ಅ. ಪಂಚ ಮಹಾಯಜ್ಞಗಳು :
೧. ಬ್ರಹ್ಮಯಜ್ಞ ಅಥವಾ ಋಷಿಯಜ್ಞ
೨. ದೇವಯಜ್ಞ ಅಥವಾ ಅಗ್ನಿಹೋತ್ರ
೩. ಪಿತೃಯಜ್ಞ
೪. ಬಲಿವೈಶ್ವೇದೇವಯಜ್ಞ / ಭೂತಯಜ್ಞ
೫. ನೃಯಜ್ಞ ಅಥವಾ ಅತಿಥಿ ಯಜ್ಞ ವೇದಗಳು ಹೇಳಿದ ಪಂಚಮಹಾಯಜ್ಞಗಳನ್ನು ದೈನಂದಿನ ಜೀವನದಲ್ಲಿ ಆಚರಿಸಿದರೆ ವ್ಯಕ್ತಿ ಮತ್ತು ಸಮಾಜದ ಜೀವನ ಸುಖಕರವಾಗುವುದು.
ಆ. ಅಗ್ನಿಹೋತ್ರವು ಪಂಚಮಹಾಯಜ್ಞಗಳ ಒಂದು ಭಾಗವಾಗಿದೆ. ದೇವಯಜ್ಞ ಅಥವಾ ಅಗ್ನಿಹೋತ್ರವನ್ನು ಮಾಡುವುದರಿಂದ ವಾಯು, ಮಳೆ ಮತ್ತು ಜಲ ಇವುಗಳ ಶುದ್ಧಿಯಾಗುತ್ತದೆ, ಹಾಗೆಯೇ ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುತ್ತದೆ. ಕಾಲಾಂತರದಲ್ಲಿ ಯಜ್ಞ ಈ ಶಬ್ದವು ಅಗ್ನಿಹೋತ್ರಕ್ಕೆ ರೂಢಿಯಾಯಿತು. ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ.
ಇ. ಅಗ್ನಿಹೋತ್ರವು ಅನಾದಿಕಾಲದಿಂದಲೂ ಮನುಷ್ಯನ ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ ಆಗುವ ಮಾಲಿನ್ಯವನ್ನು ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ. ಶುದ್ಧ ಹಸುವಿನ ತುಪ್ಪ ಮತ್ತು ಇತರೆ ಸಾಮಗ್ರಿಗಳನ್ನು ಉಪಯೋಗಿಸಿ ಅಗ್ನಿಹೋತ್ರವನ್ನು ಮಾಡಿದಾಗ ಅದರಿಂದ ಉತ್ಪನ್ನವಾಗುವ ಹೊಗೆಯಿಂದ ವಾಯುವಿನ ಶುದ್ಧೀಕರಣವಾಗಿ ಹಾನಿಕರ ವಿಷಾಣುಗಳು ನಾಶವಾಗುತ್ತವೆ ಎಂಬುದು ವರ್ತಮಾನ ವೈಜ್ಞಾನಿಕ ಪರೀಕ್ಷಣೆಯ ಮೂಲಕ ದೃಢಪಟ್ಟಿದೆ. – ನ್ಯಾಯವಾದಿ ನವೀನ ಕುಮಾರ, ನಯಾಪುರ, ಸೋಜತನಗರ, ರಾಜಸ್ಥಾನ.