ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !

ವಿದ್ಯಾರ್ಥಿಗಳಿಗೆ ವಿದ್ಯಾಲಯಗಳಲ್ಲಿ ಕಲಿಸಲಾಗುವ ಪಠ್ಯಕ್ರಮವು ‘ಆಚಾರ,ವಿಚಾರ ಮತ್ತು ಸಂಸ್ಕಾರ’ ಈ ಮೂರು ಅಂಶಗಳ ಮೇಲಾಧಾರಿತವಾಗಿರಬೇಕು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಸಾತ್ತ್ವಿಕ ವಿಚಾರಗಳು ದೇವರ ಅನುಸಂಧಾನದಲ್ಲಿಯೇ ಮೂಡುವುದರಿಂದ ‘ಸಾಧನೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು !

‘ವಿದ್ಯಾರ್ಥಿಗಳಿಗೆ ವಿದ್ಯಾಲಯಗಳಲ್ಲಿ ಕಲಿಸಲಾಗುವ ಪಠ್ಯಕ್ರಮವು ‘ಆಚಾರ, ವಿಚಾರ ಮತ್ತು ಸಂಸ್ಕಾರ’ ಈ ಮೂರು ಅಂಶಗಳ ಮೇಲಾಧಾರಿತವಾಗಿರಬೇಕು. ಇದರಿಂದ ‘ಯೋಗ್ಯ-ಅಯೋಗ್ಯ’ದ ಅಧ್ಯಯನವಾಗಿ ‘ಯಾವ ಯೋಗ್ಯ ಕರ್ಮಗಳನ್ನು ಮಾಡಬೇಕು ?’, ಎಂಬುದು ವಿದ್ಯಾರ್ಥಿಗಳಿಗೆ ತಿಳಿಯುತ್ತದೆ. ಯಾರಿಗೆ ‘ಕರ್ಮ ಎಂದರೇನು ? ಮತ್ತು ಅದರ ಮಹತ್ವವೇನು ?’, ಎಂಬುದೇ ಸರಿಯಾಗಿ ಗೊತ್ತಿಲ್ಲವೋ, ಅಂತವರಿಗೆ ‘ಜೀವನ ಸಾಗಿಸುವುದು ಹೇಗೆ ಎಂಬುದು ಗೊತ್ತಾಗುತ್ತದೆಯೇ ? ಆದುದರಿಂದ ವಿದ್ಯಾರ್ಥಿಗಳಿಗೆ ಮೊದಲು ‘ನಮ್ಮ ಆಚಾರಗಳು ಹೇಗೆ ಸಾತ್ತ್ವಿಕವಾಗಿರಬೇಕು ?’, ಎಂಬುದನ್ನು ಕಲಿಸಬೇಕು. ಪ್ರತಿಯೊಂದು ಕೃತಿ ಮತ್ತು ಕರ್ಮ ಸಾತ್ತ್ವಿಕವಾಗಲು ಸಾತ್ತ್ವಿಕ ವಿಚಾರಗಳ ಆವಶ್ಯಕತೆಯೂ ಇರುತ್ತದೆ. ಸಾತ್ತ್ವಿಕ ವಿಚಾರಗಳು ದೇವರ ಅನುಸಂಧಾನದಲ್ಲಿರುವಾಗಲೇ ಉತ್ಪನ್ನವಾಗುತ್ತವೆ. ಆದುದರಿಂದ ‘ಸಾಧನೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನೂ ವಿದ್ಯಾರ್ಥಿಗಳಿಗೆ ಕಲಿಸಬೇಕು.

೨. ಕ್ರಮೇಣ ಮತ್ತು ಹಂತಹಂತವಾಗಿ ನೀಡಿದ ಆಧ್ಯಾತ್ಮಿಕ ಶಿಕ್ಷಣದಿಂದ ವಿದ್ಯಾರ್ಥಿಯು ಸಾಧಕನೆಂದು ತಯಾರಾದಾಗ ಅವನ ಫಲನಿಷ್ಪತ್ತಿ ಹೆಚ್ಚಾಗುವುದು ಮತ್ತು ಅದರಿಂದ ಚಿತ್ತಶುದ್ಧಿಯಾಗಿ ಅವನು ‘ಆದರ್ಶ ಸಾಧಕ ವಿದ್ಯಾರ್ಥಿ’ಯಾಗುವನು

ಮೊದಲನೇಯದರಿಂದ ಎರಡನೇಯ, ಎರಡನೇಯದರಿಂದ,  ಮೂರನೇಯ ಹೀಗೆ ಅಧ್ಯಾತ್ಮದಲ್ಲಿ ತರಗತಿಗಳನ್ನು ಹೆಚ್ಚಿಸುತ್ತಾ ಹೋಗಬೇಕು. ಒಮ್ಮೆಲೇ ಮೊದಲನೇಯ ತರಗತಿಯಲ್ಲಿರುವ ಹುಡುಗನಿಗೆ ನಾಮಜಪ ಮಾಡಲು ಹೇಳಿದರೆ, ಹೇಗಾಗುವುದು ? ಇದಕ್ಕಾಗಿ ಮೊದಲು ಅವನಿಗೆ ‘ತನ್ನ ಚಪ್ಪಲಿಗಳನ್ನು ಒಂದು ಸಾಲಿನಲ್ಲಿ ವ್ಯವಸ್ಥಿತವಾಗಿ ಹೇಗೆ ಜೋಡಿಸಿಡಬೇಕು ?’, ಇಂತಹ ಸಾಮಾನ್ಯ ವಿಷಯಗಳಿಂದ ಕಲಿಸುವುದು ಆವಶ್ಯಕವಾಗಿದೆ. ‘ದಿನ ನಿತ್ಯದ ಚಿಕ್ಕ ಚಿಕ್ಕ ಕೃತಿಗಳನ್ನು ಉತ್ತಮ ರೀತಿಯಲ್ಲಿ ಹೇಗೆ ಮಾಡಬೇಕು ?’, ಎಂಬುದನ್ನೂ ಅವನಿಗೆ ಕಲಿಸಬೇಕಾಗುವುದು. ನಂತರ ನಿಧಾನವಾಗಿ ಅವನಿಗೆ ‘ಈ ಕೃತಿಗಳಿಗೆ ನಾಮಜಪವನ್ನು ಹೇಗೆ ಜೋಡಿಸ ಬೇಕು ?’, ಎಂಬುದರ ತರಬೇತಿಯನ್ನು ನೀಡಬೇಕಾಗುವುದು. ಅವನ ಸಾಧನೆಯ ಅಭ್ಯಾಸವನ್ನೂ ಮಾಡಿಸಿಕೊಳ್ಳಬೇಕಾಗುವುದು. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಕಲಿಕೆಯಿಂದಲೇ ನಂತರ ಅವನ ಮೇಲೆ ಯೋಗ್ಯ ಸಂಸ್ಕಾರಗಳಾಗಲು ಸಹಾಯವಾಗುವುದು. ಯೋಗ್ಯ ಆಚರಣೆಯನ್ನು ಮಾಡಿದರೆ, ಅವನ ಮನಸ್ಸು ಮತ್ತು ಬುದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮವಾಗಿ ನಮ್ಮ ವಿಚಾರಗಳೂ ಉತ್ತಮ ರೀತಿಯಲ್ಲಿ ಕಾರ್ಯವನ್ನು ಮಾಡತೊಡಗುವವು. ಯಾರ ಆಚಾರ ಮತ್ತು ವಿಚಾರಗಳು ಸಾತ್ತ್ವಿಕವಾಗಿರುತ್ತವೆಯೋ, ಅವರ ಮೇಲೆ ಸಾಧನೆಯ ಸಂಸ್ಕಾರವನ್ನು ಬಿಂಬಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ರೀತಿ ಕ್ರಮೇಣ ಮತ್ತು ಹಂತಹಂತವಾಗಿ ನೀಡಿದ ಆಧ್ಯಾತ್ಮಿಕ ಶಿಕ್ಷಣದಿಂದ ವಿದ್ಯಾರ್ಥಿಯು ಸಾಧಕನೆಂದು ತಯಾರಾದಾಗ ಫಲನಿಷ್ಪತ್ತಿಯು ಹೆಚ್ಚಿರುತ್ತದೆ. ಒಂದು ಬಾರಿ ಅಂತರ್ಮನದಲ್ಲಿ ಸಾಧನೆಯ ಸಂಸ್ಕಾರವಾಯಿತೆಂದರೆ, ಚಿತ್ತಶುದ್ಧಿಯು ತಾನಾಗಿಯೇ ಪ್ರಾರಂಭವಾಗುತ್ತದೆ ಮತ್ತು ಇದರಿಂದಲೇ ಓರ್ವ ‘ಆದರ್ಶ ಸಾಧಕ ವಿದ್ಯಾರ್ಥಿ’ಯು ತಯಾರಾಗುತ್ತಾನೆ.

೩. ತಾತ್ಪರ್ಯ

ಜಡತ್ವದ ಶಿಕ್ಷಣವನ್ನು ನೀಡುವ ಮತ್ತು ಮಾಯೆಯ ವ್ಯವಹಾರಗಳಲ್ಲಿ ಸಿಲುಕಿಸುವ ಪಠ್ಯಕ್ರಮ ಇರಬಾರದು, ‘ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮವನ್ನು ಮೂಡಿಸುವ, ಸೇವಾಭಾವವನ್ನು ಕಲಿಸುವ ಮತ್ತು ಈಶ್ವರಪ್ರಾಪ್ತಿಯೇ ಮನುಷ್ಯ ಜನ್ಮದ ಧ್ಯೇಯವಾಗಿದೆ’, ಎಂಬ ಸಂಸ್ಕಾರವನ್ನು ದೃಢಪಡಿಸುವ ಪಠ್ಯಕ್ರಮವೇ ಇರಬೇಕು. ಇಂತಹ ಪಠ್ಯಕ್ರಮವು ಒಂದು ಜಾಗೃತ ಮತ್ತು ಕೃತಿಶೀಲ ಸಮಾಜವನ್ನು ನಿರ್ಮಿಸು ವುದು ಮತ್ತು ‘ಸಾತ್ತ್ವಿಕ ಆದರ್ಶ ವಿದ್ಯಾರ್ಥಿ’ಗಳನ್ನು ತಯಾರು ಮಾಡುವುದು.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೨.೪.೨೦೨೦)