‘ಚೆನ್ನೈಯ ಪೂ. ಡಾ. ಓಂ ಉಲಗನಾಥನ ಇವರು ೩೧ ಅಕ್ಟೋಬರ್ ೨೦೨೦ ರಂದು ಸಪ್ತರ್ಷಿ ಜೀವನಾಡಿಯ ವಾಚನ ಮಾಡಿದ್ದರು. ಈ ಸಮಯದಲ್ಲಿ ಮಹರ್ಷಿಗಳು ರಾಮನಾಥಿಯ ಸನಾತನದ ಆಶ್ರಮದಲ್ಲಿ ೧೩ ರಿಂದ ೧೬ ನವೆಂಬರ್ ಈ ಅವಧಿಯಲ್ಲಿ ದೀಪೋತ್ಸವ ಆಚರಿಸುವಂತೆ ಆಜ್ಞೆ ಮಾಡಿದರು. ಮಹರ್ಷಿಗಳ ಆಜ್ಞೆಗನುಸಾರ ನವೆಂಬರ್ ೧೩ ರಿಂದ ಈ ದೀಪೋತ್ಸವವನ್ನು ಆಚರಿಸಲಾಯಿತು.
ಈ ಜೀವನಾಡಿಯಲ್ಲಿ ಮಹರ್ಷಿಗಳು ಹೇಳುತ್ತಾರೆ, ‘ಸನಾತನ ಸಂಸ್ಥೆಯ ೩ ಗುರುಗಳಾದ ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಈ ಮೂವರಿಗೂ ನಾವು ಆಶೀರ್ವಾದ ನೀಡುತ್ತಿದ್ದೇವೆ. ನಾವಿಂದು ನಮ್ಮ ಸಾಧಕರಿಗೆ ಹೇಳಬಯಸುವುದೇನೆಂದರೆ, ಶ್ರೀಮಹಾವಿಷ್ಣು, ಶ್ರೀಮಹಾಲಕ್ಷ್ಮೀ ಹಾಗೂ ಶ್ರೀಮಹಾಸರಸ್ವತಿ ಇವರ ಚರಣಗಳಲ್ಲಿ ಶಿರಬಾಗಿದರೆ ಯಾವ ಫಲವು ಸಿಗುವುದೋ, ಅದೇ ಫಲವು ಸಾಧಕರಿಗೆ ಸನಾತನದ ೩ ಗುರುಗಳಿಗೆ ನಮಸ್ಕಾರ ಮಾಡಿದಾಗ ಸಿಗಲಿದೆ.
೧. ೨೦೨೦ ನೇ ಇಸ್ವಿಯ ದೀಪಾವಳಿಯು ಸನಾತನ ಸಂಸ್ಥೆಗಾಗಿ ಆನಂದಮಯ ದೀಪಾವಳಿಯಾಗಿದೆ. ಈ ದಿನ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ದೀಪೋತ್ಸವವನ್ನು ಆಚರಿಸಬೇಕು. ರಾಮನಾಥಿ ಆಶ್ರಮದಲ್ಲಿ ಎಲ್ಲೆಲ್ಲಿ ಪ್ರವೇಶದ್ವಾರ ಇದೆಯೋ, ಆಯಾ ಸ್ಥಳಗಳಲ್ಲಿ ೩ ಗುರುಗಳಿಗಾಗಿ ಪ್ರತಿಯೊಬ್ಬರಿಗಾಗಿ ೭ ಎಣ್ಣೆಯ ದೀಪವನ್ನು ಹಚ್ಚಬೇಕು. ಹೀಗೆ ೨೧ ದೀಪಗಳಾಗಲಿವೆ.
೨. ಮೂರು ಗುರುಗಳಿಗಾಗಿ ರಾಮನಾಥಿ ಆಶ್ರಮದಲ್ಲಿ ಹಾಗೂ ಇತರ ಆಶ್ರಮಗಳಲ್ಲಿ ವಿಶೇಷ ಆಕಾರದ ದೀಪವನ್ನು ಹಚ್ಚಬೇಕಿದೆ. ಆ ದೀಪಗಳಿಂದ ಮುಂದೆ ಹೇಳಿದಂತೆ ರಚನೆ ಮಾಡಬೇಕು –
೨ ಅ. ಪರಾತ್ಪರ ಗುರು ಡಾ. ಆಠವಲೆಯವರ ಶ್ರೇಯೋಭಿವೃದ್ಧಿಗಾಗಿ ‘ಓಂನ ಆಕಾರದ ದೀಪಗಳನ್ನು ಹಚ್ಚಬೇಕು.
೨ ಆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅಭಿವೃದ್ಧಿಗಾಗಿ ‘ಸುದರ್ಶನ ಯಂತ್ರದ ಆಕಾರದ ದೀಪಗಳನ್ನು ಹಚ್ಚಬೇಕು.
೨ ಇ. ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳ ಇವರ ಅಭಿವೃದ್ಧಿಗಾಗಿ ‘ಶ್ರೀಯಂತ್ರದ ಆಕಾರದ ದೀಪಗಳನ್ನು ಹಚ್ಚಬೇಕು. ‘ಶ್ರೀಯಂತ್ರದಲ್ಲಿರುವ ೫೧ ಚುಕ್ಕಿಗಳು ಇದು ದೇವಿಯ ೫೧ ಶಕ್ತಿಪೀಠಕ್ಕೆ ಸಂಬಂಧಪಟ್ಟಿದೆ.
ದೀಪಾವಳಿಯ ನಿಮಿತ್ತ ಆಗಲಿರುವ ‘ದೀಪೋತ್ಸವವು ಸನಾತನ ಸಂಸ್ಥೆಗಾಗಿ ವಿಜಯದ ದೀಪೋತ್ಸವವಾಗಿದೆ. ಇದನ್ನು ನೋಡಿ ಸಾಧಕರಿಗೂ ತುಂಬಾ ಆನಂದವಾಗಲಿದೆ.
– ಶ್ರೀ. ವಿನಾಯಕ ಶಾನಬಾಗ, ಚೆನ್ನೈ. (೧೧.೧೧.೨೦೨೦)