ನರಕ ಚತುರ್ದಶಿ (ನವೆಂಬರ್ ೧೪)

೧. ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀ ಮಹೂರ್ತದಲ್ಲಿ ಅಭ್ಯಂಗಸ್ನಾನವನ್ನು ಮಾಡುತ್ತಾರೆ ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.

೨. ಯಮತರ್ಪಣ : ಅಭ್ಯಂಗಸ್ನಾನದ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಹೇಳಲಾಗಿದೆ ಯಮತರ್ಪಣದ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ಅದರಂತೆ ವಿಧಿಯನ್ನು ಮಾಡಬೇಕು. ಅನಂತರ ತಾಯಿಯು ಮಕ್ಕಳಿಗೆ ಆರತಿಯನ್ನು ಎತ್ತುತ್ತಾಳೆ. ನರಕಾಸುರನ ವಧೆಯ ಪ್ರತೀಕವೆಂದು ಕೆಲವರು (ಮಹಾಲಿಂಗನ ಬಳ್ಳಿಯ) ಹಿಂಡ್ಲಚ್ಚಿ ಕಾಯಿಯನ್ನು ಕಾಲಿನಿಂದ ಜಜ್ಜಿ ಕಾಲಿನಿಂದಲೇ ಬಿಸಾಡುತ್ತಾರೆ. ಇನ್ನೂ ಕೆಲವರು ಅದರ ರಸವನ್ನು (ರಕ್ತವನ್ನು) ನಾಲಗೆಗೆ ಹಚ್ಚಿಕೊಳ್ಳುತ್ತಾರೆ.

೩. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನ ನೀಡಿ ವಸ್ತ್ರದಾನ ಮಾಡುತ್ತಾರೆ.