ಕಾಂಗ್ರೆಸ್ಸಿನ ಹಿರಿಯ ನಾಯಕ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿಯವರ ‘ದ ಪ್ರೆಸಿಡೆನ್ಶಿಯಲ್ ಇಯರ್ಸ್ ಈ ಪುಸ್ತಕವು ಮುಂದಿನ ತಿಂಗಳು ಪ್ರಕಟವಾಗಲಿದೆ; ಅದರಲ್ಲಿ ಅವರು ಕಾಂಗ್ರೆಸ್ಸಅನ್ನು ಟೀಕಿಸಿದ್ದಾರೆ. ‘ನಾನು ರಾಷ್ಟ್ರಪತಿಯಾದ ನಂತರ ಕಾಂಗ್ರೆಸ್ ತನ್ನ ರಾಜಕೀಯ ದಿಕ್ಕನ್ನು ಕಳೆದುಕೊಂಡಿದೆ. ಸೋನಿಯಾ ಗಾಂಧಿ ಪಕ್ಷವನ್ನು ನಿರ್ವಹಿಸಲು ಅಸಮರ್ಥರಿದ್ದರು, ಡಾ. ಮನಮೋಹನ ಸಿಂಹ ಇವರು ಸಂಸತ್ತಿನಲ್ಲಿ ಅನುಪಸ್ಥಿತರಿದ್ದ ಕಾರಣ ಸಂಸದರೊಂದಿಗೆ ಅವರ ಸಂಬಂಧವನ್ನು ಕಳೆದುಕೊಂಡಿದ್ದರು, ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಮುಖರ್ಜಿ ಇವರು ಕಾಂಗ್ರೆಸ್ಸಿನ ನೇತೃತ್ವವನ್ನು ಟೀಕಿಸುವವರಲ್ಲಿ ಅಥವಾ ಅಸಮಾಧಾನವನ್ನು ತೋರಿಸುವವರಲ್ಲಿ ಮೊದಲಿಗರಲ್ಲ. ಈ ಹಿಂದೆಯೂ ಕಾಂಗ್ರೆಸ್ಸಿನ ಕಾರ್ಯಪದ್ಧತಿ, ನಿಲುವು, ನೇತೃತ್ವ ಇತ್ಯಾದಿಗಳ ಬಗ್ಗೆ ಪಕ್ಷದವರೇ ಅನೇಕರು ಧ್ವನಿಯೆತ್ತಿದ್ದರು. ಮುಖರ್ಜಿ ಇವರು ಪ್ರಧಾನಮಂತ್ರಿ ಹುದ್ದೆಯ ಹಕ್ಕುದಾರರಾಗಿದ್ದರು ಹಾಗೂ ಪಕ್ಷದಲ್ಲಿ ಅನುಭವಿ ಕೂಡ ಆಗಿದ್ದರು. ನಿಜವಾಗಿ ನೋಡಿದರೆ ೧೯೮೪ ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ಅವರು ಪ್ರಧಾನಮಂತ್ರಿ ಹುದ್ದೆಯ ಮುಖ್ಯ ಹಕ್ಕುದಾರರಾಗಿದ್ದರು; ಆದರೆ ರಾಜೀವ ಗಾಂಧಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲಾಯಿತು. ಅವರು ಮುಖರ್ಜಿಯವರಿಗೆ ಮಂತ್ರಿಮಂಡಳದಲ್ಲಿ ಸ್ಥಾನವನ್ನು ನೀಡದಿರುವುದರಿಂದ ಮುಖರ್ಜಿಯವರು ಹೊಸ ಪಕ್ಷವನ್ನು ಸ್ಥಾಪಿಸಿದರು. ೨೦೦೪ ರಲ್ಲಿ ಸೋನಿಯಾ ಗಾಂಧಿಯವರು ಸ್ವತಃ ‘ಪ್ರಧಾನಮಂತ್ರಿ ಆಗುವುದಿಲ್ಲ, ಎಂದು ಘೋಷಣೆ ಮಾಡಿದಾಗ ಮುಖರ್ಜಿಯವರ ಕೊರಳಿಗೆ ಪ್ರಧಾನಮಂತ್ರಿ ಹುದ್ದೆಯ ಮಾಲೆ ಬೀಳಬೇಕಿತ್ತು; ಆದರೆ ಕಾಂಗ್ರೆಸ್ಸಿನ ಪರಂಪರೆಗನುಸಾರ ಗಾಂಧಿ ಕುಟುಂಬದ ನಿಕಟವರ್ತಿಗಳು, ಏಕನಿಷ್ಠೆ ಇರುವವರಿಗೇ ಹುದ್ದೆಗಳಿಗೆ ಆದ್ಯತೆ ನೀಡಲಾಗುತ್ತದೆ. ಹಾಗೆ ಡಾ. ಮನಮೋಹನ ಸಿಂಹರು ಪ್ರಧಾನಿಯಾದರು.
ಕಾಂಗ್ರೆಸ್ಸಿನ ದರ್ಬಾರ್ ರಾಜಕಾರಣ
ಇದೇ ತರಹದ ಟಿಪ್ಪಣಿಯನ್ನು ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಧ್ಯಕ್ಷ ಶರದ ಪವಾರರ ವಿಷಯದಲ್ಲಿಯೂ ಆಗಿದ್ದ ಬಗ್ಗೆ ಪಕ್ಷದ ಮುಖಂಡ ಪ್ರಫುಲ್ಲ ಪಟೇಲ್ ಇವರು ಪವಾರರ ೮೦ ನೇಯ ಹುಟ್ಟುಹಬ್ಬದ ನಿಮಿತ್ತದಲ್ಲಿ ಕಾಂಗ್ರೆಸ್ಸನ್ನು ಟೀಕಿಸುವ ಲೇಖನವನ್ನು ದಿನಪತ್ರಿಕೆಗಳಲ್ಲಿ ಬರೆದರು. ಈ ಲೇಖನದಲ್ಲಿ ಮಹಾರಾಷ್ಟ್ರದಿಂದ ಬಂದಿರುವ ಶರದ ಪವಾರರಿಗೆ ಕಾಂಗ್ರೆಸ್ಸಿನ ‘ದರ್ಬಾರ್ ಗುಂಪು ಮತ್ತು ‘ದರಬಾರ್ ರಾಜಕಾರಣದಿಂದ ಅನೇಕ ಬಾರಿ ಕ್ಷಮತೆಯಿದ್ದರೂ ಪ್ರಧಾನಮಂತ್ರಿಯ ಹುದ್ದೆಯನ್ನು ನಿರಾಕರಿಸಲಾಯಿತು ಹಾಗೂ ಅವರಿಗೆ ನಿರಂತರ ಅವಮಾನವನ್ನೂ ಮಾಡಲಾಯಿತು, ಎಂದು ನಮೂದಿಸಲಾಗಿದೆ. ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಮುಂದೆ ರಾಹುಲ ಗಾಂಧಿಯವರ ಕಾಂಗ್ರೆಸ್ ದಯನೀಯ ಸೋಲನ್ನು ಅನುಭವಿಸಬೇಕಾಯಿತು, ಆಗ ರಾಹುಲ ಗಾಂಧಿ ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು. ಅನಂತರ ಎಷ್ಟೋ ದಿನಗಳವರೆಗೆ ಹೊಸ ಪಕ್ಷಾಧ್ಯಕ್ಷರ ನೇಮಕ ಆಗಲೇ ಇಲ್ಲ. ಸೋನಿಯಾ ಗಾಂಧಿ ಇವರನ್ನೇ ಪುನಃ ಉಸ್ತುವಾರಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಅವರೇ ಇಂದಿನ ವರೆಗೆ ಅಧ್ಯಕ್ಷರ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಆದರೂ ‘ಎಲ್ಲ ನಿರ್ಣಯಗಳನ್ನು ರಾಹುಲ ಗಾಂಧಿಯೇ ತೆಗೆದುಕೊಂಡು ಸೋನಿಯಾ ಗಾಂಧಿ ಕೇವಲ ಅದನ್ನು ಅನುಮೋದಿಸುತ್ತಾರೆ, ಎನ್ನುವ ಚರ್ಚೆ ಕೇಳಿಬರುತ್ತದೆ. ಅಂದರೆ ಎಲ್ಲ ಸ್ತರಗಳಲ್ಲಿ ಪುನಃ ಗಾಂಧಿ ಮನೆತನದ ಕೈಯಲ್ಲಿಯೇ ಕಾಂಗ್ರೆಸ್ಸಿನ ನಿಯಂತ್ರಣವಿದೆ.
ಪಕ್ಷದಲ್ಲಿ ಸುಧಾರಣೆಯನ್ನು ಹೇಳುವವರು ‘ಪಕ್ಷದ್ರೋಹಿ
ಕಾಂಗ್ರೆಸ್ಸಿನ ಮಾಜಿ ವಕ್ತಾರ ಸಂಜಯ ಝಾ ಇವರು ಮಾರ್ಚ್ ೨೦೨೦ ರಲ್ಲಿ ಒಂದು ಆಂಗ್ಲ ದೈನಿಕದಲ್ಲಿ ಲೇಖನವನ್ನು ಬರೆದು ಪಕ್ಷದಲ್ಲಿ ಸುಧಾರಣೆಯ ಅವಶ್ಯಕತೆಯಿದೆಯೆಂದು ಹೇಳಿದ್ದರು. ಆದ್ದರಿಂದ ಅವರ ವಕ್ತಾರನ ಹುದ್ದೆಯನ್ನು ತಕ್ಷಣ ಕಿತ್ತುಕೊಳ್ಳಲಾಯಿತು. ಕೆಲವು ದಿನಗಳ ಹಿಂದೆ ಕಾಂಗ್ರೆಸ್ಸಿನ ೨೩ ಹಿರಿಯ ಪದಾಧಿಕಾರಿಗಳು ‘ಪಕ್ಷದಲ್ಲಿ ಸುಧಾರಣೆ ಮಾಡುವ ಅವಶ್ಯಕತೆಯಿದೆ, ಎಂದು ಪಕ್ಷದ ನೇತೃತ್ವಕ್ಕೆ ಪತ್ರ ಬರೆದರು. ಅನಂತರ ಅವರ ವಿರುದ್ಧ ಪಕ್ಷದ್ರೋಹದ ಆರೋಪ ಹೊರಿಸಲಾಯಿತು. ಈ ವಿಷಯದಲ್ಲಿ ಕಾಂಗ್ರೆಸ್ಸಿನ ಮಹಾರಾಷ್ಟ್ರದ ಪದಾಧಿಕಾರಿಗಳು ‘ಪಕ್ಷದ ನೇತೃತ್ವದ ಬಗ್ಗೆ ಸಂಶಯ ಪಡುವವರನ್ನು ರಾಜ್ಯದಲ್ಲಿ ಅಲೆದಾಡಲು ಬಿಡುವುದಿಲ್ಲ, ಎನ್ನುವ ಎಚ್ಚರಿಕೆಯನ್ನು ನೀಡಿದರು. ಇದರಿಂದ ಕಾಂಗ್ರೆಸ್ಸಿನ ಸ್ಥಿತಿ ಎಷ್ಟು ಬಿಕ್ಕಟ್ಟಾಗಿದೆ, ಎಂಬುದು ಅರಿವಾಗುತ್ತದೆ. ಕಾಂಗ್ರೆಸ್ಸಿನಲ್ಲಿ ಸುಧಾರಣೆ ಮಾಡುವ, ನೇತೃತ್ವವನ್ನು ಬದಲಾಯಿಸುವ ಅವಶ್ಯಕತೆ ಇದೆಯೆಂದು ಕೆಲವರಿಗೆ ಅನಿಸುತ್ತದೆ ಹಾಗೂ ಆ ವಿಷಯದಲ್ಲಿ ಮಾತನಾಡಿದರೆ, ನೇರವಾಗಿ ಬಾಗಿಲನ್ನು ತೋರಿಸಲಾಗುತ್ತದೆ. ಅವರಿಗೆ ನೇರವಾಗಿ ‘ಪಕ್ಷದ್ರೋಹಿ, ‘ಗದ್ದಾರ ಎಂದು ವಿಶೇಷಣ ಹಚ್ಚಲಾಗುತ್ತದೆ. ಪಕ್ಷದಲ್ಲಿ ಸುಧಾರಣೆಯ ಬೇಡಿಕೆಯನ್ನು ಮುಂದಿಡುವ ಅನೇಕ ನೇತಾರರು ತಮ್ಮ ಸಂಪೂರ್ಣ ಜೀವಮಾನವನ್ನು ಕಾಂಗ್ರೆಸ್ಸಿಗಾಗಿ ಸವೆಸಿದ್ದಾರೆ, ಆದರೂ ಅವರ ಸೂಚನೆ ಸ್ವೀಕರಿಸಬೇಕೆಂದು ಕಾಂಗ್ರೆಸ್ಸಿನ ‘ದರಬಾರಿ ರಾಜಕಾರಣಕ್ಕೆ ಅನಿಸುವುದಿಲ್ಲ. ಇದರಲ್ಲಿಯೇ ಎಲ್ಲವೂ ಅಡಗಿದೆ. ಕಾಂಗ್ರೆಸ್ಸಿನ ಗುಲಾಮ ನಬೀ ಆಝಾದ್ ಇವರು ‘ಕಾಂಗ್ರೆಸ್ ಚುನಾವಣೆಯನ್ನು ‘ಫೈವ್‌ಸ್ಟಾರ್ ಕಲ್ಚರ್ ಪದ್ಧತಿಯಲ್ಲಿ ಎದುರಿಸುತ್ತಿದೆ ಎಂದು ಆರೋಪಿಸಿದ್ದಾರೆ. ‘ನೇತಾರರಿಗೆ ಚುನಾವಣೆಯ ಟಿಕೇಟ್ ಸಿಕ್ಕಿದ ನಂತರ ನೇತಾರರು ಪಂಚತಾರಾ ಹೊಟೇಲ್‌ಗಳನ್ನು ಕಾಯ್ದಿರಿಸುತ್ತಾರೆ, ಎಂದು ಆಝಾದ್‌ರು ಹೇಳಿದ್ದರು. ಅವರ ಕಾಲು ಭೂಮಿಯಲ್ಲಿರುವುದಿಲ್ಲ, ಅವರು ದೇಶದ ಹಾಗೂ ರಾಜ್ಯದ ಜನರ ಸಮಸ್ಯೆಗಳನ್ನು ಹೇಗೆ ನಿವಾರಿಸುವರು ಹಾಗೂ ಅವರ ಜೀವನ ಸುಧಾರಿಸುವರು ? ಕಾಂಗ್ರೆಸ್ಸಿನ ಹಳೆಯ ನೇತಾರರು ಗಾಂಧಿ ಮನೆತನದ ವಂಶ ಪರಂಪರೆಗೆ ಬೇಸರಪಟ್ಟುಕೊಂಡಿದ್ದಾರೆ. ‘ಇತರ ವ್ಯಕ್ತಿಗೆ ನೇತೃತ್ವವನ್ನು ನೀಡಿದರೆ ಪಕ್ಷ ಒಡೆಯುವುದು ಎನ್ನುವ ಭಯ ಗಾಂಧಿ ಮನೆತನದೊಂದಿಗೆ ನಿಷ್ಠೆಯಿರುವವರಿಗೆ ಅನಿಸುತ್ತದೆ. ಕಾಂಗ್ರೆಸ್ಸಿಗರಿಗೆ ಗಾಂಧಿ ಮನೆತನವೆಂದರೆ ‘ಬಿಸಿ ತುಪ್ಪದಂತಾಗಿದೆ ಎಂಬಂತಾಗಿದೆ.
ಕಾಂಗ್ರೆಸ್ ದೇಶದ ತನ್ನ ಆಡಳಿತವಧಿಯಲ್ಲಿ ಕೇವಲ ಮುಸಲ್ಮಾನರನ್ನು ಓಲೈಸಿತು ಹಾಗೂ ಹಿಂದೂಗಳ ಮೇಲೆ ಅನ್ಯಾಯ ಮಾಡಿತು ಕಾಂಗ್ರೆಸ್ ಅವರನ್ನು ಉಪಯೋಗಿಸಿಕೊಂಡಿತು, ಎಂದು ಈಗ ಹೆಚ್ಚಿನ ಮುಸಲ್ಮಾನರು ಹೇಳುತ್ತಾರೆ. ಆದ್ದರಿಂದ ಅವರು ಕೂಡ ಕಾಂಗ್ರೆಸ್ಸಿನಿಂದ ದೂರವಾಗುತ್ತಿದ್ದಾರೆ. ಹೆಚ್ಚಿನ ಹಿಂದೂಗಳಿಗೆ ಕಾಂಗ್ರೆಸ್ಸಿನಲ್ಲಿ ಸ್ವಾರಸ್ಯವೆನಿಸುವುದಿಲ್ಲ. ಕಳೆದ ೭೦ ವರ್ಷಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್ ದೇಶವನ್ನು ಒಂದು ಧರ್ಮಶಾಲೆಯನ್ನಾಗಿ ಮಾಡಿತು. ಯಾರು ಬೇಕಾದರೂ ಬರಬಹುದು-ಹೋಗಬಹುದು, ಯಾರ ಮೇಲೂ ಯಾವುದೇ ನಿಯಂತ್ರಣವಿಲ್ಲ. ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಾಚಾರ ಹರಡುವಂತೆ ಮಾಡಿತು. ದೇಶದ ಮೇಲಿನ ಸಾಲವನ್ನು ಹೆಚ್ಚಿಸಿತು ಹಾಗೂ ರೈತರನ್ನು ಸಾಯಲು ಬಿಟ್ಟಿತು. ದೇವಭೂಮಿ ಹಾಗೂ ಋಷಿಭೂಮಿ ಆಗಿರುವ ಭಾರತದಲ್ಲಿ ಮೊಗಲರ ಹಾಗೆ ಆಡಳಿತ ನಡೆಸಿ ದೈನ್ಯಾವಸ್ಥೆಯನ್ನು ತಂದೊಡ್ಡಿದ ಪಕ್ಷದ ಸ್ಥಿತಿಯೂ ದಯನೀಯವಾಗುವುದೆಂದರೆ, ಇದು ದೇವರು ನೀಡಿದ ಶಿಕ್ಷೆಯೇ ಆಗಿರಬಾರದೇಕೇ ? ಈ ಪಕ್ಷದ ಸ್ಥಾಪನೆಯೇ ಬ್ರಿಟಿಷರ ದೂರದೃಷ್ಟಿಯಿಂದ ಆಗಿರುವುದರಿಂದ ಅದು ಭಾರತದ ಭೂಮಿಯಲ್ಲಿ ಹೇಗೆ ಸ್ಥಿರವಾಗಬಹುದು ? ಕೆಲವೇ ಜನರ ಪುಣ್ಯದ ಫಲದಿಂದ ಪಕ್ಷ ಇಷ್ಟು ವರ್ಷ ಉಳಿಯಿತು. ಈಗ ಆ ಪುಣ್ಯದ ಫಲ ಮುಗಿಯುತ್ತಾ ಬಂದಿರುವುದರಿಂದ ಪಕ್ಷ ವಿನಾಶದ ಕಡೆಗೆ ಸರಿಯುತ್ತಿದೆ.