. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೧೧.೨೦೨೦)