ಎಲ್ಲ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಸಾತ್ತ್ವಿಕ ಉಡುಪುಗಳನ್ನು ಧರಿಸಿರಿ ! ಹಿಂದೂಗಳ ಉಡುಗೆ-ತೊಡುಗೆಗಳನ್ನು ಅವಶ್ಯ ಧರಿಸಿರಿ ಮತ್ತು ಭಜನೆ ಮುಂತಾದವುಗಳನ್ನು ಹಾಡುವಾಗ ಸಾತ್ತ್ವಿಕ ವಾದ್ಯಗಳನ್ನು ನುಡಿಸಿರಿ !

ಪರಾತ್ಪರ ಗುರು ಡಾ. ಆಠವಲೆ

‘ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಜವಾಬ್ದಾರಿಯು ನಮ್ಮದೇ ಆಗಿದೆ. ಹಾಗೆಯೇ ನಾವು ಸಮಾಜದೆದುರು ಆದರ್ಶವನ್ನಿಟ್ಟರೆ, ಸಮಾಜವು ಅದನ್ನು ಅನುಸರಿಸಬಹುದು. ಉಡುಗೆ-ತೊಡುಗೆಗಳಿಂದಾಗಿ ನಮ್ಮಲ್ಲಿ ಅಂತಹ ಸ್ಪಂದನಗಳು ಮತ್ತು ಭಾವ-ಭಾವನೆಗಳು ಮೂಡುತ್ತದೆ. ಸತ್ತ್ವಗುಣಿ ವೇಷಭೂಷಣಗಳಿಂದ ಜೀವಕ್ಕೆ ಸ್ಥಿರತೆ ಮತ್ತು ಶಾಂತಿಯು ಲಭಿಸುತ್ತದೆ. ರಜೋಗುಣಿ ವೇಷಭೂಷಣಗಳಿಂದ ಜೀವದಲ್ಲಿ ಚಂಚಲತೆ ಉಂಟಾಗುತ್ತದೆ ಮತ್ತು ತಮೋಗುಣಿ ವೇಷ ಭೂಷಣಗಳಿಂದ ಜೀವವು ಬಹಿರ್ಮುಖ, ಸ್ವೇಚ್ಛಾಚಾರಿ, ಹಾಗೆಯೇ ಗೂಂಡಾ ವೃತ್ತಿಯದ್ದಾಗುತ್ತದೆ. ಭಾರತೀಯ ಶಾಸ್ತ್ರಕ್ಕನುಸಾರ ಪ್ರತಿಯೊಂದು ಕೃತಿಯು ಸಂಸ್ಕಾರಯುಕ್ತ ಮತ್ತು ಸಾತ್ತ್ವಿಕವಾಗಿರಬೇಕು. ಈ ಬಗ್ಗೆ ವಿಚಾರ ಮಾಡಿದಾಗ ಬಟ್ಟೆಗಳ ವಿನ್ಯಾಸ ಮತ್ತು ಬಣ್ಣ ಸತ್ತ್ವಗುಣ ಪ್ರಧಾನವಾಗಿರಬೇಕು. ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಾತ್ತ್ವಿಕ ಉಡುಪುಗಳನ್ನು ಧರಿಸಿದರೆ ಕಾರ್ಯಕ್ರಮಗಳಲ್ಲಿನ ಸಾತ್ತ್ವಿಕತೆ ಹೆಚ್ಚಾಗಿ ಆಧ್ಯಾತ್ಮಿಕ ದೃಷ್ಟಿಯಿಂದ ಅದರ ಲಾಭವಾಗುತ್ತದೆ. ಹಾಗೆಯೇ ಇಂತಹ ಕಾರ್ಯಕ್ರಮಗಳಲ್ಲಿ ಭಾವಗೀತೆಗಳು, ಭಜನೆ ಇತ್ಯಾದಿಗಳನ್ನು ಹಾಡುವಾಗ ತಬಲಾ, ಸಂವಾದಿನಿ (ಹಾರ್ಮೋನಿಯಮ್), ಸಿತಾರ ಮುಂತಾದ ಸಾತ್ತ್ವಿಕ ವಾದ್ಯಗಳನ್ನು ನುಡಿಸಿದರೆ ಹೆಚ್ಚು ಲಾಭವಾಗುತ್ತದೆ.’ – (ಪರಾತ್ಪರ ಗುರು) ಡಾ. ಆಠವಲೆ