ಸಕ್ಕರೆ ಹಾಕಿ ಮಾಡಿದ ಪಾಯಸ ಮತ್ತು ಬೆಲ್ಲ ಹಾಕಿ ಮಾಡಿದ ಪಾಯಸಕ್ಕೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಸಂಶೋಧನೆ !

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ನಡೆಸಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡುತ್ತಿರುವ ಶ್ರೀ. ಆಶಿಷ ಸಾವಂತ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಅಡುಗೆಯ ಆಚಾರ, ಅಡುಗೆಯ ಘಟಕಗಳು, ಅಡುಗೆ ಮಾಡುವ ಪದ್ಧತಿ ಇತ್ಯಾದಿಗಳಿಗೆ ಸಂಬಂಧಿಸಿ ಅನೇಕ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಈ ಸಂಶೋಧನೆಯ ನಿಷ್ಕರ್ಷದಿಂದ ಹಿಂದೂ ಧರ್ಮದಲ್ಲಿ ಅಡುಗೆಗೆ ಸಂಬಂಧಿಸಿದ ಆಚಾರಗಳ ವಿಷಯದಲ್ಲಿ ಹಾಕಿಕೊಟ್ಟ ನಿಯಮಗಳು ಹಾಗೂ ಹೇಳಿರುವ ಅಂಶಗಳು ಎಷ್ಟು ಯೋಗ್ಯವಾಗಿವೆ ಹಾಗೂ ಇಂದಿನ ಆಧುನಿಕ ಕಾಲದಲ್ಲಿಯೂ ಅವುಗಳು ಎಷ್ಟು ಅಕ್ಷರಶಃ ಅನ್ವಯ ವಾಗುತ್ತವೆ, ಎಂಬುದು ಅರಿವಾಗುತ್ತದೆ. ಅಂತಹ ಸಂಶೋಧನೆಯೊಂದನ್ನು ಇಲ್ಲಿ ಕೊಡುತ್ತಿದ್ದೇವೆ.

ಹಿಂದಿನ ಕಾಲದಲ್ಲಿ ವಿವಿಧ ಆಹಾರಪದಾರ್ಥಗಳನ್ನು ತಯಾರಿಸುವಾಗ ಬೆಲ್ಲವನ್ನು ಉಪಯೋಗಿಸಲಾಗುತ್ತಿತ್ತು. ಇತ್ತೀಚೆಗೆ ಬೆಲ್ಲದ ಸ್ಥಾನದಲ್ಲಿ ಸಕ್ಕರೆ ಬಂದಿದೆ. ಬೆಲ್ಲ ಮತ್ತು ಸಕ್ಕರೆ ಇವೆರಡನ್ನೂ ಕಬ್ಬಿನಿಂದ ತಯಾರಿಸಲಾಗುತ್ತದೆ; ಆದರೆ ಅದನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ವ್ಯತ್ಯಾಸವಿದೆ. ‘ಯಾವುದೇ ಆಹಾರಪದಾರ್ಥವನ್ನು ತಯಾರಿಸುವಾಗ ಅದರಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಮಾಡಿದಾಗ ಆ ಪದಾರ್ಥವನ್ನು ಸೇವಿಸುವವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಏನು ಪರಿಣಾಮವಾಗುತ್ತದೆ?, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಯ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಯ ವಿವೇಚನೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಒಬ್ಬ ಸಾಧಕ, ಆಧ್ಯಾತ್ಮಿಕ ತೊಂದರೆ ಇಲ್ಲದ ಒಬ್ಬ ಸಾಧಕ ಮತ್ತು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಒಬ್ಬ ಸಾಧಕ ಹೀಗೆ ಒಟ್ಟು ೩ ಸಾಧಕರು ಭಾಗವಹಿಸಿದ್ದರು. ಪರೀಕ್ಷಣೆಯಲ್ಲಿ ಮೊದಲ ದಿನ ಮೂವರೂ ಸಕ್ಕರೆ ಹಾಕಿ ತಯಾರಿಸಿದ ಗೋದಿಯ ಪಾಯಸವನ್ನು ಸೇವಿಸಿದರು ಮತ್ತು ಎರಡನೆಯ ದಿನ ಅವರು ಬೆಲ್ಲ ಹಾಕಿ ತಯಾರಿಸಿದ ಪಾಯಸವನ್ನು ಸೇವಿಸಿದರು ಅವರು ಪಾಯಸವನ್ನು ಸೇವಿಸುವ ಮೊದಲು ಮತ್ತು ಸೇವಿಸಿದ ೨೦ ನಿಮಿಷಗಳ ನಂತರ ‘ಯು.ಎ.ಎಸ್. ಈ ಉಪಕರಣದ ಮೂಲಕ ಅವರ ನಿರೀಕ್ಷಣೆ ಮಾಡಲಾಯಿತು. ಅದೇ ರೀತಿ ಎರಡೂ ರೀತಿಯಲ್ಲಿ ತಯಾರಿಸಿದ ಪಾಯಸವನ್ನು ಕೂಡ ಈ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಎಲ್ಲ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನ ಮಾಡಿದ ನಂತರ ಎರಡೂ ರೀತಿಯ ಪಾಯಸವನ್ನು ಸೇವನೆ ಮಾಡಿದಾಗ ಸಾಧಕರ ಮೇಲಾದ ಪರಿಣಾಮವನ್ನು ಮುಂದೆ ನೀಡಲಾಗಿದೆ.

೧ ಅ. ನಕಾರಾತ್ಮಕ ಹಾಗೂ ಸಕಾರಾತ್ಮಕ ಇಂಧನಕ್ಕೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ – ಸಕ್ಕರೆ ಹಾಕಿದ ಪಾಯಸವನ್ನು ಸೇವನೆ ಮಾಡಿದ ನಂತರ ಸಾಧಕರಲ್ಲಿ ನಕಾರಾತ್ಮಕ ಪರಿಣಾಮವಾಗುವುದು ಹಾಗೂ ಬೆಲ್ಲ ಹಾಕಿ ತಯಾರಿಸಿದ ಪಾಯಸವನ್ನು ಸೇವಿಸಿದ ನಂತರ ಅವರ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು :

ಇದು ಮುಂದೆ ನೀಡಿರುವ ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.

ಈ ಮೇಲಿನ ಕೋಷ್ಟಕದಿಂದ ಮುಂದಿನ ವಿಷಯಗಳು ಅರಿವಾದವು.

೧. ಸಕ್ಕರೆ ಹಾಕಿದ ಪಾಯಸದಲ್ಲಿ ನಕಾರಾತ್ಮಕ ಶಕ್ತಿ ಕಂಡು ಬಂದಿತು.

೨. ಸಾಧಕರು ಸಕ್ಕರೆ ಹಾಕಿದ ಪಾಯಸವನ್ನು ಸೇವಿಸಿದಾಗ ಅವರಲ್ಲಿ ನಕಾರಾತ್ಮಕ ಶಕ್ತಿಯ ಪ್ರಮಾಣ ಹೆಚ್ಚಾಯಿತು ಹಾಗೂ ಅವರಲ್ಲಿ ಸಕಾರಾತ್ಮಕ ಶಕ್ತಿ ಕಡಿಮೆಯಾಯಿತು.

೩. ಸಾಧಕರು ಬೆಲ್ಲ ಹಾಕಿದ ಪಾಯಸವನ್ನು ಸೇವಿಸಿದಾಗ ಅವರಲ್ಲಿ ನಕಾರಾತ್ಮಕ ಶಕ್ತಿಯ ಪ್ರಮಾಣ ತುಂಬಾ ಕಡಿಮೆಯಾಯಿತು ಅಥವಾ ಶೂನ್ಯವಾಯಿತು ಹಾಗೂ ಅವರಲ್ಲಿ ಸಕಾರಾತ್ಮಕ ಶಕ್ತಿಯ ಪ್ರಮಾಣ ಹೆಚ್ಚಾಯಿತು.

೨. ನಿಷ್ಕರ್ಷ

ಸಕ್ಕರೆ ಹಾಕಿ ತಯಾರಿಸಿದ ಪಾಯಸವನ್ನು ಸೇವಿಸುವುದರಿಂದ ಎಲ್ಲ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮವಾಯಿತು ಹಾಗೂ ಬೆಲ್ಲ ಹಾಕಿ ತಯಾರಿಸಿದ ಪಾಯಸವನ್ನು ಸೇವಿಸುವುದರಿಂದ ಅವರ ಮೇಲೆ ತುಂಬಾ ಸಕಾರಾತ್ಮಕ ಪರಿಣಾಮವಾಯಿತು.

೩. ಪರೀಕ್ಷಣೆಯಲ್ಲಿ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಸಕ್ಕರೆ ಹಾಕಿ ತಯಾರಿಸಿದ ಪಾಯಸವನ್ನು ಸೇವಿಸುವುದರಿಂದ ಸಾಧಕರಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗಿ ಅವರಲ್ಲಿನ ಸಕಾರಾತ್ಮಕ ಶಕ್ತಿಯು ಕಡಿಮೆಯಾಗುವುದರ ಕಾರಣ : ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನಿಂದ ಸಕ್ಕರೆಯನ್ನು ತಯಾರಿಸುವಾಗ ಕಬ್ಬಿನ ರಸವನ್ನು ಅತೀ ಹೆಚ್ಚು ತಾಪಮಾನದಲ್ಲಿ ಕುದಿಸುವುದರಿಂದ ಅದರಲ್ಲಿ ಆರೋಗ್ಯಕ್ಕೆ ಉಪಯುಕ್ತವಾಗಿರುವ ಪೋಷಕಾಂಶಗಳು (ಘಟಕಗಳು) ನಾಶವಾಗುತ್ತವೆ. ಸಕ್ಕರೆಯು ಬೆಳ್ಳಗೆ ಶುಭ್ರವಾಗಿ ಕಾಣಿಸಲು ಅದರ ಮೇಲೆ ರಾಸಾಯನಿಕ ಪ್ರಕ್ರಿಯೆ ಮಾಡಲಾಗುತ್ತದೆ. ಕಾರ್ಖಾನೆಯಲ್ಲಿ ವಿದ್ಯುತ್ ಸಂಚಾಲಿತ ಆಧುನಿಕ ಯಂತ್ರಗಳನ್ನು ಉಪಯೋಗಿಸಿ ಸಕ್ಕರೆಯನ್ನು ಉತ್ಪಾದಿಸಲಾಗುತ್ತದೆ. ಆಧುನಿಕ ಯಂತ್ರಗಳಿಂದಾಗಿ ಅಲ್ಲಿನ ವಾಯುಮಂಡಲವು ತೊಂದರೆದಾಯಕ ಸ್ಪಂದನಗಳಿಂದ ತುಂಬಿರುತ್ತದೆ.

ಒಟ್ಟಾರೆ ಸಕ್ಕರೆಯ ತಯಾರಿಕಾ-ಪ್ರಕ್ರಿಯೆ ಅಸಾತ್ತ್ವಿಕವಾಗಿರುವುದರಿಂದ ಸಕ್ಕರೆಯ ಮೇಲೆ ಅದರ ಪರಿಣಾಮವಾಗಿ ಅದು ತೊಂದರೆದಾಯಕ ಸ್ಪಂದನಗಳಿಂದ ಸಂಗ್ರಹವಾಗಬಹುದು. ಸಕ್ಕರೆ ಹಾಕಿ ತಯಾರಿಸಿದ ಪದಾರ್ಥದಲ್ಲಿ ಈ ತೊಂದರೆದಾಯಕ ಸ್ಪಂದನಗಳು ಬರುವುದರಿಂದ ಈ ಪದಾರ್ಥಗಳು ತೊಂದರೆದಾಯಕ ಸ್ಪಂದನಗಳಿಂದ ಕೂಡಿರುತ್ತದೆ. ಆದುದರಿಂದ ಅದನ್ನು ಸೇವಿಸುವವರಿಗೆ ಅನಿಷ್ಟ ಪರಿಣಾಮವಾಗಬಹುದು. ಸಕ್ಕರೆ ಹಾಕಿ ತಯಾರಿಸಿದ ಪಾಯಸದಲ್ಲಿ ನಕಾರಾತ್ಮಕ ಇಂಧನವು ಕಂಡು ಬರುವುದು ಹಾಗೂ ಆ ಪಾಯಸವನ್ನು ಸೇವಿಸಿದಾಗ ಪರೀಕ್ಷಣೆಯಲ್ಲಿದ್ದ ಸಾಧಕರ ಮೇಲಾದ ನಕಾರಾತ್ಮಕ ಪರಿಣಾಮವು ಅದರ ಪ್ರತೀಕವಾಗಿದೆ.

೩ ಆ. ಬೆಲ್ಲ ಹಾಕಿ ತಯಾರಿಸಿದ ಪಾಯಸವನ್ನು ಸೇವಿಸಿದಾಗ ಸಾಧಕರಲ್ಲಿ ನಕಾರಾತ್ಮಕ ಇಂಧನವು ತುಂಬಾ ಕಡಿಮೆಯಾಗಿ ಅಥವಾ ಇಲ್ಲವಾಗಿ ಅವರಲ್ಲಿ ಸಕಾರಾತ್ಮಕ ಇಂಧನ ಹೆಚ್ಚಾಗಲು ಕಾರಣ : ಕಬ್ಬಿನಿಂದ ಬೆಲ್ಲವನ್ನು ತಯಾರಿಸುವಾಗ ಅದನ್ನು ನೈಸರ್ಗಿಕ ಪದ್ಧತಿಯಿಂದ ಅಗ್ನಿ ಪ್ರಕ್ರಿಯೆ ಮಾಡಿ ತಯಾರಿಸಲಾಗುತ್ತದೆ. ಅದರಲ್ಲಿ ಕಟ್ಟಿಗೆಗಳನ್ನು ಉರಿಸಿ ಯೋಗ್ಯವಾದ ತಾಪಮಾನದಲ್ಲಿ ಕಬ್ಬಿನ ರಸವನ್ನು ಕುದಿಸಿ ಬೆಲ್ಲವನ್ನು ತಯಾರಿಸಲಾಗುತ್ತದೆ. ಇದರಿಂದ ಬೆಲ್ಲದಲ್ಲಿರುವ ಆರೋಗ್ಯಕ್ಕೆ ಉಪಯುಕ್ತವಾದ ಪೋಷಕಾಂಶಗಳು ನಾಶವಾಗುವುದಿಲ್ಲ. ಅದೇ ರೀತಿ ಅಗ್ನಿಯ ಪ್ರಕ್ರಿಯೆಯಾಗುವುದರಿಂದ ಬೆಲ್ಲದಲ್ಲಿ ಸಾತ್ತ್ವಿಕ ಸ್ಪಂದನಗಳು ಉತ್ಪನ್ನವಾಗುತ್ತದೆ. ಬೆಲ್ಲವನ್ನು ಹಾಕಿ ಪದಾರ್ಥಗಳನ್ನು ತಯಾರಿಸುವಾಗ ಅದರಲ್ಲಿ ಬೆಲ್ಲದಲ್ಲಿನ ಸಾತ್ತ್ವಿಕ ಸ್ಪಂದನಗಳ ಪರಿಣಾಮವಾಗಿ ಪದಾರ್ಥದಲ್ಲಿ ಸಕಾರಾತ್ಮಕ ಸ್ಪಂದನವು ಉತ್ಪನ್ನವಾಗುತ್ತದೆ. ಆದ್ದರಿಂದ ಆ ಪದಾರ್ಥವನ್ನು ಸೇವಿಸುವವರ ಮನಸ್ಸಿಗೆ ತೃಪ್ತಿಯಾಗಿ ಅವರಿಗೆ ಸಕಾರಾತ್ಮಕ ಸ್ಪಂದನದ ಲಾಭವಾಗುತ್ತದೆ. ಬೆಲ್ಲ ಹಾಕಿದ ಪಾಯಸವನ್ನು ಸೇವಿಸಿದ ನಂತರ ಪರೀಕ್ಷಣೆಯಲ್ಲಿ ಸಾಧಕರಲ್ಲಾದ ಸಕಾರಾತ್ಮಕ ಪರಿಣಾಮವು ಅದರ ಅದರ ಪ್ರತೀಕವಾಗಿದೆ.

೩ ಇ. ಸಕ್ಕರೆ ಹಾಕಿ ತಯಾರಿಸಿದ ಪಾಯಸ ಮತ್ತು ಬೆಲ್ಲ ಹಾಕಿ ತಯಾರಿಸಿದ ಪಾಯಸವನ್ನು ಸೇವಿಸುವ ಮೊದಲು ಮತ್ತು ಸೇವಿಸುವಾಗ ಹಾಗೂ ಸೇವಿಸಿದ ನಂತರ ಪರೀಕ್ಷಣೆಯ ಸಾಧಕರಿಗೆ ಅರಿವಾದ ವಿಷಯಗಳು

ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಸಕ್ಕರೆ ಮತ್ತು ಬೆಲ್ಲ ಇವುಗಳಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ತುಂಬಾ ವ್ಯತ್ಯಾಸವಿದೆ. ವೈಜ್ಞಾನಿಕ ಪರೀಕ್ಷಣೆಯ ನಿಷ್ಕರ್ಷ ಮತ್ತು ಪರೀಕ್ಷಣೆಯಲ್ಲಿ ಭಾಗವಹಿಸಿದ ಸಾಧಕರಿಗೆ ಅರಿವಾದ ವಿಷಯಗಳಿಂದ ‘ಸಕ್ಕರೆ ಹಾಕಿ ಆಹಾರವನ್ನು ತಯಾರಿಸುವುದು ಆರೋಗ್ಯದ ದೃಷ್ಟಿಯಲ್ಲಿ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿಯೂ ಹಾನಿಕರವಾಗಿದೆ, ಹಾಗೂ ಬೆಲ್ಲ ಹಾಕಿ ತಯಾರಿಸಿದ ಪದಾರ್ಥಗಳು ಆರೋಗ್ಯಕ್ಕೆ ಉತ್ತಮವಾಗಿದ್ದು ಮನಸ್ಸಿಗೆ ತೃಪ್ತಿಯನ್ನು ನೀಡುವುದು ಹಾಗೂ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವನ್ನುಗಳಿಸಿಕೊಡುವುದಾಗಿದೆ’, ಎಂಬುದು ಅರಿವಾಗುತ್ತದೆ.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೪.೧೧.೨೦೨೦)

ವಿ-ಅಂಚೆ :  [email protected]

ವಾಚಕರಿಗೆ ವಿನಂತಿ !

ನಾವು ದೈನಂದಿನ ಜೀವನದಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಉಪಯೋಗಿಸಿ ವಿವಿಧ ಪದಾರ್ಥಗಳನ್ನು ತಯಾರಿಸುತ್ತೇವೆ. ಈ ಪದಾರ್ಥಗಳನ್ನು ತಯಾರಿಸುವಾಗ ಅದರಲ್ಲಿ ಸಕ್ಕರೆ ಮತ್ತು ಬೆಲ್ಲವನ್ನು ಹಾಕಿ ತಯಾರಿಸಿದ ಪದಾರ್ಥಗಳ ತುಲನೆ ಮಾಡಿ ‘ತಮಗೆ ಏನನಿಸುತ್ತದೆ?’, ಎಂಬುದನ್ನು ಅಧ್ಯಯನ ಮಾಡಬೇಕು, ಉದಾ. ಅಡುಗೆ ಮಾಡುವಾಗ ಚಪಾತಿ ಅಥವಾ ಅನ್ನದ ಜೊತೆಗೆ ಉಪಯೋಗಿಸಲು ನಾವು ಬೇಳೆ ಸಾರನ್ನು ಮಾಡುತ್ತೇವೆ. ಮೊದಲ ದಿನ ಸಕ್ಕರೆ ಹಾಕಿ ಹಾಗೂ ಮರುದಿನ ಬೆಲ್ಲ ಹಾಕಿ ಸಾರು ಮಾಡಿ ನೋಡಬಹುದು. ಸಕ್ಕರೆ ಮತ್ತು ಬೆಲ್ಲ ಹಾಕಿ ಸಾರು ಮಾಡುವಾಗ ಅದನ್ನು ನೋಡುವಾಗ ಹಾಗೂ ಅದರ ರುಚಿ ನೋಡುವಾಗ, ಅದನ್ನು ಸೇವಿಸುವ ಮೊದಲು ಮತ್ತು ಸೇವಿಸುವಾಗ ಮನಸ್ಸಿಗೆ ಏನನಿಸುತ್ತದೆ ?’, ಎನ್ನುವುದರ ಅಧ್ಯಯನ ಮಾಡಬೇಕು. ಅದೇ ರೀತಿಯಲ್ಲಿ ಸಿಹಿ ಪದಾರ್ಥಗಳ ವಿಷಯದಲ್ಲಿಯೂ ಮಾಡಿ ನೋಡಬಹುದು. ಈ ವಿಷಯದಲ್ಲಿ ತಮ್ಮ ಅನುಭವವನ್ನು ಅಥವಾ ಬಂದಿರುವ ವೈಶಿಷ್ಟ್ಯಪೂರ್ಣ ಅನುಭೂತಿಗಳನ್ನು ತಪ್ಪದೇ ತಿಳಿಸಿ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಪಾಕಶಾಸ್ತ್ರ’ದ ವಿಷಯದಲ್ಲಿ ಬಹಳಷ್ಟು ಸಂಶೋಧನೆ ಮಾಡಲಾಗುತ್ತದೆ. ತಮ್ಮ ಅನುಭವ ಮತ್ತು ಅನುಭೂತಿಗಳಿಂದ ಈ ಸಂಶೋಧನೆಯಲ್ಲಿ ನಮಗೆ ಸಹಾಯವಾಗಬಹುದು.

ನಮ್ಮ ವಿಳಾಸ : ವಿ-ಅಂಚೆ – [email protected]