ಪ್ರಾಣಿಗಳ ಬಗ್ಗೆ ನಾವಿನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯೂನಿವರ್ಸಲ್ ಔರಾ ಸ್ಕ್ಯಾನರ್(ಯು.ಎ.ಎಸ್.) ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡುತ್ತಿರುವ ಶ್ರೀ. ಆಶಿಷ ಸಾವಂತ

ಸನಾತನ ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳಿಂದ ಪ್ರಕ್ಷೇಪಿತವಾಗುವ ಚೈತನ್ಯ ಗ್ರಹಿಸಿದ್ದರಿಂದ ಜಿಗಣೆಯಲ್ಲಿ ಸಕಾರಾತ್ಮಕ ಊರ್ಜೆಯ ಹೆಚ್ಚಾಗುವುದು !

ಆಯುರ್ವೇದದ ದೇವತೆ ಶ್ರೀ ಧನ್ವಂತರಿದೇವರ ಚಿತ್ರದಲ್ಲಿ ಅವರ ಬಲಗೈಯಲ್ಲಿ ಜಿಗಣೆಯು ಕಾಣಿಸುತ್ತದೆ. ಆರ್ಯುವೇದದಲ್ಲಿ ಸಾಮಾನ್ಯವಾಗಿ ಶರೀರದಲ್ಲಿನ ರಕ್ತಕ್ಕೆ ಸಂಬಂಧಿಸಿದ ವ್ಯಾಧಿಯ ನಿವಾರಣೆ ಗಾಗಿ ಜಿಗಣೆಯನ್ನು ಉಪಯೋಗಿಸಲಾಗುತ್ತದೆ. ೩೦.೭.೨೦೨೦ ರಂದು ಗೋವಾದ ಸನಾತನದ ಆಶ್ರಮದ ಮುಖ್ಯ ಪ್ರವೇಶದ್ವಾರದ ಬಳಿ ಒಂದು ಜಿಗಣೆಯು ಸಿಕ್ಕಿತು. ಅದು ಸಾತ್ತ್ವಿಕ ವಸ್ತುಗಳ ಕಡೆಗೆ ಆಕರ್ಷಿತವಾಗುವುದು ಗಮನಕ್ಕೆ ಬಂದಿತು. ೧.೮.೨೦೨೦ ರಂದು ಒಂದು ಗಾಜಿನ ಪೆಟ್ಟಿಗೆಯಲ್ಲಿ ಸನಾತನ-ನಿರ್ಮಿತ ಶ್ರೀ ಧನ್ವಂತರಿ ದೇವರ ಚಿತ್ರ ಮತ್ತು ಶ್ರೀ ದುರ್ಗಾದೇವಿಯ ಚಿತ್ರವನ್ನು ಸ್ವಲ್ಪ ಅಂತರದಲ್ಲಿ ಇಡಲಾಯಿತು. ತದನಂತರ ಜಿಗಣೆಯನ್ನು ಆ ಪೆಟ್ಟಿಗೆಯಲ್ಲಿ ಬಿಡಲಾಯಿತು. ಜಿಗಣೆಯು ದೇವತೆಗಳ ಸಾತ್ತ್ವಿಕ ಚಿತ್ರಗಳಿಗೆ ನೀಡಿದ ಪ್ರತಿಕ್ರಿಯೆ ಮತ್ತು ಅದರ ಮೇಲಾಗುವ ಪರಿಣಾಮವನ್ನು ಅಭ್ಯಾಸಕ್ಕಾಗಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಒಂದು ಪ್ರಯೋಗವನ್ನು ಮಾಡಲಾಯಿತು. ಈ ಪ್ರಯೋಗದಲ್ಲಿನ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಕೆಳಗೆ ಕೊಡಲಾಗಿದೆ.

೧. ಪ್ರಯೋಗದಲ್ಲಿನ ನಿರೀಕ್ಷಣೆಗಳ ವಿವೇಚನೆ

೧ ಅ. ನಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿನ ನಿರೀಕ್ಷಣೆಗಳ ವಿವೇಚನೆ : ಸನಾತನ-ನಿರ್ಮಿತ ಶ್ರೀ ಧನ್ವಂತರಿ ದೇವರ ಚಿತ್ರ ಮತ್ತು ಶ್ರೀ ದುರ್ಗಾದೇವಿಯ ಚಿತ್ರ ಮತ್ತು ಜಿಗಣೆ ಇವುಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬರಲಿಲ್ಲ.

೧ ಆ. ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿನ ನಿರೀಕ್ಷಣೆಗಳ ವಿವೇಚನೆ : ಸನಾತನ-ನಿರ್ಮಿತ ಶ್ರೀ ಧನ್ವಂತರಿ ದೇವರ ಚಿತ್ರ ಮತ್ತು ಶ್ರೀ ದುರ್ಗಾದೇವಿಯ ಚಿತ್ರ ಇವುಗಳಲ್ಲಿ ಬಹಳ ಸಕಾರಾತ್ಮಕ ಊರ್ಜೆಯು ಇತ್ತು. ಪ್ರಯೋಗದ ನಂತರ ಜಿಗಣೆಯಲ್ಲಿ ಸಕಾರಾತ್ಮಕ ಊರ್ಜೆಯು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಯಿತು. ಪ್ರಯೋಗದಲ್ಲಿನ  ಘಟಕಗಳು  ಘಟಕಗಳ ನಕಾರಾತ್ಮಕ ಊರ್ಜೆಯ ಪ್ರಭಾವಳಿ (ಮೀಟರ್)    ಘಟಕಗಳ ಸಕಾರಾತ್ಮಕ ಊರ್ಜೆಯ ಪ್ರಭಾವಳಿ (ಮೀಟರ್)

ಮೇಲಿನ ವಿವೇಚನೆಯು ಕೆಳಗೆ ನೀಡಿದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

ಟಿಪ್ಪಣಿ – ಪ್ರಯೋಗದ ಸ್ಥಳವು ಸೀಮಿತವಾಗಿದ್ದರಿಂದ ಚಿತ್ರಗಳ ಪ್ರಭಾವಳಿಯನ್ನು ೨೩ ಮೀಟರ್‌ಗಿಂತ ಮುಂದಿನ ನೋಂದಣಿಯನ್ನು ನಿಖರವಾಗಿ ಅಳೆಯಲು ಸಾಧ್ಯವಾಗಲಿಲ್ಲ.

೨. ನಿಷ್ಕರ್ಷ

ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳಿಂದ ಪ್ರಕ್ಷೇಪಿತವಾಗುವ ಸಕಾರಾತ್ಮಕ ಸ್ಪಂದನಗಳಿಂದ ಜಿಗಣೆಯ ಸಕಾರಾತ್ಮಕ ಊರ್ಜೆಯ ಮೇಲೆ ಒಳ್ಳೆಯ ಪರಿಣಾಮವಾದುದರಿಂದ ಅದರ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು.

ಮೇಲಿನ ಎಲ್ಲ ಅಂಶಗಳ ಬಗ್ಗೆ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ‘ಅಂಶ ೩’ರಲ್ಲಿ ಕೊಡಲಾಗಿದೆ.

೩. ಪ್ರಯೋಗದಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಸನಾತನ-ನಿರ್ಮಿತ ಶ್ರೀ ಧನ್ವಂತರಿ ದೇವರ ಸಾತ್ತ್ವಿಕ ಚಿತ್ರ ಮತ್ತು ಶ್ರೀ ದುರ್ಗಾದೇವಿಯ ಸಾತ್ತ್ವಿಕ ಚಿತ್ರ ಇವುಗಳಲ್ಲಿ ತುಂಬಾ ಚೈತನ್ಯವಿರುವುದು : ಸ್ಪಂದನಶಾಸ್ತ್ರಕ್ಕನುಸಾರ ಯಾವುದಾದರೊಂದು ದೇವತೆಯ ಚಿತ್ರ ಅಥವಾ ಮೂರ್ತಿಯು ಅದರ ಮೂಲ ರೂಪದೊಂದಿಗೆ ಎಷ್ಟು ಸಾಮ್ಯತೆ ಇರುತ್ತದೋ, ಅಷ್ಟು ಪ್ರಮಾಣದಲ್ಲಿ ಆ ಚಿತ್ರದಲ್ಲಿ ಅಥವಾ ಮೂರ್ತಿಯಲ್ಲಿ ಆ ದೇವತೆಯ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಕಲಾವಿದರು ‘ಕಲೆಗಾಗಿ ಕಲೆಯಲ್ಲ, ಆದರೆ ಈಶ್ವರಪ್ರಾಪ್ತಿಗಾಗಿ ಕಲೆ’ ಎಂದರೆ ‘ಸಾಧನೆ’ಯೆಂದು, ಹಾಗೆಯೇ ಸ್ಪಂದನಶಾಸ್ತ್ರದ ಸುಯೋಗ್ಯ ಅಭ್ಯಾಸ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ಮಾಡಿದ ಮಾರ್ಗದರ್ಶನಕ್ಕನುಸಾರ ಬಿಡಿಸಿದ್ದಾರೆ. ಇದರಿಂದ ಆ ಚಿತ್ರಗಳಲ್ಲಿ ಆಯಾ ದೇವತೆಗಳ ತತ್ತ್ವವು (ಚೈತನ್ಯ) ಬಂದಿದೆ. ಪ್ರಯೋಗದಲ್ಲಿನ ಸನಾತನ-ನಿರ್ಮಿತ ಶ್ರೀ ಧನ್ವಂತರಿ ದೇವರ ಮತ್ತು ಶ್ರೀ ದುರ್ಗಾದೇವಿಯ ಸಾತ್ತ್ವಿಕ ಚಿತ್ರ ಇವುಗಳಲ್ಲಿ ಬಹಳ ಚೈತನ್ಯವಿರುವುದರಿಂದ ಅವುಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು.

೩ ಆ. ಜಿಗಣೆಯು ಶ್ರೀ ಧನ್ವಂತರಿ ದೇವರ ಸಾತ್ತ್ವಿಕ ಚಿತ್ರ ಮತ್ತು ಶ್ರೀ ದುರ್ಗಾದೇವಿಯ ಸಾತ್ತ್ವಿಕ ಚಿತ್ರ ಇವುಗಳಿಗೆ ನೀಡಿದ ಪ್ರತಿಕ್ರಿಯೆ ಮತ್ತು ಅದರ ಮೇಲಾದ ಸಕಾರಾತ್ಮಕ ಪರಿಣಾಮ : ಜಿಗಣೆಯನ್ನು ಗಾಜಿನ ಪೆಟ್ಟಿಗೆಯಲ್ಲಿ ಬಿಟ್ಟಾಗ ಅದು ಮೊದಲು ಶ್ರೀ ಧನ್ವಂತರಿ ದೇವರ ಚಿತ್ರದ ಕಡೆಗೆ ಹೋಗಲು ಪ್ರಯತ್ನಿಸಿತು. ಸ್ವಲ್ಪ ದೂರ ಮುಂದೆ ಹೋದಾಗ ಮಾತ್ರ ಅದು ಶ್ರೀ ದುರ್ಗಾದೇವಿಯ ಚಿತ್ರದ ಕಡೆಗೆ ಹೊರಳಿತು. ಅದು ಶ್ರೀ ದುರ್ಗಾದೇವಿಯ ಚಿತ್ರವನ್ನು ಸ್ಪರ್ಶಿಸಿ, ದೇವಿಯ ಚರಣಗಳ ಬಳಿ ಹೋಗಲು ಪ್ರಯತ್ನಿಸಿತು. ಅದರ ನಂತರ ಜಿಗಣೆಯು ಶ್ರೀ ಧನ್ವಂತರಿ ದೇವರ ಚಿತ್ರದ ಕಡೆಗೆ ಹೋಗಿ, ಅದು ಚಿತ್ರವನ್ನು ಸ್ಪರ್ಶಿಸಿ ದೇವರ ಚರಣಗಳ ಬಳಿ ಹೋಗಲು ಪ್ರಯತ್ನಿಸಿತು. ಈ ಪ್ರಯೋಗದಲ್ಲಿ ಶ್ರೀ ಧನ್ವಂತರಿ ದೇವರ ಚಿತ್ರದ ಬಳಿ ಜಿಗಣೆಯು ಹೆಚ್ಚು ಸಮಯ ಇತ್ತು. ಆ ಸಮಯದಲ್ಲಿ ಅದು ಸಾಧಾರಣ ಒಂದು ನಿಮಿಷ ಧ್ಯಾನಮಗ್ನವಾಗಿರುವಂತೆ ಶಾಂತವಾಗಿ ಕುಳಿತಿತ್ತು. ಸ್ವಲ್ಪ ಸಮಯದ ನಂತರ ಅದು ಪಕ್ಕಕ್ಕೆ ಹೋಯಿತು. ಜಿಗಣೆಯು ಸಾತ್ತ್ವಿಕವಿದ್ದುದರಿಂದ ಅದರಲ್ಲಿ ಪ್ರಾರಂಭದಲ್ಲಿಯೇ (೩.೨೨ ಮೀಟರ್) ಬಹಳಷ್ಟು ಸಕಾರಾತ್ಮಕ ಊರ್ಜೆಯು ಕಂಡು ಬಂದಿತು. ಅದು ದೇವತೆಗಳ ಸಾತ್ತ್ವಿಕ ಚಿತ್ರಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವನ್ನು ಗ್ರಹಣ ಮಾಡಿದುದರಿಂದ ಅದರ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಯಿತು. ಜಿಗಣೆಯಲ್ಲಿ ಸೂಕ್ಷ್ಮವನ್ನು ತಿಳಿಯುವ ಕ್ಷಮತೆ ಇರುವುದರಿಂದ ಅದಕ್ಕೆ ದೇವತೆಗಳ ಚಿತ್ರಗಳಿಂದ ಉಚ್ಚ ಸ್ತರದ ಚೈತನ್ಯವು ಪ್ರಕ್ಷೇಪಿತವಾಗುತ್ತಿದೆ, ಎಂದು ಗುರುತಿಸಲು ಸಾಧ್ಯವಾಯಿತು. ಒಬ್ಬ ಭಕ್ತನು ತನ್ನ ಉಪಾಸ್ಯದೇವತೆಗೆ ಭಾವಪೂರ್ಣ ನಮಸ್ಕಾರ ಮಾಡುವಂತೆ, ಜಿಗಣೆಯು ಎರಡೂ ದೇವತೆಗಳ ಚಿತ್ರಗಳನ್ನು ಸ್ಪರ್ಶಿಸಿ, ಅವರ ಚರಣಗಳ ಹತ್ತಿರ ಹೋಯಿತು. ಇದರಿಂದ ‘ಜಿಗಣೆಗೆ ಸಾತ್ತ್ವಿಕತೆಯ ಬಹಳಷ್ಟು ಸೆಳೆತವಿದ್ದು ಅದರಲ್ಲಿ ದೇವರ ಬಗ್ಗೆ ತುಂಬಾ ಭಾವವಿದೆ’, ಎಂದು ಗಮನಕ್ಕೆ ಬರುತ್ತದೆ.’

– ಪ್ರಾ. ಸುಹಾಸ ಜಗತಾಪ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಮಿರಜ. (೨೭.೮.೨೦೨೦)

ಈ-ಮೆಲ್ : [email protected]