ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ‘ಸಾಧನೆಯಲ್ಲಿ ಎದುರಿನ ವ್ಯಕ್ತಿಯ ಪ್ರಕೃತಿಯ ಅಭ್ಯಾಸವಾಗುವುದು’, ಮಹತ್ವದ್ದಾಗಿದೆ ಮತ್ತು ವ್ಯಕ್ತಿಯ ಪ್ರಕೃತಿಯನ್ನು ಅರಿತುಕೊಂಡು ಅದಕ್ಕನುಸಾರ ಅವನೊಂದಿಗೆ ವ್ಯವಹರಿಸುವುದರಿಂದ ಅವನು ಸಮಷ್ಟಿಯಲ್ಲಿ ಬೆರೆಯುತ್ತಾನೆ

‘ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೋಷಗಳಿರುವಂತೆಯೇ ಅವನಲ್ಲಿ ಗುಣಗಳೂ ಇರುತ್ತವೆ. ಆದ್ದರಿಂದ ಯಾವುದೇ ವ್ಯಕ್ತಿಯೊಂದಿಗೆ ಆತ್ಮೀಯತೆ ಬೆಳೆಸುವಾಗ ಮೊದಲು ಅವನ ಗುಣಗಳ ಅಭ್ಯಾಸ ಮಾಡಬೇಕು. ವ್ಯಕ್ತಿಯ ಗುಣಗಳನ್ನು ನೋಡಿದರೆ, ಆ ವ್ಯಕ್ತಿಯು ತಾನಾಗಿ ನಮ್ಮೊಂದಿಗೆ ಮನಮುಕ್ತವಾಗಿ ಮಾತನಾಡತೊಡಗುತ್ತಾನೆ. ಅವನು ಮಾತನಾಡುವಾಗ ಕ್ರಮೇಣ ತನ್ನ ದುಃಖ ಮತ್ತು ವೇದನೆಯನ್ನೂ ನಮಗೆ ಹೇಳತೊಡಗುತ್ತಾನೆ. ಇದರಿಂದ ನಮಗೆ ಅವನ ದೋಷ ಮತ್ತು ಅವನು ಕೃತಿಯನ್ನು ಮಾಡುವಾಗ ಅವನಲ್ಲಿ ಅರಿವಾದ ಕೊರತೆಗಳು ಗಮನಕ್ಕೆ ಬರತೊಡಗುತ್ತವೆ. ಇದಕ್ಕೆ ‘ಒಬ್ಬರ ಪ್ರಕೃತಿಯನ್ನು ಅರಿತುಕೊಳ್ಳುವುದು’, ಎಂದು ಹೇಳುತ್ತಾರೆ.

‘ಸಾಧನೆಯಲ್ಲಿ ಎದುರಿನ ವ್ಯಕ್ತಿಯ ಪ್ರಕೃತಿಯನ್ನು ಅರಿತು ಕೊಳ್ಳುವುದು’, ಬಹಳ ಮಹತ್ವವಿದೆ. ಪ್ರಕೃತಿಯ ಅಭ್ಯಾಸವಾದರೆ, ‘ಆ ವ್ಯಕ್ತಿಯೊಂದಿಗೆ ಹೇಗೆ ವರ್ತಿಸಬೇಕು ?’, ಎಂಬುದೂ ನಮಗೆ ತಿಳಿಯತೊಡಗುತ್ತದೆ. ಹೀಗೆ ಮಾಡಿದಾಗ ಸಮಷ್ಟಿಯಲ್ಲಿ ಹೊಂದಿಕೊಳ್ಳುವುದು ಸುಲಭವಾಗುತ್ತದೆ ಮತ್ತು ಸಾಧನೆಯ ಪ್ರಯತ್ನಗಳಲ್ಲಿ ಪರಸ್ಪರರಿಗೆ ಸಹಾಯ ಮಾಡಲೂ ಸಹಜ ಸಾಧ್ಯವಾಗುತ್ತದೆ. ಇದರಿಂದ ಪ್ರೇಮಭಾವವು ಹೆಚ್ಚಾಗುತ್ತದೆ ಮತ್ತು ಸಮಷ್ಟಿಯ ಆರೋಗ್ಯವೂ ಉತ್ತಮವಾಗಿರುತ್ತದೆ.’

೨. ವಿಜ್ಞಾನವು ಮನುಷ್ಯನನ್ನು ಯಂತ್ರಮಾನವನಂತೆ

ಶುಷ್ಕ ಮತ್ತು ನಿಷ್ಪ್ರಾಣ ಮಾಡಿದೆ ಹಾಗೂ ಅಧ್ಯಾತ್ಮದಲ್ಲಿ ಪ್ರೇಮದ ದೈವೀ ಆರ್ದ್ರತೆಯಿಂದ ಮನುಷ್ಯನಲ್ಲಿ ಜೀವಕಳೆ ಬಂದು ಅವನು ದೈವೀ ಗುಣಗಳಿಂದ ಯುಕ್ತನಾಗಿ ‘ದೇವಮನುಷ್ಯ’ನಾಗುವನು ಮತ್ತು ಇದಕ್ಕಾಗಿ ಸಾಧನೆಯು ಆವಶ್ಯಕವಾಗಿರುವುದು ‘ಮನುಷ್ಯನನ್ನು ದೇವರನ್ನಾಗಿಸುವುದು’, ಇದು ವಿಜ್ಞಾನದಲ್ಲಿಲ್ಲ, ಆದರೆ ಅಧ್ಯಾತ್ಮದಲ್ಲಿಯೇ ಸಾಧ್ಯವಿದೆ. ವಿಜ್ಞಾನದಲ್ಲಿರುವ ಶುಷ್ಕತೆಯಿಂದಾಗಿ ಮೂಳೆಮಾಂಸಗಳಿಂದ ಕೂಡಿದ ಮನುಷ್ಯ ದೇಹವು ಸಹ ಯಂತ್ರಮಾನವನಂತೆ ನಿಸ್ತೇಜನಾಗಿ ಹೋಗುತ್ತಾನೆ. ಅಧ್ಯಾತ್ಮದಲ್ಲಿ ವಿಜ್ಞಾನದಂತಹ ಶುಷ್ಕತೆ ಇರುವುದಿಲ್ಲ. ಅದರಲ್ಲಿ ಪ್ರೇಮದ ದೈವೀ ಆರ್ದ್ರತೆಯು ಇರುತ್ತದೆ. ಅದು ಮನುಷ್ಯನನ್ನು ಸಜೀವಗೊಳಿಸುತ್ತದೆ, ಅಂದರೆ ಅವನಿಗೆ ಮನುಷ್ಯಜನ್ಮದಲ್ಲಿ ದೇವಪ್ರಾಪ್ತಿಯ ಧ್ಯೇಯದ ಅರಿವು ಮಾಡಿಕೊಡುತ್ತದೆ.

ಅಧ್ಯಾತ್ಮದ ಮಾರ್ಗವನ್ನು ಅಂಗೀಕರಿಸಿ ಜೀವನವನ್ನು ನಡೆಸುವವರಲ್ಲಿ ‘ಸಹಜತೆ, ಪ್ರೇಮಭಾವ ಮತ್ತು ಇತರರಿಗಾಗಿ ಜೀವಿಸುವುದು’, ಇಂತಹ ಅನೇಕ ದೈವೀ ಗುಣಗಳು ನೋಡಲು ಸಿಗುತ್ತವೆ. ಸಾಧನೆಯು ಹೆಚ್ಚಾದಂತೆ ಈ ಗುಣಗಳು ಹೆಚ್ಚಾಗುತ್ತಾ ಹೋಗುತ್ತವೆ. ಇಂತಹ ಗುಣಗಳಿಂದ ಕೂಡಿದ ಮನುಷ್ಯನನ್ನು ನಾವು ‘ದೇವಮನುಷ್ಯ’ ಎಂದು ಸಂಬೋಧಿಸುತ್ತೇವೆ.

ಕಲಿಯುಗದಲ್ಲಿ ಮನುಷ್ಯನನ್ನು ದೇವರನ್ನಾಗಿ ಮಾಡುವುದು, ಎಂದರೆ ಅವನಿಗೆ ಸಾಧನೆ ಮಾಡಲು ಕಲಿಸಿ, ಅವನ ‘ಸ್ವಭಾವದೋಷ ಮತ್ತು ಅಹಂ’ ದೂರ ಮಾಡಿ ಅವನಲ್ಲಿ ದೈವೀ ಗುಣಗಳನ್ನು ಜಾಗೃತಗೊಳಿಸುವುದು ಎಂದರ್ಥ.

೩. ಸಂತರು ಆಧ್ಯಾತ್ಮಿಕ ಜೀವನ ನಡೆಸುತ್ತಾರೆ ಮತ್ತು ಇತರರಿಗೆ ಅಧ್ಯಾತ್ಮವನ್ನು ಜೀವಿಸಲು ಕಲಿಸುತ್ತಾರೆ, ಆದರೆ ಕಲಿಯುಗದಲ್ಲಿ ವಿಜ್ಞಾನಕ್ಕೆ ಬಲಿಯಾದ ಯಾಂತ್ರಿಕ ಮನುಷ್ಯನು ಮಾಯೆಯಲ್ಲಿ ಜೀವಿಸುತ್ತಾನೆ ಮತ್ತು ಸಮಾಜದ ಜನರಿಗೂ ಮಾಯೆಯಲ್ಲಿ ಸಿಲುಕಲು ಕಲಿಸುತ್ತಾನೆ.

೪. ಅಧ್ಯಾತ್ಮದಲ್ಲಿ ಚಿಕ್ಕವರು-ದೊಡ್ಡವರು ಎಂದು ವಯಸ್ಸಿಗೆ ಮಹತ್ವವಿಲ್ಲ, ಸಾಧನೆಯು ವ್ಯಕ್ತಿಯ ಯೋಗ್ಯತೆಯ ಮೇಲೆ ನಿರ್ಧರಿತವಾಗುತ್ತದೆ ‘ಅಧ್ಯಾತ್ಮದಲ್ಲಿ ಲಿಂಗಭೇದ, ಜಾತಿಪಂಗಡ ಇರುವುದಿಲ್ಲ; ಏಕೆಂದರೆ ಸ್ವತಃ ಈಶ್ವರನು ಇವೆಲ್ಲವುಗಳ ಆಚೆಗೆ ಇರುತ್ತಾನೆ. ಅಧ್ಯಾತ್ಮದಲ್ಲಿ ಯಾರೂ ಚಿಕ್ಕವರಲ್ಲ ಮತ್ತು ದೊಡ್ಡವರಲ್ಲ. ಎಲ್ಲರಿಗೂ ಎಲ್ಲರಿಂದ ಕಲಿಯುವುದಿರುತ್ತದೆ. ಚಿಕ್ಕ ವಯಸ್ಸಿನ ಬಾಲಸಾಧಕನೂ ಪೂರ್ವಜನ್ಮದ ಸಾಧನೆಯಿಂದ ತನಗಿಂತ ವಯಸ್ಸಿನಲ್ಲಿ ಹಿರಿಯರಿಗೆ ಬಹಳಷ್ಟು ಕಲಿಸುತ್ತಾನೆ; ಆದರೆ ಇಲ್ಲಿ ದೊಡ್ಡವರು ಮಾತ್ರ ಕಲಿಯುವಾಗ ‘ಇವನು ದೊಡ್ಡದಾಗಿ ಕಲಿಸಲು ಬಂದನು !’, ಎಂದು ಹೇಳಬಾರದು; ಏಕೆಂದರೆ ಅಧ್ಯಾತ್ಮದಲ್ಲಿ ‘ಚಿಕ್ಕತನ-ದೊಡ್ಡತನ’ವು ವಯಸ್ಸಿನ ಮೇಲಲ್ಲ, ಆದರೆ ವ್ಯಕ್ತಿಯ ಸಾಧನೆಯ ಯೋಗ್ಯತೆಯ ಮೇಲೆ ನಿಶ್ಚಯಿಸಲಾಗುತ್ತದೆ.’

೫. ಸಕಾಮ ಮತ್ತು ನಿಷ್ಕಾಮ ಕರ್ಮ

‘ಅಪೇಕ್ಷೆಯೊಂದಿಗೆ ಕರ್ಮ ಮಾಡುವುದು, ಅಂದರೆ ‘ಸಕಾಮಕರ್ಮ’; ಆದರೆ ಆ ಕರ್ಮದಲ್ಲಿ ಈಶ್ವರನನ್ನು ನೋಡಿ ಸೇವಾಭಾವವಿಟ್ಟು ಯಾವುದಾದರೊಂದು ಕರ್ಮವನ್ನು ಮಾಡುವುದೆಂದರೆ ‘ನಿಷ್ಕಾಮಕರ್ಮ’; ಏಕೆಂದರೆ ಇದರಲ್ಲಿ ಕೊಡುಕೊಳ್ಳುವಿಕೆಯ ಲೆಕ್ಕಾಚಾರವು ಉಂಟಾಗುವುದಿಲ್ಲ.

೬. ಸಾಧಕನಿಗೆ ಯಾವುದೇ ಒತ್ತಡವಿಲ್ಲದೇ ಸಹಜವಾಗಿ ಜೀವನ ಸಾಗಿಸಲು ಆದಾಗ ಈಶ್ವರನೂ ಸಹಜವಾಗಿ ಭೇಟಿಯಾಗುವನು

ನಮಗೆ ಪರಾತ್ಪರ ಗುರು ಡಾಕ್ಟರರು ‘ವರ್ತಮಾನದಲ್ಲಿ ಹೇಗೆ ಇರಬೇಕು ?’, ಎಂದು ಕಲಿಸಿದ್ದಾರೆ. ವರ್ತಮಾನದಲ್ಲಿ ಆನಂದದಿಂದ ಇರಲು ಸಾಧ್ಯವಾದರೆ ಭೂತಕಾಲ ಮತ್ತು ಭವಿಷ್ಯತ್ಕಾಲ ಇವುಗಳ ಚಿಂತೆಯು ಕೊನೆಗೊಳ್ಳುತ್ತದೆ ಮತ್ತು ಸಾಧಕನಿಗೆ ಯಾವುದೇ ಒತ್ತಡವಿಲ್ಲದೇ ಸಹಜವಾಗಿ ಜೀವನ ಸಾಗಿಸಲು ಆದಾಗ ಈಶ್ವರನು ಸಹಜವಾಗಿ ಭೇಟಿಯಾಗುತ್ತಾನೆ.

೭. ಬುದ್ಧಿಯಿಂದ ಜಾಣರಾಗಿರುವ ಅಹಂಯುಕ್ತ ಮಾರ್ಗದರ್ಶಕರಿಗಿಂತ ಸಂತರಲ್ಲಿ ಸಮಾಜಕ್ಕೆ ಶಿಕ್ಷಣ ನೀಡುವ ಕ್ಷಮತೆಯು ಹೆಚ್ಚಿರುವುದು; ಏಕೆಂದರೆ ಸಂತರು ಅಹಂಯುಕ್ತ ಬುದ್ಧಿಯಿಂದಲ್ಲ, ಆದರೆ ದೈವೀ ಊರ್ಜೆಯಿಂದ ಕಾರ್ಯವನ್ನು ಮಾಡುತ್ತಾರೆ

‘ಪ್ರೇಮಭಾವದಿಂದ ಮಾತನಾಡಿದರೆ, ಇಡೀ ಜಗತ್ತನ್ನೇ ಗೆಲ್ಲಬಹುದು. ಇದಕ್ಕಾಗಿ ವಾಣಿಯು ಸಾತ್ತ್ವಿಕವಾಗಿರಬೇಕು. ಚೈತನ್ಯದಿಂದ ವಾಣಿಯು ಸಾತ್ತ್ವಿಕವಾಗುತ್ತದೆ ಮತ್ತು ವಾಣಿಯಲ್ಲಿ ಚೈತನ್ಯವು ಬರಲು ಸಾಧನೆ ಮಾಡುವುದು ಆವಶ್ಯಕವಾಗಿದೆ. ನಮಗೆ ಸಮಾಜದಲ್ಲಿ, ದೇಶ-ವಿದೇಶಗಳಲ್ಲಿ ಅನೇಕ ದೊಡ್ಡ ದೊಡ್ಡ ಮಾರ್ಗದರ್ಶಕ ವ್ಯಕ್ತಿಗಳು (world speakers) ದೊರಕುತ್ತಾರೆ. ಅವರೆಲ್ಲರೂ ‘ಮನುಷ್ಯನ ವಿಕಾಸ’, ‘ಆನಂದಮಯ ಜೀವನವನ್ನು ಹೇಗೆ ನಡೆಸಬೇಕು ?’, ಇತ್ಯಾದಿ ವಿಷಯಗಳ ಬಗ್ಗೆ ದೊಡ್ಡದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಅವರ ಆ ಭಾಷಣಗಳು ಮಾನಸಿಕ ಸ್ತರದ್ದಾಗಿರುತ್ತವೆ. ಅವರಲ್ಲಿ ಸಾಧನೆಯ ಬಲವಿಲ್ಲ. ಹಾಗಾಗಿ ಅವರ ನುಡಿಗಳು ಕೇವಲ ಬಾಹ್ಯಮನಸ್ಸಿನವರೆಗಷ್ಟೇ ಹೋಗಬಹುದು ಮತ್ತು ಅವುಗಳ ಪರಿಣಾಮವೂ ತಾತ್ಕಾಲಿಕವಾಗಿರುತ್ತದೆ.

ಅವರ ತುಲನೆಯಲ್ಲಿ ಸಂತರು ಕೇವಲ ಒಂದು ವಚನವನ್ನು ಸಹಜವಾಗಿ ಹೇಳಿದರೂ ಅವರ ಚೈತನ್ಯಮಯ ವಾಣಿಯು ಎದುರಿಗಿರುವ ವ್ಯಕ್ತಿಯ ಅಂತರ್ಮನದವರೆಗೆ ಹೋಗಿ ಅವನಲ್ಲಿ ಆನಂದಮಯ ಜೀವನವನ್ನು ನಡೆಸಲು ಆವಶ್ಯಕವಾದ ಪರಿವರ್ತನೆಯನ್ನು ಮಾಡಿಬಿಡುತ್ತದೆ. ಸಂತರ ವಾಣಿಯಲ್ಲಿ ಪ್ರೀತಿ ಮತ್ತು ಆಧ್ಯಾತ್ಮಿಕ ಬಲವಿರುತ್ತದೆ, ಹಾಗೆಯೇ ಎದುರಿಗಿರುವ ಜೀವವನ್ನು ಸಾಧನೆಯಲ್ಲಿ ಮುಂದೆ ಕರೆದುಕೊಂಡು ಹೋಗುವ ತಳಮಳವಿರುತ್ತದೆ. ಮಹತ್ವದ್ದೆಂದರೆ ‘ಜೀವನವನ್ನು ಹೇಗೆ ನಡೆಸಬೇಕು ?’ ಎಂದು ಹೇಳಲು ಅವರು ಇತರರಂತೆ ಜನರಿಂದ ಅಪಾರ ಮೊತ್ತವನ್ನು ತೆಗೆದುಕೊಳ್ಳುವುದಿಲ್ಲ.

ತಾತ್ಪರ್ಯವೆಂದರೆ, ಒಟ್ಟಾರೆ ಸಮಾಜವನ್ನು ಸುಶಿಕ್ಷಿತ ಗೊಳಿಸುವ ಕ್ಷಮತೆಯು ಬುದ್ಧಿಯಿಂದ ಜಾಣರಾಗಿರುವ ಮಾರ್ಗದರ್ಶಕರಿಗಿಂತ ಸಂತರಲ್ಲಿ ಹೆಚ್ಚಿರುತ್ತದೆ; ಏಕೆಂದರೆ ಸಂತರು ಅಹಂಯುಕ್ತ ಬುದ್ಧಿಯಿಂದ ಅಲ್ಲ, ಆದರೆ ಕೇವಲ ದೈವೀ ಊರ್ಜೆಯಿಂದ ಕಾರ್ಯವನ್ನು ಮಾಡುತ್ತಿರುತ್ತಾರೆ.’

೮. ಇತರ ಸುವಚನಗಳು

ಅ. ದೇವರನ್ನು ನೋಡಿ ನಮಗೆ ಯಾವ ಆನಂದವಾಗುತ್ತದೆಯೋ, ಗುರುಗಳ ಸಾಧಕರನ್ನು ನೋಡಿಯೂ ನನಗೆ ಅಷ್ಟೇ ಆನಂದವು ಆಗಬೇಕು. ಎಲ್ಲೆಡೆ ಸಮದೃಷ್ಟಿಯಿಂದ ನೋಡಿದರೆ ಇದು ಸಾಧ್ಯವಾಗುತ್ತದೆ.

ಆ. ಈಶ್ವರಪ್ರಾಪ್ತಿಯ ಧ್ಯೇಯದೆದುರು ಇತರ ಎಲ್ಲ ವಿಷಯಗಳು ಮಾಯೆಯೇ ಆಗಿದೆ.

ಇ. ಮನುಷ್ಯನನ್ನು ಸಂತೋಷಪಡಿಸುವುದಕ್ಕಿಂತ ಅವನಲ್ಲಿನ ಭಗವಂತನನ್ನು ಪ್ರಸನ್ನಗೊಳಿಸಿದರೆ, ಅವನೊಂದಿಗೆ ನಮ್ಮ ಸಂಬಂಧವು ಶಾಶ್ವತವಾಗಿ ಜೋಡಿಸಲ್ಪಡುತ್ತದೆ. ಅದೆಲ್ಲವೂ ಆಧ್ಯಾತ್ಮಿಕವಾಗಿರುತ್ತದೆ. ಈ ಸಂಬಂಧದಲ್ಲಿ ಅಪೇಕ್ಷಾಭಂಗದ ದುಃಖವಿರುವುದಿಲ್ಲ.

ಈ. ‘ಆಜ್ಞಾಪಾಲನೆ ಮಾಡುವುದು’, ಇದು ಒಂದು ನಿಷ್ಕಾಮ ಸಾಧನೆಯಾಗಿದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೫.೩.೨೦೨೦)