೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

ಪೂ. ಶಿವಾಜಿ ವಟಕರ
ಪರಾತ್ಪರ ಗುರು ಡಾ. ಆಠವಲೆ

‘ನನಗೆ ೧೯೮೯ ರಿಂದ ಮುಂಬೈಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಭ್ಯಾಸವರ್ಗಗಳಲ್ಲಿ ಸಹಭಾಗಿಯಾಗುವ ಭಾಗ್ಯ ಲಭಿಸಿತು. ಅವರು ತಮ್ಮ ನಿವಾಸದಲ್ಲಿ ಸಮ್ಮೋಹನ-ಉಪಚಾರ ‘ಚಿಕಿತ್ಸಾಲಯ’ದ ಒಂದು ಕೋಣೆಯಲ್ಲಿ ಅಭ್ಯಾಸ ವರ್ಗ ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುತ್ತಿದ್ದರು. ಈಗ ಅವರು ವಿಶ್ವರೂಪವನ್ನು ಧರಿಸಿದ್ದು ಮಹರ್ಷಿಗಳು ಹೇಳಿದಂತೆ, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ವು ಸಂಪೂರ್ಣ ಜಗತ್ತಿಗಾಗಿ ಒಂದು ಆದರ್ಶ ಗುರುಕುಲ ಮತ್ತು ದೀಪಸ್ತಂಭವಾಗುತ್ತಿದೆ. ಆದುದರಿಂದ ನನ್ನ ಆನಂದವು ಈಗ ಗಗನದಲ್ಲಿ ಹಿಡಿಸಲಾರದಷ್ಟಾಗಿದೆ. ಪರಾತ್ಪರ ಗುರು ಡಾಕ್ಟರರ ಅಭ್ಯಾಸವರ್ಗಗಳಲ್ಲಿ ಕಲಿಯುವಾಗ, ಹಾಗೆಯೇ ಸೇವೆ ಮತ್ತು ಪ್ರಸಾರವನ್ನು ಮಾಡುವಾಗ ನನಗೆ ಅವರನ್ನು ಬಹಳ ಹತ್ತಿರದಿಂದ ನೋಡಲು ಮತ್ತು ಅನುಭವಿಸಲು ಸಿಕ್ಕಿತ್ತು. ಅವರ ಅಭ್ಯಾಸವರ್ಗದಿಂದಲೇ ನಾನು ‘ಅಧ್ಯಾತ್ಮಶಾಸ್ತ್ರ ಮತ್ತು ಸಾಧನೆ’ಯನ್ನು ಆರಂಭಿಸಿದೆನು. ಮೊದಲ ಭೇಟಿಯಿಂದಲೇ ನನಗೆ ‘ಅವರು ಒಬ್ಬ ಅಸಾಮಾನ್ಯ ಮಹಾಪುರುಷರಾಗಿದ್ದಾರೆ’ ಮತ್ತು ‘ನನ್ನ ಸರ್ವಸ್ವರಾಗಿದ್ದಾರೆ’, ಎಂದು ಅನಿಸಿತ್ತು.

ಮಹರ್ಷಿಗಳು ಮತ್ತು ಉಚ್ಚ ಕೋಟಿಯ ಸಂತರು ಅವರನ್ನು ಗುರುತಿಸಿ ‘ಅವರು ಸಾಕ್ಷಾತ್ ವಿಷ್ಣುವಿನ ಅವತಾರವಾಗಿದ್ದಾರೆ’, ಎಂದು ಹೇಳಿದ್ದಾರೆ. ಆರಂಭದಲ್ಲಿ ನನಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಕ್ಷಮೆಯಾಚನೆ ಮಾಡುತ್ತೇನೆ. ಅವರು ಅಧ್ಯಾತ್ಮಶಾಸ್ತ್ರದಲ್ಲಿನ ಮುಖ್ಯ ಮತ್ತು ಆವಶ್ಯಕ ಜ್ಞಾನವನ್ನು ಅವರ ಅಭ್ಯಾಸವರ್ಗಗಳು, ಸತ್ಸಂಗಗಳು ಮತ್ತು ಗ್ರಂಥಗಳ ಮೂಲಕ ಕಲಿಸಿದ್ದಾರೆ. ಅವರು ಮೊದಲು ಸ್ವತಃ ತಮ್ಮ ಆಚರಣೆಯಿಂದ, ಮಾತುಗಳಿಂದ ಮತ್ತು ಕೃತಿಗಳಿಂದ ಕಲಿಸಿದರು ‘ಬೊಲೆ ತೈಸಾ ಚಾಲೆ, ತ್ಯಾಚಿ ವಂದಾವಿ ಪಾವೂಲೆ |’, ಎಂಬ ಮರಾಠಿ ವಚನಕ್ಕನುಸಾರ ನಾನು ಅವರ ಚರಣಗಳಲ್ಲಿ ನಿರಂತರ ನತಮಸ್ತಕನಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಈಗ ನನ್ನ ವಯಸ್ಸು ೭೧, ಆದುದರಿಂದ ನನಗೆ ಕೆಲವು ವಿಷಯಗಳು ನೆನಪಾಗುವುದಿಲ್ಲ. ‘ನಾನು ಸನಾತನ ಸಂಸ್ಥೆಯ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಕಳೆದ ೨೭ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದೇನೆ, ಎಂದು ಯಾವಾಗಲೂ ಹೇಳುತ್ತಿರುತ್ತೇನೆ; ಆದರೆ ‘ಅದು ಯಾವುದರ ಮೇಲಿನಿಂದ ?’, ಎಂದು ನನಗೆ ಆಗಾಗ ಸಂಶಯ ಬರುತ್ತಿತ್ತು. ‘೧೧.೨.೧೯೮೯ ರಿಂದ ಪರಾತ್ಪರ ಗುರು ಡಾಕ್ಟರರು ಏನು ಕಲಿಸಿದರು ?’, ಎಂಬ ಟಿಪ್ಪಣಿಗಳ ವಹಿಗಳು ನನಗೆ ದೊರಕಿದ ನಂತರ ನಾನು ಹೇಳುವುದು ಸರಿ ಅನಿಸಿತು. ಆಗ ನನ್ನ ಭಾವಜಾಗೃತವಾಗಿ ನನಗೆ ತುಂಬಾ ಆನಂದವಾಯಿತು. ಆ ಟಿಪ್ಪಣಿಗಳ ವಹಿಗಳ ಆಧಾರದಲ್ಲಿ ನಾನು ಮುಂದಿನ ಮಾಹಿತಿಯನ್ನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕೊಡುತ್ತಿದ್ದೇನೆ. ನಾವು ಕಳೆದ ವಾರ ಲೇಖನದಲ್ಲಿ ಕೆಲವು ಭಾಗವನ್ನು ನೋಡಿದೆವು. ಇಂದು ನಾವು ಮುಂದಿನ ಭಾಗವನ್ನು ನೋಡೋಣ. (ಭಾಗ ೨.)

೩. ಪರಾತ್ಪರ ಗುರು ಡಾ. ಆಠವಲೆಯವರು ವರ್ಷ ೧೯೮೯ ರಿಂದ ಪ್ರಾರಂಭಿಸಿದ ಅಭ್ಯಾಸವರ್ಗಗಳ ವೈಶಿಷ್ಟ್ಯಗಳು

೩ ಎ. ಸಾಧನೆಯನ್ನು ಹಂತಹಂತವಾಗಿ ಕಲಿಸುವುದು : ಪರಾತ್ಪರ ಗುರು ಡಾಕ್ಟರರು, “ಮೊದಲು ಚಿಕ್ಕ ಮಗುವಿಗೆ ಜೀವಿಸಲು ತಾಯಿಯ ಹಾಲು, ನಂತರ ಹಸುವಿನ ಹಾಲು, ತದನಂತರ ಊಟ, ಹೀಗೆ ಹಂತಹಂತವಾಗಿ ತಿನ್ನಿಸಬೇಕಾಗುತ್ತದೆ, ಹಾಗೆಯೇ ಅಧ್ಯಾತ್ಮದಲ್ಲಿಯೂ ಹಂತಹಂತವಾಗಿ ಕಲಿಸಬೇಕಾಗುತ್ತದೆ. ಬ್ರಿಟನ್ ಮತ್ತು ಫ್ರಾನ್ಸ್ ಇವುಗಳಲ್ಲಿ ಸುರಂಗಮಾರ್ಗವನ್ನು ಬೇಗ ಪೂರ್ಣಗೊಳಿಸಲು ಅದನ್ನು ಎರಡೂ ಬದಿಗಳಿಂದ ಅಗೆಯಲಾಯಿತು ಮತ್ತು ಅದು ಸರಿಯಾಗಿ ಮಧ್ಯಭಾಗದಲ್ಲಿ ಒಂದು ಸ್ಥಳದಲ್ಲಿ ಬಂದು ಕೂಡಿಕೊಂಡಿತು, ಹಾಗೆಯೇ ಸಾಧನೆಯನ್ನು ಎಲ್ಲ ಅಂಗಗಳಿಂದ ಮಾಡಿದರೆ ಶೀಘ್ರ ಪ್ರಗತಿಯಾಗುತ್ತದೆ. ಮೊಟ್ಟೆಯಲ್ಲಿರುವ ಮರಿಯ ಬೆಳವಣಿಗೆ ಪೂರ್ಣವಾದಾಗ ಮತ್ತು ಮೊಟ್ಟೆಯ ಕವಚವು ದುರ್ಬಲವಾಗಿ ಅದು ಒಡೆಯುತ್ತದೆ ಮತ್ತು ಅದರಿಂದ ಮರಿಯು ಹೊರಗೆ ಬರುತ್ತದೆ. ಸಾಧನೆಯ ಪ್ರಗತಿಗಾಗಿ ಬಾಹ್ಯಮನಸ್ಸು, ಅಂತರ್ಮನಸ್ಸು (ಚಿತ್ತ) ಮತ್ತು ಜೀವ ಇವುಗಳನ್ನು ಉಪಯೋಗಿಸಿ ಸಾಧನೆಯನ್ನು ಮಾಡಬೇಕು. ಸಾಧನೆಯಲ್ಲಿ ಪ್ರಗತಿಯನ್ನು ಮಾಡಿಕೊಳ್ಳಲು ಬಾಹ್ಯಮನಸ್ಸಿಗೆ ಶೇ. ೫ ರಷ್ಟು, ಅಂತರ್ಮನಸ್ಸಿಗೆ ಶೇ. ೧೫ ರಷ್ಟು ಮತ್ತು ಜೀವಕ್ಕೆ ಶೇ. ೮೫ ರಷ್ಟು ಮಹತ್ವವಿದೆ. ಇದರ ಮಹತ್ವವನ್ನು ತಿಳಿದುಕೊಂಡು ಸಾಧನೆಯನ್ನು ಮಾಡಬೇಕು” ಎಂದು ಹೇಳಿದರು.

ಆರಂಭದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಭಕ್ತಿಯೋಗದ ಬಗ್ಗೆ ಕಲಿಸಿದರು. ಅವರು, “ನಾಮಸ್ಮರಣೆಗೆ ಶೇ. ೫ ರಷ್ಟು, ಸತ್ಸಂಗಕ್ಕೆ ಶೇ. ೩೦ ರಷ್ಟು, ಸತ್ಸೇವೆಗೆ ಶೇ. ೧೦೦ ರಷ್ಟು ಮಹತ್ವವಿದೆ”, ಎಂದು ಹೇಳಿದರು. ಸಾಧನೆಯ ಫಲನಿಷ್ಪತ್ತಿಯನ್ನು ಹೆಚ್ಚಿಸಿ ಸಾಧಕರಿಗೆ ಹೆಚ್ಚೆಚ್ಚು ಲಾಭವನ್ನು ಮಾಡಿಕೊಡಲು ಅವರು ಸಾಧಕರಿಗೆ ಈ ರೀತಿ ಕಲಿಸಿದರು ಮತ್ತು ಅವರಿಂದ ಸತ್ಸೇವೆಯನ್ನೂ ಮಾಡಿಸಿಕೊಂಡರು.

೩ ಐ. ಮನಸ್ಸಿನಲ್ಲಿ ಸತ್ಸಂಗದ ಮಹತ್ವವನ್ನು ಬಿಂಬಿಸಿ ಸಾಧಕರಿಗೆ ಸತ್ಸಂಗ ಲಭಿಸಬೇಕೆಂದು ಆಯೋಜನೆಯನ್ನು ಮಾಡುವುದು : ಪರಾತ್ಪರ ಗುರು ಡಾಕ್ಟರರು ತಮ್ಮ ಅನುಭವವನ್ನು ಹೇಳಿ ಅದರಿಂದ ಸಾಧನೆಗೆ ಪ್ರೇರಣೆಯನ್ನು ನೀಡುತ್ತಿದ್ದರು. ಯಾವುದೇ ಪ್ರಶ್ನೆಯನ್ನು ಕೇಳಿದರೂ, ಅದಕ್ಕೆ ಯೋಗ್ಯ ಉತ್ತರವನ್ನು ನೀಡಿ ಅವರು ಸಾಧಕರನ್ನು ಸಮಾಧಾನಪಡಿಸುತ್ತಿದ್ದರು. ಆದುದರಿಂದ ಎಲ್ಲ ಸಂದೇಹಗಳ ನಿವಾರಣೆಯಾಗುತ್ತಿತ್ತು. ಈಗ ಅವರ ಸಂದೇಹನಿವಾರಣೆಯ ಧ್ವನಿಮುದ್ರಣ ಮುದ್ರಿಕೆಗಳು ಲಭ್ಯವಿವೆ.

‘ಸತ್ಸಂಗದಿಂದ ಪ್ರಗತಿಯಾಗುತ್ತದೆ ಮತ್ತು ಕುಸಂಗದಿಂದ ಅಧೋಗತಿಯಾಗುತ್ತದೆ’, ಈ ವಿಷಯವನ್ನು ಹೇಳುವಾಗ ಪರಾತ್ಪರ ಗುರು ಡಾಕ್ಟರರು ನಾರದ ಮುನಿ ಮತ್ತು ವಾಲ್ಮಿಕಿಯಾದ ರತ್ನಾಕರ ಇವರ ಕಥೆಯನ್ನು ಹೇಳುತ್ತಿದ್ದರು.

ಪರಾತ್ಪರ ಗುರು ಡಾಕ್ಟರರು, “ನಮಗೆ ಚಿಕ್ಕ ಮಕ್ಕಳ ಒಡನಾಟ ಇಷ್ಟವಾಗುತ್ತದೆ; ಏಕೆಂದರೆ ಅವರ ವಾಸನೆಗಳು ಬೀಜರೂಪ ದಲ್ಲಿರುತ್ತವೆ. ಹೀಗಿರುವಾಗ ಯಾರಿಗೆ ವಾಸನಾದೇಹವೇ ಇಲ್ಲವೋ, ಅಂತಹ ಸಂತರ ಸಹವಾಸ ತುಂಬಾ ಆನಂದದಾಯಕವಾಗಿರುತ್ತದೆ. ಇಂತಹ ಸಂತಸಂಗತಿಯಿಂದ ಮತ್ತು ಸಂತಸೇವೆಯಿಂದ ನಮ್ಮ ಅಹಂ ಕಡಿಮೆಯಾಗುತ್ತದೆ. ‘ನಾನು’ ಇಲ್ಲದಿದ್ದರೆ ದೇಹಬುದ್ಧಿ ಕಡಿಮೆಯಾಗುತ್ತದೆ ಮತ್ತು ಮನೋಲಯವಾಗಿ ಆನಂದ ಸಿಗುತ್ತದೆ. ಎಲ್ಲಿ ‘ನಾನು’ ಇಲ್ಲ ಅಲ್ಲಿ ‘ಭಗವಂತ’ನೇ ಇರುತ್ತಾನೆ” ಎನ್ನುತ್ತಿದ್ದರು.

ಸತ್ಸಂಗದ ಮಹತ್ವವನ್ನು ನಮ್ಮ ಮನಸ್ಸಿನ ಮೇಲೆ ಬಿಂಬಿಸಲು ಅವರು ವಸಿಷ್ಠ ಮತ್ತು ವಿಶ್ವಾಮಿತ್ರರ ಕಥೆಯನ್ನು ಹೇಳುತ್ತಿದ್ದರು. ಅವರು, “ಸತ್ಸಂಗದಲ್ಲಿ ನಾಮಸ್ಮರಣೆಯು ತನ್ನಿಂದ ತಾನೆ ಆಗುತ್ತದೆ. ಇತರ ಸಮಯದಲ್ಲಿ ‘ನಾನು ಮಾಡಿದೆನು’, ಎನ್ನುವುದರಿಂದ ಅಹಂ ಉದ್ಭವಿಸುತ್ತದೆ. ‘ನಾನು ಮನೆಯಲ್ಲಿದ್ದು ಸಾಧನೆಯನ್ನು ಮಾಡುತ್ತೇನೆ’, ಎಂದು ಹೇಳುವುದರಿಂದ ಹೆಚ್ಚು ಪ್ರಗತಿಯಾಗುವುದಿಲ್ಲ, ಉದಾ. ಮನೆಯಲ್ಲಿದ್ದು ಅಧ್ಯಯನ ಮಾಡಿ ಪರೀಕ್ಷೆ ಕೊಡುವ ಹುಡುಗ ಮತ್ತು ಶಾಲೆಯ ಹುಡುಗ ಇವರಲ್ಲಿ ವ್ಯತ್ಯಾಸವಿರುತ್ತದೆ. ‘ಬೆಂಕಿಯಿಂದ ಕಸವನ್ನು ಸುಡುವ, ಹಾಗೆ ಮನಸ್ಸಿನ ಪರಿವರ್ತನೆಯಾಗಿ ಅಭ್ಯಾಸಗಳು (ವ್ಯಸನಗಳು) ಕಡಿಮೆಯಾಗುತ್ತವೆ. ಮನಸ್ಸಿನ ಶುದ್ಧೀಕರಣವಾಗುತ್ತದೆ” ಎನ್ನುತ್ತಿದ್ದರು. ಅವರು ಅಭ್ಯಾಸವರ್ಗದಲ್ಲಿ ಸಾಧಕರಿಗೆ, ‘ಸಂತರು ಮತ್ತು ಸಾಧಕರು ಎಂದರೆ ಯಾರು ?’, ಈ ಬಗ್ಗೆ ಕಲಿಸಿ ಅವರನ್ನು ಸತ್ಸಂಗಕ್ಕಾಗಿ ಸಂತರ ಬಳಿ ಕಳುಹಿಸುತ್ತಿದ್ದರು.

೩ ಓ. ‘ಸಾಧನೆಯಲ್ಲಿ ತ್ಯಾಗದ ಮಹತ್ವವೇನು ? ಯೋಗ್ಯ ದಾನ ವನ್ನು ಹೇಗೆ ಮಾಡಬೇಕು ?’, ಎಂಬ ವಿಷಯವನ್ನು ಕಲಿಸುವುದು

೩ ಓ ೧. ಧನದ ತ್ಯಾಗವನ್ನು ಮಾಡುವಾಗ ನಾನು ‘ಎಷ್ಟು ಕೊಟ್ಟಿದ್ದೇನೆ ?’, ಇದಕ್ಕಿಂತ ‘ಎಷ್ಟು ಇಟ್ಟುಕೊಂಡಿದ್ದೇನೆ ?’, ಇದರ ಮೇಲೆ ತ್ಯಾಗವು ನಿಶ್ಚಿತವಾಗುತ್ತದೆ ! : ಪರಾತ್ಪರ ಗುರು ಡಾಕ್ಟರರು, “ಸಾಧನೆಯಲ್ಲಿ ಪ್ರಗತಿಯನ್ನು ಮಾಡಿಕೊಳ್ಳಲು ತನು, ಮನ ಮತ್ತು ಧನದ ತ್ಯಾಗವನ್ನು ಮಾಡಬೇಕಾಗುತ್ತದೆ. ತ್ಯಾಗದಲ್ಲಿಯೇ ನಿಜವಾದ ಆನಂದವಿದೆ. ಧನದ ತ್ಯಾಗವನ್ನು ಮಾಡುವಾಗ ‘ನಾವು ಎಷ್ಟು ಕೊಟ್ಟಿದ್ದೇವೆ ?’, ಇದಕ್ಕಿಂತ ‘ನಮ್ಮ ಬಳಿ ಎಷ್ಟು ಇಟ್ಟುಕೊಂಡಿದ್ದೇವೆ ?’, ಇದರಿಂದ ನಿಜವಾದ ತ್ಯಾಗವು ಗಮನಕ್ಕೆ ಬರುತ್ತದೆ. ಇಲ್ಲದಿದ್ದರೆ ‘ನಾವು ತ್ಯಾಗ ಮಾಡುತ್ತೇವೆ’, ಎಂಬ ಭ್ರಮೆಯಲ್ಲಿರುತ್ತೇವೆ, ಉದಾ. ಒಬ್ಬನಿಗೆ ಪ್ರತಿ ತಿಂಗಳು ೫ ಸಾವಿರ ರೂಪಾಯಿಗಳಷ್ಟು ಸಂಬಳವಿದೆ ಮತ್ತು ಅವನು ೧ ಸಾವಿರ ರೂಪಾಯಿಗಳನ್ನು ಅರ್ಪಣೆ ಮಾಡುತ್ತಾನೆ. ಇನ್ನೊಬ್ಬನಿಗೆ ಪ್ರತಿ ತಿಂಗಳು ೨೦೦ ರೂಪಾಯಿಗಳಷ್ಟು ಸಂಬಳವಿದೆ. ಅವನು ತನಗೆ ಅಗತ್ಯ ವಿದ್ದಷ್ಟು ಇಟ್ಟುಕೊಂಡು ಉಳಿದ ೧೦೦ ರೂಪಾಯಿಗಳನ್ನು ಅರ್ಪಣೆ ಮಾಡಿದರೆ, ಅವನ ತ್ಯಾಗವು ಶ್ರೇಷ್ಠವಾಗಿದೆ”, ಎಂದರು.

ಮೇಲಿನ ಅಂಶಗಳನ್ನು ಗಮನದಲ್ಲಿ ತಂದುಕೊಡಲು ಅವರು ಅಭ್ಯಾಸವರ್ಗದಲ್ಲಿ ಒಂದು ಪ್ರಯೋಗವನ್ನು ಮಾಡಿದರು. ‘ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುವ ಒಬ್ಬ ಸಾಧಕ ಮತ್ತು ಓರ್ವ ಮಾನಸೋಪಚಾರ ತಜ್ಞರ ಕಡೆಗೆ ನೋಡಿ ಏನು ಅನಿಸುತ್ತದೆ ?’ ಎಂಬುದನ್ನು ಕೇಳಿದರು. ಆಗ ಅಭ್ಯಾಸವರ್ಗದ ೨೦ ಜನರಿಗೆ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುವ ಸಾಧಕನ ಕಡೆಗೆ ನೋಡಿ ಒಳ್ಳೆಯದೆನಿಸಿತು ಮತ್ತು ೭ ಜನರಿಗೆ ಮಾನಸೋಪಚಾರ ತಜ್ಞರ ಕಡೆಗೆ ನೋಡಿ ಒಳ್ಳೆಯ ದೆನಿಸಿತು. ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುವ ಸಾಧಕನು ಗುರುಪೂರ್ಣಿಮೆಗಾಗಿ ೧ ಸಾವಿರ ರೂಪಾಯಿಗಳನ್ನು ಅರ್ಪಣೆ ಮಾಡಿದ್ದನು ಮತ್ತು ಮಾನಸೋಪಚಾರ ತಜ್ಞರು ೫೦೦ ರೂಪಾಯಿಗಳನ್ನು ಅರ್ಪಣೆ ಮಾಡಿದ್ದರು. ‘ಅಧ್ಯಾತ್ಮದಲ್ಲಿ ತ್ಯಾಗ ಮತ್ತು ಸೇವಾಭಾವಕ್ಕೆ ಮಹತ್ವ ಇರುತ್ತದೆ. ಅದಕ್ಕನುಸಾರ ಕೃತಿ ಮಾಡಬೇಕು’, ಎಂದು ಪರಾತ್ಪರ ಗುರು ಡಾಕ್ಟರರು ಈ ಉದಾಹರಣೆಯಿಂದ ಕಲಿಸಿದರು.

೩ ಓ ೨. ಮಾಯೆಯ ತ್ಯಾಗ ಮಾಡದೇ ನಿಜವಾದ ಆನಂದ ಸಿಗುವುದಿಲ್ಲ ! : ಇದನ್ನು ಸ್ಪಷ್ಟಗೊಳಿಸಲು ಅವರು ಸರ್ಕಸ್ಸಿನ ಜೋಕಾಲಿಯಲ್ಲಿ ನೇತಾಡುವ ಹುಡುಗಿಯ ಉದಾಹರಣೆಯನ್ನು ಕೊಡುತ್ತಿದ್ದರು. ಮೊದಲನೇ ಜೋಕಾಲಿಯನ್ನು ಬಿಡದೇ ಬೇರೆ ಜೋಕಾಲಿಯಲ್ಲಿದ್ದ ವ್ಯಕ್ತಿಗೆ ಅವಳಿಗೆ ಆಧಾರವನ್ನು ಕೊಡಲು ಆಗುವುದಿಲ್ಲ. ಅದರಂತೆ ಮಾಯೆಯನ್ನು ಬಿಡದೇ ಭಗವಂತನು ನಮ್ಮ ಕೈಯನ್ನು ಹಿಡಿಯುವುದಿಲ್ಲ.

೩ ಓ ೩. ಸತ್ಪಾತ್ರೆ ದಾನವನ್ನು ಮಾಡಬೇಕು ! : ‘ಪಾತ್ರೆ ದಾನಮ್ !’ ಅಂದರೆ ‘ಸತ್ಪಾತ್ರೆ ದಾನಮ್ |’ ಸಂತರಷ್ಟು ‘ಪಾತ್ರ’ (ಯೋಗ್ಯ) ಯಾರೂ ಇರುವುದಿಲ್ಲ. ಅವರಿಗೆ ದಾನ ಮಾಡಿದರೆ ಸಂಚಿತ ಕಡಿಮೆಯಾಗಿ ಪ್ರಾರಬ್ಧವನ್ನು ಭೋಗಿಸುವ ಶಕ್ತಿ ಸಿಗುತ್ತದೆ. ಏನೂ ಮಾಡದೇ ಇರುವವನು ‘ಯಾವುದಾದರೊಬ್ಬ ವ್ಯಕ್ತಿಗೆ ಸಹಾಯ ಮಾಡುವುದು, ಶಾಲೆ-ಆಸ್ಪತ್ರೆಗಳಿಗೆ ಅರ್ಪಣೆ ಮಾಡುವುದು’, ಹೀಗೆ ಮಾಡಿದರೂ ನಡೆಯುತ್ತದೆ; ಆದರೆ ಅಧ್ಯಾತ್ಮದ ದೃಷ್ಟಿಯಿಂದ ಸಮಾಜ ಸೇವೆಯು ಮಾಯೆಯದ್ದಾಗಿರುತ್ತದೆ. ಸಮಾಜವು ಬದಲಾಗುತ್ತಿರುತ್ತದೆ, ಆದರೆ ಬ್ರಹ್ಮನು ಸ್ಥಿರವಾಗಿರುತ್ತಾನೆ. ಆದುದರಿಂದ ಬ್ರಹ್ಮನ ಸೇವೆಯಲ್ಲಿರಬೇಕು; ಏಕೆಂದರೆ ಅದರಲ್ಲಿ ಎಲ್ಲವೂ ಬರುತ್ತದೆ.

೩ ಓ ೪. ಸಾಧನೆ ಎಂದು ಯೋಗ್ಯ ರೀತಿಯಿಂದ ತ್ಯಾಗ ಮಾಡಿದರೆ ವೈರಾಗ್ಯ ಬರುತ್ತದೆ. ವೈರಾಗ್ಯವೆಂದರೆ ‘ಕುಬೇರನ ಸಂಪತ್ತು, ಅಪ್ಸರೆಯ ಸೌಂದರ್ಯ ಮತ್ತು ಬೃಹಸ್ಪತಿಯ ಬುದ್ಧಿಯೂ ನಮಗೆ ಬೇಡ’, ಎಂದು ಅನಿಸುವುದು.

೩ ಔ. ನಾಮಸ್ಮರಣೆಯ ಮಹತ್ವವನ್ನು ಮನಸ್ಸಿನ ಮೇಲೆ ಬಿಂಬಿಸುವುದು : ಪರಾತ್ಪರ ಗುರು ಡಾಕ್ಟರರ ಗಮನವು  ‘ಅಭ್ಯಾಸವರ್ಗಕ್ಕೆ ಬರುವ ಜಿಜ್ಞಾಸುಗಳು ಏನು ಮಾಡುತ್ತಾರೆ ? ಏನು ತಿನ್ನುತ್ತಾರೆ ?’, ಎಂಬುದರ ಕಡೆಗೆ ಇರುತ್ತಿರಲಿಲ್ಲ. ‘ಜಿಜ್ಞಾಸುಗಳಲ್ಲಿ ಸಾಧನೆಯ ಸೆಳೆತ ಎಷ್ಟಿದೆ ? ಅವರಲ್ಲಿ ಭಾವ ಎಷ್ಟಿದೆ ?’, ಎಂಬುದಕ್ಕೆ ಅವರು ಹೆಚ್ಚು ಮಹತ್ವವನ್ನು ಕೊಡುತ್ತಿದ್ದರು. ಅವರು ಉಪಾಸನಾಕಾಂಡದಿಂದ ಸಾಧನೆಯನ್ನು ಆರಂಭಿಸಲು ಕಲಿಸುತ್ತಿದ್ದರು. ಅವರು ಕರ್ಮಕಾಂಡದ ಆಡಂಬರವನ್ನು ಎಂದಿಗೂ ಮಾಡಲಿಲ್ಲ, ಉದಾ. ಒಮ್ಮೆ ಕಚೇರಿಯಿಂದ ಸೇವಾಕೇಂದ್ರಕ್ಕೆ ಬರುವಾಗ ನಾನು ಎಲ್ಲ ಸಾಧಕರಿಗಾಗಿ ವಡಾಪಾವ ತಂದಿದ್ದೆನು. ಅದನ್ನು ಎಲ್ಲರೂ ಮತ್ತು ಗುರುದೇವರೂ ತಿಂದರು; ಆದರೆ ಒಬ್ಬ ಅಕ್ಕ ಮಾತ್ರ ಅದನ್ನು ತಿನ್ನಲಿಲ್ಲ. ನಂತರ ಆ ಅಕ್ಕ. “ಆ ದಿನ ಆಷಾಢ ಏಕಾದಶಿಯಿತ್ತು”, ಎಂದು ಹೇಳಿದಳು. ಆಗ ನನಗೆ ನನ್ನ ತಪ್ಪು ಗಮನಕ್ಕೆ ಬಂದಿತು. ಆದರೆ ಗುರುದೇವರು ತಮ್ಮ ಕೃತಿಯಿಂದ ಸಂತರು ಹೇಳಿದ ‘ನಾಮ ಘೇತಾ ಗ್ರಾಸೋಗ್ರಾಸಿ, ತೋ ನರ ಜೇವೂನಿ ಉಪವಾಸಿ |’, (ಅರ್ಥ: ಪ್ರತಿಯೊಂದು ತುತ್ತಿನ ಜೊತೆಗೆ ನಾಮಜಪವನ್ನು ಮಾಡುತ್ತ ಊಟ ಮಾಡಿದರೆ, ಅವನು ಉಪವಾಸವಿದ್ದಂತೆ) ಎಂಬ ಮರಾಠಿ ವಚನಕ್ಕನುಸಾರ ನಮಗೆ ಕಲಿಸಿದರು. ಅಭ್ಯಾಸವರ್ಗಕ್ಕೆ ಬಂದು ಸಾಧನೆಯನ್ನು ಮಾಡಿದ ನಂತರ ಮತ್ತು ಸಾತ್ತ್ವಿಕತೆಯು ಹೆಚ್ಚಾದ ನಂತರ ನನ್ನ ಮಾಂಸಹಾರದ ಆಕರ್ಷಣೆಯೂ ಕಡಿಮೆಯಾಗಿ ಕೆಲವು ವರ್ಷಗಳಲ್ಲಿಯೇ ನಾನು ಸಂಪೂರ್ಣ ಸಸ್ಯಹಾರಿಯಾದೆನು. ‘ನಾಮಸ್ಮರಣೆಯೆಂದರೆ ಸಾಧನೆಯ ಪ್ರಾಣ !’, ಎಂದು ಅವರು ಬಿಂಬಿಸಿದರು. ಅವರು ಮೊದಲು ನಾಮಸ್ಮರಣೆಯ ಬಗ್ಗೆ ಗ್ರಂಥವನ್ನು ಬರೆದರು.

೩ ಅಂ. ತಮ್ಮ ಉದಾಹರಣೆಯಿಂದ ಪ್ರೀತಿಯ ಆದರ್ಶವನ್ನು ಮೂಡಿಸುವುದು : ಸಾಧನೆಯಲ್ಲಿ ಮಹತ್ವದ ಅಂಗವೆಂದರೆ ಪ್ರೀತಿ ! ಭಾವನೆಯು ನಶಿಸಿ ಭಾವ ಉತ್ಪನ್ನವಾದ ನಂತರ ನಿಜವಾದ ಪ್ರೀತಿ ಮೂಡುತ್ತದೆ. ಭಾವದಿಂದ ಪ್ರೇಮವು, ಪ್ರೀತಿಯಲ್ಲಿ ರೂಪಾಂತರವಾಗುತ್ತದೆ. ಅವರು ಗೋಪಿಯರಿಗೆ ಶ್ರೀಕೃಷ್ಣನ ಮೇಲಿರುವ ಪ್ರೀತಿಯ ಉದಾಹರಣೆಯನ್ನು ಹೇಳುತ್ತಿದ್ದರು. ಆವಾಗಿನಿಂದ ತಮ್ಮ ಕೃತಿಗಳಿಂದ ಅವರು ಸಾಧಕರ ಮೇಲೆ ಪ್ರೀತಿಯ ಸುರಿಮಳೆಯನ್ನೇ ಗೈಯ್ಯುತ್ತಿದ್ದಾರೆ. ಕೇವಲ ಅವರ ಪ್ರೀತಿಯಿಂದಾಗಿ ನಾನು ಕಳೆದ ೨೭ ವರ್ಷಗಳಿಂದ ಅವರ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡಿ ಅವರ ಆಜ್ಞಾಪಾಲನೆಯನ್ನು ಮಾಡುತ್ತಿದ್ದೇನೆ. ಅವರು ತಮ್ಮಲ್ಲಿನ ಪ್ರೀತಿಯಿಂದಲೇ ಜಗತ್ತಿನ ಎಲ್ಲ ಸಾಧಕರ ಮನಸ್ಸನ್ನು ಗೆದ್ದಿದ್ದಾರೆ.

೩ ಕ. ಕರ್ಮಕಾಂಡದಲ್ಲಿನ ಪ್ರತಿಯೊಂದು ಕೃತಿಯ ಹಿಂದಿನ ಶಾಸ್ತ್ರವನ್ನು ಹೇಳುವುದು : ಪರಾತ್ಪರ ಗುರು ಡಾಕ್ಟರರು ಮೊದಲು ಕರ್ಮಕಾಂಡದ ಮಹತ್ವವನ್ನು ತಿಳಿಸಿಹೇಳಿ ‘ಅದಕ್ಕೆ ವಿಜ್ಞಾನದ ಜೊತೆಯನ್ನು ಹೇಗೆ ನೀಡಬೇಕು ?’, ಎಂಬುದರ ಬಗ್ಗೆ ಹೇಳುತ್ತಿದ್ದರು. ‘ಏಕೆ ಮತ್ತು ಹೇಗೆ ?’, ಎಂಬುದು ತಿಳಿದ ನಂತರ ದೇವರ ದರ್ಶನ, ಪೂಜಾರ್ಚನೆ ಇತ್ಯಾದಿಗಳನ್ನು ಭಕ್ತಿಭಾವದಿಂದ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಅವರು ಅಭ್ಯಾಸವರ್ಗದಲ್ಲಿ ಚಪ್ಪಾಳೆ ತಟ್ಟುವ ಪ್ರಯೋಗವನ್ನು ಮಾಡಿಸಿಕೊಂಡರು. ಬಲಗೈಯಿಂದ ಎಡಗೈ ಮೇಲೆ ಚಪ್ಪಾಳೆಯನ್ನು ತಟ್ಟಿದಾಗ ೨೭ ಜನರಿಗೆ ಒಳ್ಳೆಯದೆನಿಸಿತು, ಎಡಗೈಯಿಂದ ಬಲಗೈ ಮೇಲೆ ಚಪ್ಪಾಳೆ ತಟ್ಟಿದಾಗ ೨೧ ಜನರಿಗೆ ತೊಂದರೆಯಾಯಿತು. ‘ಬಲಗೈಯಿಂದ ಚಪ್ಪಾಳೆಯನ್ನು ತಟ್ಟಿದಾಗ ಎಡ ಬದಿಯಲ್ಲಿ ಶಕ್ತಿಯು ಉತ್ಪನ್ನವಾಗಿದ್ದರಿಂದ ಒಳ್ಳೆಯದೆನಿಸುತ್ತದೆ’, ಎಂಬುದು ಈ ಪ್ರಯೋಗದಿಂದ ಸಿದ್ಧವಾಯಿತು. ‘ಸತ್ಸಂಗ, ಅಭ್ಯಾಸವರ್ಗ ಮತ್ತು ಬಹಿರಂಗಸಭೆ ಇವುಗಳಲ್ಲಿ ಚಪ್ಪಾಳೆಯನ್ನು ಏಕೆ ತಟ್ಟಬಾರದು ?’, ಎಂಬ ಶಾಸ್ತ್ರವನ್ನು ಹೇಳಿ ಅವರು ಸಾಧಕರು ಮತ್ತು ಜಿಜ್ಞಾಸುಗಳನ್ನು ಚಪ್ಪಾಳೆ ತಟ್ಟುವುದರಿಂದ ವಿಮುಖಗೊಳಿಸಿದರು. ‘ಚಪ್ಪಾಳೆ ತಟ್ಟುವುದು’, ಭಾವನೆಯ, ಅಂದರೆ ಮಾನಸಿಕ ಸ್ತರದ್ದಾಗಿದೆ. ಅದರ ಬದಲು ‘ಭಾವಜಾಗೃತವಾಗಿ ಅದರ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಬೇಕು’, ಎಂದು ಕಲಿಸಿ ಅವರು ಸಾಧಕರಿಂದ ಸಾಧನೆಯನ್ನು ಮಾಡಿಸಿಕೊಂಡರು.

೩ ಖ. ಅಭ್ಯಾಸವರ್ಗದಲ್ಲಿ ತಮ್ಮ ತಪ್ಪನ್ನು ಹೇಳುವುದು : ೮.೯.೧೯೯೧ ರಂದು ಅಭ್ಯಾಸವರ್ಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ತಪ್ಪನ್ನು ಹೇಳಿದರು. ಅವರು, “ಗುರುಗಳು ವಾಹನವನ್ನು ಇಂದೂರಿನಲ್ಲಿರುವ ಕೇತಕರರಿಗೆ ಕಳುಹಿಸಿರಿ”, ಎಂದು ಹೇಳಿದ್ದರು. ಗುರುಗಳ ಮಾತನ್ನು ಕೇಳದೇ ನಾನು ‘ವಾಹನವು ದುರಸ್ತಿಯಾಗಿದೆಯೇ ?’, ಎಂದು ನೋಡಲು ೧-೨ ದಿನ ಕಳೆದೆನು”, ಎಂದು ಹೇಳಿದರು. ಇದರಿಂದ ಅವರು ಸಾಧಕರ ಮುಂದೆ ಒಂದು ಆದರ್ಶವನ್ನೇ ಬಿಂಬಿಸಿದರು. ಸಂತ ತುಕಾರಾಮ ಮಹಾರಾಜರು ಹೇಗೆ ತಮ್ಮ ತಪ್ಪುಗಳನ್ನು ಹೇಳುತ್ತಿದ್ದರೋ, ಇದು ಸಹ ಹಾಗೆಯೇ ಆಗಿದೆ. ಅದರ ಪರಿಣಾಮ ಎಷ್ಟು ಒಳ್ಳೆಯದಾಯಿತೆಂದರೆ, ಸಾಧಕರು ತಪ್ಪುಗಳನ್ನು ಸ್ವೀಕರಿಸಿ ಮತ್ತು ಅವುಗಳ ಹಿಂದಿನ ಸ್ವಭಾವದೋಷಗಳ ನಿರ್ಮೂಲನೆ ಮಾಡಿ ಅಧ್ಯಾತ್ಮದಲ್ಲಿ ಶೀಘ್ರ ಗತಿಯಲ್ಲಿ ಪ್ರಗತಿಯನ್ನು ಮಾಡಿಕೊಳ್ಳುತ್ತಿದ್ದಾರೆ.

೩ ಗ. ‘ಸಾಧನೆಯ ಅಡೆತಡೆಗಳನ್ನು ಹೇಗೆ ಎದುರಿಸಬೇಕು ?’, ಎಂಬುದನ್ನು ತಮ್ಮ ಕೃತಿಯಿಂದ ಕಲಿಸುವುದು : ೮.೯.೧೯೯೧ ರಂದು ಸಾಧನೆಯನ್ನು ಮಾಡುವ ಮತ್ತು ಅಭ್ಯಾಸವರ್ಗಕ್ಕೆ ಬರುವ ಒಬ್ಬ ಹುಡುಗನ ೬೫ ವಯಸ್ಸಿನ ತಂದೆ ಪರಾತ್ಪರ ಗುರು ಡಾಕ್ಟರರ ಬಳಿ ತಕರಾರು ಮಾಡಿದರು. ಆ ವ್ಯಕ್ತಿಯು ಅವರಿಗೆ ಬೈಗುಳ-ಶಾಪವನ್ನೂ ಕೊಟ್ಟನು.

ನನ್ನಂತಹ ಕೆಲವು ಸಾಧಕರ ಸಾಧನೆಯಾಗಬೇಕೆಂದು ಅವರು ಅನೇಕ ಕಠಿಣ ಪ್ರಸಂಗಗಳನ್ನು ಎದುರಿಸಿ ತೊಂದರೆಗಳನ್ನು ಸಹಿಸಿಕೊಂಡರು. ನಮ್ಮ ಮೇಲಿರುವ ಅವರ ಈ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ. ‘ಜೀವದ ಸಾಧನೆಯಾಗಬೇಕು. ಆ ಜೀವವು ಜನ್ಮ-ಮರಣದ ಚಕ್ರದಿಂದ ಮುಕ್ತವಾಗಬೇಕು’, ಇಷ್ಟೇ ಅವರ ತಳಮಳವಿರುತ್ತಿತ್ತು. ಆದುದರಿಂದಲೇ ಅವರಿಗೆ ‘ಮೋಕ್ಷಗುರು’ ಎನ್ನುತ್ತಾರೆ.’

(ಮುಂದುವರಿಯುವುದು)

– (ಪೂ.) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ. (೧೬.೮.೨೦೧೭)