ಸುದೃಢ ಶರೀರವೇ ‘ಧರ್ಮಾರ್ಥಕಾಮಮೋಕ್ಷ ಇವುಗಳ ಸಾಧನವಾಗಿದೆ. ಹಾಗಾಗಿ ಆರೋಗ್ಯವು ಉತ್ತಮವಾಗಿದ್ದರೆ ಮಾತ್ರ ಮನುಷ್ಯನ ಜೀವನವು ಸಾರ್ಥಕವಾಗಬಹುದು. ಅಂದರೆ ಐಹಿಕ ಸುಖಗಳನ್ನೆಲ್ಲ ಭೋಗಿಸುತ್ತಾ (ಕರ್ಮಯೋಗದಲ್ಲಿ ಆಯುಷ್ಯವನ್ನು ಕಳೆಯುವುದು) ‘ಮಾನವನಿಗೆ ಮೋಕ್ಷ ದೊರಕಬೇಕು’, ಇದುವೇ ಧರ್ಮದ ಉದ್ದೇಶವಾಗಿದೆ. ಆದುದರಿಂದ ಈಶ್ವರನು ತನ್ನ ಉತ್ಪತ್ತಿಯ ಮೊದಲು ತನ್ನ ವಾಣಿಯನ್ನು ಪ್ರಕಟಗೊಳಿಸಿದನು ಅದಕ್ಕೇ ‘ವೇದ’ ಎಂದು ಹೇಳುತ್ತಾರೆ; ಆದ್ದರಿಂದ ಮನುಷ್ಯನು ಒಂದು ವೇಳೆ ೧೦೦ ವರ್ಷಗಳ ಕಾಲ ಬದುಕಿದಿದ್ದರೂ, ಅವನು ದೇಹದಿಂದ ವೃದ್ಧನಾಗದೇ ಕೇವಲ ವಯಸ್ಸಿನಿಂದ ವೃದ್ಧನಾದನು, ಹೀಗಾದರೆ ಮಾತ್ರ ಈ ಉದ್ದೇಶವು ನೆರವೇರುವುದು. ಅದಕ್ಕಾಗಿಯೇ ಆಯುರ್ವೇದವನ್ನು ಹೇಳಲಾಗಿದೆ. ರೋಗ ಬಂದಾಗ ಔಷಧಿ ಲಭ್ಯವಿರಬೇಕು, ಎಂಬುದು ಆಯುರ್ವೇದದ ಧೋರಣೆಯಾಗಿದೆ. ಔಷಧಿಗಳಿಗಾಗಿ ರೋಗಗಳಲ್ಲ. ಅದು ವೇದಗಳ ಪೂರ್ವಜ ಆಗಿದೆ ಮತ್ತು ಅದು ಈಶ್ವರನ ವಾಣಿಯಾಗಿದೆ.
ಧರ್ಮಾಚರಣೆಯಿಂದ ಎಲ್ಲ ಮಾನವದೇಹಗಳು ಆರೋಗ್ಯವಂತವಾಗಿ ವಿಶ್ವಶಾಂತಿಯಾಗಬಹುದು
ಇದಕ್ಕಾಗಿ ‘ಅಧರ್ಮ ಏವ ಮೂಲಂ ಸರ್ವರೋಗಾಣಾಮ್ |’ ಅಂದರೆ ‘ಅಧರ್ಮವೇ ಎಲ್ಲ ರೋಗಗಳಿಗೆ ಮೂಲ ಕಾರಣವಾಗಿದೆ’, ಎಂದು ಹೇಳಲಾಗಿದೆ. ಆದುದರಿಂದ ಆರೋಗ್ಯವಂತರಾಗಿರಲು ನಾವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಧರ್ಮಾಚರಣಿಗಳಾಗುವುದು ಆವಶ್ಯಕವಾಗಿದೆ.
– ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ. (ವರ್ಷ ೧೯೯೧)