ಕೆಟ್ಟ ಶಕ್ತಿಗಳು ಹಲ್ಲೆ ಮಾಡಬಹುದಾದ ಪ್ರತಿಯೊಂದು ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತವೆ ಮತ್ತು ತಮ್ಮ ಶಕ್ತಿಯನ್ನು ಅನಾವಶ್ಯಕ ವ್ಯಯಿಸುವುದಿಲ್ಲ, ಎಂಬುದು ಗಮನಕ್ಕೆ ಬರುವುದು

ಸದ್ಗುರು (ಡಾ.) ಮುಕುಲ ಗಾಡಗೀಳ

‘ನಾಗಪಂಚಮಿಯ ದಿನ ರಾಮನಾಥಿ ಆಶ್ರಮದ ತೋಟದಲ್ಲಿರುವ ಹುತ್ತದ ಪೂಜೆಯನ್ನು ಮಾಡಬೇಕಾಗಿತ್ತು. ಪೂಜೆಯ ಎಲ್ಲ ಸಾಮಗ್ರಿಗಳನ್ನು ತೆಗೆದಿಡಲಾಗಿತ್ತು. ಸದ್ಯ ಆಪತ್ಕಾಲವಿರುವುದರಿಂದ ಸನಾತನ ಮಾಡುತ್ತಿರುವ ಪ್ರತಿಯೊಂದು ಕೃತಿಯಲ್ಲಿ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದುದರಿಂದ ‘ಆಶ್ರಮದಲ್ಲಿ ಯಾವುದೇ ಧಾರ್ಮಿಕ ವಿಧಿಯಲ್ಲಿ ಉಪಯೋಗಿಸುವ ಪೂಜೆಯ ಮಹತ್ವದ ಸಾಮಗ್ರಿಗಳಲ್ಲಿ ಸಕಾರಾತ್ಮಕ ಶಕ್ತಿ ಇರುವ ಬಗ್ಗೆ ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯೂ.ಎ.ಎಸ್.) ಉಪಕರಣದ ಮೂಲಕ ಪರಿಶೀಲಿಸಲಾಗುತ್ತದೆ. ನಾಗಪೂಜೆಯಲ್ಲಿ ‘ಸುಗಂಧ ದ್ರವ್ಯ (ಅತ್ತರು) ಅರ್ಪಿಸುವುದಕ್ಕೆ ವಿಶೇಷ ಮಹತ್ವವಿರುವುದರಿಂದ ‘ನಾಗದೇವತೆಗೆ ಅರ್ಪಿಸುವ ಸನಾತನದ ಅತ್ತರದಲ್ಲಿ ಸಕಾರಾತ್ಮಕ ಶಕ್ತಿ ಇದೆಯೋ ಅಥವಾ ಇಲ್ಲವೋ, ಎಂಬುದನ್ನು ಪರಿಶೀಲಿಸಲಾಯಿತು. ಆಗ ಸನಾತನದ ಅತ್ತರದ ಬಾಟಲಿಯಲ್ಲಿ ನಕಾರಾತ್ಮಕ ಶಕ್ತಿಯಿರುವುದು ಗಮನಕ್ಕೆ ಬಂದಿತು. ಆದುದರಿಂದ ಅತ್ತರಿನ ಬೇರೆ ಬಾಟಲಿಯನ್ನು ತೆಗೆದುಕೊಳ್ಳಲಾಯಿತು. ಅದರಲ್ಲಿ ಸಕಾರಾತ್ಮಕ ಶಕ್ತಿಯಿತ್ತು. ಅದನ್ನು ಉಪಯೋಗಿಸಿ ಬೆಳಗ್ಗೆ ೧೧.೩೦ ಗಂಟೆಗೆ ಹುತ್ತದ ಪೂಜೆಯನ್ನು ಮಾಡಲಾಯಿತು. ತದನಂತರ ಮಧ್ಯಾಹ್ನ ೨.೦೦ ಗಂಟೆಗೆ ಸಹಜವಾಗಿಯೇ ನಕಾರಾತ್ಮಕ ಶಕ್ತಿಯಿರುವ ಸನಾತನದ ಅತ್ತರದ ಬಾಟಲಿಯನ್ನು ‘ಯೂ.ಎ.ಎಸ್. ಉಪಕರಣದ ಮೂಲಕ ಪುನಃ ಪರಿಶೀಲಿಸಲಾಯಿತು. ಆಶ್ಚರ್ಯವೆಂದರೆ ಆಗ ಆ ಅತ್ತರ ಬಾಟಲಿಯಲ್ಲಿ ನಕಾರಾತ್ಮಕ ಶಕ್ತಿ ಸ್ವಲ್ಪವೂ ಇರಲಿಲ್ಲ ಮತ್ತು ಹಗಲಿನಲ್ಲಿ ನೋಡಿದಕ್ಕಿಂತ ಅದರ ಸಕಾರಾತ್ಮಕ ಶಕ್ತಿಯಲ್ಲಿ ವೃದ್ಧಿಯಾಗಿತ್ತು. ನಿಜ ಹೇಳಬೇಕೆಂದರೆ ನಾವು ಆ ಅತ್ತರದ ಮೇಲೆ ಯಾವುದೇ ಉಪಾಯವನ್ನು ಮಾಡಿರಲಿಲ್ಲ, ಆದರೂ ಅದು ಸಕಾರಾತ್ಮಕ ಶಕ್ತಿಯಲ್ಲಿ ಬದಲಾಗಿತ್ತು.

ಇದರಿಂದ ನನಗೆ ಮುಂದಿನ ವಿಷಯಗಳು ಗಮನಕ್ಕೆ ಬಂದವು.

೧.ಯಾವ ಅತ್ತರನ್ನು ಪೂಜೆಗಾಗಿ ಉಪಯೋಗಿಸಬೇಕಾಗಿತ್ತೋ, ಕೆಟ್ಟ ಶಕ್ತಿಗಳು ಅದರ ಮೇಲೆ ಆಕ್ರಮಣ ಮಾಡಿ ಅದರಲ್ಲಿ ನಕಾರಾತ್ಮ ಶಕ್ತಿ(ಊರ್ಜೆ)ಯನ್ನು ಪ್ರಕ್ಷೇಪಿಸಿದ್ದವು.  ಇದರಿಂದ ‘ಕೆಟ್ಟ ಶಕ್ತಿಗಳು ಆಕ್ರಮಣ ಮಾಡಬಹುದಾದ ಪ್ರತಿಯೊಂದು ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತವೆ ಎಂಬುದು ಅರಿವಾಯಿತು.

೨. ‘ಪೂಜೆಯಾದ ಬಳಿಕ ಕೆಟ್ಟ ಶಕ್ತಿಗಳು ಅತ್ತರಿನ ಮೇಲೆ ಆಕ್ರಮಣ ಮಾಡಿ ಕೆಟ್ಟ ಶಕ್ತಿಯನ್ನು ಪ್ರಕ್ಷೇಪಿಸುವುದನ್ನು ನಿಲ್ಲಿಸಿದವು, ಎಂದೂ ನನಗೆ ಅರಿವಾಯಿತು. ಇದರಿಂದ ಅತ್ತರದಲ್ಲಿನ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತ ಹೋಯಿತು. ಸನಾತನದ ಅತ್ತರಿನಲ್ಲಿ ಸಕಾರಾತ್ಮಕ ಶಕ್ತಿ ಮೊದಲೇ ಇತ್ತು. ಅದರ ಪರಿಣಾಮವೂ ಅದರ ಮೇಲಾಗಿ ಅತ್ತರದಲ್ಲಿದ್ದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತ ಹೋಯಿತು. ಹಾಗೆಯೇ ಸನಾತನದ ಆಶ್ರಮದಲ್ಲಿರುವ ಚೈತನ್ಯದಿಂದಲೂ ಅತ್ತರನಲ್ಲಿರುವ ಸಕಾರಾತ್ಮಕ ಶಕ್ತಿ ಹೆಚ್ಚಾಯಿತು. ಈ ಪ್ರಸಂಗದಿಂದ ‘ಕೆಟ್ಟ ಶಕ್ತಿಗಳು ತಮ್ಮ ಶಕ್ತಿಯನ್ನು ಅನಾವಶ್ಯಕ ಖರ್ಚು ಮಾಡುವುದಿಲ್ಲ, ಎಂಬುದೂ ಗಮನಕ್ಕೆ ಬಂದಿತು. – (ಸದ್ಗುರು) ಡಾ. ಮುಕುಲ ಗಾಡಗೀಳ

ನಕಾರಾತ್ಮಕ ಅತ್ತರ ಮತ್ತು ಸಕಾರಾತ್ಮಕ ಶಕ್ತಿ(ಊರ್ಜೆ)ಯಿರುವ ಸನಾತನದ ಅತ್ತರಗಳಲ್ಲಿನ ವ್ಯತ್ಯಾಸವನ್ನು ಗುರುತಿಸುವ ಪದ್ಧತಿ

‘ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿ ನಕಾರಾತ್ಮಕ ಶಕ್ತಿಯನ್ನು ತುಂಬಿರುವ ಸನಾತನದ ಅತ್ತರ ಮತ್ತು ಸಕಾರಾತ್ಮಕ ಶಕ್ತಿಯಿರುವ ಸನಾತನದ ಅತ್ತರ ಇವುಗಳ ಸುಗಂಧದಲ್ಲಿ ಏನು ವ್ಯತ್ಯಾಸವಿದೆ?, ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಬಂದಿತು. ನಾನು ನಕಾರಾತ್ಮಕ ಶಕ್ತಿಯಿರುವ ಸನಾತನದ ಅತ್ತರಿನ ಸುಗಂಧವನ್ನು ತೆಗೆದುಕೊಂಡಾಗ ನನಗೆ ಮೂಗಿನಲ್ಲಿ ಜಡತ್ವದ ಅರಿವಾಯಿತು. ಅಲ್ಲದೇ ಆ ಸುಗಂಧವು ಶರೀರದೊಳಗೆ ಹೋಗಲೇ ಇಲ್ಲ. ಇದರ ವಿರುದ್ಧ ಸಕಾರಾತ್ಮಕ ಶಕ್ತಿಯಿರುವ ಸನಾತನದ ಅತ್ತರಿನ ಸುಗಂಧವನ್ನು ತೆಗೆದುಕೊಂಡಾಗ ಆ ಸುಗಂಧವು ಶರೀರದಲ್ಲಿ ಸಹಜವಾಗಿ ಹೋಯಿತು. ನಕಾರಾತ್ಮಕ ಅತ್ತರ ಮತ್ತು ಸಕಾರಾತ್ಮಕ ಶಕ್ತಿಯಿರುವ ಸನಾತನದ ಅತ್ತರಗಳಲ್ಲಿರುವ ವ್ಯತ್ಯಾಸವನ್ನು ಈ ರೀತಿ ಗುರುತಿಸಬಹುದು. ನಕಾರಾತ್ಮಕ ಶಕ್ತಿಯಿರುವ ಸನಾತನದ ಅತ್ತರಿನ ಬಾಟಲಿಯನ್ನು ಕೈಯಲ್ಲಿ ತೆಗೆದುಕೊಂಡಾಗ ಮೂಗು ಮತ್ತು ಎದೆಯಲ್ಲಿ ಜಡತ್ವದ ಅರಿವಾಯಿತು, ಆದರೆ ಸಕಾರಾತ್ಮಕ ಶಕ್ತಿಯಿರುವ ಸನಾತನದ ಅತ್ತರಿನ ಬಾಟಲಿಯನ್ನು ಕೈಯಲ್ಲಿ ತೆಗೆದುಕೊಂಡಾಗ ನನಗೆ ಯಾವುದೇ ಜಡತ್ವದ ಅರಿವಾಗದೇ ಶರೀರದಲ್ಲಿ ಶೀತಲತೆಯ ಅರಿವಾಯಿತು. – (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ ( ೨೭.೮.೨೦೨೦)