ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಜಯಂತ ಆಠವಲೆ

‘ಬಡತನವಿರುವ ಅಥವಾ ಇಲ್ಲದಿರುವುದರ ಹಿಂದೆ ‘ಪ್ರಾರಬ್ಧ’ ಎಂಬುದು ಇದೆ. ಅದನ್ನು ಅರಿಯದವರು ಸಾಮ್ಯವಾದದ ಹರಟೆ ಹೊಡೆಯುತ್ತಾರೆ ಮತ್ತು ಬಡತನ ಇರುವ ಅಥವಾ ಇಲ್ಲದಿರುವವರನ್ನು ಸಮಾನರನ್ನಾಗಿಸಲು ಪ್ರಯತ್ನಿಸುತ್ತಾರೆ !’

‘ವಿಜ್ಞಾನವು ಅಧ್ಯಾತ್ಮದ ಸಿದ್ಧಾಂತಗಳ ಬಗ್ಗೆ ಏನಾದರೂ ಹೇಳುವುದೆಂದರೆ ಬಾಲಕನು ಹಿರಿಯರ ಬಗ್ಗೆ ಏನಾದರೂ ಹೇಳುವಂತಿದೆ !’

‘ಗಣಿತ ಮತ್ತು ಭೂಗೋಲ ಇವು ವಿಭಿನ್ನ ವಿಷಯಗಳಾಗಿವೆ. ಒಂದರ ಭಾಷೆಯಲ್ಲಿ ಇನ್ನೊಂದು ವಿಷಯವನ್ನು ಹೇಳಲು ಸಾಧ್ಯವಿಲ್ಲ. ಅಂತೆಯೇ, ‘ವಿಜ್ಞಾನ ಮತ್ತು ಅಧ್ಯಾತ್ಮ ಇವೆರಡು ವಿಭಿನ್ನ ವಿಷಯಗಳು’ ಎಂದು ವಿಜ್ಞಾನವು ಅರ್ಥಮಾಡಿಕೊಳ್ಳಬೇಕು.

‘ಸ್ವಾತಂತ್ರ್ಯದಿಂದ ಹಿಡಿದು ಇದುವರೆಗಿನ ೭೨ ವರ್ಷಗಳಲ್ಲಿ, ಬಹುತೇಕ ರಾಜಕೀಯ ಪಕ್ಷಗಳು ಭಾರತದ ನಿಜವಾದ ಪ್ರಗತಿಯನ್ನು ಸಾಧಿಸಲೇ ಇಲ್ಲ. ತದ್ವಿರುದ್ಧ ಭಾರತವು ಎಲ್ಲ ಅಧಾರ್ಮಿಕ ಮತ್ತು ನೀತಿಶೂನ್ಯ ವಿಷಯಗಳಲ್ಲಿ ಪ್ರಗತಿಯನ್ನು ಸಾಧಿಸಿದೆ !

‘ಹಿಂದೂ ರಾಷ್ಟ್ರದಲ್ಲಿ ಎಲ್ಲ ಕಾನೂನುಗಳು ಧರ್ಮಾಧಿಷ್ಠಿತವಾಗಿರುವವು. ಆದ್ದರಿಂದ ಅವುಗಳಲ್ಲಿ ಬದಲಾವಣೆ ಮಾಡಬೇಕಾಗಿಲ್ಲ, ಮತ್ತು ಅವುಗಳ ಪಾಲನೆಯಿಂದ ಅಪರಾಧಗಳಾಗುವುದಿಲ್ಲ ಮತ್ತು ಸಾಧನೆಯಾಗುತ್ತದೆ.’

‘ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಜಕಾರಣಿಗಳ ಬಗ್ಗೆ ಯಾರೂ ಮಾತನಾಡಲು ಸಾಧ್ಯವಿಲ್ಲ; ಆದರೆ ಅವರು ದೇವತೆಗಳ ಬಗ್ಗೆ ಮಾತನಾಡುತ್ತಾರೆ ! ನಮಗೆ ಅದನ್ನು ಬದಲಾಯಿಸಬೇಕಾಗಿದೆ !’

– ಪರಾತ್ಪರ ಗುರು ಡಾ. ಆಠವಲೆ