ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಗಮನಕ್ಕೆ ಬಂದ ಅಗ್ನಿಹೋತ್ರದ ವಿಭೂತಿಯ ಮಹತ್ವ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಭೃಗು ಜೀವನಾಡಿಪಟ್ಟಿ ವಾಚಕರಾದ ಶ್ರೀ. ಸೆಲ್ವಮ್ ಗುರೂಜಿಯವರ ಮಾಧ್ಯಮದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಭೃಗು ಮಹರ್ಷಿಗಳು ಅಗ್ನಿಹೋತ್ರ ಮಾಡಲು ಹೇಳುವುದು

‘ಎರಡು ವರ್ಷಗಳ ಹಿಂದೆ ಚೆನ್ನೈಯಲ್ಲಿ ಭೃಗು ಜೀವನಾಡಿಪಟ್ಟಿಯ ವಾಚಕರಾದ ಶ್ರೀ. ಸೆಲ್ವಮ್‌ಗುರೂಜಿಯವರ ಮಾಧ್ಯಮದಿಂದ ಭೃಗು ಮಹರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಅಗ್ನಿಹೋತ್ರ ಮಾಡಲು ಹೇಳಿದ್ದರು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ದೈವೀ ಪ್ರವಾಸದಲ್ಲಿರುವಾಗ ಯಾವಾಗ ಅವರಿಗೆ ಅವಕಾಶ ಸಿಕ್ಕಿದಾಗಲೆಲ್ಲ ಆಗ ಅವರು ಅಗ್ನಿಹೋತ್ರ ಮಾಡುತ್ತಾರೆ. ಕೆಲವು ಸಾಧಕರ ಮನೆಗೆ ಹೋದಾಗ ವಾಸ್ತು ಮತ್ತು ಸಾಧಕರ ರಕ್ಷಣೆಯಾಗಬೇಕೆಂದು ಅವರು ಸಾಧಕರ ಮನೆಯಲ್ಲಿ ಅಗ್ನಿಹೋತ್ರವನ್ನು ಮಾಡುತ್ತಾರೆ.

೨. ಅಗ್ನಿಹೋತ್ರದ ವಿಭೂತಿಯನ್ನು ನೀರಿನಲ್ಲಿ ಹಾಕಿದರೆ, ಅದು ನೀರಿನ ಕ್ಷಾರದ ಪ್ರಮಾಣವನ್ನು ಹೆಚ್ಚಿಸುವುದರಿಂದ ಕೊರೋನಾದ ಸೋಂಕು ತಗಲಿರುವ ರೋಗಿಯ ಕಾಯಿಲೆ ಗುಣವಾಗಲು ಸಹಾಯವಾಗುವುದು

ಸದ್ಯ ಸಂಪೂರ್ಣ ಜಗತ್ತಿನಲ್ಲಿ ಕೊರೋನಾ ಮಹಾಮಾರಿಯಿಂದ ಜನರು ಸಂಕಟಕ್ಕೀಡಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಕೊರೋನಾ ಆಗಿರುವ ರೋಗಿಗಳಿಗೆ ವೈದ್ಯರು ಕ್ಷಾರ ಹೆಚ್ಚು ಪ್ರಮಾಣದಲ್ಲಿರುವ ಪದಾರ್ಥಗಳನ್ನು (ALKALINE FOODS) ಕೊಡುತ್ತಿದ್ದಾರೆ. ನಾವು ಕುಡಿಯುವ ನೀರಿನಲ್ಲಿ ಸ್ವಲ್ಪ ಅಗ್ನಿಹೋತ್ರದ ವಿಭೂತಿಯನ್ನು ಹಾಕಿದರೆ ನೀರಿನಲ್ಲಿರುವ ಕ್ಷಾರದ ಪ್ರಮಾಣ ಹೆಚ್ಚಾಗುತ್ತದೆ, ಎಂದು ಅಗ್ನಿಹೋತ್ರದ ವಿಷಯದ ಜ್ಞಾನವಿರುವ ಕೆಲವು ವ್ಯಕ್ತಿಗಳು ಹೇಳಿದ್ದಾರೆ.

(ಆಧಾರ : https://homatheraphy.org/agnihotra-ash-and-alkaline-water/) ಅಗ್ನಿಹೋತ್ರದ ವಿಭೂತಿಯನ್ನು ನೀರಿನಲ್ಲಿ ಹಾಕಿದಾಗ ನೀರಿನಲ್ಲಿರುವ ಜಂತುಗಳು (ವೈರಸ್) ದೂರವಾಗುತ್ತವೆ ಎಂಬುದೂ ಅನುಭವಕ್ಕೆ ಬಂದಿದೆ. (ಆಧಾರ: www.agnihotra.org/2017/07/01/purification-of-water-by-agnihotra/)

‘ಹೀಗೆ ಕ್ಷಾರವನ್ನು ಹೆಚ್ಚಿಸಿದ ನೀರನ್ನು ಕುಡಿಯುವುದರಿಂದ ಕೊರೋನಾದ ವಿಷಾಣುಗಳು (ವೈರಸ್) ನಾಶವಾಗುತ್ತವೆ, ಎಂಬುದು ಈಗ ಕೆಲವರ ಗಮನಕ್ಕೆ ಬಂದಿದೆ

೩. ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ಲಾಭವಾಗಬೇಕೆಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಅಗ್ನಿಹೋತ್ರದ ವಿಭೂತಿಯನ್ನು ರಾಮನಾಥಿ ಆಶ್ರಮಕ್ಕೆ ಕಳುಹಿಸುವುದು

ಭೃಗು ಮಹರ್ಷಿಗಳು ಹೇಳಿದಾಗಿನಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಅಗ್ನಿಹೋತ್ರವನ್ನು ಮಾಡುತ್ತಿದ್ದಾರೆ. ಆಧ್ಯಾತ್ಮಿಕ ತೊಂದರೆಗಳಿರುವ ಸಾಧಕರಿಗೆ ಅಗ್ನಿಹೋತ್ರದ ವಿಭೂತಿಯನ್ನು ಕೊಡಬಹುದು, ಎಂಬ ಉದ್ದೇಶದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಈ ವಿಭೂತಿಯನ್ನು ರಾಮನಾಥಿ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಿಗೆ ಕಳುಹಿಸುತ್ತಾರೆ. ಇಂದಿನವರೆಗೆ ಅನೇಕ ಸಾಧಕರಿಗೆ ಈ ವಿಭೂತಿಯಿಂದ ಲಾಭವಾಗಿದೆ.

ಅಗ್ನಿಹೋತ್ರದ ಬಗ್ಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು  ಆಯಾ ಕಾಲಕ್ಕೆ ಹೇಳಿರುವ ಅಂಶಗಳು

‘ಸದ್ಯ ಕೊರೋನಾ ಮಹಾಮಾರಿಯ ಸಂಕಟದಿಂದ ಸಂಪೂರ್ಣ ಜಗತ್ತು ತೊಂದರೆಗೀಡಾಗಿದ್ದರಿಂದ ಜಗತ್ತಿನಲ್ಲಿ ಅನೇಕರು ಅಗ್ನಿಹೋತ್ರವನ್ನು ಆರಂಭಿಸಿದ್ದಾರೆ. ಅಗ್ನಿ ಹೋತ್ರವನ್ನು ಮಾಡುವ ಇಂತಹ ಅನೇಕ ಜನರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಹೇಳಿರುವ ಈ ಕೆಳಗಿನ ಅಂಶಗಳು ಮಾರ್ಗದರ್ಶಕವಾಗಿವೆ. ಯಾವುದಾದರೊಂದು ಕರ್ಮವನ್ನು ಮಾಡುವಾಗ ಆ ವಿಷಯದ ಜ್ಞಾನವಿದ್ದರೆ ಭಾವಜಾಗೃತಿಯಾಗುತ್ತದೆ ಮತ್ತು ಕರ್ಮವು ಪೂರ್ಣತ್ವ ಬರುತ್ತದೆ.

೧. ಸೂರ್ಯ ಮತ್ತು ಅಗ್ನಿ ಇವು ಅನುಕ್ರಮವಾಗಿ ಆಕಾಶ ಮತ್ತು ಪೃಥ್ವಿಯ ಮೇಲಿನ ತೇಜತತ್ತ್ವಗಳ ಪ್ರತೀಕವಾಗಿವೆ

ಆಕಾಶದಲ್ಲಿ ತೇಜತತ್ತ್ವದ ಪ್ರತೀಕವೆಂದರೆ ‘ಸೂರ್ಯ ಮತ್ತು ತೇಜತತ್ತ್ವದ ಪೃಥ್ವಿಯ ಮೇಲಿನ  ಪ್ರತೀಕವೆಂದರೆ ‘ಅಗ್ನಿ. ಸೂರ್ಯನ ಕಾರ್ಯವು ಹಗಲಿನಲ್ಲಿರುತ್ತದೆ ಹಾಗೂ ಅಗ್ನಿಯ ಕಾರ್ಯವು ಸೂರ್ಯಾಸ್ತದ ನಂತರ ಆರಂಭವಾಗುತ್ತದೆ; ಆದುದರಿಂದ ಸೂರ್ಯೋದಯದ ಸಮಯದಲ್ಲಿ ಅಗ್ನಿಹೋತ್ರ ಮಾಡುವಾಗ ‘ಸೂರ್ಯಾಯ ಸ್ವಾಹಾ |, ಎಂದು ಮಂತ್ರದಲ್ಲಿ ಹೇಳಲಾಗಿದೆ ಹಾಗೂ ಸಾಯಂಕಾಲ ಅಗ್ನಿಹೋತ್ರ ಮಾಡುವಾಗ ‘ಅಗ್ನಯೇ ಸ್ವಾಹಾ |, ಎಂದು ಹೇಳಲಾಗುತ್ತದೆ.

೨. ‘ಸ್ವಾಹಾ ಮತ್ತು ‘ಸ್ವಧಾ ಇವೆರಡು ಅಗ್ನಿದೇವನ ಶಕ್ತಿಗಳಾಗಿದ್ದು ಅವು ಅನುಕ್ರಮವಾಗಿ ದೇವಲೋಕ ಮತ್ತು ಪಿತೃಲೋಕಕ್ಕೆ ಆಹುತಿಯನ್ನು ತಲುಪಿಸುವ ಕಾರ್ಯವನ್ನು ಮಾಡುತ್ತವೆ

ಒಮ್ಮೆ ಸಾಧಕ ಪುರೋಹಿತ ಕೇತನ ಶಹಾಣೆಯವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಈ ಮುಂದಿನ ಮಾಹಿತಿಯನ್ನು ಹೇಳಿದ್ದರು. ‘ಅಗ್ನಿದೇವರ ಎರಡು ಶಕ್ತಿಗಳಿವೆ. ಒಂದು ‘ಸ್ವಾಹಾ ಮತ್ತು ಇನ್ನೊಂದು ‘ಸ್ವಧಾ. ‘ಸ್ವಾಹಾ ಅಗ್ನಿಯಲ್ಲಿ ನೀಡಿದ ಆಹುತಿಯನ್ನು ದೇವಲೋಕಕ್ಕೆ ಮತ್ತು ‘ಸ್ವಧಾ ಪಿತೃಕರ್ಮವನ್ನು ಮಾಡುವಾಗ ಪಿತೃರಿಗೆ ಅರ್ಪಣೆ ಮಾಡಿದ ಹವಿರ್ಭಾಗ, ಅನ್ನ ಇತ್ಯಾದಿಗಳನ್ನು ಪಿತೃಲೋಕಕ್ಕೆ ತಲುಪಿಸುತ್ತದೆ. ‘ಸ್ವಾಹಾ ಎಂದು ಹೇಳುವ ಅಧಿಕಾರ ವೇದಮೂರ್ತಿ ಮತ್ತು ಸಂತರಿಗಿದೆ. ಇತರರು ಸ್ವಾಹಾದ ಬದಲು ‘ನಮಃ | ಎಂದು ಹೇಳಬೇಕು, ಎನ್ನುವ ಶಾಸ್ತ್ರವಿದೆ. ಸ್ವಾಹಾ ಮತ್ತು ಸ್ವಧಾ ಇವು ‘ಪೋಸ್ಟ್‌ಮನ್ ಹಾಗೆ ಕಾರ್ಯವನ್ನು ಮಾಡುತ್ತವೆ. ಅವು ಪೃಥ್ವಿಯ ಮೇಲೆ ಮನುಷ್ಯನು ಅಗ್ನಿಗೆ ಅರ್ಪಣೆ ಮಾಡಿದ ಆಹುತಿಯನ್ನು ಆಯಾ ವಿಳಾಸಕ್ಕೆ ತಲುಪಿಸುವ ಕಾರ್ಯವನ್ನು ಮಾಡುತ್ತವೆ.

೩. ಅನುಭೂತಿ

ಒಮ್ಮೆ ಅಗ್ನಿಹೋತ್ರದ ಸಮಯದಲ್ಲಿ ‘ಸ್ವಾಹಾ ಎಂದು ಹೇಳಿದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರಿಗೆ ‘ಅಗ್ನಿಯಲ್ಲಿ ಒಂದು ಚಿಕ್ಕ ಕೈ ಕಾಣಿಸಿ ಅದು ಆಹುತಿಯನ್ನು ತೆಗೆದುಕೊಂಡು ಹೋಗುತ್ತಿದೆ ಎಂದು ಅನಿಸಿತು.

– ಶ್ರೀ. ವಿನಾಯಕ ಶಾನಭಾಗ, ಜಯಪುರ, ರಾಜಸ್ಥಾನ (೨೫.೭.೨೦೨೦)