ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಇವರು ‘ಲವ್ ಜಿಹಾದ್ ವಿರುದ್ಧದ ಕಾನೂನು ಸಂವಿಧಾನವಿರೋಧಿಯಾಗಿದೆ ಎಂದು ಹೇಳಿದ್ದಾರೆ. ಕೆಲವು ಜನಪ್ರತಿನಿಧಿಗಳು ‘ಲವ್ ಜಿಹಾದ್ ಅಸ್ತಿತ್ವದಲ್ಲಿಯೇ ಇಲ್ಲವೆಂದು ಈ ಹಿಂದೆಯೂ ಹೇಳಿದ್ದರು. ಮುಸಲ್ಮಾನರ ಬಗ್ಗೆ ಇರುವ ಪ್ರೀತಿಯ ಕಾರಣದಿಂದ ಹೀಗೆ ಹೇಳಿದ್ದಾರೆ ಎನ್ನುವುದಕ್ಕಿಂತ ಮುಸಲ್ಮಾನರ ಮತಕ್ಕಾಗಿ ರಾಜಕಾರಣಿಗಳು ‘ಲವ್ ಜಿಹಾದ್ ವಿರುದ್ಧದ ಕಾನೂನನ್ನು ವಿರೋಧಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ಸಿನ ರಾಜಕಾರಣಿಗಳ ವಿರೋಧ ಸಹಜವಾಗಿದೆ. ಅವರಿಗೆ ಅಧಿಕಾರಕ್ಕಾಗಿ ಮುಸಲ್ಮಾನರನ್ನು ಈ ರೀತಿ ಓಲೈಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷವೇ ಇಲ್ಲಿಯವರೆಗೆ ಈ ರೀತಿ ಓಲೈಕೆ ಮಾಡಿ ಮತಾಂಧರಿಗೆ ಅಪರಾಧ ಕೃತ್ಯಗಳನ್ನು ಮಾಡಲು ಪ್ರೋತ್ಸಾಹಿಸಿ, ಅವರ ಪ್ರತಿಷ್ಠೆಯನ್ನು ಅತ್ಯಧಿಕ ಕಲುಷಿತಗೊಳಿಸಿದೆ ಇದನ್ನು ಮುಸಲ್ಮಾನರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಅಧಿಕಾರ ಕ್ಕಾಗಿ ದೇಶವನ್ನೇ ಬಲಿ ಕೊಡಲು ಹಿಂದೆ-ಮುಂದೆ ನೋಡದಿರುವವರು, ಹಿಂದೂ ಹೆಣ್ಣುಮಕ್ಕಳ ದಲ್ಲಾಳಿಯನ್ನು ತಡೆಯುವ ‘ಲವ್ ಜಿಹಾದ್ ಕಾನೂನು ರಚನೆಯನ್ನು ವಿರೋಧಿಸುವುದರಲ್ಲಿ ಆಶ್ಚರ್ಯವೇನಿಲ್ಲ.
ಚಾಣಾಕ್ಷ ಮತಾಂಧರು!
ನಟ ಝಿಶಾನ್ ಅಯುಬ್ ಇವರು ಇತ್ತೀಚೆಗಷ್ಟೇ ‘ಪ್ರೀತಿಸುವ ಮೊದಲು ಧರ್ಮವನ್ನು ನೋಡಬೇಕೇ ?, ಎಂದು ಪ್ರಶ್ನಿಸಿ ‘ಲವ್ ಜಿಹಾದ್ ಇದು ಸುಳ್ಳು ಕಲ್ಪನೆಯೆಂದು ಹೇಳಿದ್ದಾರೆ. ಈ ಜನರು ಎಷ್ಟು ಚಾಣಾಕ್ಷರಾಗಿರುತ್ತಾರೆಂದರೆ, ಜನರಲ್ಲಿ ಹಿಂದುತ್ವನಿಷ್ಠರ ಅಥವಾ ‘ಲವ್ ಜಿಹಾದ್ ತಡೆಯಲು ಕಾನೂನು ರಚಿಸುತ್ತಿರುವ ಸರಕಾರದ ವಿರುದ್ಧ ಅಭಿಪ್ರಾಯ ಮೂಡುವಂತೆ ಅವರ ದಿಕ್ಕುತಪ್ಪಿಸುವ ಪ್ರಶ್ನೆಗಳನ್ನು ಕೇಳುತ್ತಾರೆ. ಹಿಂದೂಗಳು ಅವರ ಈ ಚಾಣಾಕ್ಷತೆಯನ್ನು ಅರಿತುಕೊಂಡು ಅವರಿಗೆ ಮರಳಿ ಪ್ರಶ್ನಿಸಬೇಕು ಮತ್ತು ಹಿಂದೂಗಳಲ್ಲಿಯೂ ‘ಲವ್ ಜಿಹಾದ್ ನಂತಹ ಅಪಾಯಕಾರಿ ವಿಷಯದ ಕುರಿತು ಪ್ರಬೋಧನೆಯನ್ನು ಮಾಡಬೇಕು. ಝಿಶಾನ ಅಯುಬ್ ‘ಪ್ರೀತಿಸಿದ ಬಳಿಕ ಜೈಲಿಗೆ ಹೋಗಬೇಕಾಗುವುದೋ ಅಥವಾ ಪ್ರೀತಿಸುವ ಮೊದಲು ಧರ್ಮವನ್ನು ನೋಡಬೇಕೋ?, ಎಂದು ಪ್ರಶ್ನಿಸಿ, ಸಾಮಾನ್ಯ ಹಿಂದೂಗಳನ್ನು ಸಂದಿಗ್ಧತೆಯಲ್ಲಿ ಸಿಲುಕಿಸಿ ‘ಸರಕಾರವೇ ಎಲ್ಲೋ ತಪ್ಪುತ್ತಿದೆ, ಎನ್ನುವ ಅಭಾಸವನ್ನು ಉಂಟು ಮಾಡಿದ್ದಾರೆ. ಝಿಶಾನ್ ಅಯುಬ್‌ರಿಗೆ ನಮ್ಮ ಪ್ರಶ್ನೆಯೇನೆಂದರೆ, ‘ನಿಜವಾದ ಹೆಸರು ಮತ್ತು ಧರ್ಮವನ್ನು ಪ್ರೇಯಸಿಗೆ ಹೇಳದಿರುವುದಕ್ಕೆ ಪ್ರೀತಿ ಎನ್ನಬಹುದೇ ? ಆದುದರಿಂದ ಪ್ರೀತಿಸುವಾಗ ನಿಜವಾದ ಹೆಸರು ಮತ್ತು ಧರ್ಮವನ್ನು ಹೇಳದಿರುವವರು ಕಾನೂನಿನಂತೆ ಕಾರಾಗೃಹಕ್ಕೆ ಹೋಗಲೇ ಬೇಕಾಗುತ್ತದೆ. ಅವನು ನಟನೇ ಆಗಿರಲಿ ಅಥವಾ ರಾಜಕಾರಣಿಯಾಗಿರಲಿ ! ಝಿಶಾನ್ ಅಯುಬ್ ಈ ರೀತಿ ಏನಾದರೂ ಮಾಡಿ ಯಾವುದಾದರೂ ಹಿಂದೂ ಯುವತಿಯನ್ನು ಮೋಸಗೊಳಿಸಿದ್ದಾರೇನು ? ಅದರಿಂದ, ಅವರಿಗೆ ಹೆದರಿಕೆಯೆನಿಸುತ್ತಿದೆಯೇ? ಹಾಗಿಲ್ಲದಿದ್ದರೆ ಅವರು ಹೆದರುವ ಅವಶ್ಯಕತೆಯಿಲ್ಲ.
ನೈತಿಕತೆಯನ್ನು ಮರೆತಿರುವ ಸುಶಿಕ್ಷಿತ ಮತಾಂಧರು !
ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ, ಒಂದು ಹೊಸ ಪ್ರಕರಣವನ್ನು ಹೇಳುವುದಾದರೆ, ಬಾಗಪತ (ಉತ್ತರಪ್ರದೇಶ)ದಲ್ಲಿ ಒಬ್ಬ ವಿವಾಹಿತ ಮುಸಲ್ಮಾನ ಡಾಕ್ಟರ ಅಕ್ರಮ ಎಂಬವನು ತಾನು ಹಿಂದೂ ಎಂದು ನಂಬಿಸಿ ಒಬ್ಬ ಹಿಂದೂ ನರ್ಸ್ ಜೊತೆ ವಿವಾಹದ ಆಶ್ವಾಸನೆಯನ್ನು ನೀಡುತ್ತಾ ಅವಳನ್ನು ೭ ತಿಂಗಳುಗಳ ವರೆಗೆ ಲೈಂಗಿಕ ಶೋಷಣೆಯನ್ನು ಮಾಡಿದನು. ಡಾಕ್ಟರ ಆಗಿರುವ ವ್ಯಕ್ತಿಯು ಸುಶಿಕ್ಷಿತ ಮತ್ತು ನೀತಿವಂತನಾಗಿರುತ್ತಾನೆಂದು ತಿಳಿಯುತ್ತೇವೆ: ಆದರೆ ‘ಲವ್ ಜಿಹಾದ್ ಮಾಡಲು ಈ ಡಾ. ಅಕ್ರಮ್ ಡಾಕ್ಟರ ವೃತ್ತಿಗೇ ಕಪ್ಪು ಮಸಿ ಬಳಿಯುವ ಕೃತಿಯನ್ನು ಮಾಡಿದನು. ಆ ನರ್ಸ್ ಗರ್ಭವತಿಯಾದಾಗ ಈ ಡಾಕ್ಟರ ಅವಳನ್ನು ‘ಗರ್ಭಪಾತ ಮಾಡಿಸಿಕೊಳ್ಳುವಂತೆ ಹೇಳಿ ಅವಳ ಹೊಟ್ಟೆಗೆ ಒದ್ದನು. ಅವನು ಅವಳೊಂದಿಗಿನ ದೈಹಿಕ ಸಂಬಂಧದ ಅಶ್ಲೀಲ ‘ವಿಡಿಯೋಗಳನ್ನು ಮಾಡಿದನು ಮತ್ತು ಸುಮ್ಮನಿರುವಂತೆ ಬೆದರಿಕೆಯೊಡ್ಡಿದನು. ಇದರಿಂದ ಅವನು ‘ಲವ್ ಜಿಹಾದ್ಗಾಗಿ ಎಷ್ಟು ಕ್ರೂರತೆಯಿಂದ ರಾಕ್ಷಸನಂತೆ ವರ್ತಿಸಿದನು ಎನ್ನುವುದು ಕಂಡು ಬಂದಿತು. ‘ಲವ್ ಜಿಹಾದ್ ತಡೆಯಲು ಕಾನೂನಿನ ಬಗ್ಗೆ ಮುಸಲ್ಮಾನರ ಮನಸ್ಸಿನಲ್ಲಿ ಸರಕಾರದ ಬಗ್ಗೆ ಭಯ ಹುಟ್ಟುವಂತೆ ಹೇಳಿಕೆಯನ್ನು ನೀಡಿರುವ ಝಿಶಾನ್ ಆಯುಬ್‌ರಿಗೆ ಡಾ. ಅಕ್ರಮ್‌ರ ನೀಚ ವರ್ತನೆಯ ಬಗ್ಗೆ ಏನು ಹೇಳಲಿಕ್ಕಿದೆ ? ಹಿಂದೂ ಯುವತಿಯರು ಇದನ್ನೆಲ್ಲ ಸಹಿಸಬೇಕು ಎಂದು ಅವರಿಗೆ ಅನಿಸುತ್ತದೆಯೇ ?
ಅಂತರ್‌ಧರ್ಮೀಯ ವಿವಾಹದ ಅಪಾಯ !
ರಶಿಯಾ ದೇಶವನ್ನು ಸಾಮ್ಯವಾದಿ ಹಾಗೆಯೇ ಅರ್ಥೊಡೆಕ್ಸ್ ಕ್ರಿಶ್ಚಿಯನ್ ದೇಶವೆಂದು ಗುರುತಿಸಲಾಗುತ್ತದೆ. ಹೀಗಿದ್ದರೂ ರಶಿಯಾವು ಕಳೆದ ವಾರ ಮುಸಲ್ಮಾನ ಪುರುಷರ ಮುಸಲ್ಮಾನೇತರ ಯುವತಿಯರನ್ನು ವಿವಾಹವಾಗುವುದನ್ನು ನಿರ್ಬಂಧಿಸಿದೆ. ಅಲ್ಲಿಯ ಮುಸಲ್ಮಾನ ಆಧ್ಯಾತ್ಮಿಕ ವಲಯದ ತಜ್ಞ ಸಲಹಾ ಮಂಡಳಿಯು ಈ ನಿರ್ಣಯವನ್ನು ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಅದು ‘ಅಂತರ್‌ಧರ್ಮೀಯ ವಿವಾದಾಸ್ಪದ ವಿವಾಹಗಳಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಹೇಳಿದೆ. ಇದರಿಂದ ಮಕ್ಕಳ ಪಾಲನೆ ಪೋಷಣೆ ಮಾಡಲು ತೊಂದರೆಯಾಗುತ್ತದೆ. ಮೇಲಿಂದಮೇಲೆ ಭಿನ್ನಾಭಿಪ್ರಾಯದಿಂದ ಈ ವಿವಾಹವು ಕೆಲವು ವರ್ಷಗಳ ಬಳಿಕ ಮುರಿಯುತ್ತದೆ ಇವೇ ಮುಂತಾದ ನಿರೀಕ್ಷಣೆಗಳನ್ನು ಈ ಸಲಹಾ ಮಂಡಳಿಯು ನೋಂದಾಯಿಸಿದೆ. ಭಾರತದಲ್ಲಿ ಅಂತರ್‌ಧರ್ಮೀಯ ವಿವಾಹಕ್ಕೆ ಮಾನ್ಯತೆಯಿದೆ; ಆದರೆ ವಿವಾಹಪೂರ್ವದಲ್ಲಿ ಒಂದು ವೇಳೆ ನೀವು ಧರ್ಮವನ್ನು ಮುಚ್ಚಿಟ್ಟು ಅನಂತರ ಹಿಂದೂ ಯುವತಿಯರನ್ನು ಇಸ್ಲಾಂ ಸ್ವೀಕರಿಸಲು ಬಲವಂತ ಮಾಡುವವರಿದ್ದರೆ ಇಂತಹ ಮೋಸವನ್ನು ತಡೆಯಲು ‘ಲವ್ ಜಿಹಾದ್ನ್ನು ವಿರೋಧಿಸುವ ಕಾನೂನು ಅಗತ್ಯವಾಗಿದೆ !
ಕಾಂಗ್ರೆಸ್ಸಿನ ರಾಜಕಾರಣಿಗಳು ಹಿಂದೂ ಯುವತಿಯರ ಶತ್ರುವೇ ಆಗಿದ್ದಾರೆ !
ರಾಜಸ್ಥಾನದ ಮುಖ್ಯಮಂತ್ರಿ ಗೆಹ್ಲೋಟ್ ‘ಲವ್ ಜಿಹಾದ್ ವಿರೋಧಿ ಕಾನೂನಿನ ವಿಷಯದಲ್ಲಿ ಯಾವ ರೀತಿ ಆಕ್ರಮಣಕಾರಿ ರೀತಿಯಲ್ಲಿ ಮಾತನಾಡಿದ್ದಾರೆಯೋ, ಅಷ್ಟೇ ಆಕ್ರೋಶದಿಂದ ಮತಾಂಧರಿಂದ ಹಿಂದೂ ಯುವತಿಯರಿಗಾಗುತ್ತಿರುವ ಮೋಸದ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಮತಾಂಧರು ಹಿಂದೂ ಯುವತಿಯರನ್ನು ಪ್ರೇಮದ ಬಲೆಯಲ್ಲಿ ಸೆಳೆದು ಬಳಿಕ ಅವರನ್ನು ದಲ್ಲಾಳಿಗಳ ಮೂಲಕ ವೇಶ್ಯಾವಾಟಿಕೆ ದಂಧೆಗೆ ದೂಡಿರುವ ಉದಾಹರಣೆಗಳೂ ಇವೆ. ಈ ವಿಷಯವನ್ನು ಕಾಂಗ್ರೆಸ್ಸಿಗರು ಸಾಧಾರಣ ಮೋಸದ ಅಪರಾಧವೆಂದು ತಿಳಿಯುತ್ತಾರೆ; ಆದರೆ ಇಂತಹ ಕೆಲವು ಪ್ರಕರಣಗಳಲ್ಲಿ ಹಿಂದೂ ಯುವತಿಯರಿಗೆ ಮೋಸವನ್ನು ಮಾಡುವಾಗ ಮತಾಂಧರು ತಮ್ಮ ಗುರುತನ್ನು ಮುಚ್ಚಿಟ್ಟು ತಾನು ಹಿಂದೂವಾಗಿದ್ದಾನೆಂದು ನಂಬಿಸುವುದು ಅವರ ಅತಿ ದೊಡ್ಡ ಅಪರಾಧವಾಗಿದೆ. ಭಾರತದ ಹಳ್ಳಿಗಳಲ್ಲಿರುವ ಬಹುತೇಕ ಹಿಂದೂ ಯುವತಿಯರು ಹಿಂದೂ ಯುವಕನನ್ನು ಪ್ರೀತಿಸಲು ಇಚ್ಛಿಸುತ್ತಾರೆ; ಅಂದರೆ ಈ ಯುವತಿಯರು ಯುವಕರ ಧರ್ಮವನ್ನು ನೋಡಿಯೇ ಅವರನ್ನು ಪ್ರೀತಿಸುತ್ತಾರೆ ಮತ್ತು ಇದೇ ಕಾರಣದಿಂದ ಮತಾಂಧನು ತಾನು ಹಿಂದೂ ಆಗಿದ್ದಾನೆಂದು ನಾಟಕವಾಡಿ ಅವರನ್ನು ಪ್ರೇಮದ ಬಲೆಯಲ್ಲಿ ಸೆಳೆಯುತ್ತಾರೆ. ಝಿಶಾನ್ ಅಯುಬ್‌ನಂತಹವರಿಗೆ ಅಥವಾ ಕಾಂಗ್ರೆಸ್ಸಿಗರಿಗೆ ಧರ್ಮವನ್ನು ನೋಡಿ ಪ್ರೀತಿಸಬಾರದು ಎಂದು ಅನಿಸುತ್ತಿದ್ದರೆ; ಹಿಂದೂ ಯುವತಿಯರಿಗೆ ಧರ್ಮವನ್ನು ನೋಡದೇ ಪ್ರೀತಿಸು ಎಂದು ಹೇಳಲು ಅವರಿಗೆ ಯಾವುದೇ ಅಧಿಕಾರವಿಲ್ಲ.
ಸಂವಿಧಾನದಲ್ಲಿ ಆವಶ್ಯಕವಿರುವಬದಲಾವಣೆಯನ್ನು ಮಾಡಿರಿ !
ಗೆಹ್ಲೋಟ್‌ರು ಕಾನೂನು ಸಂವಿಧಾನವಿರೋಧಿಯಾಗಿದೆ ಎಂದು ಹೇಳುವಾಗ ‘ಈ ಕಾನೂನನ್ನು ನ್ಯಾಯಾಲಯವು ತಿರಸ್ಕರಿಸಲಿದೆ, ಎಂದು ಹೇಳಿದ್ದಾರೆ. ಅವರ ಈ ಸೂಚನೆಯ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದಲ್ಲಿ ಅವಶ್ಯಕವಿರುವ ಬದಲಾವಣೆಯನ್ನು ಮಾಡುವ ವಿಚಾರವನ್ನು ಕೇಂದ್ರ ಸರಕಾರವು ಮಾಡಬೇಕಾಗುವುದು. ಕಾಂಗ್ರೆಸ್ ಇದುವರೆಗೆ ಅನೇಕ ಸಂವಿಧಾನವಿರೋಧಿ ಕೃತ್ಯಗಳನ್ನು ಮಾಡಿದೆ. ಇದಕ್ಕಾಗಿ ಅದು ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಸಹ ಹೇರಿತ್ತು. ಆದುದರಿಂದ ಹಿಂದೂಗಳ ಹಿತಕ್ಕಾಗಿ ಕಾನೂನು ರಚಿಸುವಾಗ ಮೋದಿ ಸರಕಾರದ ಮೇಲೆ ‘ಅವರು ಸರ್ವಾಧಿಕಾರಿಯಾಗಿದ್ದಾರೆ, ‘ಸಂವಿಧಾನ ಮತ್ತು ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ಅನೇಕ ಆರೋಪಗಳಾಗಬಹುದು. ಇದರೊಂದಿಗೆ ಸರಕಾರದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಒತ್ತಡವೂ ಬರಬಹುದು; ಆದರೆ ಮೋದಿ ಸರಕಾರವು ಈ ಯಾವುದೇ ವಿಷಯಗಳಿಗೆ ಜಗ್ಗದೇ ಹಿಂದೂ ಯುವತಿಯರ ಮಾನವನ್ನು ರಕ್ಷಿಸುವ, ಅವರು ದಲ್ಲಾಳಿಗಳಿಗೆ ಮಾರಾಟವಾಗುವುದನ್ನು ತಡೆಯುವ ಮತ್ತು ಅವರ ಪ್ರಾಣವನ್ನು ರಕ್ಷಿಸುವ ಕಾನೂನು ಜಾರಿಗೊಳಿಸಲು ಸಂವಿಧಾನದಲ್ಲಿ ಆವಶ್ಯಕವಿರುವ ಬದಲಾವಣೆಯನ್ನು ಮಾಡಬೇಕು ಎನ್ನುವುದೇ ಸಮಸ್ತ ಹಿಂದೂಗಳ ಅಪೇಕ್ಷೆಯಾಗಿದೆ.