ಆಶ್ರಮದಲ್ಲಿರುವ ಜಿಗಣೆಗೆ ಸಾತ್ತ್ವಿಕತೆಯ ಅರಿವಿದೆ ಎಂದು ಪರೀಕ್ಷಣೆಯಿಂದ ದೃಢವಾದುದು ಮತ್ತು ಅದು ಮೃತವಾದ ಬಳಿಕ ಸಪ್ತರ್ಷಿಗಳು ಅದನ್ನು ಆಶ್ರಮದ ಪರಿಸರದಲ್ಲಿರುವ ಯಾವುದಾದರೊಂದು ಒಳ್ಳೆಯ ಮರದ ಕೆಳಗೆ ಮಣ್ಣಿನಲ್ಲಿ ಹೂಳಲು ಹೇಳುವುದು, ಅಲ್ಲದೇ ‘ಅದು ಆಶ್ರಮದಲ್ಲಿರುವುದು ಶುಭಶಕುನವಾಗಿದೆ, ಎಂದೂ ಹೇಳುವುದು

ಸದ್ಗುರು (ಡಾ.) ಮುಕುಲ ಗಾಡಗೀಳ

‘ಆಶ್ರಮದಲ್ಲಿ ಆಯುರ್ವೇದೀಯ ಉಪಚಾರಕ್ಕಾಗಿ ಒಂದು ಜಿಗಣೆಯಿತ್ತು. ಜಿಗಣೆಯು ತ್ವಚೆಗೆ ಅಂಟಿಕೊಳ್ಳುತ್ತದೆ ಮತ್ತು ಶರೀರದಲ್ಲಿರುವ ಅಶುದ್ಧ ರಕ್ತವನ್ನು ಹೀರಿಕೊಳ್ಳುತ್ತದೆ. ಇದರಿಂದ ಮನುಷ್ಯನ ಮೇಲೆ ಉಪಚಾರವಾಗುತ್ತದೆ.  ಆರೋಗ್ಯವನ್ನು ನೀಡುವ ಧನ್ವಂತರಿ ದೇವರ ಕೈಯಲ್ಲಿ ಜಿಗಣೆಯಿರುತ್ತದೆ. ಇದರಿಂದ ‘ಜಿಗಣೆಯು ದೈವೀ ಜೀವವಾಗಿದೆ, ಎನ್ನುವುದು ಗಮನಕ್ಕೆ ಬರುತ್ತದೆ.

ಆಶ್ರಮದಲ್ಲಿದ್ದ ಜಿಗಣೆಯ ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಪರೀಕ್ಷಣೆ ಮಾಡಿದಾಗ, ಅದರಲ್ಲಿ ನಕಾರಾತ್ಮಕ ಶಕ್ತಿ ಇರಲಿಲ್ಲ. ಅದರಲ್ಲಿ ಸಕಾರಾತ್ಮಕ ಶಕ್ತಿಯಿರುವುದು ಕಂಡು ಬಂದಿತು. ‘ಅದರಲ್ಲಿ ಸಾತ್ತ್ವಿಕತೆಯ ಅರಿವು ಹೇಗಿದೆ ?, ಎನ್ನುವ ಬಗ್ಗೆ ಒಂದು ಪ್ರಯೋಗವನ್ನು ಮಾಡಲಾಯಿತು, ಪರೀಕ್ಷಣೆಯ ಸಮಯದಲ್ಲಿ ಅದು ಸಾತ್ತ್ವಿಕ ಆಯುರ್ವೇದೀಯ ಔಷದಿಯ  ಹತ್ತಿರವೇ  ಹೋಯಿತು. ಅದರ ಎದುರಿಗೆ  ಧನ್ವಂತರಿ ದೇವರ ಚಿತ್ರವನ್ನು ಇಟ್ಟಾಗ, ಅದು ಆ ಚಿತ್ರದ ಬಳಿಗೆ ಹೋಗಿ ಧನ್ವಂತರಿ ದೇವರ ಚರಣಗಳನ್ನು ಸ್ಪರ್ಶಿಸಿತು. ಹೀಗೆ ಈ ದೈವೀ ಜೀವವು ೨ ದಿನ ಪ್ರಯೋಗದಲ್ಲಿ ಭಾಗವಹಿಸಿ ಇಂದು (೨.೮.೨೦೨೦ ರಂದು) ಪ್ರಾಣ ಬಿಟ್ಟಿತು.

ಈ ಜಿಗಣೆಯ ಬಗ್ಗೆ ತಮಿಳುನಾಡಿನ ಚೆನ್ನೈಯಲ್ಲಿರುವ ಸಪ್ತರ್ಷಿ ಜೀವನಾಡಿಪಟ್ಟಿ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಇವರಿಗೆ ಹೇಳಿದಾಗ, ಅವರ ಮಾಧ್ಯಮದಿಂದ ಸಪ್ತರ್ಷಿಗಳು ಆಶ್ರಮದಲ್ಲಿ ಈ ಜಿಗಣೆಯ ವಾಸ್ತವ್ಯವಿರುವುದು ಶುಭಶಕುನವಾಗಿದೆ. ಮೃತ ಜಿಗಣೆಯನ್ನು ಆಶ್ರಮದ ಪರಿಸರದಲ್ಲಿರುವ ಒಂದು ಒಳ್ಳೆಯ ವೃಕ್ಷದ ಕೆಳಗೆ ಮಣ್ಣಿನಲ್ಲಿ ಹೂಳಿರಿ. ಅದನ್ನು ಅಲ್ಲಿಡುವಾಗ ಧನ್ವಂತರಿ ದೇವತೆಯ ಶ್ಲೋಕವನ್ನು ಪಠಿಸಿರಿ ಎಂದು ಹೇಳಿದ್ದರು. ಸಪ್ತರ್ಷಿಗಳು ಹೇಳಿದಂತೆ ೨.೮.೨೦೨೦ರಂದು ಮೃತ ಜಿಗಣೆಯನ್ನು ಆಶ್ರಮದ ಕೈತೋಟದ ಅಶ್ವತ್ಥ (ಆಲದ) ವೃಕ್ಷದ ಕೆಳಗೆ ಮಣ್ಣಿನಲ್ಲಿ ಹೂಳಲಾಯಿತು.

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.(೨.೮.೨೦೨೦)