ಧರ್ಮದ ಅಧಿಕಾರವು ಬದುಕುವ ಅಧಿಕಾರಕ್ಕಿಂತ ದೊಡ್ಡದ್ದಲ್ಲ ! – ಮದ್ರಾಸ ಉಚ್ಚ ನ್ಯಾಯಾಲಯ

ಪ್ರಾಚೀನ ಶ್ರೀರಂಗಮ್ ದೇವಸ್ಥಾನದಲ್ಲಿ ಹಬ್ಬ ಮತ್ತು ಧಾರ್ಮಿಕ ಅನುಷ್ಠಾನಗಳ ಆಯೋಜನೆಗೆ ಸಂಬಂಧಿಸಿದ ಅರ್ಜಿಯ ಕುರಿತು ನ್ಯಾಯಾಲಯದ ಸ್ಪಷ್ಟೀಕರಣ !

ಕೆಲವು ನಿಯಮಗಳನ್ನು ಪಾಲಿಸುವಂತೆ ಕೇಳುವ ಮೂಲಕ ದೇಶದಾದ್ಯಂತ ದೇವಾಲಯಗಳನ್ನು ಈಗ ಭಕ್ತರಿಗೆ ತೆರೆಯಲಾಗುತ್ತಿದೆ. ಆದ್ದರಿಂದ ಕೊರೋನಾ ಕಾಲಾವಧಿಯಲ್ಲಿ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಹೇರುವ ಮೂಲಕ ಪ್ರಾಚೀನ ಶ್ರೀರಂಗಮ್ ದೇವಸ್ಥಾನದಲ್ಲಿ ಉತ್ಸವವನ್ನು ಪ್ರಾರಂಭಿಸಲು ತಮಿಳುನಾಡಿನ ಅಣ್ಣಾದ್ರಮುಕ ಸರಕಾರ ಪ್ರಯತ್ನಿಸಬೇಕು. ಸರಕಾರ ತಾನಾಗಿಯೇ ಇಂತಹ ಕ್ರಮಗಳನ್ನು ತೆಗೆದುಕೊಳ್ಳದ್ದಿದ್ದರಿಂದ ನ್ಯಾಯಾಲಯವು ಸರಕಾರಕ್ಕೆ ಇಂತಹ ನಿರ್ದೇಶನಗಳನ್ನು ನೀಡಬೇಕು, ಎಂದು ಭಕ್ತರ ಅಪೇಕ್ಷೆಯಾಗಿದೆ !

ಚೆನ್ನೈ (ತಮಿಳುನಾಡು) – ಧಾರ್ಮಿಕ ವಿಧಿಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಮಾನವ ಜೀವನ ಹಕ್ಕಿಗೆ ಒಳಪಟ್ಟಿರಬೇಕು. ಬದುಕುವ ಹಕ್ಕಿಗಿಂತ ಧರ್ಮದ ಹಕ್ಕು ದೊಡ್ಡದಲ್ಲ. ಈ ಹಿನ್ನೆಲೆಯಲ್ಲಿ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರವು ಕೆಲವು ಕ್ರಮಗಳನ್ನು ತೆಗೆದುಕೊಂಡರೆ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವಾಗ ಸ್ಪಷ್ಟಪಡಿಸಿತು.

೧. ‘ಪ್ರಾಚೀನ ಶ್ರೀರಂಗಮ್ ದೇವಸ್ಥಾನದಲ್ಲಿ ಉತ್ಸವ ಮತ್ತು ಧಾರ್ಮಿಕ ಅನುಷ್ಠಾನಗಳನ್ನು ನಿಯಮಿತವಾಗಿ ನಡೆಸಲು ಅನುಮತಿ ನೀಡುವಂತೆ ರಂಗರಾಜನ ನರಸಿಂಹನ್ ಅವರು ಉಚ್ಚ ನ್ಯಾಯಾಲಯದಿಂದ ಸರಕಾರಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

೨. ಇದಕ್ಕೆ ನ್ಯಾಯಾಲಯವು ಕೊರೋನಾ ಬಿಕ್ಕಟ್ಟಿನ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ ‘ತಿರುಚಿನಪಲ್ಲಿ ಜಿಲ್ಲೆಯ ಶ್ರೀರಂಗಮ್ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಹಬ್ಬಗಳು ಮತ್ತು ಧಾರ್ಮಿಕ ಅನುಷ್ಠಾನಗಳನ್ನು ನಡೆಸಲು ಸಾಧ್ಯವಿದೆಯೇ ಎಂದು ಪರಿಶೀಲಿಸುವಂತೆ’ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.