ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಈದ್ಗಾ ಮಸೀದಿಯನ್ನು ಹಿಂದೂಗಳಿಗೆ ದೇವಾಲಯಕ್ಕಾಗಿ ನೀಡಬೇಕು ! – ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ವಿಚಾರಣೆ ನಡೆಯುತ್ತಿರುವಾಗ ವಾರದಲ್ಲಿ ಕೆಲವು ದಿನ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆ

ಮಥುರಾ (ಉತ್ತರ ಪ್ರದೇಶ) – ಶ್ರೀಕೃಷ್ಣ ಜನ್ಮಭೂಮಿಯ ೧೩.೩೭ ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ವಕೀಲ ಮಹಕ ಮಾಹೇಶ್ವರಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಯಾವ ಸ್ಥಳದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆಯೋ, ಆ ಸ್ಥಳವನ್ನು ಹಿಂದೂಗಳಿಗೆ ನೀಡಬೇಕು, ಇದರಿಂದ ಅಲ್ಲಿ ಭವ್ಯ ದೇವಸ್ಥಾನವನ್ನು ನಿರ್ಮಿಸಬಹುದು, ಎಂದು ಒತ್ತಾಯಿಸಿದ್ದಾರೆ. ಅದೇರೀತಿ ಅರ್ಜಿಯ ಆಲಿಕೆ ನಡೆಯುವ ತನಕ ಈ ಮಸೀದಿಯಲ್ಲಿ ಜನ್ಮಾಷ್ಠಮಿ ವರೆಗೆ ಅಥವಾ ವಾರದಲ್ಲಿ ಕೆಲವು ದಿನಗಳು ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಮಹಕ ಮಾಹೇಶ್ವರಿ

ಇದಕ್ಕೂ ಮೊದಲು ಶ್ರೀಕೃಷ್ಣ ವಿರಾಜಮಾನ ಪರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ನ್ಯಾಯವಾದಿ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಮಥುರಾದ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ೩ ಸಂಸ್ಥೆಗಳು ತಮ್ಮನ್ನು ಪಕ್ಷವನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಿವೆ. ಈ ಬಗ್ಗೆ ನವೆಂಬರ್ ೧೮ ರಂದು ವಿಚಾರಣೆ ನಡೆಯಲಿದೆ.