ಅಧಿಕ ಮಾಸದ ನಿಮಿತ್ತ ನಿರಂತರ ಧರ್ಮಪ್ರಸಾರದ ಕಾರ್ಯವನ್ನು ಮಾಡುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯ ಸಂಪಾದಿಸಿ ಹಾಗೂ ಆಧ್ಯಾತ್ಮಿಕ ಲಾಭವನ್ನೂ ಪಡೆಯಿರಿ !
‘೧೮.೯.೨೦೨೦ ರಿಂದ ೧೬.೧೦.೨೦೨೦ ಈ ಅವಧಿಯಲ್ಲಿ ‘ಅಧಿಕ ಮಾಸವಿದೆ. ಈ ಮಾಸದಲ್ಲಿ ನಾಮಜಪ, ಸತ್ಸಂಗ, ಸತ್ಸೇವೆ, ತ್ಯಾಗ, ದಾನ ಇತ್ಯಾದಿಗಳಿಗೆ ಹೆಚ್ಚು ಮಹತ್ವವಿರುತ್ತದೆ. ಈ ಮಾಸದಲ್ಲಿ ದಾನ ಮಾಡಿದರೆ ಹೆಚ್ಚು ಪ್ರಮಾಣದಲ್ಲಿ ಫಲ ಸಿಗುವುದರಿಂದ ಅನೇಕ ಜನರು ಅನ್ನದಾನ, ವಸ್ತ್ರದಾನ ಮತ್ತು ಜ್ಞಾನದಾನ ಇತ್ಯಾದಿ ಮಾಡುತ್ತಾರೆ. ದಾನವು ಪಾಪನಾಶಕವಾಗಿದ್ದು ಅದು ಪುಣ್ಯವನ್ನು ಪ್ರಾಪ್ತಿಮಾಡಿಕೊಡುತ್ತದೆ.
೧. ಅನ್ನದಾನದ ಅಸಾಧಾರಣ ಮಹತ್ವ !
‘ಅನ್ನದಾನ ಮಾಡುವುದು ಇದನ್ನು ಶ್ರೇಷ್ಠ ಕರ್ಮವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮಶಾಸ್ತ್ರಕ್ಕನುಸಾರ ಯಾವ ಗೃಹಸ್ಥನು ಅರ್ಥಾರ್ಜನೆ ಮಾಡುವ ಹಾಗೂ ಪ್ರತಿದಿನ ಮನೆಯಲ್ಲಿ ಅನ್ನವನ್ನು ಬೇಯಿಸುವ ಗೃಹಸ್ಥರು ಅನ್ನದಾನ ಮಾಡುವುದು ಅವರ ಕರ್ತವ್ಯದ ಭಾಗವೇ ಆಗಿದೆ. ‘ಸದ್ಭಾವನೆಯಿಂದ ‘ಸತ್ಪಾತ್ರೆ ಅನ್ನದಾನ ಮಾಡಿದರೆ ಅನ್ನದಾನಕ್ಕೆ ಯೋಗ್ಯ ಫಲ ಸಿಗುತ್ತದೆ ಹಾಗೂ ಎಲ್ಲ ಪಾಪಕರ್ಮಗಳಿಂದ ಮುಕ್ತನಾಗಿ ಅವನು ಈಶ್ವರನ ಸಮೀಪಕ್ಕೆ ಹೋಗುತ್ತಾನೆ, ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಅನ್ನದಾನ ಮಾಡಿದರೆ ಅನ್ನದಾನ ಮಾಡುವ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗುತ್ತದೆ.
೨. ನಿರಂತರ ಧರ್ಮಪ್ರಸಾರದ ಕಾರ್ಯವನ್ನು ಮಾಡುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿರಿ !
ಸದ್ಯ ಧರ್ಮಗ್ಲಾನಿಯ ಕಾಲವಾಗಿರುವುದರಿಂದ ‘ಧರ್ಮಪ್ರಸಾರ ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಧರ್ಮಪ್ರಸಾರವನ್ನು ಮಾಡುವ ಸಂತರು, ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ಅನ್ನದಾನ ಮಾಡುವುದು ಸರ್ವಶ್ರೇಷ್ಠ ದಾನವಾಗುತ್ತದೆ. ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧವಾಗಿದೆ. ಸನಾತನ ಸಂಸ್ಥೆಯ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಧರ್ಮಪ್ರಸಾರದ ಕಾರ್ಯವನ್ನು ಮಾಡಲಾಗುತ್ತದೆ. ಸದ್ಯ ರಾಷ್ಟ್ರ ಹಾಗೂ ಧರ್ಮ ಸೇವೆ ಮಾಡುವುದರ ಮಹತ್ವವನ್ನು ಗಮನದಲ್ಲಿಟ್ಟು ನೂರಾರು ಸಾಧಕರು ಆಶ್ರಮಗಳಲ್ಲಿದ್ದು ಪೂರ್ಣವೇಳೆ ಸೇವೆ ಮಾಡುತ್ತಿದ್ದಾರೆ. ಧರ್ಮಜಾಗೃತಿಯ ಕಾರ್ಯವನ್ನು ನಿರಂತರವಾಗಿ ಮಾಡುವ ಸನಾತನದ ಆಶ್ರಮಗಳಿಗೆ ಅನ್ನದಾನಕ್ಕಾಗಿ ಧನಸಹಾಯ ಮಾಡುವ ಅವಕಾಶವು ಅರ್ಪಣೆದಾರರಿಗೆ ಲಭಿಸುತ್ತಿದೆ.
ಅಧಿಕ ಮಾಸದ ನಿಮಿತ್ತ ಸಾಧಕರಿಗೆ ಅನ್ನದಾನ ಮಾಡಲು ಇಚ್ಛಿಸುವ ಅರ್ಪಣೆದಾರರು ಈ ಕೆಳಗಿನ ಕ್ರಮಾಂಕವನ್ನು ಸಂಪರ್ಕಿಸಬಹುದು.
ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610
ವಿ-ಅಂಚೆ : sಚಿಟಿಚಿಣಚಿಟಿ.sಚಿಟಿsಣhಚಿ೨೦೨೫@gmಚಿiಟ.ಛಿom
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ – 403401
ಅನ್ನದಾನ ಮಾಡುವಾಗ ಸಂಸ್ಥೆಗೆ ಚೆಕ್ ಕೊಡಲಿಕ್ಕಿದ್ದರೆ ಅದನ್ನು ‘ಸನಾತನ ಸಂಸ್ಥೆಯ ಹೆಸರಿಗೆ ಕೊಡಬೇಕು.
https://www.sanatan.org/en/donate ಇಲ್ಲಿ ಕೂಡ ದಾನ (ಅರ್ಪಣೆ) ಮಾಡುವ ಸೌಲಭ್ಯವಿದೆ.
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೨೫.೮.೨೦೨೦)