ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಸಾಧಕರಿಗೆ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಲು ಕಲಿಸಿ ಅವರನ್ನು ಅಂತರ್ಬಾಹ್ಯವಾಗಿ ರೂಪಿಸುವ ಸನಾತನ ಸಂಸ್ಥೆ !

‘ಸಮಾಜದಲ್ಲಿ ಕೇವಲ ಸ್ಥೂಲ ದೇಹವನ್ನು ರೂಪಿಸಿದರೆ ಸನಾತನ ಸಂಸ್ಥೆಯಲ್ಲಿ ಅದರೊಂದಿಗೆ ಸಾಧಕರ ಮನಸ್ಸು ಮತ್ತು ಬುದ್ಧಿ ಇವುಗಳನ್ನೂ ರೂಪಿಸಲಾಗುತ್ತದೆ. ಸಾಧಕರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡುವುದರಿಂದ ಅವರ ಮನೋಲಯ ಮತ್ತು ಬುದ್ಧಿಲಯವಾಗಿ ಅವರ ಚಿತ್ತದಲ್ಲಿನ ಜನ್ಮಜನ್ಮಾಂತರದ ಮಾಯೆಯ ಸಂಸ್ಕಾರಗಳು ನಾಶವಾಗುತ್ತವೆ. ಇಂತಹ ಶುದ್ಧ ಮತ್ತು ಸಾತ್ತ್ವಿಕ ಚಿತ್ತದಲ್ಲಿ ಭಗವಂತನು ಇದ್ದೇ ಇರುತ್ತಾನೆ !

೨. ಅಧ್ಯಾತ್ಮ ತಿಳಿಯುವುದು

ಪರಿಸ್ಥಿತಿಯಲ್ಲಿನ ಅಧ್ಯಾತ್ಮವು ತಿಳಿದ ನಂತರ ಪರಿಸ್ಥಿತಿಯ ಒತ್ತಡವು ಬರುವುದಿಲ್ಲ. ಒಂದು ಪ್ರಸಂಗ ಘಟಿಸಿದಾಗ, ಅದರ ಹಿಂದಿನ ಕಾರ್ಯಕಾರಣಭಾವವನ್ನು ಹುಡುಕಿದಾಗ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ‘ಪರಿಸ್ಥಿತಿಯ ಹಿಂದಿನ ಕಾರ್ಯಕಾರಣಭಾವದ ಅರಿವಾಗಿ ಅದಕ್ಕನುಸಾರ ಸಾಧನೆಗೆ ಪೂರಕ ಕೃತಿಯನ್ನು ಮಾಡಿದರೆ, ಆಗ ಅಧ್ಯಾತ್ಮ ತಿಳಿಯಿತು’, ಎನ್ನಬಹುದು.

೩. ಜ್ಞಾನ ಮತ್ತು ಭಾವ

೩ ಅ. ಜ್ಞಾನವು ಭಗವಂತನ ಬಳಿಗೆ ಹೋಗುವ ಒಂದು ಮಾರ್ಗವಾಗಿದ್ದು ಭಾವವು ಭಗವಂತನೊಂದಿಗೆ ಏಕರೂಪವಾಗುವ ಒಂದು ಸಾಧನವಾಗಿದೆ : ಜ್ಞಾನದಿಂದ ದೇವರ ವಿಚಾರಗಳು ತಿಳಿಯುತ್ತವೆ; ಆದರೆ ಭಾವದಿಂದ ಪ್ರತ್ಯಕ್ಷ ದೇವರೇ ಸಿಗುತ್ತಾನೆ. ಜ್ಞಾನವು ಚಿರಂತನ ಆನಂದ ಕೊಡುತ್ತಿದ್ದರೆ, ಭಾವದಿಂದ ನೇರವಾಗಿ ಭಗವಂತನೊಂದಿಗೆ ಅನುಸಂಧಾನವಾಗುತ್ತದೆ. ‘ಜ್ಞಾನ’ವು ಭಗವಂತನ ಬಳಿಗೆ ಹೋಗುವ ಒಂದು ಮಾರ್ಗವಾದರೆ, ‘ಭಾವ’ವು ಭಗವಂತನೊಂದಿಗೆ ಏಕರೂಪವಾಗುವ ಒಂದು ಸಾಧನವಾಗಿದೆ; ಆದುದರಿಂದ ‘ಜ್ಞಾನವಿದ್ದಲ್ಲಿ ದೇವರು’, ಎಂದು ಹೇಳುವುದಿಲ್ಲ, ಆದರೆ ‘ಭಾವವಿದ್ದಲ್ಲಿ ದೇವರು’, ಎಂದು ಹೇಳುತ್ತಾರೆ.

೩ ಆ. ಭಾವವಿದ್ದಲ್ಲಿ ದೇವರು ! : ಜ್ಞಾನದಲ್ಲಿ ಸಿಲುಕಿದರೆ, ಅಹಂ ಹೆಚ್ಚಾಗುತ್ತದೆ, ಆದರೆ ಭಾವದಲ್ಲಿ ಸಿಲುಕಿದರೆ ಈಶ್ವರನು ಸಿಗುತ್ತಾನೆ; ಆದುದರಿಂದ ‘ಭಾವವಿದ್ದಲ್ಲಿ ದೇವರು’, ಎಂಬ ವಚನವು ಸರ್ವಶ್ರುತಿಯಾಗಿದೆ.

೪. ಸಾಧಕ ಮತ್ತು ಉತ್ತಮ ಸಾಧಕ

‘ಸಾಧಕ’ ಎಂಬ ಶಬ್ದದ ಎರಡು ಅರ್ಥಗಳಿವೆ. ಯಾರು ಸರಳವಾಗಿರುತ್ತಾರೆ ಅವರು ಮತ್ತು ಯಾರ ಜೀವನದ ಗುರಿ ಈಶ್ವರಪ್ರಾಪ್ತಿಯಾಗಿದೆ ಅವರು. ಸರಳತೆಯಲ್ಲಿ ‘ನಮ್ರತೆ’ ಎಂಬ ಈಶ್ವರನ ಗುಣವಾಗಿದೆ. ಸಾಧನೆ ಮಾಡುತ್ತಿರುವಾಗ ‘ಸಾಧಕನಲ್ಲಿ ಎಲ್ಲವನ್ನು ಸಾಧಿಸುವ ಕ್ಷಮತೆ ಉತ್ಪನ್ನವಾಗುವುದು’, ಇದು ಈಶ್ವರನ ಕೃಪೆಯಾಗಿದೆ. ಈ ಎರಡೂ ಗುಣಗಳು ಯಾರಲ್ಲಿ ಇರುತ್ತದೆಯೋ, ಅವರೇ ‘ಉತ್ತಮ ಸಾಧಕ.’

೫. ಬುದ್ಧಿ ಮತ್ತು ಕರ್ಮ ಇವುಗಳ ಸರಿಯಾದ ಹೊಂದಾಣಿಕೆಯಾದರೆ ಶೀಘ್ರಗತಿಯಿಂದ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುವುದು !

ಬುದ್ಧಿ ಮತ್ತು ಕರ್ಮ ಪರಸ್ಪರ ವಿರುದ್ಧವಾಗಿದ್ದರೆ, ಪ್ರಗತಿಯಾಗುವುದಿಲ್ಲ. ‘ಬುದ್ಧಿ ಮತ್ತು ಕರ್ಮ’ ಇವು ಸರಿಯಾಗಿ ಹೊಂದಾಣಿಕೆಯಾದರೆ ಮಾತ್ರ ಪ್ರಗತಿಯಾಗುತ್ತದೆ. ಯಾವುದೇ ಕರ್ಮವನ್ನು ಮಾಡುವಾಗ ನಮ್ಮ ಸದ್‌ಸದ್ವಿವೇಕಬುದ್ಧಿಯು ನಮಗೆ ‘ಯಾವುದು ಸರಿಯಿದೆ ?’, ಎಂಬ ಅರಿವು ಮಾಡಿಕೊಡುತ್ತದೆ; ಆದರೆ ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ಇವುಗಳಿಂದ ನಾವು ಅದನ್ನು ದುರ್ಲಕ್ಷಿಸಿ ಅಯೋಗ್ಯ ಕೃತಿಯನ್ನು ಮಾಡಿದರೆ, ಕರ್ಮವು ಅಸಂಬದ್ಧವಾಗುತ್ತದೆ. ಸಾತ್ತ್ವಿಕ ಬುದ್ಧಿಯನ್ನು ಹಿಡಿದು ಯೋಗ್ಯ ಕರ್ಮವನ್ನು ಮಾಡಿದರೆ ಮಾತ್ರ ಕರ್ಮವು ಸುಸಂಗತವಾಗಿ ಅದರಲ್ಲಿ ಈಶ್ವರನ ಚೈತನ್ಯವು ಬರುತ್ತದೆ.’

– (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಗಾಡಗೀಳ (೨೨.೩.೨೦೨೦)