ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ಧರ್ಮಶಿಕ್ಷಣದಿಂದಾಗಿ ಲಕ್ಷಾಂತರ ಮುಸ್ಲಿಮರು ಧರ್ಮಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಆದರೆ ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲ. ಆದ್ದರಿಂದ ಅವರು ಬುದ್ಧಿಜೀವಿ ಗಳಾಗುತ್ತಾರೆ ಮತ್ತು ಧರ್ಮವನ್ನು ಅಲ್ಲಗಳೆಯುತ್ತಾರೆ !’

‘ಚರ್ಚ ಅಥವಾ ಮಸೀದಿಗಳನ್ನು ಜಗತ್ತಿನಲ್ಲಿ ಎಲ್ಲಿಯೂ ಸರಕಾರಿಕರಣ ಗೊಳಿಸಲಾಗಿಲ್ಲ; ಆದರೆ ಅಧ್ಯಾತ್ಮ ಜಗತ್ತಿನ ಕೇಂದ್ರವಾದ ಭಾರತದಲ್ಲಿ ದೇವಸ್ಥಾನಗಳನ್ನು ಸರಕಾರಿಕರಣ ಮಾಡಲಾಗುತ್ತದೆ !’

ರಾಜಕೀಯ ಪಕ್ಷಗಳು ‘ನಾವು ಇದನ್ನು ನೀಡುತ್ತೇವೆ, ಅದನ್ನು ನೀಡುತ್ತೇವೆ’ ಎಂದು ಹೇಳುವ ಮೂಲಕ ಜನರನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತಾರೆ ಮತ್ತು ಸ್ವಾರ್ಥವು ಜನರ ನಡುವಿನ ಜಗಳಕ್ಕೆ ಕಾರಣವಾಗುತ್ತದೆ. ತದ್ವಿರುದ್ಧ ಸಾಧನೆಯು ತ್ಯಾಗ ಮಾಡಲು ಕಲಿಸುತ್ತದೆ. ಆದ್ದರಿಂದ ಜನರು ಜಗಳವಾಡುವುದಿಲ್ಲ, ಎಲ್ಲರೂ ಒಂದೇ ಕುಟುಂಬದವರಂತೆ  ಆನಂದದಿಂದಿರುತ್ತಾರೆ ! ’

‘ಶಾಲೆಯಿಂದ ಸ್ನಾತಕೋತ್ತರ ಶಿಕ್ಷಣದ ವರೆಗಿನ ಯಾವುದೇ ಶಿಕ್ಷಣದಲ್ಲಿ ಮಾನವೀಯತೆಯ ಬೋಧನೆಯನ್ನು ಕಲಿಸಲಿಲ್ಲ. ಪ್ರತಿ ಕ್ಷೇತ್ರದಲ್ಲೂ ಕೇವಲ ವೃತ್ತಿಪರರು ಮತ್ತು ನೌಕರರನ್ನು ಸೃಷ್ಟಿಸಿದೆ.

‘ಒಂದಾದರೂ ದಿನಪತ್ರಿಕೆ ತ್ಯಾಗ ಮಾಡಲು ಕಲಿಸುತ್ತದೆಯೇ ? ‘ಸನಾತನ ಪ್ರಭಾತ’ ಮಾತ್ರ ಕಲಿಸುತ್ತದೆ. ಆದ್ದರಿಂದ, ‘ಸನಾತನ ಪ್ರಭಾತ’ ವಾಚಕರು ಆಧ್ಯಾತ್ಮಿಕ ಪ್ರಗತಿ ಮಾಡಿಕೊಂಡರೆ, ಇತರ ದಿನಪತ್ರಿಕೆಗಳ ವಾಚಕರು ಮಾಯೆಯಲ್ಲಿ ಸಿಲುಕುತ್ತಾರೆ.’

‘ದೇಹ, ಮನಸ್ಸು ಮತ್ತು ಬುದ್ಧಿಶಕ್ತಿ ಇವುಗಳಿಂದ ಅರ್ಥೈಸಿಕೊಳ್ಳುವಂತಹ ವಿಷಯಗಳು ವಿಶ್ವದಲ್ಲಿ ಶೇ. ೧ ಲಕ್ಷಾಂಶದಷ್ಟು ಕೂಡ ಇಲ್ಲ. ಹೀಗಿರುವಾಗ ಅವರಿಗೆ ತಿಳಿದ ವಿಷಯಗಳ ಬಗ್ಗೆ ಹೆಮ್ಮೆ ಪಡುವವರ ಹೆಸರುಗಳು ಇತಿಹಾಸದಲ್ಲಿ ಎಂದಾದರೂ ನಮೂದಿಸಲಾಗುವುದೇ ? – (ಪರಾತ್ಪರ ಗುರು) ಡಾ. ಆಠವಲೆ