ರಾಜ್ಯದಲ್ಲಿ ವಕ್ಫ್ ದಾವೇ ಮಾಡಿದ್ದ ೧ ಸಾವಿರದ ೨೦೦ ಎಕರೆ ಭೂಮಿ ಕಾಂಗ್ರೆಸ್ ಸರಕಾರದಿಂದ ಹಿಂಪಡೆ

  • ಕೇವಲ ೧೧ ಎಕರೆ ಭೂಮಿ ವಕ್ಫ್ ಗೆ ಸೇರಿದ್ದು !

  • ತಪ್ಪಾದ ದಾವೆ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವರು

ವಿಜಯಪುರ – ವಿಜಯಪುರ ಜಿಲ್ಲೆಯಲ್ಲಿನ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ ೪೧ ರೈತರಿಗೆ ಅವರ ಭೂಮಿ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ನೋಟಿಸ್ ಕಳುಹಿಸಲಾಗಿತ್ತು. ಇದು ಸುಮಾರು ೧ ಸಾವಿರದ ೨೦೦ ಎಕರೆ ಭೂಮಿ ಆಗಿದೆ. ಈ ನೋಟಿಸಿಗೆ ರೈತರು ವಿರೋಧಿಸಿದ ನಂತರ ರಾಜ್ಯದ ಕಾಂಗ್ರೆಸ್ ಸರಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ. ಪಾಟೀಲ್ ಇವರು, ಜಾರಿಮಾಡಿದ ನೋಟಿಸಗಳು ಹಿಂಪಡೆಯಲಾಗುವುದು. ರೈತರ ಭೂಮಿ ವಕ್ಫ್ ಬೋರ್ಡ್ ನ ಆಸ್ತಿಯಲ್ಲಿ ರೂಪಾಂತರಸುವ ಕುರಿತು ಸರಕಾರದ ಯಾವುದೇ ವಿಚಾರವಿಲ್ಲ ಮತ್ತು ಏನಾದರೂ ತಪ್ಪಾಗಿದ್ದರೆ, ಅದನ್ನು ಸುಧಾರಿಸಲಾಗುವುದು. ಹಾಗೂ ಜವಾಬ್ದಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಚಿವರು ಮಾತು ಮುಂದುವರೆಸಿ, ಜಿಲ್ಲೆಯ ಉಪಾಯುಕ್ತರ ವಿಚಾರಣೆ ನಡೆಸುವರು. ಕಳುಹಿಸಿರುವ ನೋಟಿಸ್ ಹಿಂಪಡೆಯುವುದಕ್ಕಾಗಿ ಕ್ರಮ ಕೈಗೊಳ್ಳಲು ಎರಡು ದಿನದ ಕಾಲಾವಕಾಶ ಬೇಕಾಗುವುದು. ಒಂದು ಸಾವಿರದ ೨೦೦ ಎಕ್ಕರೆಯಲ್ಲಿನ ಕೇವಲ ೧೧ ಎಕರೆ ಜಾಗ ವಕ್ಫ್ ಬೋರ್ಡ್ ನದ್ದಾಗಿದೆ. ಸಮಸ್ಯೆ ಪರಿಹರಿಸುವದಕ್ಕಾಗಿ ಉಪಾಯುಕ್ತರ ಅಧ್ಯಕ್ಷತೆಯಲ್ಲಿ ಒಂದು ಕೃತಿ ಪಡೆ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ರೈತರು ವಿರೋಧಿಸದೆ ಇದ್ದಿದ್ದರೆ, ಈ ಭೂಮಿ ವಕ್ಫ್ ಬೋರ್ಡ್ ನುಂಗುತ್ತಿತ್ತು ! ಆದ್ದರಿಂದ ಕೇಂದ್ರ ಸರಕಾರವು ವಕ್ಫ್ ಕಾನೂನಿನಲ್ಲಿ ಸುಧಾರಣೆ ತರುವ ಬದಲು ಅದನ್ನು ರದ್ದು ಪಡಿಸುವ ಆವಶ್ಯಕತೆ ಇದೆ. ಇದಕ್ಕಾಗಿ ಈಗ ದೇಶಾದ್ಯಂತ ಇರುವ ಹಿಂದುಗಳು ಸರಕಾರದ ಮೇಲೆ ಒತ್ತಡ ಹೇರುವ ಆವಶ್ಯಕತೆ ಇದೆ !