ಸಾಧಕರು ‘ತಮಗೆ ದೊರೆತ ವಸ್ತುಗಳು ಅನಾವಶ್ಯಕ ಬಳಕೆ ಆಗುತ್ತಿಲ್ಲವಲ್ಲ ?’, ಎಂದು ಕಾಳಜಿ ವಹಿಸಬೇಕು !

ಸೌ. ರಂಜನಾ ಗಡೇಕರ

೧. ಗುರುಧನದ ಹಾನಿಯಾಗಬಾರದೆಂದು, ಸಾಧಕರು ಕಾಳಜಿ ವಹಿಸುವುದು ಆವಶ್ಯಕ !

ಕೆಲವೊಮ್ಮೆ ಸೇವೆ ಮಾಡುವಾಗ ಸಾಧಕರ ನಿಷ್ಕಾಳಜಿಯಿಂದ ಗುರುಧನದ ಹಾನಿಯಾಗಿದೆ. ಸೇವೆಯನ್ನು ‘ಸತ್ಯಂ ಶಿವಂ ಸುಂದರಮ್ |’ ಮಾಡುವ ಪ್ರಯತ್ನದಲ್ಲಿ ಸಾಧಕರು ‘ತಮ್ಮಿಂದ ಧನ ಮತ್ತು ದೊರಕಿದ ವಸ್ತು ಇವುಗಳ ಅನಾವಶ್ಯಕ ಬಳಕೆಯಾಗುತ್ತಿದೆಯಲ್ಲವೇ ?’, ಎಂದು ಕಾಳಜಿ ವಹಿಸಬೇಕು.

೨. ‘ಸಮಾಜದಿಂದ ದೊರಕಿದ ಅರ್ಪಣೆಯನ್ನು ಯೋಗ್ಯವಾಗಿ ಉಪಯೋಗಿಸುವುದು’, ಸಾಧಕರ ಕರ್ತವ್ಯವೇ ಆಗಿದೆ

ಸನಾತನ ಸಂಸ್ಥೆಯ ಕಾರ್ಯಕ್ಕೆ ಯಾವುದೇ ರಾಜಕೀಯ ಬೆಂಬಲವಿಲ್ಲ ಹಾಗೂ ಸಂಸ್ಥೆಯ ಕಾರ್ಯವು ಸಾಧಕರು, ಹಿತಚಿಂತಕರು, ಹಾಗೆಯೇ ಸಮಾಜದಲ್ಲಿನ ವ್ಯಕ್ತಿಗಳಿಂದ ದೊರಕಿದ ಅರ್ಪಣೆಯಿಂದ ನಡೆಯುತ್ತದೆ. ಸಮಾಜದಿಂದ ಧನ ಅಥವಾ ವಸ್ತುಗಳ ಸ್ವರೂಪದಲ್ಲಿ ಅರ್ಪಣೆಯು ದೊರೆಯತ್ತದೆ. ‘ಅದರ ಸದುಪಯೋಗ ಪಡೆಯುವುದು’, ಎಲ್ಲ ಸಾಧಕರ ಕರ್ತವ್ಯವಾಗಿದೆ. ಇಲ್ಲದಿದ್ದರೆ ನಾವು ನಮಗೆ ಸಹಾಯ ಮಾಡಿದವರ ವಿಶ್ವಾಸ ಕಳೆದುಕೊಂಡಂತಾಗಿದೆ.

೩. ಪರಾತ್ಪರ ಗುರು ಡಾ. ಆಠವಲೆಯವರ ಬೋಧನೆ

೩ ಅ. ಬರೆಯಲು ಒಳ್ಳೆಯ ಕಾಗದಗಳನ್ನು ಬಳಸದೇ ಒಂದು ಬದಿಯಲ್ಲಿ ಬರೆದ ಕಾಗದದಲ್ಲಿ ಬರೆಯುವುದು : ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಧನ ಮತ್ತು ಪ್ರತಿಯೊಂದು ವಸ್ತು ಇವುಗಳನ್ನು ಮಿತವಾಗಿ ಬಳಸಲು ಕಲಿಸಿದ್ದಾರೆ. ಅನೇಕ ಸಾಧಕರು ಅದನ್ನು ಅನುಭವಿಸಿದ್ದಾರೆ. ಪರಾತ್ಪರ ಗುರು ಡಾಕ್ಟರರು ಬರೆಯಲು ಒಳ್ಳೆಯ ಕಾಗದವನ್ನು ಬಳಸದೇ ಒಂದು ಬದಿಯಲ್ಲಿ ಬರೆದ ಕಾಗದದಲ್ಲಿ ಬರೆಯುತ್ತಾರೆ. ಅವರು ಪ್ರವಾಸದ ಟಿಕೀಟುಗಳ ಹಿಂದಿನ ಬದಿಯಲ್ಲಿ, ಮುದ್ರಿಸಿದ ಕಾಗದಗಳ ಬದಿಯಲ್ಲಿ ಉಳಿದಿರುವ ಕಾಗದದ ಪಟ್ಟಿ ಇವುಗಳ ಮೇಲೆ ಬರೆಯುತ್ತಾರೆ.

೩ ಆ. ವಸ್ತುಗಳ ಬಗ್ಗೆ ಆತ್ಮೀಯತೆ ಮತ್ತು ಕೃತಜ್ಞತಾಭಾವ ಇರಬೇಕು ! : ಅವರು ಚಿಕ್ಕ ಚಿಕ್ಕ ಕೃತಿಗಳಿಂದ ಸಾಧಕರಿಗೆ ಮಿತವ್ಯಯ ಮತ್ತು ವಸ್ತುಗಳನ್ನು ಯೋಗ್ಯವಾಗಿ ಉಪಯೋಗಿಸಲು ಕಲಿಸುತ್ತಾರೆ. ಅವರು ಸಾಧಕರಿಗೆ ತಮ್ಮ ಕೋಣೆಯ ಸ್ವಚ್ಛತೆಗಾಗಿ ಹರಿದ ಬಟ್ಟೆಗಳನ್ನು ಹೊಲಿದು ಉಪಯೋಗಿಸಲು ಹೇಳುತ್ತಾರೆ. ‘ನಮಗೆ ವಸ್ತುಗಳ ಬಗ್ಗೆ ಆತ್ಮೀಯತೆ ಮತ್ತು ಕೃತಜ್ಞತಾಭಾವವಿರಬೇಕು. ವಸ್ತುಗಳ ಯೋಗ್ಯವಾದ ಕಾಳಜಿ ವಹಿಸಬೇಕು’, ಎಂದು ಅವರು ಹೇಳುತ್ತಾರೆ. ಇದರಲ್ಲಿ ಅವರ ದೂರದೃಷ್ಟಿಯು ಕಂಡು ಬರುತ್ತದೆ. ಆ ದೃಷ್ಟಿಯಿಂದ ನಮ್ಮೆಲ್ಲರ ಪ್ರಯತ್ನವು ಕಡಿಮೆಯಾಗಿದೆ. ನಮಗೆ ಸಂಪತ್ಕಾಲದಲ್ಲಿ ವಸ್ತುಗಳು ಸಹಜವಾಗಿ ದೊರಕುತ್ತವೆ; ಆದರೆ ಆಪತ್ಕಾಲದಲ್ಲಿ ನಮ್ಮ ದೃಷ್ಟಿಯಿಂದ ಬಿಸಾಡುವಂತಹ ವಿಷಯಗಳಿಗೂ ಮಹತ್ವ ತಿಳಿಯುತ್ತದೆ.

೪. ವಸ್ತುಗಳ ಅನಾವಶ್ಯಕ ಬಳಕೆ ಮಾಡುವುದರಿಂದ ಆಗುವ ದುಷ್ಪರಿಣಾಮ

೪ ಅ. ವಸ್ತುಗಳ ನಿರ್ಮಿತಿಗಾಗಿ ಹೆಚ್ಚು ಹಣ ಖರ್ಚಾಗುವುದು : ನಾವು ಒಂದು ವಸ್ತುವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸದಿದ್ದರೆ ಆ ವಸ್ತುವನ್ನು ಪುನಃ ನಿರ್ಮಿಸಬೇಕಾಗುತ್ತದೆ. ಕೆಲವೊಮ್ಮೆ ಆ ವಸ್ತುಗಳ ನಿರ್ಮಾಣಕ್ಕಾಗಿ ಎರಡುಪಟ್ಟು, ಮೂರುಪಟ್ಟು ಅಥವಾ ಅದಕ್ಕಿಂತಲೂ ಹೆಚ್ಚು ಹಣ ಖರ್ಚಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಉಪಯೋಗಿಸುತ್ತಿರುವ ವಸ್ತುಗಳ ನಿರ್ಮಿತಿಗಾಗಿ ಎಷ್ಟೋ ಜನರ ಶ್ರಮ, ವಿದ್ಯುತ್, ಸಮಯ, ಧನ ಮತ್ತು ದೇಶದ ನೈಸರ್ಗಿಕ ಸಂಪತ್ತು ಮುಂತಾದವುಗಳನ್ನು ಉಪಯೋಗಿಸಲಾಗುತ್ತದೆ. ಆದ್ದರಿಂದ ವಸ್ತುಗಳ ಅಭಾವವು ಉದ್ಭವಿಸುತ್ತದೆ. ಅದರ ಪರಿಣಾಮದಿಂದ ಆ ವಸ್ತುಗಳ ಬೆಲೆಯಲ್ಲಿಯೂ ಹೆಚ್ಚಳವಾಗುತ್ತದೆ.

೪ ಆ. ಕಾಗದಗಳ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಬೇಕಾಗುತ್ತದೆ ಮತ್ತು ಕಾರ್ಖಾನೆಗಳಿಂದಾಗುವ ಪ್ರದೂಷಣೆಯು ಇನ್ನೊಂದು ಗಂಭೀರ ಸಮಸ್ಯೆಯಾಗಿದೆ.

೪. ಇ. ಜೀವನಾವಶ್ಯಕ ವಿಷಯಗಳ ಅಭಾವವಾಗುವುದು : ಕಲಿಯುಗದಲ್ಲಿ ಮನುಷ್ಯ ತನ್ನ ಭೋಗವಾದಿ ಮತ್ತು ಸ್ವೇಚ್ಛಾಚಾರದ ವರ್ತನೆಯಿಂದ ಹಾಗೆಯೇ ಪ್ರತಿಷ್ಠೆಯ ಲೋಭಕ್ಕಾಗಿ ಮತ್ತು ಸ್ಪರ್ಧಾತ್ಮಕ ವೃತ್ತಿಯಿಂದ ಜೀವನಾವಶ್ಯಕ ವಸ್ತುಗಳು ಉದಾ. ಆಹಾರ, ನೀರು, ವಸ್ತ್ರ ಮುಂತಾದವುಗಳನ್ನು ವ್ಯರ್ಥ ಮಾಡುತ್ತಾನೆ. ಆದ್ದರಿಂದ ಈ ಜೀವನಾವಶ್ಯಕ ವಿಷಯಗಳ ಅಭಾವವಾಗುತ್ತದೆ. ಜೀವನಾವಶ್ಯಕ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗುವುದರಿಂದ ಬಡತನ ರೇಖೆಯ ಕೆಳಗಿರುವ ಜನರು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಮತ್ತು ಎಷ್ಟೋ ಜನರು ಉಪವಾಸವಿರಬೇಕಾಗುತ್ತದೆ.

೫. ರಾಷ್ಟ್ರದ ಸಮತೋಲಿತ ಅಭಿವೃದ್ಧಿಯನ್ನು ಸಾಧಿಸಲು ರಾಜಕಾರಣಿಗಳು ಮಿತವ್ಯಯವನ್ನು ಅಂಗೀಕರಿಸಬೇಕು !

ಈಶ್ವರನು ನೀಡಿದ ಬೋಧನೆಯನ್ನು ಆಚರಣೆಯಲ್ಲಿ ತಂದು ಅದರಂತೆ ಕೃತಿ ಮಾಡಿದರೆ ನಿಸರ್ಗ, ಪರಿಸರ ಮತ್ತು ಮನುಷ್ಯಬಲ ಮುಂತಾದವುಗಳ ಹಾನಿಯಾಗುವುದಿಲ್ಲ. ನಮ್ಮ ಆಧ್ಯಾತ್ಮಿಕ ಪ್ರಗತಿಯೊಂದಿಗೆ ರಾಷ್ಟ್ರದ ಸಮತೋಲಿತ ಅಭಿವೃದ್ಧಿಯನ್ನು ಸಾಧಿಸಬಹುದು. ರಾಜಕಾರಣಿಗಳು ಇಂತಹ ವೃತ್ತಿಯನ್ನು ಅಂಗೀಕರಿಸಿದ್ದರೆ, ದೇಶದ ಮೇಲೆ ಎಂದಿಗೂ ಸಾಲದ ಭಾರ ಇರುತ್ತಿರಲಿಲ್ಲ.

೬. ಸಾಧಕರನ್ನು ತಯಾರಾಗಬೇಕೆಂಬ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ತಳಮಳ

ಈಶ್ವರನು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾಧ್ಯಮದಿಂದ ಚಿಕ್ಕ ಚಿಕ್ಕ ಕೃತಿಗಳಿಂದಲೂ ಅದರ ಹಿಂದಿರುವ ದೊಡ್ಡ ತತ್ತ್ವವನ್ನು ಕಲಿಸುತ್ತಿದ್ದಾನೆ. ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಪ್ರಯತ್ನಿಸುತ್ತಿರುವಾಗ ಮತ್ತು ನಂತರ ಅದನ್ನು ಮುನ್ನಡೆಸಲು ಅವರ ಬೋಧನೆಯು ಎಲ್ಲರಿಗಾಗಿ ಪ್ರೇರಣೆ, ಲಾಭದಾಯಕ ಮತ್ತು ಮಹತ್ವದ್ದಾಗಿದೆ.

‘ದೇವರ ಈ ಗುಣವನ್ನು ಮೈಗೂಡಿಸಿಕೊಳ್ಳಲು ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಚಿಕ್ಕ ಚಿಕ್ಕ ಕೃತಿಗಳಿಗೂ ಮಹತ್ವವಿದೆ’, ಎಂಬುದನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸಲು ಮತ್ತು ಅವರನ್ನು ನಿರ್ಮಿಸಲು ಅವರು ಹಗಲು-ರಾತ್ರಿ ತುಂಬಾ ಕಷ್ಟ ಪಡುತ್ತಿದ್ದಾರೆ. ಸಾಧಕರು ತಮ್ಮ ಕ್ಷಮತೆಗನುಸಾರ ಮಾಡಲು ಪ್ರಯತ್ನಿಸುತ್ತಾರೆ; ಆದರೆ ಕಾಗದಗಳಿಗೆ ಸಂಬಂಧಿಸಿದ ತಪ್ಪಿನಿಂದ ಆ ಪ್ರಯತ್ನವು ತುಂಬಾ ಕಡಿಮೆಯಾಗಿದೆ.

‘ಪ್ರತಿಯೊಂದು ವಸ್ತು, ಧನ ಇವೆಲ್ಲವೂ ಗುರುಗಳು ನೀಡಿದ ಬೋಧನೆಗನುಸಾರ ಹಾಗೂ ಅವರಿಗೆ ಅಪೇಕ್ಷಿತವಿರುವಂತೆ ಆಗುತ್ತಿದೆಯಲ್ಲ ?’, ಎಂದು ನೋಡುವುದು ಆವಶ್ಯಕವಾಗಿದೆ. ‘ಪ್ರಸಾರ, ಹಾಗೆಯೇ ಎಲ್ಲ ಆಶ್ರಮಗಳಲ್ಲಿರುವ ಸಾಧಕರು ಇದರ ಕಾಳಜಿ ವಹಿಸಬೇಕು ಮತ್ತು ಗುರುಧನದ ಹಾನಿಯನ್ನು ತಡೆಗಟ್ಟಬೇಕು.’- ಸೌ. ರಂಜನಾ ಗೌತಮ ಗಡೇಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.