ದೇವರಿಗೆ ಭಾವಪೂರ್ಣವಾಗಿ ನೈವೇದ್ಯವನ್ನು ತೋರಿಸಿ ಅದನ್ನು ‘ಪ್ರಸಾದ’ವೆಂಬ ಭಾವದಿಂದ ಸೇವಿಸಿದರೆ ವ್ಯಕ್ತಿಗಾಗುವ ಆಧ್ಯಾತ್ಮಿಕ ಲಾಭ

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು’ ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಹಿಂದೂ ಧರ್ಮದಲ್ಲಿ ದೇವರಿಗೆ ನೈವೇದ್ಯವನ್ನು ತೋರಿಸಿ ಅದನ್ನು ಪ್ರಸಾದವೆಂದು ಸೇವಿಸಲಾಗುತ್ತದೆ. ‘ದೇವರಿಗೆ ನೈವೇದ್ಯವನ್ನು ತೋರಿಸಿ ಅದನ್ನು ಪ್ರಸಾದವೆಂದು ಸೇವಿಸುವವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಯಾವ ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ರಾಮನಾಥಿ (ಗೋವಾ)ಯಲ್ಲಿ ಸನಾತನದ ಆಶ್ರಮದಲ್ಲಿ ‘ಯೂ.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

 ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ, ಶೇ. ೬೬ ರಷ್ಟು ಮಟ್ಟವಿರುವ ಆದರೆ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ, ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಮತ್ತು ಶೇ. ೬೧ ರಷ್ಟು ಮಟ್ಟದ ಆದರೆ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಹೀಗೆ ಒಟ್ಟು ೪ ಜನರು ಪಾಲ್ಗೊಂಡಿದ್ದರು.

ಈ ಪರೀಕ್ಷಣೆಯಲ್ಲಿ ಶುದ್ಧ ತುಪ್ಪದಲ್ಲಿ ತಯಾರಿಸಿದ  ಶಿರಾದ ಎರಡು ಭಾಗಗಳನ್ನು ಮಾಡಲಾಯಿತು. ಇದರಲ್ಲಿ ಮೊದಲನೇಯ ಭಾಗದಿಂದ ಶ್ರೀ ಸಿದ್ಧಿವಿನಾಯಕ ದೇವರಿಗೆ ನೈವೇದ್ಯವನ್ನು ತೋರಿಸಲಾಯಿತು. ಇದಕ್ಕೆ ಈ ಲೇಖನದಲ್ಲಿ ‘ಪ್ರಸಾದದ ಶಿರಾ’ ಎಂದು ಸಂಬೋಧಿಸಲಾಗಿದೆ. ಎರಡನೇಯ ಭಾಗದಿಂದ ದೇವರ ನೈವೇದ್ಯ ತೋರಿಸಲಿಲ್ಲ. ಇದಕ್ಕೆ ‘ಸಾಮಾನ್ಯ ಶಿರಾ’ ಎಂದು ಸಂಬೋಧಿಸಲಾಗಿದೆ. ಈ ಎರಡೂ ಶಿರಾಗಳನ್ನು ‘ಯೂ.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಸಾಧಕರು ಮೊದಲು ಪ್ರಸಾದದ ಶಿರಾವನ್ನು ಸೇವಿಸಿದರು. ತದನಂತರ ಮಧ್ಯಾಹ್ನದ ಅಲ್ಪಾಹಾರದ ಸಮಯದಲ್ಲಿ ಅವರು ಸಾಮಾನ್ಯ  ಶಿರಾವನ್ನು ಸೇವಿಸಿದರು. ಸಾಧಕರು ಎರಡೂ ರೀತಿಯ ಶಿರಾ ಸೇವಿಸುವ ಮೊದಲು ಮತ್ತು ಸೇವಿಸಿದ ೨೦ ನಿಮಿಷಗಳ ನಂತರ ಅವರ ‘ಯೂ.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ಎಲ್ಲ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನ ಮಾಡಿದಾಗ ‘ಸಾಮಾನ್ಯ ಶಿರಾ ಮತ್ತು ಪ್ರಸಾದದ ಶಿರಾ ಸೇವಿಸಿದುದರಿಂದ ಸಾಧಕರ ಮೇಲೆ ಯಾವ ಪರಿಣಾಮವಾಯಿತು ?’, ಎಂಬುದು ತಿಳಿಯಿತು. ಅದನ್ನು ಮುಂದೆ ಕೊಡಲಾಗಿದೆ.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ – ಸಾಮಾನ್ಯ (ನಿತ್ಯದ) ಶಿರಾದ ತುಲನೆಯಲ್ಲಿ ಪ್ರಸಾದದ ಶಿರಾ ಸೇವಿಸಿದುದರಿಂದ ಸಾಧಕರ ಮೇಲೆ ತುಂಬಾ ಹೆಚ್ಚು ಸಕಾರಾತ್ಮಕ ಪರಿಣಾಮವಾಗುವುದು : ಇದು ಮುಂದೆ ನೀಡಲಾದ ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.

ಟಿಪ್ಪಣಿ – ‘ಔರಾ ಸ್ಕ್ಯಾನರ್’ ಉಪಕರಣ ೯೦ ಅಂಶದ ಕೋನವನ್ನು ಮಾಡಿತು. ‘ಔರಾ ಸ್ಕ್ಯಾನರ್’ ಉಪಕರಣವು ೧೮೦ ಅಂಶದ ಕೋನವನ್ನು ಮಾಡಿದರೆ ಮಾತ್ರ ಪ್ರಭಾವಳಿಯನ್ನು ಅಳೆಯಲು ಸಾಧ್ಯವಾಗುತ್ತದೆ.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು.

೧. ಸಾಮಾನ್ಯ ಶಿರಾಗಿಂತ ಪ್ರಸಾದದ ಶಿರಾದಲ್ಲಿ ಬಹಳ ಹೆಚ್ಚು ಸಕಾರಾತ್ಮಕ ಊರ್ಜೆ ಇದೆ.

೨. ಸಾಧಕರು ಸಾಮಾನ್ಯ ಶಿರಾ ಸೇವಿಸಿದ್ದರಿಂದ ಅವರಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪ ಕಡಿಮೆಯಾಗಿ ಸಕಾರಾತ್ಮಕ ಊರ್ಜೆ ಸ್ವಲ್ಪ ಹೆಚ್ಚಾಯಿತು.

೩. ಸಾಧಕರು ಪ್ರಸಾದದ ಶಿರಾ ಸೇವಿಸಿದುದರಿಂದ ಅವರಲ್ಲಿ ನಕಾರಾತ್ಮಕ ಊರ್ಜೆಯು ಬಹಳ ಕಡಿಮೆ ಆಯಿತು ಅಥವಾ ಇಲ್ಲವಾಗಿ ಅವರಲ್ಲಿ ಸಕಾರಾತ್ಮಕ ಊರ್ಜೆಯು ಬಹಳ ಹೆಚ್ಚಾಯಿತು.