ಕರ್ನಾಟಕದಲ್ಲಿ ಕಾಂಗ್ರೆಸ್ ನಾಟಕ !

ಗೋಹತ್ಯಾ ಮಸೂದೆಯನ್ನು ರಾಜ್ಯದ ವಿಧಾನ ಪರಿಷತ್ತಿನಲ್ಲಿ ಮಂಡಿಸಲಿಕ್ಕಿತ್ತು. ಮಸೂದೆಯಲ್ಲಿ ಮತ ಚಲಾಯಿಸುವ ಮೊದಲು ಕಾಂಗ್ರೆಸ್ ಶಾಸಕರು ವಿಧಾನ ಪರಿಷತ್ತಿನ ಸಭಾಧ್ಯಕ್ಷರಾಗಿ ಕುಳಿತಿದ್ದ ಉಪಸಭಾಧ್ಯಕ್ಷರನ್ನು ಕೈ ಹಿಡಿದು ಕೆಳಗೆಳೆದರು. ಅಲ್ಲದೇ ಕಾಂಗ್ರೆಸ್ ಶಾಸಕರು ಸಹ ಸದನದಲ್ಲಿ ಹೊಡೆದಾಟ ಮಾಡಿದರು. ಗೋಹತ್ಯಾ ನಿಷೇಧ ಮಸೂದೆಯನ್ನು ಕೆಲವು ದಿನಗಳ ಹಿಂದೆ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಬಾರಿಯೂ ಕಾಂಗ್ರೆಸ್ ಮತ್ತು ಜನತಾ ದಳ (ಜಾ.) ಶಾಸಕರು ವಿರೋಧಿಸಿದರು; ಆದಾಗ್ಯೂ, ಅವರ ವಿರೋಧದ ನಡುವೆ ಕಾನೂನನ್ನು ಅಂಗೀಕರಿಸಲಾಯಿತು.

ಈ ಮಸೂದೆಯನ್ನು ಮೇಲ್ಮನೆಯಲ್ಲಿ ಮಂಡಿಸುವಾಗ, ಕಾಂಗ್ರೆಸ್ ಇದನ್ನು ವಿರೋಧಿಸಲು ಎಲ್ಲ ಶಾಸಕರಿಗೆ ‘ವಿಪ್ ಜಾರಿ ಮಾಡಿತ್ತು. ಆದ್ದರಿಂದ, ವಿಧಾನ ಪರಿಷತ್ತಿನ ಕಾಂಗ್ರೆಸ್ಸಿನ ಶಾಸಕರು ಉಪಸ್ಥಿತರಿದ್ದರು. ಈ ಮಸೂದೆಯನ್ನು ವಿರೋಧಿಸಲಿಕ್ಕಿದ್ದರೆ ಅದರ ಬಗ್ಗೆ ಚರ್ಚಿಸಬಹುದಿತ್ತು; ಆದಾಗ್ಯೂ, ಚರ್ಚೆಯ ಮಾರ್ಗವನ್ನು ಅನುಸರಿಸದೆ, ತಾಂತ್ರಿಕ ಸೂತ್ರದ ಆಧಾರದಲ್ಲಿ ಗೂಂಡಾಗಿರಿ ಮಾಡಿತು. ಸದನದ ಕಲಾಪವನ್ನು ನಡೆಸಲು ಸಭಾಧ್ಯಕ್ಷರು ಅಧ್ಯಕ್ಷತೆ ವಹಿಸುತ್ತಾರೆ; ಆದರೆ, ಅವರ ಅನುಪಸ್ಥಿತಿಯಲ್ಲಿ, ಈ ಕೆಲಸವನ್ನು ಉಪಸಭಾಧ್ಯಕ್ಷರು ಅಥವಾ ಶಾಸಕರು ತಾತ್ಕಾಲಿಕ ಅಧಿಕಾರದಿಂದ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಉಪಸಭಾಧ್ಯಕ್ಷರನ್ನು ಬೆದರಿಸುವ ಮೂಲಕ ಅವರನ್ನು ಕೆಳಗಿಳಿಸುವ ದುಸ್ಸಾಹಸವನ್ನು ಮಾಡಲು ಕಾಂಗ್ರೆಸ್‌ಗೆ ಯಾರು ಅಧಿಕಾರ ನೀಡಿದರು ?

ಗೋಹತ್ಯೆ ನಿಷೇಧ ಕಾನೂನನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದ್ದಕ್ಕಾಗಿ ಕಾಂಗ್ರೆಸ್ ಕೋಪಗೊಂಡಿದೆ ಮತ್ತು ಮಸೂದೆಯನ್ನು ಮೇಲ್ಮನೆಯಲ್ಲಿ ಅಂಗೀಕರಿಸಲು ಅವರು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ‘ಗೋಹತ್ಯಾ ನಿಷೇಧ ಮಸೂದೆಯನ್ನು ಅಂಗೀಕರಿಸಬಾರದು ಎಂದು ಭಾವಿಸುವ ಕಾಂಗ್ರೆಸ್‌ಗೆ ಲಕ್ಷಾಂತರ ಹಿಂದೂಗಳನ್ನು ಕೊಂದ ಕ್ರೂರಿ ಟಿಪ್ಪು ಸುಲ್ತಾನ್‌ನ ಜಯಂತಿ ಆಚರಿಸಬೇಕೆನಿಸುತ್ತದೆ. ಗೋಹತ್ಯೆಯ ನಿಷೇಧವೆಂದರೆ ಮತಾಂಧರಿಗಾದ ಅನ್ಯಾಯವೆಂದು ಮತಾಂಧಪ್ರೇಮಿ ಕಾಂಗ್ರೆಸ್‌ಗೆ ಅನ್ನಿಸುತ್ತದೆಯೇ ? ಕಾಂಗ್ರೆಸ್ ಏಕೆ ಅಸಮಾಧಾನಗೊಂಡಿದೆ ? ಮಹಾರಾಷ್ಟ್ರದಲ್ಲಿಯೂ ಜಾನುವಾರು ಹತ್ಯೆ ನಿಷೇಧವನ್ನು ಜಾರಿಗೆ ತರಲು ಕಾಂಗ್ರೆಸ್ ವಿರೋಧಿಸಿತ್ತು. ಗೋಹತ್ಯೆಯ ಹಿಂದೆ ಒಂದು ದೊಡ್ಡ ಅರ್ಥಕಾರಣ ವಿದೆ. ಭಾರತವು ಗೋಮಾಂಸವನ್ನು ರಫ್ತು ಮಾಡುವ ಪ್ರಮುಖ ದೇಶವಾಗಿದೆ. ಹಿಂದೂಗಳಿಂದ ಪೂಜಿಸಲ್ಪಡುವ ಮತ್ತು ಬಹುಸಂಖ್ಯಾತ ಹಿಂದೂಗಳಿರುವ ದೇಶದಿಂದ ಗೋಮಾಂಸವನ್ನು ರಫ್ತು ಮಾಡುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಭಾರತದಲ್ಲಿ ಅನೇಕ ದೇಶಿ ಜಾನುವಾರುಗಳು ಅಳಿವಿನ ಅಂಚಿನಲ್ಲಿವೆ. ಸುದ್ದಿಯ ಪ್ರಕಾರ, ಸ್ವಾತಂತ್ರ್ಯದ ಮೊದಲು ೬೦-೭೦ ಕೋಟಿಗಳಿಗಿಂತ ಹೆಚ್ಚು ಇದ್ದ ಹಸುಗಳ ಸಂಖ್ಯೆ ಈಗ ಕೇವಲ ೧ ಕೋಟಿ ಮಾತ್ರ ಉಳಿದಿದೆ. ಇದರರ್ಥ ದೇಶವು ಸ್ವಾತಂತ್ರ್ಯ ಪಡೆದಾಗಿನಿಂದ ಗೋಹತ್ಯೆಯು ಅವ್ಯಾಹತ ವಾಗಿ ನಡೆಯುತ್ತಿದೆ. ದೇಶದ ೧೭ ರಾಜ್ಯಗಳು ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಿದ್ದರೂ, ಕಾನೂನು ಮತ್ತು ಶಿಕ್ಷೆಯ ಸ್ವರೂಪವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಅದಕ್ಕಾಗಿಯೇ ಗೋಹತ್ಯೆ ನಡೆಯುತ್ತಿದೆ. ಆಯಾ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಕಾರಣ ಗೋವುಗಳ ಕಳ್ಳಸಾಗಾಣಿಕೆಯಾಗುತ್ತಿದೆ, ಗೋಮಾಂಸ ಕಳ್ಳಸಾಗಣೆ ಮಾಡಲಾಗುತ್ತಿದೆ ಅಥವಾ ಇತರ ರಾಜ್ಯಗಳಿಂದ ಗೋಮಾಂಸವನ್ನು ಖರೀದಿಸಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಕೇಂದ್ರ ಮಟ್ಟದಲ್ಲಿ ಪರಿಣಾಮಕಾರಿಯಾದ ಕಾನೂನನ್ನು ಜಾರಿಗೆ ತರಬೇಕು ಮತ್ತು ರಾಜ್ಯಗಳಿಗೆ ಅದನ್ನು ಜಾರಿಗೊಳಿಸಲು ಕಡ್ಡಾಯ ಮಾಡುತ್ತದೆ, ಹಿಂದೂ ವಿರೋಧಿ ಕಾಂಗ್ರೆಸ್ಸಿಗೆ ತನ್ನ ಸ್ಥಾನವನ್ನು ತೋರಿಸುತ್ತದೆ, ಎಂದು ಹಿಂದೂಗಳ ಆಶಯವಾಗಿದೆ