ಚಮಚದಿಂದ ಊಟ ಮಾಡುವುದು ಮತ್ತು ಕೈಯಿಂದ ಊಟ ಮಾಡುವುದು ಇವುಗಳಲ್ಲಿನ ವ್ಯತ್ಯಾಸ !

ಕು. ಮಧುರಾ ಭೋಸಲೆ

‘ಸಜೀವ ವ್ಯಕ್ತಿಗಳಲ್ಲಿ ನಿರ್ಜೀವ ವಸ್ತುಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಚೈತನ್ಯವಿರುತ್ತದೆ. ಚಮಚ ಧಾತುವಿನದ್ದಾಗಿರುವುದರಿಂದ, ಹಾಗೂ ಅದು ನಿರ್ಜೀವವಾಗಿರುವುದರಿಂದ, ಅದರಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯ ಸ್ವಲ್ಪ ಪ್ರಮಾಣ ದಲ್ಲಿರುತ್ತದೆ. ತದ್ವಿರುದ್ಧ ಮನುಷ್ಯ ಪ್ರಾಣಿಯಲ್ಲಿ ಕಡಿಮೆಯೆಂದರೂ ಸಾತ್ತ್ವಿಕತೆ ಶೇ. ೨೦ ರಷ್ಟು ಇರುತ್ತದೆ. ಅವನ ಐದೂ ಬೆರಳುಗಳಿಂದ ಪಂಚತತ್ತ್ವಗಳಿಗೆ ಸಂಬಂಧಿಸಿದ ಶಕ್ತಿ ಪ್ರವಹಿಸುತ್ತಿರುತ್ತದೆ. ವ್ಯಕ್ತಿಯು ಕೈಯಿಂದ ಊಟ ಮಾಡುವಾಗ ಅವನ ಕೈಯ ಐದೂ ಬೆರಳುಗಳಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆ ಅವನ ಕೈಯಲ್ಲಿರುವ ತುತ್ತಿನ ಕಡೆಗೆ ಪ್ರವಹಿಸುತ್ತದೆ ಮತ್ತು ಅವನು ಆಹಾರ ಸೇವಿಸಿದಾಗ ಈ ಸಾತ್ತ್ವಿಕತೆ ಪುನಃ ಅವನ ದೇಹದಲ್ಲಿ ಹೋಗುತ್ತದೆ. ಈ ರೀತಿ ಶಕ್ತಿಪಾತಯೋಗಕ್ಕನುಸಾರ ವ್ಯಕ್ತಿಯಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆ ಮತ್ತು ಶಕ್ತಿ ಅವನಿಗೆ ಪುನಃ ಸಿಗುತ್ತದೆ. ತದ್ವಿರುದ್ಧ ಚಮಚವನ್ನು ಉಪಯೋಗಿಸುವುದರಿಂದ ಶಕ್ತಿಯು ಹೆಬ್ಬೆರಳು ಮತ್ತು ತರ್ಜನಿಯ ಮಾಧ್ಯಮದಿಂದ ಚಮಚದಲ್ಲಿ ಪ್ರವೇಶಿಸಿ ಚಮಚದ ರಜ-ತಮ ಕಡಿಮೆಯಾಗಲು ಉಪಯೋಗವಾಗುತ್ತದೆ.  ಇದರಿಂದ ಅವನಿಗೆ ತನ್ನ ಸಾತ್ತ್ವಿಕತೆಯನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ತದ್ವಿರುದ್ಧ ಚಮಚದಲ್ಲಿನ ರಜ-ತಮಾತ್ಮಕ ಸ್ಪಂದನಗಳು ಚಮಚದ ಆಹಾರಕಣಗಳಲ್ಲಿ ಹೋಗುತ್ತವೆ ಮತ್ತು ಅವನಿಗೆ ಆಹಾರದಿಂದ ರಜ-ತಮಾತ್ಮಕ ಶಕ್ತಿ ದೊರಕುತ್ತದೆ. ಇದರಿಂದ ಅವನಿಗೆ ಚಮಚದಿಂದ ತಿನ್ನುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವ ಬದಲು ಹಾನಿಯೇ ಆಗುತ್ತದೆ. ಆದುದರಿಂದ ವ್ಯಕ್ತಿಯು ಚಮಚದಿಂದ ಆಹಾರ ಸೇವಿಸುವುದಕ್ಕಿಂತ ಕೈಯಿಂದ ಸೇವಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಅಧಿಕ ಯೋಗ್ಯವಾಗಿದೆ. ಹೀಗಿದ್ದರೂ, ಚರ್ಮರೋಗ, ಕೈಯ ಬೆರಳುಗಳಿಗೆ ಏನಾದರೂ ಗಾಯಗಳಾಗಿದ್ದರೆ ಅಥವಾ ಸೂಪ್, ಪಾಯಸಗಳಂತಹ ಪದಾರ್ಥಗಳನ್ನು ಸೇವಿಸುವಾಗ ವ್ಯಕ್ತಿಯ ಕೈಗಳಿಗಿಂತ ಚಮಚದಿಂದ ಆಹಾರವನ್ನು ಸೇವಿಸುವುದು ಅಧಿಕ ಯೋಗ್ಯವಾಗಿದೆ. ಮೇಲಿನ ಕೆಲವು ಅಪವಾದಾತ್ಮಕ ಪರಿಸ್ಥಿತಿಯನ್ನು ಹೊರತು ಪಡಿಸಿದರೆ ವ್ಯಕ್ತಿಯು ಕೈಗಳಿಂದ ಆಹಾರವನ್ನು ಸೇವಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿದೆ.

ಚಮಚದಿಂದ ಊಟ ಮಾಡುವುದು ಮತ್ತು ಕೈಯಿಂದ ಊಟ ಮಾಡುವುದು

ಟಿಪ್ಪಣಿ : ಶೇ. ೬೧ ಮಟ್ಟದ ಬಳಿಕ ಬಾಹ್ಯ ವಿಷಯಗಳಿಂದ ದೇಹದ ಸಾತ್ತ್ವಿಕತೆಯ ಮೇಲಾಗುವ ಪರಿಣಾಮದ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಪರಿಣಾಮವಾಗುವುದರಿಂದ ಶೇ. ೬೧ ಮಟ್ಟದ ಬಳಿಕ ಚಮಚದಿಂದ ಆಹಾರ ಸೇವಿಸುವುದರೂ ಪರಿಣಾಮವು ಕಡಿಮೆಯಾಗತೊಡಗುತ್ತದೆ. ಶೇ. ೭೧ ರಿಂದ ೮೦ ರಷ್ಟು ಮಟ್ಟದವರೆಗೆ ಚಮಚದಿಂದ ಆಹಾರ ಸೇವಿಸುವುದರ ಪರಿಣಾಮ ಕೇವಲ ಶೇ. ೧ ರಷ್ಟು ಆಗುತ್ತದೆ ಮತ್ತು ಶೇ. ೮೧ ರಷ್ಟು ಮಟ್ಟದ ನಂತರ ಈ ಪರಿಣಾಮ ಶೇ. ೦ ರಷ್ಟು, ಅಂದರೆ ಸ್ವಲ್ಪವೂ ಆಗುವುದಿಲ್ಲ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) ಸನಾತನ ಆಶ್ರಮ, ರಾಮನಾಥಿ, ಗೋವಾ.