ಆಪತ್ಕಾಲದಲ್ಲಿ ಉಪ್ಪು-ಸಾಸಿವೆಯ ಅಭಾವ ಉಂಟಾದಲ್ಲಿ ದೃಷ್ಟಿಯನ್ನು ತೆಗೆಯುವ ಪದ್ಧತಿ

ಸದ್ಗುರು (ಡಾ.) ಮುಕುಲ ಗಾಡಗೀಳ

ಕೈಗಳ ಮುಷ್ಟಿಯಲ್ಲಿ ಪ್ರತ್ಯಕ್ಷ ಉಪ್ಪು-ಸಾಸಿವೆಯನ್ನು ತೆಗೆದುಕೊಳ್ಳದೇ ಎದುರಿನಲ್ಲಿರುವ, ಹಾಗೆಯೇ ಎದುರಿನಲ್ಲಿಲ್ಲದ ವ್ಯಕ್ತಿಯ ದೃಷ್ಟಿಯನ್ನು ತೆಗೆಯುವುದು ಪರಿಣಾಮಕಾರಿ ಆಗಿರುವುದನ್ನು ಅನುಭವಿಸುವುದು : ‘ನಾನು ಒಬ್ಬ ಸಾಧಕನ ತೊಂದರೆಗಳ ನಿವಾರಣೆಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದೆನು. ನಾನು ನಾಮಜಪಾದಿ ಉಪಾಯಗಳನ್ನು ಮಾಡುತ್ತಿರುವಾಗ ಅದರಲ್ಲಿನ (ನಾಮಜಪ ಇತ್ಯಾದಿ) ಚೈತನ್ಯ ಸಹಿಸಲು ಸಾಧ್ಯವಾಗದ ಕಾರಣ ಆ ಸಾಧಕನ ತೊಂದರೆಗಳು ಹೆಚ್ಚಾದವು. ಅಲ್ಲದೇ ಅವನಿಂದ ನನ್ನತ್ತ ತೊಂದರೆದಾಯಕ ಶಕ್ತಿ ಪ್ರಕ್ಷೇಪಿತವಾಗತೊಡಗಿತು. ‘ಅವನ ಕಣ್ಣುಗಳಿಂದಲೂ ನನ್ನತ್ತ ತೊಂದರೆದಾಯಕ ಶಕ್ತಿ ಬರುತ್ತಿರುವುದು, ನನಗೆ ಸೂಕ್ಷ್ಮದಲ್ಲಿ ಅರಿವಾಯಿತು. ಆಗ ನಾನು ಒಂದು ಪ್ರಯೋಗವೆಂದು ‘ಎರಡೂ ಕೈಗಳ ಮುಷ್ಟಿಯಲ್ಲಿ ಪ್ರತ್ಯಕ್ಷ ಉಪ್ಪು-ಸಾಸಿವೆಯನ್ನು ತೆಗೆದುಕೊಳ್ಳದೇ, ಉಪ್ಪು-ಸಾಸಿವೆ ನನ್ನ ಮುಷ್ಟಿಯಲ್ಲಿವೆ ಎಂಬ ಭಾವವನ್ನಿಟ್ಟುಕೊಂಡು ಆ ಸಾಧಕನ ದೃಷ್ಟಿಯನ್ನು ತೆಗೆಯುವುದರಿಂದ ಏನು ಪರಿಣಾಮವಾಗುತ್ತದೆ ?, ಎಂದು ಪರೀಕ್ಷಿಸಲು ನಿರ್ಧರಿಸಿದೆನು. ದೃಷ್ಟಿಯನ್ನು ತೆಗೆಯುವಾಗ ನಾನು ಎಂದಿನಂತೆ ‘ಬರುವವರ-ಹೋಗುವವರ, ದಾರಿ ಹೋಕರ, ಪಶು-ಪಕ್ಷಿಗಳ, ದನ-ಕರುಗಳ, (ಕೆಟ್ಟ ಶಕ್ತಿಗಳು ಇವುಗಳ ಮಾಧ್ಯಮದಿಂದ ತೊಂದರೆಗಳನ್ನು ಕೊಡಬಹುದು ಆದುದರಿಂದ ಅವರನ್ನು ಉಲ್ಲೇಖಿಸುವ ಪದ್ಧತಿಯಿದೆ) ಭೂತ – ಪ್ರೇತಗಳ, ದೊಡ್ಡ ಕೆಟ್ಟ ಶಕ್ತಿಗಳ ಹಾಗೂ ವಿಶ್ವದಲ್ಲಿರುವ ಯಾವುದೇ ವಿಧದ ಶಕ್ತಿಗಳ ದೃಷ್ಟಿ ತಗಲಿದ್ದರೆ, ಅದು ಹೋಗಲಿ, ಎಂದು ಮನಸ್ಸಿನಲ್ಲಿ ಹೇಳುತ್ತ ಅವನ ದೃಷ್ಟಿಯನ್ನು ತೆಗೆದೆನು. ತದನಂತರ ನನ್ನ ಎರಡೂ ಕೈಗಳ ಮುಷ್ಟಿಯಲ್ಲಿ ಶೇಖರಣೆಗೊಂಡ ತೊಂದರೆದಾಯಕ ಶಕ್ತಿಯನ್ನು ನಾಶಗೊಳಿಸಲು ನಾನು ‘ನನ್ನೆದುರಿಗೆ ಅಗ್ನಿಯನ್ನು ಉರಿಸುತ್ತಿದ್ದೇನೆ ಮತ್ತು ಮುಷ್ಟಿಯಲ್ಲಿರುವ ತೊಂದರೆದಾಯಕ ಶಕ್ತಿಯನ್ನು ಅಗ್ನಿಯಲ್ಲಿ ಹಾಕುತ್ತಿದ್ದೇನೆ, ಎಂಬ ಭಾವವನ್ನಿಟ್ಟುಕೊಂಡು ತೊಂದರೆದಾಯಕ ಶಕ್ತಿ ನಾಶವಾಗಲಿ ಪ್ರಾರ್ಥಿಸಿದೆನು. ಈ ರೀತಿ ದೃಷ್ಟಿಯನ್ನು ತೆಗೆದಿದ್ದರಿಂದ  ಒಳ್ಳೆಯ ಪರಿಣಾಮವಾಗಿರುವುದರ ಅರಿವಾಯಿತು. ಆ ಸಾಧಕನ ತೊಂದರೆಯು ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಆಯಿತು. ಇದೇ ರೀತಿಯಲ್ಲಿ ನಾನು ದೇವದ ಪನವೇಲನ ಆಶ್ರಮದಲ್ಲಿರುವ ಪೂ. (ಸೌ.) ಅಶ್ವಿನಿ ಪವಾರ ಇವರ ದೃಷ್ಟಿಯನ್ನು ತೆಗೆದೆನು. ಅವರು ನನಗೆ ದೂರವಾಣಿಯ ಮೂಲಕ ‘ನನ್ನ ಪ್ರಾಣಶಕ್ತಿ ಬಹಳ ಕಡಿಮೆಯಾಗಿದೆ. ನಾನು ಮಲಗಿಯೇ ಇದ್ದೇನೆ, ಎಂದು ತಿಳಿಸಿದ್ದರು. ನಾನು ಮೇಲಿನ ಪದ್ಧತಿಯಿಂದ ಅವರ ದೃಷ್ಟಿಯನ್ನು ತೆಗೆದ ಬಳಿಕ ದೂರವಾಣಿಯ ಮೂಲಕ ‘ಆರಾಮ ಎನಿಸುತ್ತಿದೆಯೇ ?,  ಎಂದು ವಿಚಾರಿಸಿದೆನು. ಆಗ ಅವರು, “ಈಗ ನನಗೆ ಶೇ. ೭೦ ರಷ್ಟು  ಆರಾಮ ಅನಿಸುತ್ತಿದೆ. ಮೊದಲು ನನಗೆ ಎದ್ದು ಕುಳಿತುಕೊಳ್ಳಲೂ ಆಗುತ್ತಿರಲಿಲ್ಲ, ಈಗ ನಾನು ಎದ್ದು ಕುಳಿತಿದ್ದೇನೆ.  ಎಂದು ಹೇಳಿದರು. ದೃಷ್ಟಿ ತೆಗೆಯುವ ೨ ನಿಮಿಷಗಳ ಕೃತಿಯಿಂದ ಇಷ್ಟು ಒಳ್ಳೆಯ ಪರಿಣಾಮವಾಗಿತ್ತು. ಪ್ರವಾಸದಲ್ಲಿರುವಾಗ ಯಾರಿಗಾದರೂ ತೊಂದರೆಯಾಗುತ್ತಿದ್ದರೆ ಅಲ್ಲಿ ಉಪ್ಪು-ಸಾಸಿವೆ ಸಿಗುವುದಿಲ್ಲ. ಆಗ ಈ ಪದ್ಧತಿಯಿಂದ ದೃಷ್ಟಿಯನ್ನು ತೆಗೆಯಬಹುದು. ಅಲ್ಲದೇ ಆಪತ್ಕಾಲದಲ್ಲಿ ಇವುಗಳ ಕೊರತೆ ಇದ್ದಾಗ ದೃಷ್ಟಿಯನ್ನು ತೆಗೆಯುವ ಈ ಪದ್ಧತಿಯನ್ನು ಉಪಯೋಗಿಸಬಹುದು. – (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೨೫.೮.೨೦೨೦)