ಕರ್ನಾಟಕದ ಮನೆಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಧಾರ್ಮಿಕತೆಯ ಉತ್ತಮ ಸಂಸ್ಕಾರಗಳು ಸಿಗುವುದರಿಂದ ಅಲ್ಲಿನ ಪೀಳಿಗೆಯು ಸಂಸ್ಕಾರಯುಕ್ತವಾಗಿ ಅಧ್ಯಾತ್ಮಪ್ರಸಾರ ವೇಗದಿಂದ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದ ಕೆಲವು ಅಂಶಗಳು

ಕು. ತೇಜಲ ಪಾತ್ರೀಕರ

೧. ಮಹಾರಾಷ್ಟ್ರದಲ್ಲಿನ ಜನರ ಮಾನಸಿಕತೆ

೧ ಅ. ಮಹಾರಾಷ್ಟ್ರದ ಯುವ ಪೀಳಿಗೆಯಲ್ಲಿ ಆಧುನಿಕ ಶಿಕ್ಷಣ ಪಡೆಯುವುದರ ಕಡೆಗೆ ಹೆಚ್ಚು ಒಲವಿರುವುದು : ‘ಮಹಾರಾಷ್ಟ್ರವನ್ನು ‘ಸಂತರಭೂಮಿ’ ಎಂದು ಗುರುತಿಸಲಾಗುತ್ತದೆ; ಆದರೆ ಸದ್ಯದ ಸ್ಥಿತಿ ಹೇಗಿದೆಯೆಂದರೆ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂತರು ದೇಹತ್ಯಾಗದ ನಂತರ ಅವರ ಉತ್ತರಾಧಿಕಾರಿಗಳು ಇಲ್ಲದಿರುವುದರಿಂದ ಅವರ ಛಾಯಾಚಿತ್ರ ಹಾಗೂ ಪಾದುಕೆಗಳನ್ನು ಇಡಲಾಗುತ್ತದೆ. ಇದರ ಕಾರಣವೇನೆಂದರೆ ಅಲ್ಲಿ ಸಾಧನೆ ಮಾಡಿ ಸಂತ ಪದವಿಯತ್ತ ಮಾರ್ಗಕ್ರಮಣ ಮಾಡುವ ಮುಂದಿನ ಪೀಳಿಗೆಯೇ ಇರುವುದಿಲ್ಲ. ಮಹಾರಾಷ್ಟ್ರದ ಯುವಕರ ಒಲವು ಧಾರ್ಮಿಕತೆ ಹಾಗೂ ಅಧ್ಯಾತ್ಮದೆಡೆಗೆ ಇರುವುದಿಲ್ಲ, ಅವರ ಒಲವು ಆಧುನಿಕ ಶಿಕ್ಷಣ ಪಡೆಯುವುದರ ಕಡೆಗಿದೆ.

೧ ಆ. ಮಹಾರಾಷ್ಟ್ರದಲ್ಲಿನ ಹೆಚ್ಚಿನ ಮನೆಗಳಲ್ಲಿ ‘ದೇವರು-ಧರ್ಮಕ್ಕೆ ಎರಡನೇಯ ಸ್ಥಾನ (ಗೌಣ ಮಹತ್ವ) ಮತ್ತು ವಿಜ್ಞಾನ ಮತ್ತು ಭೌತಿಕ ಶಿಕ್ಷಣಕ್ಕೆ ಮೊದಲನೇಯ ಸ್ಥಾನ’ ಎಂಬ ಸಂಸ್ಕಾರವನ್ನು ಮಕ್ಕಳಲ್ಲಿ ಮಾಡಲಾಗುತ್ತದೆ. ಆದುದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಅಧ್ಯಾತ್ಮದ ಬಾಲ್ಯದಿಂದಲೇ ಬೋಧನೆ ಸಿಗುವುದಿಲ್ಲ.

೨. ಕರ್ನಾಟಕದ ಜನರ ಧಾರ್ಮಿಕತೆಯ ಕಡೆಗಿರುವ ಒಲವು

೨ ಅ. ಕರ್ನಾಟಕದ ಜನರಿಗೆ ಅಧ್ಯಾತ್ಮವನ್ನು ಕಲಿಯುವ ಆಸಕ್ತಿಯಿದೆ : ಸನಾತನದ ರಾಮನಾಥಿ ಆಶ್ರಮಕ್ಕೆ ಇಲ್ಲಿಯವರೆಗೆ ವಿವಿಧ ಸಾಧನಾಮಾರ್ಗಗಳಿಂದ ಸಾಧನೆಯನ್ನು ಮಾಡುವ ಕರ್ನಾಟಕದ ೧೪ – ೧೫ ಜನ ಸಂತರು ಬಂದು ಹೋಗಿದ್ದಾರೆ. ಆ ಸಂತರು ವಿವಿಧವಿದ್ಯೆ ಹಾಗೂ ಆಧ್ಯಾತ್ಮಿಕ ಉಪಾಯಪದ್ಧತಿಗಳನ್ನು ಅರಿತವರಾಗಿದ್ದರು. ‘ಅಧ್ಯಾತ್ಮವನ್ನು ಕಲಿಯುವುದು ಮತ್ತು ಸಂತಪದವಿಯಲ್ಲಿ ವಿರಾಜಮಾನರಾಗುವುದು ಇದರಲ್ಲಿ ಕರ್ನಾಟಕದ ಜನತೆಯು ಅಗ್ರಸ್ಥಾನದಲ್ಲಿದೆ’, ಇದುವೇ ಇದರಿಂದ ಗಮನಕ್ಕೆ ಬರುತ್ತದೆ.

೨ ಆ. ಚಿಕ್ಕ ಮಕ್ಕಳ ಮೇಲೆ ಧಾರ್ಮಿಕತೆಯ ಸಂಸ್ಕಾರಗಳನ್ನು ಮಾಡಲಾಗುತ್ತದೆ : ಕರ್ನಾಟಕದ ಸಾಮಾನ್ಯ ಜನರು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವವರಾಗಿದ್ದಾರೆ. ಅಲ್ಲಿ ಮನೆಮನೆಗಳಲ್ಲಿ ಕುಲಾಚಾರವನ್ನು ಪಾಲಿಸುವುದು ಮತ್ತು ಕುಲದೇವತೆಯ ಆರಾಧನೆ ಮಾಡುವುದು, ಈ ರೀತಿ ಮನೆಯಲ್ಲಿ ಚಿಕ್ಕ ಮಕ್ಕಳ ಮೇಲೆ ಧಾರ್ಮಿಕತೆಯ ಸಂಸ್ಕಾರವನ್ನು ಮಾಡಲಾಗುತ್ತದೆ.

೨ ಇ. ಐ.ಟಿ. ಕಂಪನಿಗಳಲ್ಲಿ ನೌಕರಿ ಮಾಡುವ ಕರ್ನಾಟಕದ ಯುವಕರು ವರ್ಷದಲ್ಲಿ ಒಂದು ಬಾರಿ ಗೋವಾದಲ್ಲಿನ ಕುಲದೇವಿಯ ದರ್ಶನಕ್ಕೆ ಬರುವುದು ಮತ್ತು ಅವರು ದೇವಿಯ ಎದುರು ಭಜನೆಗಳನ್ನು ಪ್ರಸ್ತುತ ಪಡಿಸುವುದು : ಕರ್ನಾಟಕದ ಜನರು ವರ್ಷದಲ್ಲಿ ಒಂದು ಬಾರಿಯಾದರೂ ಕುಲದೇವತೆಯ ದರ್ಶನಕ್ಕೆ ಹೋಗುತ್ತಾರೆ. ಮನೆಯಲ್ಲಿನ ಸಂಸ್ಕಾರಗಳಿಂದಾಗಿ ಯುವಕರು ಕೂಡ ಕುಲದೇವತೆಯ ದರ್ಶನವನ್ನು ಪಡೆಯಲು ಹೋಗುತ್ತಾರೆ. ರಾಮನಾಥಿ ಆಶ್ರಮಕ್ಕೆ ಬಂದ ಒಂದು ಭಜನಾ ಮಂಡಳಿಯಲ್ಲಿ ಕರ್ನಾಟಕದ ೧೨ ರಿಂದ ೧೫ ಜನ ಯುವಕರಿದ್ದರು. ಅವರು ಐ.ಟಿ. ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದರೂ ಪ್ರತಿ ವರ್ಷ ರಜೆ ಪಡೆದು ಕುಲದೇವಿಯ ದರ್ಶನಕ್ಕೆ ಹಾಗೂ ಅವಳ ಚರಣಗಳಲ್ಲಿ ಭಜನೆ ಸೇವೆಯನ್ನು ಸಲ್ಲಿಸಲು ಗೋವಾಕ್ಕೆ ಬರುತ್ತಾರೆ. ವಿಶೇಷವೆಂದರೆ ‘ಅವರ ಕುಲದೇವಿಯ ದೇವಸ್ಥಾನದಲ್ಲಿ ಅವರ ಭಜನೆಯನ್ನು ಆಯೋಜಿಸುವುದಿಲ್ಲ, ಆದರೆ ಈ ಮಂಡಳಿಯು ತಮ್ಮ ಸಾಧನೆಯೆಂದು ಕುಲದೇವಿಯ ಎದುರು ಅವಳಿಗೆ ಕೃಪೆ ಪಡೆಯಲು ತಬಲಾ ಹಾಗೂ ಸಂವಾದಿನಿ ಇವುಗಳೊಂದಿಗೆ ಭಜನೆಗಳನ್ನು ಹೇಳುತ್ತಾರೆ. ಈ ಸಂಸ್ಕಾರಗಳಿಂದಾಗಿಯೇ ಕರ್ನಾಟಕದ ಸಾಮಾನ್ಯ ಜನರ ಆಧ್ಯಾತ್ಮಿಕ ಸ್ತರವು ಮೊದಲೇ ಉತ್ತಮವಾಗಿರುವುದು ಗಮನಕ್ಕೆ ಬಂದಿತು.’

– ಕು. ತೇಜಲ ಪಾತ್ರೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೫.೧.೨೦೨೦)