೧. ‘ಪ್ರಯತ್ನ ಮಾಡುವುದು ಅತ್ಯಂತ ಆವಶ್ಯಕವಾಗಿದೆ ಎಂದು ಸ್ವತಃ ನಮಗೇ ಅನಿಸಬೇಕು, ಆ ರೀತಿ ಮಾಡಬೇಕು !
‘ಸಾಧನೆಯಲ್ಲಿ ಪ್ರಗತಿಯಾಗಲು ಸಾಧನೆಯ ಯಾವುದಾದರೂ ಪ್ರಯತ್ನ ಮಾಡುವ ಬಗ್ಗೆ ನಮಗೆ ಯಾವಾಗ ಅತ್ಯಂತ ಆವಶ್ಯಕತೆ ಎನಿಸುತ್ತದೆಯೋ, ಆಗಲೇ ಆ ಸಾಧನೆಯ ಪ್ರಯತ್ನವು ನಮ್ಮಿಂದ ತಳಮಳದಿಂದ ಆಗುತ್ತದೆ; ಇಲ್ಲದಿದ್ದರೆ ಆಗುವುದಿಲ್ಲ ! ಒಂದು ವೇಳೆ, ಆಧ್ಯಾತ್ಮಿಕ ಉಪಾಯವನ್ನು ತಳಮಳದಿಂದ ಮಾಡದಿದ್ದರೆ, ಆಧ್ಯಾತ್ಮಿಕ ತೊಂದರೆ ಕಡಿಮೆಯಾಗದಿರುವುದರಿಂದ ಜೀವಮಾನವಿಡೀ ತೊಂದರೆ ಮತ್ತು ದುಃಖವನ್ನು ಭೋಗಿಸಬೇಕಾಗುತ್ತದೆ. ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ಮಾಡದಿದ್ದರೆ, ಈ ಜನ್ಮದಲ್ಲಿ ಅಪೇಕ್ಷಿತ ಪ್ರಗತಿ ಆಗುವುದೇ ಇಲ್ಲ, ಆದರೆ ಮುಂದಿನ ಜನ್ಮಗಳಲ್ಲಿಯೂ ಆ ಸ್ವಭಾವದೋಷಗಳು ಮತ್ತು ಅಹಂ ನಮ್ಮೊಂದಿಗೇ ಬರುತ್ತವೆ. ಈ ರೀತಿಯ ವಿಚಾರವನ್ನು ಮೇಲಿಂದ ಮೇಲೆ ಮನಸ್ಸಿಗೆ ಬಿಂಬಿಸಿದರೆ, ಪ್ರಯತ್ನಿಸುವುದು ಅತ್ಯಂತ ಆವಶ್ಯಕತೆ ಇದೆ ಎಂದು ನಮಗೆ ಅರಿವಾಗ ತೊಡಗುತ್ತದೆ.ಆಗ ನಮ್ಮಿಂದ ತಳಮಳದಿಂದ ಪ್ರಯತ್ನವಾಗ ತೊಡಗುತ್ತದೆ.
೨. ಪ್ರಯತ್ನ ಮಾಡುವ ಆಸಕ್ತಿಯನ್ನು ನಾವೇ ನಿರ್ಮಿಸಬೇಕು !
ಅನೇಕ ಸಾಧಕರಿಗೆ ‘ಕೇವಲ ಸೇವೆ ಮಾಡಿದೆವು ಅಂದರೆ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ, ಎಂದು ಅನಿಸುತ್ತದೆ. ‘ಆಧ್ಯಾತ್ಮಿಕ ಉಪಾಯ ಮಾಡುವುದು ಮತ್ತು ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡುವುದು, ಈ ಪ್ರಯತ್ನಗಳಿಗಾಗಿ ಸಮಯ ನೀಡುವುದರಿಂದ ಸೇವೆಗಾಗಿ ದೊರಕುವ ಸಮಯವು ಖರ್ಚಾಗುತ್ತದೆ, ಎಂಬ ವಿಚಾರ ಮಾಡದೇ ‘ಆ ಪ್ರಯತ್ನದಿಂದಲೂ ಸಾಧನೆಯಾಗುತ್ತಲೇ ಇರುತ್ತದೆ, ಎಂಬ ವಿಚಾರ ಮಾಡಬೇಕು. ಪ್ರಾಯಶಃ ‘ಆ ಪ್ರಯತ್ನವನ್ನು ಹೆಚ್ಚೆಚ್ಚು ಉತ್ತಮ ರೀತಿಯಲ್ಲಿ ಮಾಡುವುದರಿಂದ ಹೆಚ್ಚೆಚ್ಚು ಉತ್ತಮ ಸಾಧನೆಯಾಗುತ್ತದೆ, ಎಂಬ ವಿಚಾರ ಮಾಡಬೇಕು. ಆದ್ದರಿಂದ ಆ ಪ್ರಯತ್ನ ಮಾಡಲು ಬೇಸರ ಬರದೇ ಅದನ್ನು ಆಸಕ್ತಿಯಿಂದ ಮಾಡಲು ಸಾಧ್ಯವಾಗುತ್ತದೆ. ಪ್ರಯತ್ನ ಮಾಡುವ ಒಲವು ನಿರ್ಮಾಣವಾದ ತಕ್ಷಣವೇ, ಅದು ತಳಮಳದಿಂದ ಆಗತೊಡಗುತ್ತದೆ.
– (ಪೂ.) ಶ್ರೀ. ಸಂದೀಪ ಆಳಶಿ (೨೯.೧೦.೨೦೨೦)