ಅತ್ಯಂತ ತಳಮಳದಿಂದ ಮತ್ತು ಭಾವಪೂರ್ಣವಾಗಿ ಮಾರ್ಗದರ್ಶನ ಮಾಡಿ ಸಾಧಕರನ್ನು ಅಂತರ್ಮುಖಗೊಳಿಸುವ ಪೂ. ರಮಾನಂದ ಗೌಡ !

ಪೂ. ರಮಾನಂದ ಗೌಡ

‘ಸತತ ಕಲಿಯುವ ಸ್ಥಿತಿಯಲ್ಲಿದ್ದು ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರಿಂದ ಅನೇಕ ಪ್ರಸಂಗಗಳಲ್ಲಿ ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ನಾನು ಇಲ್ಲಿ ನೀಡುತ್ತಿದ್ದೇನೆ.

೧. ಸತತವಾಗಿ ಸಮಷ್ಟಿಯ ವಿಚಾರವನ್ನು ಮಾಡುವುದು

ಶ್ರೀ. ಗುರುಪ್ರಸಾದ ಗೌಡ

೧ ಅ. ಪ್ರತಿಯೊಬ್ಬ ಸಾಧಕನ ಸಾಧನೆಯ ಬಗ್ಗೆ ವಿಚಾರ ಮಾಡಿ ಅವನಿಗೆ ಮಾರ್ಗದರ್ಶನ ಮಾಡುವುದು : ‘ಯಾವ ಜಿಲ್ಲೆಯಲ್ಲಿ ಯಾವ ಸಾಧಕನ ಸ್ಥಿತಿ ಹೇಗಿದೆ ?’, ಎಂಬುದು ಪೂ. ರಮಾನಂದಣ್ಣನವರಿಗೆ ಗೊತ್ತಿರುತ್ತದೆ. ಆ ಸಾಧಕನ ಸಾಧನೆಯ ಬಗ್ಗೆ ಅವರು ಸತತವಾಗಿ ವಿಚಾರ ಮಾಡುತ್ತಿರುತ್ತಾರೆ ಮತ್ತು ಅವನಿಗೆ ಮಾರ್ಗದರ್ಶನವನ್ನೂ ಮಾಡುತ್ತಾರೆ. ಹಾಗೆಯೇ  ಆ ಸಾಧಕನಿಂದ ತಪ್ಪುಗಳಾಗಿದ್ದರೆ, ಅದರ ಬಗ್ಗೆ ಸ್ವಭಾವದೋಷ ನಿರ್ಮೂಲನ ಸತ್ಸಂಗವನ್ನು ತೆಗೆದುಕೊಂಡು ಅವನಿಗೆ ತಪ್ಪುಗಳ ಅರಿವು ಮಾಡಿಕೊಡುತ್ತಾರೆ.

೧ ಆ. ‘ಯಾವ ಜಿಲ್ಲೆಯಲ್ಲಿ ಏನು ಮಾಡಬಹುದು ?’, ಎಂಬುದರ ವಿಚಾರವನ್ನು ಸತತವಾಗಿ ಮಾಡಿ ಅದರ ಆಯೋಜನೆಯನ್ನು ತತ್ಪರತೆಯಿಂದ ಮಾಡುವುದು : ಪೂ. ಅಣ್ಣನವರು ಸತತವಾಗಿ ಸಮಷ್ಟಿಯ ವಿಚಾರವನ್ನೇ ಮಾಡುತ್ತಿರುತ್ತಾರೆ. ‘ಯಾವ ಜಿಲ್ಲೆಯಲ್ಲಿ ಏನು ಮಾಡಬಹುದು ? ಯಾವ ಉಪಕ್ರಮಗಳ ಕಡೆಗೆ ಹೆಚ್ಚು ಗಮನ ಕೊಡಬೇಕು ? ಯಾವ ಜಿಲ್ಲೆಯಲ್ಲಿ ಅಡಚಣೆಗಳಿವೆ ?’, ಎಂದು ಅವರು ಸಮಷ್ಟಿ ಸಾಧನೆಯ ವಿಚಾರವನ್ನೇ ಮಾಡುತ್ತಿರುತ್ತಾರೆ ಮತ್ತು ಅದರ ಆಯೋಜನೆಯನ್ನೂ ಅಷ್ಟೇ ತತ್ಪರತೆಯಿಂದ ಮಾಡುತ್ತಾರೆ.

೧ ಇ. ಕೇವಲ ಸಂಸ್ಥೆಯ ಬಗ್ಗೆ ಅಷ್ಟೇ ಅಲ್ಲ, ಸಮಿತಿಯ ಎಲ್ಲ ಉಪಕ್ರಮಗಳ ಬಗ್ಗೆಯೂ ವ್ಯಾಪಕ ಚಿಂತನೆ ಮಾಡುವುದು : ಪೂ. ಅಣ್ಣನವರು ಸಂಸ್ಥೆ ಮತ್ತು ಸಮಿತಿಯ ಎಲ್ಲ ಉಪಕ್ರಮಗಳ ಕುರಿತು ವ್ಯಾಪಕ ಚಿಂತನೆಯನ್ನು ಮಾಡುತ್ತಾರೆ. ‘ಪ್ರತಿಯೊಂದು ಉಪಕ್ರಮದ ಆಯೋಜನೆಯನ್ನು ಹೇಗೆ ಮಾಡಬೇಕು, ಯಾವ ಉಪಕ್ರಮಕ್ಕೆ ಆದ್ಯತೆ ಕೊಡಬೇಕು, ಯಾವ ಸಾಧಕನನ್ನು ಆ ಉಪಕ್ರಮಕ್ಕೆ ಜೋಡಿಸಬೇಕು ?’, ಇವುಗಳ ಕುರಿತು ಪೂ. ಅಣ್ಣನವರು ಚಿಂತನೆಯನ್ನು ಮಾಡಿ ಸಾಧಕರಿಂದ ಕೃತಿಯನ್ನು ಮಾಡಿಸಿಕೊಳ್ಳುತ್ತಾರೆ.

೧ ಈ. ಕೇವಲ ಸಾಧಕರ ಬಗ್ಗೆ ಮಾತ್ರವಲ್ಲ, ಧರ್ಮಪ್ರೇಮಿ ಮತ್ತು ಹಿಂದುತ್ವನಿಷ್ಠರ ಬಗ್ಗೆಯೂ ಚಿಂತನೆಯನ್ನು ಮಾಡುವುದು : ಕೇವಲ ಸಾಧಕರ ಬಗ್ಗೆಯೇ ಅಲ್ಲ, ಅವರು ಧರ್ಮಪ್ರೇಮಿ ಮತ್ತು ಹಿಂದುತ್ವನಿಷ್ಠರ ಬಗ್ಗೆಯೂ ಸತತವಾಗಿ ವಿಚಾರ ಮಾಡುತ್ತಾರೆ. ಜಿಲ್ಲೆಗಳಿಗೆ ಹೋದಾಗ ಅಲ್ಲಿ ಅವರನ್ನು ಭೇಟಿಯಾಗಿ ಅಥವಾ ಆಶ್ರಮಕ್ಕೆ ಹೋದಾಗ ಸ್ಥಳೀಯ ಹಿಂದುತ್ವನಿಷ್ಠರನ್ನು ಆಶ್ರಮಕ್ಕೆ ಆಮಂತ್ರಿಸಿ ಅವರೊಂದಿಗೆ ಸಂವಾದ ಮಾಡುತ್ತಾರೆ. ಇದರಿಂದ ‘ಅವರಲ್ಲಿ ಎಷ್ಟು ವ್ಯಾಪಕ ವಿಚಾರವಿದೆ ?’, ಎಂದು ತಿಳಿಯುತ್ತದೆ.

೧ ಉ. ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಸಾಧಕರ ಸಾಧನೆಯ ನಿರೀಕ್ಷಣೆಯನ್ನು ಮಾಡುವುದು: ಧರ್ಮಪ್ರಸಾರದ ಸೇವೆಯೊಂದಿಗೆ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿರುವ ಸಾಧಕರ ನಿರೀಕ್ಷಣೆಯನ್ನು ಮಾಡಿ ಯೋಗ್ಯ ಸಮಯದಲ್ಲಿ ಸಾಧಕರ ಸ್ವಭಾವದೋಷ ನಿರ್ಮೂಲನ ಸತ್ಸಂಗವನ್ನು ತೆಗೆದುಕೊಳ್ಳುತ್ತಾರೆ. ಸಾಧಕರ ಗಂಭೀರ ತಪ್ಪುಗಳು ಗಮನಕ್ಕೆ ಬಂದರೆ ಅವರಿಗೆ ಗಾಂಭೀರ್ಯದಿಂದ ಅರಿವು ಮಾಡಿಕೊಡುತ್ತಾರೆ.

೧ ಊ. ಸಾಧಕರ ತಪ್ಪುಗಳನ್ನು ಗಂಭೀರವಾಗಿ ಹೇಳುವುದು : ಪೂ. ಅಣ್ಣನವರು ಜಿಲ್ಲೆಗಳಲ್ಲಿರುವ ಸಾಧಕರ ತಪ್ಪುಗಳನ್ನು ಗಂಭೀರವಾಗಿ ಹೇಳುತ್ತಾರೆ. ಅವರಿಂದ ಇಂತಹ ತಪ್ಪುಗಳು ಪುನಃ ಆಗಬಾರದೆಂಬುದೇ ಅವರ ವಿಚಾರವಾಗಿರುತ್ತದೆ. ‘ಆ ಸಾಧಕರಲ್ಲಿ ಬದಲಾವಣೆಯಾಗಬೇಕು ಮತ್ತು ಅವರು ಸಾಧನೆಯಲ್ಲಿ ಹಿಂದೆ ಬೀಳಬಾರದು’, ಎಂದು ಅವರಿಗೆ ಅನಿಸುತ್ತಿರುತ್ತದೆ.

೧ ಎ. ಹೊಸ ಸಾಧಕರಿಗೆ ಜವಾಬ್ದಾರಿಯನ್ನು ತೆಗೆದುಕೊಂಡು ಸಾಧನೆಯನ್ನು ಮಾಡುವುದರ ಮಹತ್ವವನ್ನು ಹೇಳಿ ಪ್ರೋತ್ಸಾಹ ನೀಡುವುದು : ಪ್ರತಿಯೊಂದು ಉಪಕ್ರಮದಲ್ಲಿ ಜವಾಬ್ದಾರ ಸಾಧಕರೊಂದಿಗೆ ಕಲಿಯುವ ದೃಷ್ಟಿಯಿಂದ ಇನ್ನೊಬ್ಬ ಸಾಧಕನನ್ನು ಜೋಡಿಸಿ ಅವನಿಗೆ ಆ ಸೇವೆಯನ್ನು ಕಲಿಯಲು ಹೇಳುತ್ತಾರೆ. ಅವನು ಕಲಿತ ನಂತರ ಅವನಿಗೆ ಇತರ ಕೇಂದ್ರದಲ್ಲಿ ಅಥವಾ ಜಿಲ್ಲೆಯಲ್ಲಿ ಸೇವೆಯ ಜವಾಬ್ದಾರಿಯನ್ನು ಕೊಟ್ಟು ಅವನಿಂದ ಸೇವೆಯನ್ನು ಮಾಡಿಸಿಕೊಳ್ಳುತ್ತಾರೆ. ಇದರಿಂದ ಹೊಸಹೊಸ ಸಾಧಕರು ಸೇವೆಯನ್ನು ಕಲಿಯುತ್ತಾರೆ ಮತ್ತು ಮುಂದೆ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗುತ್ತಾರೆ.

೧ ಐ. ಪ್ರತಿಯೊಬ್ಬ ಸಾಧಕನನ್ನು ಸತತವಾಗಿ ಅಂತರ್ಮುಖ ಮಾಡುವುದು : ಯಾರಾದರೊಬ್ಬ ಸಾಧಕರು ಸೇವೆಯನ್ನು ಅರೆಮನಸ್ಸಿನಿಂದ ಮಾಡುತ್ತಿದ್ದರೆ, ಪೂ. ಅಣ್ಣನವರು ಅವರಿಗೆ ಸೇವೆಯನ್ನು ಯಾವ ಭಾವದಿಂದ ಮಾಡಬೇಕು? ಎಂಬುದನ್ನು ಹೇಳುತ್ತಾರೆ. ಆ ಸಾಧಕರಲ್ಲಿ ಸೇವೆಯ ಸಂದರ್ಭದಲ್ಲಿ ಬಹಿರ್ಮುಖತೆ ಇದ್ದರೆ, ಅವರಿಗೆ ಗುರುಸೇವೆಯ ಮಹತ್ವ ಮತ್ತು ಗಾಂಭೀರ್ಯದ ಬಗ್ಗೆ ಹೇಳಿ ಅಂತರ್ಮುಖಗೊಳಿಸುತ್ತಾರೆ. ಇದರಿಂದ ಆ ಸಾಧಕರು ಸೇವೆಯನ್ನು ಮನಃಪೂರ್ವಕವಾಗಿ ಮಾಡಲು ಪ್ರಯತ್ನಿಸುತ್ತಾರೆ.

೧ ಓ. ಪ್ರತಿಯೊಂದು ಸತ್ಸಂಗದಲ್ಲಿ ಅತ್ಯಂತ ತಳಮಳದಿಂದ ಮತ್ತು ಭಾವಪೂರ್ಣವಾಗಿ ಮಾರ್ಗದರ್ಶನ ಮಾಡುವುದರಿಂದ ಸಾಧಕರ ಭಾವಜಾಗೃತವಾಗಿ ಫಲನಿಷ್ಪತ್ತಿಯ ಪ್ರಮಾಣವು ಹೆಚ್ಚಾಗುವುದು : ಹೆಚ್ಚಾಗಿ ಎಲ್ಲ ಸತ್ಸಂಗಗಳಲ್ಲಿ ಪೂ. ಅಣ್ಣನವರು ಉಪಸ್ಥಿತರಿರುತ್ತಾರೆ. ಸತ್ಸಂಗದಲ್ಲಿ ಚರ್ಚೆಯಾಗಿರುವ ಎಲ್ಲ ಅಂಶಗಳನ್ನು ವಿಚಾರಿಸಿಕೊಂಡು ಕೊನೆಗೆ ಅತ್ಯಂತ ತಳಮಳದಿಂದ ಮತ್ತು ಭಾವದ ಸ್ತರದಲ್ಲಿ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆ. ಇದರಿಂದ ಸಾಧಕರಿಗೆ ಸೇವೆಯನ್ನು ಮಾಡಲು ಸ್ಫೂರ್ತಿ ಸಿಗುತ್ತದೆ. ಅವರ ಭಾವಜಾಗೃತ ವಾಗುತ್ತದೆ ಮತ್ತು ಫಲನಿಷ್ಪತ್ತಿಯ ಪ್ರಮಾಣವೂ ಹೆಚ್ಚಾಗುತ್ತದೆ.

೧ ಔ. ಎಲ್ಲಿಯೂ ಸಮಯ ವ್ಯರ್ಥವಾಗಬಾರದೆಂದು ಸಮಯದ ನಿಯೋಜನೆಯನ್ನು ಮಾಡಿ ಸೇವೆಯ ಆಯೋಜನೆಯನ್ನು ಮಾಡುವುದು : ಪೂ. ಅಣ್ಣನವರು ಎಲ್ಲಿಯೂ ಸಮಯವನ್ನು ವ್ಯರ್ಥಗೊಳಿಸುವುದಿಲ್ಲ. ಸತತವಾಗಿ ಸೇವೆಯಲ್ಲಿರಲು ಪ್ರಯತ್ನಿಸುತ್ತಾರೆ. ಒಂದಾದ ನಂತರ ಒಂದು, ಈ ರೀತಿ ಅವರ ಸೇವೆಯು ನಿರಂತರವಾಗಿ ನಡೆಯುತ್ತಿರುತ್ತದೆ. ಪ್ರತ್ಯಕ್ಷ ಸೇವೆ ಇಲ್ಲದಿದ್ದರೆ, ಇತರ ಜಿಲ್ಲೆಗಳಿಗೆ ದೂರವಾಣಿ ಕರೆಯನ್ನು ಮಾಡಿ ಅವರು ಅಲ್ಲಿನ ಪರಿಸ್ಥಿತಿಯ ಅಧ್ಯಯನವನ್ನು ಮಾಡುತ್ತಾರೆ. ಪೂ. ಅಣ್ಣನವರು ಸಮಯದ ನಿಯೋಜನೆಯ ಸಂದರ್ಭದಲ್ಲಿ ನಮ್ಮ ಮುಂದೆ ಆದರ್ಶವನ್ನಿಟ್ಟಿದ್ದಾರೆ.

೧ ಅಂ. ಹೊಸ ಸಂಕಲ್ಪನೆಗಳನ್ನು ಶೋಧಿಸಿ ಸಾಧಕರ ಕ್ಷಮತೆಯನ್ನು ಹೆಚ್ಚಿಸುವುದು : ರಾಜ್ಯದಲ್ಲಿ ಹೊಸ ಸಂಕಲ್ಪನೆಗಳನ್ನು ಮಂಡಿಸಿ ಆ ಮಾಧ್ಯಮಗಳಿಂದ ಸಾಧಕರ ಕ್ಷಮತೆಯನ್ನು ಹೆಚ್ಚಿಸಿ ಹೆಚ್ಚು ಫಲನಿಷ್ಪತ್ತಿಯನ್ನು  ಪಡೆಯುತ್ತಾರೆ, ಉದಾ. ಪೂ. ಅಣ್ಣನವರು, ಗುರುಪೂರ್ಣಿಮೆಯ ನಂತರ ಗುರುಪೂರ್ಣಿಮೆಯ ನಿಮಿತ್ತದಿಂದ ಉತ್ತಮ ಸೇವೆಯನ್ನು ಮಾಡಿದ ಸಾಧಕರ ಶಿಬಿರಗಳನ್ನು ಜಿಲ್ಲೆಗಳಲ್ಲಿ ತೆಗೆದುಕೊಳ್ಳಲು ಹೇಳಿದರು. ಅದಕ್ಕನುಸಾರ ಜಿಲ್ಲೆಗಳಲ್ಲಿ ಪ್ರತ್ಯಕ್ಷ ಶಿಬಿರಗಳನ್ನು ತೆಗೆದುಕೊಂಡ ನಂತರ ಅನೇಕ ಸಾಧಕರು ಮುಂದಿನ ಹಂತದ ಸೇವೆಯನ್ನು ಮಾಡಲು ಸಿದ್ಧರಾದರು. ಕೆಲವೊಮ್ಮೆ ‘ಆನ್‌ಲೈನ್’ ಸತ್ಸಂಗಗಳ ಮಾಧ್ಯಮದಿಂದಲೂ ಅವರು ಇಂತಹ ಸತ್ಸಂಗಗಳ ಆಯೋಜನೆಯನ್ನು ಮಾಡುತ್ತಾರೆ. ಇದರಿಂದ ಸಾಧಕರಿಗೆ ಸಾಧನೆಯಲ್ಲಿ ಯೋಗ್ಯ ಮಾರ್ಗದರ್ಶನ ಸಿಗುತ್ತದೆ ಮತ್ತು ಸಾಧಕರು ಸೇವೆಯಲ್ಲಿ ಕೃತಿಶೀಲರಾಗಲು ಸಹಾಯವಾಗುತ್ತದೆ.

೨. ‘ಪ್ರತಿ ಹಂತದಲ್ಲಿ ನಾನು ಇನ್ನೂ ಕಡಿಮೆ ಬೀಳುತ್ತೇನೆ’, ಎಂದು ಕಡಿಮೆತನ ತೆಗೆದುಕೊಳ್ಳುವುದು

ಯಾವುದೇ ಉಪಕ್ರಮದಲ್ಲಿ ಅಪೇಕ್ಷಿತ ಫಲನಿಷ್ಪತ್ತಿ ಸಿಗದಿದ್ದರೆ ಪೂ. ಅಣ್ಣನವರು ತಾವೇ ಕಡಿಮೆತನ ತೆಗೆದುಕೊಳ್ಳುತ್ತಾರೆ. ನಾನೇ ಈ ಸೇವೆಯಲ್ಲಿ ಕಡಿಮೆ ಬಿದ್ದೆನು. ‘ಇನ್ನೂ ನನ್ನಿಂದ ಪ್ರಯತ್ನವಾಗಬೇಕಿತ್ತು’, ಎಂದು ಸಾಧಕರ ಮುಂದೆ ಹೇಳುತ್ತಾರೆ. ಸಂತರೇ ಕಡಿಮೆತನವನ್ನು ತೆಗೆದುಕೊಳ್ಳುವುದರಿಂದ ಸಾಧಕರಿಗೂ ಖೇದವೆನಿಸಿ ಅವರ ಸಾಧನೆಯ ಪ್ರಯತ್ನಗಳು ಪ್ರಾರಂಭವಾಗುತ್ತವೆ.

೩. ತಮ್ಮ ಪರಿವಾರದ ಕಡೆಗೆ ತತ್ತ್ವನಿಷ್ಠರಾಗಿ ನೋಡುವುದು

ಪೂ. ಅಣ್ಣನವರು ತಮ್ಮ ಪರಿವಾರದ ಸದಸ್ಯರ ತಪ್ಪುಗಳನ್ನೂ ಅಷ್ಟೇ ತತ್ತ್ವನಿಷ್ಠೆಯಿಂದ ಹೇಳುತ್ತಾರೆ. ಅವರು ಎಲ್ಲಿ ಕಡಿಮೆ ಬೀಳುತ್ತಾರೆ, ಎಂಬುದನ್ನು ತೋರಿಸಿಕೊಡುತ್ತಾರೆ. ಒಳ್ಳೆಯ ಪ್ರಯತ್ನವನ್ನು ಮಾಡಿದರೆ ಅವರ ಪ್ರಶಂಸೆಯನ್ನೂ ಅಷ್ಟೇ ತತ್ತ್ವ ನಿಷ್ಠೆಯಿಂದ ಮಾಡುತ್ತಾರೆ. ಪೂ. ಅಣ್ಣನವರ ‘ಪರಿವಾರ ಮತ್ತು ಇತರ ಸಾಧಕರು ಬೇರೆಯಲ್ಲ’, ಎಂಬ ವಿಚಾರ ಅವರಲ್ಲಿರುತ್ತದೆ. ‘ಸಂತರು ಹೇಗೆ ತತ್ತ್ವನಿಷ್ಠರಾಗಿರುತ್ತಾರೆ’, ಎಂಬುದು ಪೂ. ಅಣ್ಣನವರ ಕೃತಿಗಳಿಂದ ಕಲಿಯಲು ಸಿಗುತ್ತದೆ.

೪. ಸ್ವತಃ ಅವರಿಗೆ ಭಾವಜಾಗೃತಿಯಾಗಿ ಸಾಧಕರಲ್ಲಿಯೂ ಭಾವಜಾಗೃತಿಯನ್ನು ಮಾಡಿಸಿಕೊಳ್ಳುವುದು

ಯಾವುದೇ ಸತ್ಸಂಗವಿರಲಿ ಅಥವಾ ಮಾರ್ಗದರ್ಶನವಿರಲಿ, ಪೂ. ಅಣ್ಣನವರು ಗುರುದೇವರ ಬಗ್ಗೆ ಹೇಳುವಾಗ ಅವರ ಭಾವಜಾಗೃತವಾಗುತ್ತದೆ. ಭಾವಜಾಗೃತವಾಗುವಾಗ ಕೆಲವು ಕ್ಷಣ ಅವರಿಗೆ ಮಾತನಾಡಲು ಬರುವುದಿಲ್ಲ. ವಾತಾವರಣ ಶಾಂತವಾಗುತ್ತದೆ. ಇದರಿಂದ ಸತ್ಸಂಗದಲ್ಲಿ ಎಲ್ಲ ಸಾಧಕರ ಭಾವಜಾಗೃತವಾಗುತ್ತದೆ. ಇದುವರೆಗೆ ‘ಅವರು ಭಾವಜಾಗೃತ ಮಾಡದಿರುವ ಯಾವುದೇ ಸತ್ಸಂಗವಿಲ್ಲ.’ ಎಲ್ಲ ಸತ್ಸಂಗಗಳಲ್ಲಿ ಭಾವಜಾಗೃತವಾಗುತ್ತದೆ.

೫. ಪ್ರತಿಯೊಂದು ವಿಷಯದಲ್ಲಿ ಗುರುದೇವರಿಗೇ ಕೃತಜ್ಞತೆಯನ್ನು ಅರ್ಪಣೆ ಮಾಡುವುದು

 ಪೂ. ಅಣ್ಣನವರು ಪ್ರತಿಯೊಂದು ವಿಷಯಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ‘ತಮಗೆ ಪೂರ್ವಾಶ್ರಮದಲ್ಲಿ ಗುರುದೇವರು ಹೇಗೆ ಸಹಾಯ ಮಾಡಿದರು, ಹಾಗೆಯೇ ಪ್ರತಿಯೊಂದು ಸಂಕಟದಿಂದ ಗುರುದೇವರು ಹೇಗೆ ಅವರನ್ನು ಹೊರಗೆ ತೆಗೆದರು’, ಇದನ್ನು ಅವರು ಪ್ರತಿಕ್ಷಣವೂ ಸ್ಮರಿಸುತ್ತಾರೆ. ‘ಯಾವಾಗಲೂ ಕೃತಜ್ಞತೆಯ ಭಾವದಲ್ಲಿರುವುದು, ಇದುವೇ ಅವರ ನಿತ್ಯ ಸಾಧನೆಯಾಗಿದೆ’, ಎಂಬುದು ಅರಿವಾಗುತ್ತದೆ. ಪೂ. ಅಣ್ಣನವರು ಆದರ್ಶಮೂರ್ತಿ ಆಗಿದ್ದಾರೆ. ಅವರ ಮಾತು, ಅವರ ವ್ಯಕ್ತಿತ್ವ ಮತ್ತು ಅವರ ಕೃತಿ ಇವುಗಳಿಂದ ಸತತ ಕಲಿಯಲು ಸಿಗುತ್ತದೆ. ನಮಗೆ ಇಂತಹ ಶ್ರೇಷ್ಠ ಸಮಷ್ಟಿ ಸಂತರನ್ನು ನೀಡಿದ ಬಗ್ಗೆ ಗುರುದೇವರ ಚರಣಗಳಲ್ಲಿ ಸದಾ ಕೃತಜ್ಞರಾಗಿದ್ದೇವೆ !’

– ಶ್ರೀ. ಗುರುಪ್ರಸಾದ ಗೌಡ, ಮಂಗಳೂರು. (೨೯.೫.೨೦೨೦)