ಚೆನ್ನೈ – ನಮ್ರತೆ, ಅಲ್ಪ ಅಹಂ ಇರುವ ಮತ್ತು ವೃದ್ಧಾಪ್ಯದಲ್ಲಿಯೂ ತಳಮಳದಿಂದ ಮತ್ತು ಭಾವಪೂರ್ಣ ಸೇವೆ ಮಾಡುವ ಸನಾತನದ ಸಾಧಕರಾದ ಶ್ರೀ ಪಟ್ಟಾಭಿರಾಮನ್ ಪ್ರಭಾಕರನ್ (ವಯಸ್ಸು ೭೬ ವರ್ಷ) ಇವರು ಸನಾತನದ ೧೦೫ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಆನಂದವಾರ್ತೆಯನ್ನು ಸನಾತನದ ಸಂತರಾದ ಪೂ. (ಸೌ.) ಉಮಾ ರವಿಚಂದ್ರನ್ ಇವರು ೧೦.೧೨.೨೦೨೦ ರಂದು ಒಂದು ‘ಆನ್‌ಲೈನ್’ ಸತ್ಸಂಗದ ಮೂಲಕ ಘೋಷಿಸಿದರು. ಈ ‘ಆನ್‌ಲೈನ್’ ಸತ್ಸಂಗದಲ್ಲಿ ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಂದನೀಯ ಉಪಸ್ಥಿತಿಯೂ ಲಭಿಸಿತ್ತು.
ಈ ‘ಆನ್‌ಲೈನ್’ ಸತ್ಸಂಗದ ನಂತರ ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಪೂ. (ಸೌ.) ಉಮಾ ರವಿಚಂದ್ರನ್ ಮತ್ತು ಅವರ ಪತಿ ಶ್ರೀ. ರವಿಚಂದ್ರನ್ ಇವರು ಪೂ. ಮಾಮಾ ಇವರಿಗೆ ಪುಷ್ಪಹಾರವನ್ನು ಅರ್ಪಿಸಿದರು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀಫಲ ಮತ್ತು ಉಡುಗೊರೆ ನೀಡಿ ಅವರ ಸನ್ಮಾನ ಮಾಡಿದರು.
ಗಮನಾರ್ಹ ಅಂಶ
ಕಳೆದ ಕೆಲವು ದಿನ ಚೆನ್ನೈಯಲ್ಲಿ ತುಂಬಾ ಮಳೆಯಿಂದ ನಡುನಡುವೆ ವಿದ್ಯುತ್ ಸ್ಥಗಿತವಾಗುತ್ತಿತ್ತು; ಆದರೆ ಈ ಸಂತ ಸನ್ಮಾದ ವೇಳೆ ಒಂದು ಬಾರಿಯೂ ವಿದ್ಯುತ್ ಸ್ಥಗಿತಗೊಳ್ಳಲಿಲ್ಲ.
ಆಜ್ಞಾಪಾಲನೆ ಮತ್ತು ತನು-ಮನ ಮತ್ತು ಧನಗಳ ತ್ಯಾಗ ಮಾಡಿ ೧೪ ವರ್ಷಗಳಲ್ಲಿ ಸನಾತನದ ೧೦೫ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಚೆನ್ನೈಯ ಪೂ. ಪಟ್ಟಾಭಿರಾಮನ್ ಪ್ರಭಾಕರನ್ !
ಚೆನ್ನೈಯ ಶ್ರೀ. ಪ್ರಭಾಕರನ್ ಮಾಮಾ ಇವರು ಕಳೆದ ೧೪ ವರ್ಷಗಳಿಂದ ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ. ಅವರು ‘ಚೆನ್ನೈ ಪೋರ್ಟ ಟ್ರಸ್ಟ್’ನಲ್ಲಿ ‘ಮುಖ್ಯ ಅಭಿಯಂತ’ ರಾಗಿ ನೌಕರಿ ಮಾಡಿ ಈಗ ನಿವೃತ್ತರಾಗಿದ್ದಾರೆ. ಹಿಂದೆ ಅವರ ಜೀವನಶೈಲಿಯು ಸಂಪೂರ್ಣವಾಗಿ ಭಿನ್ನವೇ ಆಗಿತ್ತು; ಆದರೆ ಸಾಧನೆಯನ್ನು ತಿಳಿದ ನಂತರ ಅವರು ತಮ್ಮಲ್ಲಿ ಆಮೂಲಾಗ್ರ ಪರಿವರ್ತನೆಯನ್ನು ಮಾಡಿಕೊಂಡರು. ಅಧ್ಯಾತ್ಮದಲ್ಲಿ ‘ತಾತ್ತ್ವಿಕ ಭಾಗಕ್ಕೆ ಕೇವಲ ಶೇ. ೨ ರಷ್ಟು ಮತ್ತು ಕೃತಿ ಮಾಡುವುದಕ್ಕೆ ಶೇ. ೯೮ ರಷ್ಟು ಮಹತ್ವವಿದೆ’, ಎಂದು ಗಮನದಲ್ಲಿಟ್ಟು ಅವರು ಕೃತಿಯ ಸ್ತರದಲ್ಲಿ ತನು-ಮನ ಮತ್ತು ಧನ ಇವುಗಳ ತ್ಯಾಗ ಮಾಡಿದರು. ಈ ವಯಸ್ಸಿನಲ್ಲಿಯೂ ಅವರು ತಳಮಳದಿಂದ ಮತ್ತು ಭಾವಪೂರ್ಣ ಸೇವೆ ಮಾಡುತ್ತಾರೆ.ಇದರಿಂದ ಅವರ ಆಧ್ಯಾತ್ಮಿಕ ಉನ್ನತಿಯು ಶೀಘ್ರ ಗತಿಯಲ್ಲಾಗುತ್ತಿದೆ.
ನಮ್ರತೆ, ಅಲ್ಪ ಅಹಂ ಮತ್ತು ಪ್ರೇಮಭಾವ ವಿರುವ ಶ್ರೀ. ಪ್ರಭಾಕರನ ಮಾಮಾ ಇವರು ಚೆನ್ನೈನ ಎಲ್ಲ ಸಾಧಕರ ಮನಸ್ಸನ್ನು ಗೆದ್ದಿದ್ದಾರೆ. ಅವರು ತಮಿಳುನಾಡಿನ ಎಲ್ಲ ಸಾಧಕರ ಆಧಾರಸ್ತಂಭವಾಗಿದ್ದಾರೆ. ಆಜ್ಞಾಪಾಲನೆ ಮಾಡುವುದು ಮತ್ತು ಸತತ ಕಲಿಯುವ ಸ್ಥಿತಿಯಲ್ಲಿರುವುದು ಈ ಗುಣಗಳಿಂದಾಗಿ ಶ್ರೀ. ಪ್ರಭಾಕರನ್‌ಮಾಮಾ ಇವರು ೨೦೧೨ ರಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡರು. ಈ ವರ್ಷದ ಗುರುಪೂರ್ಣಿಮೆಗೆ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೯ ರಷ್ಟಿತ್ತು. ಇಂದಿನ ಶುಭದಿನದಂದು ಶ್ರೀ. ಪ್ರಭಾಕರನ್‌ಮಾಮಾ ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದು ಅವರು ಸನಾತನದ ೧೦೫ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ‘ಪೂ. ಪಟ್ಟಾಭಿರಾಮನ್ ಪ್ರಭಾಕರನ್ ಇವರ ಮುಂದಿನ ಪ್ರಗತಿಯು ಇದೇ ರೀತಿ ಶೀಘ್ರವಾಗಿ ಆಗಲಿದೆ’, ಎಂದು ನನಗೆ ಖಾತ್ರಿ ಇದೆ.’ – (ಪರಾತ್ಪರ ಗುರು) ಡಾ. ಆಠವಲೆ