ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಮಾರಾಟ ಮಾಡುತ್ತಿದ್ದ ಮದರಸಾದ ಮೌಲ್ವಿಯ ಬಂಧನ

ಹಿಂದೂ ಸಂತರನ್ನು ಸುಳ್ಳು ಆರೋಪಗಳ ಮೂಲಕ ಅವರ ಮಾನಹಾನಿ ಮಾಡುವ ಪ್ರಸಾರ ಮಾಧ್ಯಮಗಳು ಇಂತಹ ಘಟನೆಗಳ ಬಗ್ಗೆ ಮೌನವಾಗಿರುತ್ತವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವ ದೆಹಲಿ – ೧೬ ವರ್ಷದ ಬಾಲಕಿಯ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ೪೫ ವರ್ಷದ ಮದರಸಾ ಶಿಕ್ಷಕ ಮೌಲಾನಾ ನೌಶಾದ ಎಂಬವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ಉತ್ತರ ಪ್ರದೇಶದ ಹರದೊಯಿಯ ಹಲವಾರು ಬಾಲಕಿಯರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ೧೦ ಕ್ಕೂ ಹೆಚ್ಚು ಆರೋಪಗಳು ಇದೆ.