ಡಿಸೆಂಬರ್ ೨೯ ರಂದು ಇರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಕೋಟಿಕೋಟಿ ನಮಸ್ಕಾರಗಳು
೧. ತಿರುಪತಿ ಬಾಲಾಜಿಯ ದರ್ಶನವನ್ನು ಪಡೆಯಲು ಹೋಗುತ್ತಿರುವಾಗ ಮಾಡಿದ ಪ್ರಾರ್ಥನೆ
೧ ಅ. ಕೆಲವು ಭಕ್ತರು ತಿರುಪತಿ ಬಾಲಾಜಿಯ ದರ್ಶನವನ್ನು ಪಡೆಯಲು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತುವಾಗ ಅವರನ್ನು ನೋಡಿ ಮಾಡಿದ ಪ್ರಾರ್ಥನೆ
‘ದೇವರಿಗಾಗಿ ಕಷ್ಟ ಪಡೆಯುತ್ತಿರುವ ಈ ಭಕ್ತರಿಗೆ, ಅವರನ್ನು ನಡೆಯುತ್ತ ಕರೆದೊಯ್ಯುವ ಅವರ ಕಾಲುಗಳಿಗೆ ಶಕ್ತಿ ನೀಡುವ ಈ ಭಗವಂತನ ಚರಣಗಳಲ್ಲಿ ನನ್ನ ನಮಸ್ಕಾರಗಳು ! ದೇವರಿಗಾಗಿ ನಡೆಯುವ ಈ ಭಕ್ತರ ಚರಣಗಳಲ್ಲಿ ನನ್ನ ನಮಸ್ಕಾರಗಳು !’ (ತಿರುಪತಿ, ೭.೫.೨೦೧೬)
೧ ಆ. ತಿರುಪತಿ ಬಾಲಾಜಿಯ ದೇವಸ್ಥಾನದಲ್ಲಿರುವ ಹುಂಡಿಗೆ (ಅರ್ಪಣೆ ಮಾಡುವುದಕ್ಕಾಗಿ ಇರುವ ದೊಡ್ಡ ಬಟ್ಟೆಯ ಚೀಲ) ಮಾಡಿದ ಪ್ರಾರ್ಥನೆ
‘ದೇವರೇ, ನಮ್ಮೆಲ್ಲರ ತನು, ಮನ ಮತ್ತು ಸರ್ವಸಂಗಪರಿತ್ಯಾಗವಾಗಲಿ.’
‘ಇದುವೇ ದೇವರಿಗೆ ಮನುಷ್ಯರಿಂದ ಅಪೇಕ್ಷಿತವಾಗಿರುವ ನಿಜವಾದ ಅರ್ಪಣೆಯಾಗಿದೆ’, ಎಂಬುದನ್ನು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಈ ಪ್ರಾರ್ಥನೆಯಿಂದ ಕಲಿಯಲು ಸಿಕ್ಕಿತು. (ತಿರುಪತಿ, ಅಕ್ಷಯ ತೃತಿಯಾ, ೯.೫.೨೦೧೬)
೨. ಕುಂಭಕೋಣಕಮ್ (ತಮಿಳುನಾಡು)ದಲ್ಲಿ ಒಂದು ಶಿವಮಂದಿರದಲ್ಲಿ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಿರುವಾಗ ಮಾಡಿದ ಪ್ರಾರ್ಥನೆ
‘ದೇವರೇ, ನಿನ್ನ ಈ ಶಿವಲಿಂಗದ ಮೇಲೆ ಮಾಡುತ್ತಿರುವ ಅಭಿಷೇಕದ ಜಲದ ತೀರ್ಥವು ಎಲ್ಲ ಸಾಧಕರ ಮಸ್ತಕದ ಮೇಲೆ ಬೀಳಲಿ ಮತ್ತು ಅವರ ಎಲ್ಲ ತೊಂದರೆಗಳು ದೂರವಾಗಿ ಅವರಿಂದ ಒಳ್ಳೆಯ ಸಾಧನೆಯಾಗಲಿ.’ (ಕುಂಭಕೋಣಕಮ್, ತಮಿಳುನಾಡು, ೨೧.೬.೨೦೧೬)
೩. ತಮಿಳುನಾಡಿನಲ್ಲಿ ಪಂಚತತ್ತ್ವಗಳ ಪೈಕಿ ಒಂದಾಗಿರುವ ತಿರುವಣ್ಣಾಮಲೈಯ ಅಗ್ನಿತತ್ತ್ವದ ಅಣ್ಣಾಮಲೈ (ಶಿವ) ದೇವರ ದೇವಸ್ಥಾನದಲ್ಲಿ ಪುಷ್ಕರಣಿಯಲ್ಲಿರುವ ಮೀನುಗಳಿಗೆ ಆಹಾರದ ಪ್ರಸಾದವನ್ನು ಕೊಡುವಾಗ ಮಾಡಿದ ಪ್ರಾರ್ಥನೆ
‘ಹೇ ಮತ್ಸ್ಯವತಾರವೇ, ತಾವು ಈ ಆಹಾರವನ್ನು ಸ್ವೀಕರಿಸಬೇಕು ಮತ್ತು ನಮ್ಮಲ್ಲಿ ಎಲ್ಲ ಸ್ವಭಾವದೋಷಗಳು ಮತ್ತು ಅಹಂಗಳನ್ನು ದೂರ ಮಾಡಿ ನಮ್ಮ ಮನಸ್ಸು ಶುದ್ಧ ಮಾಡಿರಿ.’ (ತಿರುವಣ್ಣಾಮಲೈ, ತಮಿಳುನಾಡು, ೧೨.೨.೨೦೧೭)
೪. ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳ ಇವರ ಪ್ರಾಣಿಮಾತ್ರರ ಮೇಲಿನ ಪ್ರೀತಿ ಮತ್ತು ಅವರು ದೇವರಿಗೆ ಮಾಡಿದ ಪ್ರಾರ್ಥನೆ
ಪ್ರಯಾಣದ ಸಮಯದಲ್ಲಿ ನಾವು ಓರ್ವ ಹಿತಚಿಂತಕರ ಮನೆಗೆ ಹೋಗಿರುವಾಗ ನಮಗೆ ಅವರ ಮನೆಯ ಹೊರಗೆ ಒಂದು ನಾಯಿಯನ್ನು ಕಟ್ಟಿರುವುದು ಕಾಣಿಸಿತು. ಮೂಕ ಪ್ರಾಣಿಯು ಗಂಟೆಗಟ್ಟಲೆ ಕಟ್ಟಿಟ್ಟು ಒಂದೇ ಸ್ಥಿತಿಯಲ್ಲಿ ಅಂತಹ ದಯನೀಯ ಅವಸ್ಥೆಯಲ್ಲಿ ಕುಳಿತಿರುವುದನ್ನು ನೋಡಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳಕಾಕೂರವರು ಅದಕ್ಕೆ ಮಾನಸ ನಮಸ್ಕಾರ ಮಾಡಿದರು ಮತ್ತು ಅವರ ಅಂತರ್ಮನಸ್ಸಿನಲ್ಲಿ ತನ್ನಷ್ಟಕ್ಕೆ ಪ್ರಾರ್ಥನೆಯಾಯಿತು, ‘ದೇವರೇ, ಈ ಜೀವಕ್ಕೆ ಮುಕ್ತಿ ಸಿಗಲಿ.’ ಅವರು ಈ ಪ್ರಾರ್ಥನೆಯನ್ನು ಬೇಕೆಂದೇ ಮಾಡಿರಲಿಲ್ಲ. ‘ಈಶ್ವರನೇ ಅವರಿಂದ ಈ ಪ್ರಾರ್ಥನೆಯನ್ನು ಮಾಡಿಸಿಕೊಂಡರು’, ಎಂದು ಅನಿಸುತ್ತದೆ.
‘ಶ್ರೀಚಿತ್‌ಶಕ್ತಿ ಗಾಡಗೀಳಕಾಕೂರವರು ಸಾಧಕರು ಮತ್ತು ಭಕ್ತರ ಸಮೇತ ಸೃಷ್ಟಿಯ ಎಲ್ಲ ಜೀವಗಳ ಕಾಳಜಿಯನ್ನು ವಹಿಸುತ್ತಾರೆ’, ಎಂಬುದು ಅವರ ಆಚರಣೆಯಿಂದ ಕಂಡುಬರುತ್ತದೆ.
೫. ಅಖಂಡ ಭಾವಾವಸ್ಥೆಯಲ್ಲಿದ್ದು ಇತರರ ಸಾಧನೆ ಸಹ ತಿಳಿಯದೇ ಮಾಡಿಸಿಕೊಳ್ಳುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು
೫ ಅ. ಒಂದು ಮನೆಯಲ್ಲಿ ಓರ್ವ ಗೃಹಿಣಿಯು ನೆಲ ಒರೆಸುವುದನ್ನು ನೋಡಿ ಒರೆಸಿದ ಭೂಮಿಯ ಮೇಲೆ ‘ಕೃಷ್ಣ, ಕೃಷ್ಣ, ಕೃಷ್ಣ’, ಎಂದು ಬರೆಯುವುದು :
ಒಮ್ಮೆ ಒಂದು ಊರಿನಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ನಮ್ಮ ವಾಹನವು ನಿಂತಿತು. ಆಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳಕಾಕುರವರ ಗಮನವು ಒಂದು ಮನೆಯ ಕಡೆಗೆ ಹೋಯಿತು. ಆ ಮನೆಯಲ್ಲಿ ಒಬ್ಬ ಗೃಹಿಣಿಯು ನೆಲ ಒರೆಸುತ್ತಿದ್ದಳು. ಆಗ ಅವಳನ್ನು ನೋಡಿ ಸತತವಾಗಿ ಭಾವವಿಶ್ವದಲ್ಲಿರುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಬಾಯಿಯಿಂದ ತಕ್ಷಣ ಭಾವಪುಷ್ಪಗಳು ಬಂದವು, “ಆ ಅಕ್ಕನವರು ಯಾವ ನೆಲವನ್ನು ಒರೆಸುತ್ತಿರುವರೋ, ಆ ಒರೆಸಿದ ಭೂಮಿಯ ಮೇಲೆ ನಾನು ‘ಕೃಷ್ಣ, ಕೃಷ್ಣ, ಕೃಷ್ಣ’, ಎಂದು ಬರೆಯುತ್ತಿದ್ದೇನೆ”, ಎಂದರು.
ಇದರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಭಾವದ ಸ್ಥಿತಿ ಮತ್ತು ದೈವಿ ಅನುಸಂಧಾನಕ್ಕಾಗಿ ಆವಶ್ಯಕವಿರುವ ಜಾಗರೂಕತೆಯನ್ನು ಸಾಧಕರು ಕಲಿಯುವಂತಿದೆ. ಸ್ವತಃ ಮಾಡುತ್ತಿರುವ ಆಚರಣೆಯಲ್ಲಿ ಭಾವವನ್ನು ಜೋಡಿಸುವುದು ಸಾಧ್ಯವಿದೆ; ಆದರೆ ಈ ರೀತಿ ಇತರರ ಆಚರಣೆಗೆ ಭಾವವನ್ನು ಜೋಡಿಸಿರುವುದರಿಂದ ವಾತಾವರಣವು ಶುದ್ಧವಾಗುತ್ತದೆ, ಹಾಗೆಯೇ ಎದುರಿಗಿರುವ ವ್ಯಕ್ತಿಗೆ ಆ ದೈವಿ ಚೈತನ್ಯವು ಅವರಿಗೆ ತಿಳಿಯದೇ ಸಿಗುತ್ತದೆ. ಇದರಿಂದ ‘ತಮ್ಮೊಂದಿಗೆ ಇತರರಿಂದಲೂ ಸಾಧನೆ ಮತ್ತು ಅದೂ ತಿಳಿಯದೇ ಹೇಗೆ ಮಾಡಿಸಿಕೊಳ್ಳಬಹುದು ?’, ಎಂಬುದು ಕಲಿಯಲು ಸಿಗುತ್ತದೆ. ‘ಸುತ್ತಮುತ್ತಲು ಘಟಿಸುವ ಪ್ರತಿಯೊಂದು ವಿಷಯಕ್ಕೆ ಭಾವವು ಹೇಗೆ ಜೋಡಿಸಬೇಕು ? ಮತ್ತು ಅದರಲ್ಲಿ ದೇವರನ್ನು ನೋಡಿ ಆನಂದಾವಸ್ಥೆಯಲ್ಲಿ ಹೇಗಿರುವುದು ?’, ಎಂಬ ಇದೊಂದು ಸುಂದರ ಉದಾಹರಣೆಯಾಗಿದೆ.
೬. ಮಹರ್ಷಿಗಳ ಆಜ್ಞೆಯಂತೆ ಒಂದು ಪುರಾತನ ದೇವಸ್ಥಾನದಲ್ಲಿ ಯಜ್ಞಶಾಲೆಯ ದರ್ಶನಕ್ಕೆ ಹೋದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಮಾಡಿದ ಪ್ರಾರ್ಥನೆ
‘ಯಾರು ಈ ಭೂಮಿಯಲ್ಲಿ ಯಜ್ಞ-ಯಾಗಗಳ ಚೈತನ್ಯದಿಂದ ಪಾವನ ಮಾಡಿದರೋ ಮತ್ತು ಯಾರಿಂದ ಈಶ್ವರೀ ಕಾರ್ಯಕ್ಕಾಗಿ ಇಂದು ನಮಗೆ ಈ ಯಜ್ಞನಾರಾಯಣನ ಊರ್ಜೆಯು ಲಭಿಸುತ್ತಿದೆಯೋ, ಅವರೆಲ್ಲರ ಚರಣಗಳಲ್ಲಿ ನಮ್ಮ ಕೃತಜ್ಞತಾಪೂರ್ವಕ ನಮಸ್ಕಾರಗಳು ! ಇಂದಿನವರೆಗೆ ಈ ಯಜ್ಞಶಾಲೆಯಲ್ಲಿ ಯಾವ ಯಜ್ಞಗಳಾಗಿವೆಯೋ ಅದರ ಫಲವು ಎಲ್ಲ ಸಾಧಕರಿಗೆ ಮತ್ತು ಗುರುಗಳ ಈಶ್ವರೀ ಕಾರ್ಯಕ್ಕೆ ದೊರಕಲಿ ಮತ್ತು ಶೀಘ್ರ ರಾಮರಾಜ್ಯದ ಸ್ಥಾಪನೆಯಾಗಲಿ.’
೭. ದೆಹಲಿಯಲ್ಲಿ ಭಾರತದ ದಿವಂಗತ ಪ್ರಧಾನಮಂತ್ರಿ ಶ್ರೀ. ಲಾಲ ಬಹಾದ್ದೂರ ಶಾಸ್ತ್ರೀಯವರ ಸಮಾಧಿಯ ದರ್ಶನವನ್ನು ಪಡೆಯುತ್ತಿರುವಾಗ ಮಾಡಿದ ಪ್ರಾರ್ಥನೆ.
‘ಸಾಧನೆಗೆ ಆವಶ್ಯಕವಿರುವ ನಿಮ್ಮಲ್ಲಿನ ತತ್ತ್ವನಿಷ್ಠತೆ ನಮ್ಮಲ್ಲಿ ಬರಲಿ.’
ಇದರಿಂದ ದೇವರು ಮುಂದಿನ ವಿಷಯ ಕಲಿಸುತ್ತಾನೆ, ‘ಪ್ರಾರ್ಥನೆ ಇದು ಕೇವಲ ದೇವತೆಗಳಿಗೆ ಮತ್ತು ಸಂತರಿಗೆ ಅಷ್ಟೇ ಆಗಿರದೇ ಎಲ್ಲೆಲ್ಲಿ ನಮ್ಮ ಸಾಧನೆಗಾಗಿ ನಮಗೆ ಏನು ಕಲಿಯಲು ಸಿಗುತ್ತದೆಯೋ, ಆ ಎಲ್ಲ ವ್ಯಕ್ತಿ, ಪ್ರಾಣಿ ಅಥವಾ ಯಾವುದೇ ವಿಷಯವಿರಲಿ, ಅಲ್ಲಿ ನಾವು ಪ್ರಾರ್ಥನೆಯನ್ನು ಮಾಡಬಹುದು’ ಎಂಬುದು ಕಲಿಯುವಂತಾಗಿದೆ.
೮. ಹವನಪಾತ್ರೆಯಲ್ಲಿ ಅಗ್ನಿದೇವತೆಗೆ ಮಾಡಿದ ಪ್ರಾರ್ಥನೆ
೮ ಅ. ಅಗ್ನಿನಾರಾಯಣನಿಗೆ ಭಾವಪೂರ್ಣ ನಮಸ್ಕಾರವನ್ನು ಮಾಡುವುದು : ಒಮ್ಮೆ ಆಶ್ರಮದಲ್ಲಿ ಒಂದು ಹವನವಾಯಿತು. ಹವನದ ಚೈತನ್ಯವು ಆಶ್ರಮವಾಸ್ತುವಿಗೆ ಮತ್ತು ಎಲ್ಲ ಸಾಧಕರಿಗೆ ಸಿಗಬೇಕು; ಎಂದು ಆ ಹವನದ ಕುಂಡದ ಧೂಮವು ಆಶ್ರಮದಲ್ಲಿ ಪ್ರತಿಯೊಂದು ಕೋಣೆಯಲ್ಲಿ ತೋರಿಸುವುದಿತ್ತು. ಪುರೋಹಿತರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಕೋಣೆಗೆ ಹವನಪಾತ್ರೆಯನ್ನು ತೆಗೆದುಕೊಂಡು ಬಂದನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಎದ್ದು ನಿಂತು ಕೈಗಳನ್ನು ಜೋಡಿಸಿ ಅವರು ಹವನಪಾತ್ರೆಯತ್ತ ನೋಡಿ ಅಗ್ನಿನಾರಾಯಣನಿಗೆ ಗೌರವದಿಂದ ಮತ್ತು ಭಾವಪೂರ್ಣ ನಮಸ್ಕಾರವನ್ನು ಮಾಡಿದರು.
೮ ಆ. ಭಾವಪೂರ್ಣ ಮಾಡಿದ ಪ್ರಾರ್ಥನೆ : ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು, ‘ಹೇ ಅಗ್ನಿನಾರಾಯಣಾ, ತಾವು ಸ್ವತಃ ನನಗಾಗಿ ಮತ್ತು ಎಲ್ಲ ಸಾಧಕರಿಗಾಗಿ ಬಂದಿದ್ದೀರಿ, ಅದಕ್ಕಾಗಿ ನಾನು ತಮ್ಮ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರವನ್ನು ಮಾಡುತ್ತೇನೆ. ತಮ್ಮ ಈ ಚೈತನ್ಯದಿಂದ ನಮಗೆ ಸಾಧನೆಗಾಗಿ ಶಕ್ತಿ ಲಭಿಸಿ ನಮ್ಮ ಸುತ್ತಲೂ ತಮ್ಮ ಸಂರಕ್ಷಣಾ ಕವಚವನ್ನು ನಿರ್ಮಾಣವಾಗಲಿ ಮತ್ತು ಈ ಕಠಿಣ ಕಾಲದಲ್ಲಿ ಎಲ್ಲ ಸಾಧಕರ ರಕ್ಷಣೆಯಾಗಲಿ’ ಎಂದು ಪ್ರಾರ್ಥನೆ ಮಾಡಿದರು.
೮ ಇ. ಅನುಭೂತಿ – ಅಗ್ನಿದೇವತೆಯು ಪ್ರಕಟವಾಗುವುದು : ಈ ಹವನಪಾತ್ರೆಯಿಂದ ಕೇವಲ ಧೂಮ ಬರುತ್ತಿತ್ತು. ಶ್ರೀಚಿತ್‌ಶಕ್ತಿ (ಸೌ.)ಗಾಡಗೀಳಕಾಕುರವರು ಪ್ರಾರ್ಥನೆಯನ್ನು ಮಾಡಿದ ನಂತರ ಅದರಿಂದ ಒಮ್ಮೆಲೆ ಅಗ್ನಿದೇವತೆಯು ಪ್ರಕಟವಾದಂತೆ ಅಗ್ನಿಜ್ವಾಲೆಯು ಮೇಲೆ ಬಂದಿತು. ಇದರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರಿಗೆ ದೇವರ ಬಗ್ಗೆ ಇರುವ ಭಾವವು ಕಲಿಯುವಂತಿದೆ. ಅವರು ಮಾಡಿದ ಪ್ರಾರ್ಥನೆಯಲ್ಲಿ ಇಷ್ಟೊಂದು ಸಾಮರ್ಥ್ಯವಿದೆಯೆಂದರೆ, ಪ್ರತ್ಯಕ್ಷ ದೇವತೆಗಳಿಗೂ ಕಾರ್ಯಕ್ಕಾಗಿ ಪ್ರಕಟವಾಗಬೇಕಾಗುತ್ತದೆ, ಎಂಬ ಅನುಭೂತಿ ದರ್ಶನವಾಯಿತು.
ಹೇ ಸದ್ಗುರುನಾಥಾ, ನಮ್ಮೆಲ್ಲ ಸಾಧಕರ ಅಂತರ್ಮನದಲ್ಲಿಯೂ ಈ ರೀತಿ ಭಾವವು ಜಾಗೃತವಾಗಬೇಕು, ನಮ್ಮಿಂದ ಆಗುವ ಪ್ರಾರ್ಥನೆಯಿಂದ ಆಗುವ ಪ್ರತಿಯೊಂದು ಪ್ರಾರ್ಥನೆಯಲ್ಲಿ ಭಗವಂತನ ಬಗೆಗಿನ ತಳಮಳವಿರಬೇಕು, ಅದರಿಂದ ನಮಗೆ ಇನ್ನೂ ಇನ್ನೂ ದೇವರ ಹತ್ತಿರ ಹೋಗಲು ಸಾಧ್ಯವಾಗುವುದು.’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
(ಸಂಗ್ರಾಹಕರು : ಶ್ರೀ. ದಿವಾಕರ ಆಗಾವಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ.)