ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಶ್ರೀರಾಮನ ಅಸ್ತಿತ್ವದ ಅನುಭೂತಿಯನ್ನು ನೀಡಿದ ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿರುವ ರಾಮಲಲ್ಲಾನ ದರ್ಶನ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಮಹರ್ಷಿಗಳು ಹೇಳಿದಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದಿನಾಂಕ ೩ ಆಗಸ್ಟ್ ೨೦೨೦ ರಂದು ಅಯೋಧ್ಯೆಯಲ್ಲಿನ ಶ್ರೀರಾಮಜನ್ಮಭೂಮಿಗೆ ಹೋಗಿ ರಾಮ ಲಲ್ಲಾನ ಭಾವಪೂರ್ಣ ದರ್ಶನವನ್ನು ಪಡೆದರು. ಆ ಸಮಯದಲ್ಲಿ ನಡೆದ ವೈಶಿಷ್ಟ್ಯಪೂರ್ಣ ಘಟನಾವಳಿಗಳು ಮತ್ತು ದೊರಕಿದ ದೈವೀ ಸಂಕೇತಗಳನ್ನು ಇಲ್ಲಿ ಪ್ರಕಾಶಿಸುತ್ತಿದ್ದೇವೆ.

೧. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಬೆಳಗ್ಗೆ ೮.೪೫ ರಿಂದ ೯.೦೦ ಗಂಟೆಯವರೆಗೆ ಶ್ರೀರಾಮಜನ್ಮಭೂಮಿಯಲ್ಲಿ ಇದ್ದರು. ವಿಶೇಷವೇನೆಂದರೆ ಸರಿಯಾಗಿ ೯.೦೦ ಗಂಟೆಗೆ ಶ್ರೀರಾಮ ಜನ್ಮಭೂಮಿಯಲ್ಲಿ ನ್ಯಾಸದ ಕೋಶಾಧ್ಯಕ್ಷರಾದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಹಸ್ತಗಳಿಂದ ಪೂಜೆಯು ಪ್ರಾರಂಭವಾಯಿತು.

೨. ಮೋಡದ ವಾತಾವರಣದಲ್ಲಿಯೂ ರಾಮಲಲ್ಲಾನ ದರ್ಶನದ ನಂತರ ಸೂರ್ಯನ ಸುಂದರ ದರ್ಶನ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ರಾಮಲಲ್ಲಾನ ದರ್ಶನಕ್ಕಾಗಿ ಶ್ರೀರಾಮಜನ್ಮ ಭೂಮಿಯತ್ತ ಹೋಗುತ್ತಿರುವಾಗ ಆಕಾಶವು ಮೋಡಗಳಿಂದ ತುಂಬಿತ್ತು. ದರ್ಶನವನ್ನು ಪಡೆದುಕೊಂಡು ಹೊರಗೆ ಬಂದಾಗ ಮಾತ್ರ ಸೂರ್ಯನು ಮೋಡದಿಂದ ಹೊರಗೆ ಬಂದು ಸುಂದರ ದರ್ಶನವನ್ನು ನೀಡಿದನು. ತದನಂತರ ಸೂರ್ಯನು ತಕ್ಷಣ ಮೋಡಗಳಲ್ಲಿ ಮರೆಯಾದನು. (ಇದೇ ರೀತಿಯ ಅನುಭವವು ರಾಮನಾಥಿ ಆಶ್ರಮದಲ್ಲಿ ಸೂಕ್ಷ್ಮ ಪರೀಕ್ಷಣೆ ಮಾಡುವಾಗ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೂ ಬಂದಿತು. – ಸಂಕಲನಕಾರರು)

೨ ಅ ಸೂರ್ಯ ಮತ್ತು ಪ್ರಭು ಶ್ರೀರಾಮ ಮತ್ತು ಸನಾತನದ ಮೂವರು ಗುರುಗಳಲ್ಲಿರುವ ಪರಸ್ಪರ ಸಂಬಂಧ : ಶ್ರೀರಾಮ ಸೂರ್ಯವಂಶಿಯಾಗಿದ್ದಾನೆ. ಸನಾತನದ ಮೂವರು ಗುರುಗಳೆಂದರೆ ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜನ್ಮವೂ ಸೂರ್ಯ ದೆಶೆಯಲ್ಲಿ ಆಗಿದೆ. ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜನ್ಮವು ಅನುಕ್ರಮವಾಗಿ ಮಕರ, ಕನ್ಯಾ ಮತ್ತು ವೃಷಭ ರಾಶಿಗಳಲ್ಲಿ ಆಗಿದೆ. ಈ ಮೂರೂ ರಾಶಿಗಳು ಸೂರ್ಯನಿಗೆ ಸಂಬಂಧಿಸಿವೆ. ಆದುದರಿಂದ ಇಂದು ರಾಮಲಲ್ಲಾನ ದರ್ಶನವಾದ ಬಳಿಕ ಸೂರ್ಯನು ದರ್ಶನ ನೀಡುವುದೆಂದರೆ ಶ್ರೀರಾಮನ ದರ್ಶನದ ಬಳಿಕ ಅವನ ಆಶೀರ್ವಾದ ದೊರಕಿದಂತೆಯೇ ಆಗಿದೆ.

೩. ರಾಮಲಲ್ಲಾನ ದರ್ಶನವನ್ನು ಪಡೆದ ಬಳಿಕ ಯಾವುದಾದರೊಂದು ಸೂಕ್ಷ್ಮ ಯುದ್ಧಭೂಮಿಗೆ ಹೋದಂತೆ ಅನಿಸುವುದು

ಶ್ರೀರಾಮಜನ್ಮಭೂಮಿಯ ದರ್ಶನವನ್ನು ಪಡೆದುಕೊಂಡು ಹೊರಗೆ ಬರುತ್ತಿರುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಬಹಳ ಆಯಾಸವಾಯಿತು. ಆಗ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳರು ‘ಶ್ರೀರಾಮಜನ್ಮಭೂಮಿಗೆ ಹೋಗಿ ರಾಮಲಲ್ಲಾನ ದರ್ಶನವನ್ನು ಪಡೆದ ಬಳಿಕ ಸೂಕ್ಷ್ಮದಲ್ಲಿ ಒಂದು ಯುದ್ಧಭೂಮಿಗೆ ಹೋಗಿ ಬಂದಂತಾಯಿತು. ಈ ಕಾರಣದಿಂದ ಹೊರಗೆ ಬಂದ ಬಳಿಕ ಬಹಳ ಆಯಾಸವಾಯಿತು ಎಂದು ಹೇಳಿದರು.  ಇದರಿಂದ ‘ಶ್ರೀರಾಮಮಂದಿರ ಸ್ಥಾಪನೆಯಾಗಬಾರದು ಎಂದು ಸೂಕ್ಷ್ಮದಿಂದ ಕೆಟ್ಟ ಶಕ್ತಿಗಳು ಎಷ್ಟು ದೊಡ್ಡ ಪ್ರಮಾಣದಲ್ಲಿ ವಿರೋಧವನ್ನು ಮಾಡುತ್ತಿವೆ; ಎಂಬುದು ಗಮನಕ್ಕೆ ಬರುತ್ತದೆ.

೪. ದರ್ಶನದ ಸಮಯದಲ್ಲಿ ನಿಸರ್ಗದೇವತೆಯು ಮಾಡಿದ ಕೃಪೆ

ರಾಮಲಲ್ಲಾನ ದರ್ಶನಕ್ಕೆ ಹೋಗುವ ಮೊದಲು ಅಯೋಧ್ಯೆಯಲ್ಲಿ ಮಳೆ ಬರುತ್ತಿತ್ತು. ಮಳೆಯ ಮಾಧ್ಯಮದಿಂದ ವರುಣದೇವನ ಆಶೀರ್ವಾದ ದೊರಕಿತು. ಬಳಿಕ ದರ್ಶನಕ್ಕೆ ಹೋಗುವಾಗ ಮಳೆ ನಿಂತಿತು. ಇದು ನಿಸರ್ಗದೇವತೆಯ ಕೃಪೆಯೇ ಆಗಿದೆ ಎಂದು ಅನಿಸಿತು. – ಶ್ರೀ. ವಿನಾಯಕ ಶಾನಭಾಗ, ಅಯೋಧ್ಯೆ, ಉತ್ತರ ಪ್ರದೇಶ (೩.೮.೨೦೨೦)

ಸಂಚಾರಸಾರಿಗೆಯ ನಿಷೇಧದ ಕಾಲಾವಧಿಯಲ್ಲಿ ಶ್ರೀರಾಮಜನ್ಮಭೂಮಿಯಲ್ಲಿರುವ ಶ್ರೀರಾಮಲಲ್ಲಾನ ದರ್ಶನವನ್ನು ಪಡೆಯಲು ಸಾಧ್ಯವಾಗುವುದೆಂದರೆ ಪರಾತ್ಪರ ಗುರುದೇವರ ಕೃಪೆಯೇ ಆಗಿದೆ ! – ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ

ಸದ್ಯ ಎಲ್ಲೆಡೆ ಕೊರೊನಾ ಮಹಾಮಾರಿಯಿಂದ ಸಂಕಟ ಉಂಟಾಗಿದೆ. ಸಂಚಾರಸಾರಿಗೆ ನಿಷೇಧದ ಕಾಲಾವಧಿಯಲ್ಲಿ ಸಾವಿರಾರು ಕಿಲೋಮೀಟರ್ ದೂರ ಪ್ರವಾಸ ಮಾಡಿ ಶ್ರೀರಾಮನ ಅಯೋಧ್ಯಾ ನಗರಕ್ಕೆ ಹೋಗಲು ಸಾಧ್ಯವಾಗುವುದೆಂದರೆ, ಪರಾತ್ಪರ ಗುರುದೇವರ ಕೃಪೆಯೇ ಆಗಿದೆ. ಕೊರೊನಾ ಮಹಾಮಾರಿಯಿಂದ ಮತ್ತು ಭೂಮಿಪೂಜೆ ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿಗಳ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಬಿಗಿಯಾದ ಪೊಲೀಸ್ ಬಂದೋಬಸ್ತ್ ಇರುವಾಗಲೂ ಶ್ರೀರಾಮಜನ್ಮಭೂಮಿಯಲ್ಲಿನ ರಾಮಲಲ್ಲಾನ ದರ್ಶನವನ್ನು ಪಡೆಯುವುದು ಸುಲಭವಾಗಿರಲಿಲ್ಲ. ಕೇವಲ ಗುರುಕೃಪೆಯಿಂದಲೇ ಈ ಮಾರ್ಗ ಸುಲಭ ವಾಯಿತು ಮತ್ತು ಗುರುದೇವರು ನಮಗೆ ಅಳಿಲಿನಂತೆ ಶ್ರೀರಾಮನ ಚರಣಗಳವರೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬಂದರು. ಇದಕ್ಕಾಗಿ ನಾವು ಪರಾತ್ಪರ ಗುರು ಡಾ. ಆಠವಲೆಯವರ ಚರಣ ಗಳಲ್ಲಿ ಕೋಟಿ ಕೋಟಿ ಕೃತಜ್ಞರಾಗಿದ್ದೇವೆ.