ಮುಂಬರುವ ಆಪತ್ಕಾಲದ ಭೀಕರತೆಯ ಕುರಿತು ಸಂತರ ಭವಿಷ್ಯವಾಣಿ !

‘ಮಹಾಭಾರತದ ಯುದ್ಧವು ೧೮ ದಿನಗಳವರೆಗೆ ನಡೆದಿತ್ತು, ಅದರಲ್ಲಿ ಲಕ್ಷಾಂತರ ಜನರು ಮೃತಪಟ್ಟರು. ರಾಮಾಯಣದ ಯುದ್ಧ ೬ ತಿಂಗಳುಗಳ ವರೆಗೆ ನಡೆದಿತ್ತು, ಅದರಲ್ಲಿ ಸಾವಿರಾರು ಜನರು ಮೃತಪಟ್ಟರು; ಈಗ ಮಾನವರ ಮನಸ್ಸಿನಲ್ಲಿ ಮಹಾಭಾರತವನ್ನು ರಚಿಸಲಾಗುತ್ತಿದೆ. ಒಂದುವೇಳೆ ಈ ಯುದ್ಧವು ಸಂಭವಿಸಿದರೆ, ಅದು ೧೮ ದಿನಗಳಲ್ಲ, ಕೇವಲ ೧೮ ಗಂಟೆಗಳಲ್ಲಿ ಲಕ್ಷಾಂತರ ಜನರಲ್ಲ, ಕೋಟ್ಯಾಂತರ ಜನರು ಮರಣ ಹೊಂದುವರು ಮತ್ತು ಕ್ಷಣಾರ್ಧದಲ್ಲಿ ಜಗತ್ತು ನಾಶವಾಗುವುದು. ಅಮೇರಿಕಾ ಮತ್ತು ರಶಿಯಾದಂತಹ ಮಹಾಶಕ್ತಿಗಳು ಎಷ್ಟೊಂದು ಅಣ್ವಸ್ತ್ರಗಳನ್ನು ಸಿದ್ಧ ಮಾಡಿಟ್ಟಿವೆ ಎಂದರೆ, ಒಂದು ವೇಳೆ ಅವರು ಮನಸ್ಸು ಮಾಡಿದರೆ ಈ ಜಗತ್ತನ್ನು ೧೫ ಬಾರಿ ಕೆಲವೇ ಗಂಟೆಗಳಲ್ಲಿ ನಾಶ ಮಾಡಬಹುದು. ಈ ಘಾತಕ ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಎಂತಹ ಜನರ ಕೈಯಲ್ಲಿ ಕೊಡಲಾಗಿದೆ ಎಂದರೆ, ಅವರು ಹೆಚ್ಚು-ಕಡಿಮೆ ಅಂಧರೇ ಆಗಿದ್ದರೆ. ಅವರ ಮುಖದ ಮೇಲೆ ಕಣ್ಣುಗಳಿದ್ದರೂ ಅವರ ಅಂತಃಚಕ್ಷು ಸಂಪೂರ್ಣ ಮುಚ್ಚಿವೆ. ಅವರ ಮನಸ್ಸಿನ ಹಾಗೂ ಹೃದಯದ ಕಣ್ಣುಗಳು ಸಂಪೂರ್ಣ ಮುಚ್ಚಿವೆ. – ರಾಷ್ಟ್ರಸಂತ ತರುಣ ಸಾಗರ (ಆಧಾರ : ‘ಅಧ್ಯಾತ್ಮ ಅಮೃತ, ಮಾರ್ಚ್ ೨೦೧೭)