
ಪ್ರಸ್ತುತ ಚಾತುರ್ಮಾಸ ನಡೆಯುತ್ತಿದೆ, ಚಾತುರ್ಮಾಸದ ಮಹತ್ವ, ವೈಶಿಷ್ಟ್ಯಗಳೇನು ? ಈ ಅವಧಿಯಲ್ಲಿ ಯಾವೆಲ್ಲ ವ್ರತಗಳನ್ನು ಮಾಡಬೇಕು ? ಮುಂತಾದ ಮಾಹಿತಿ ಗಳನ್ನು ವಾಚಕರಿಗಾಗಿ ನೀಡುತ್ತಿದ್ದೇವೆ.
ಋಷಿಪಂಚಮಿ
ತಿಥಿ : ಭಾದ್ರಪದ ಶುಕ್ಲ ಪಂಚಮಿ
ಋಷಿ : ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ.
ಉದ್ದೇಶ
ಅ. ‘ತಮ್ಮ ತಪೋಬಲದಿಂದ ಜಗತ್ತಿನಲ್ಲಿನ ಮಾನವರಿಗೆ ಅನಂತ ಉಪಕಾರವನ್ನು ಮಾಡಿದ ಮತ್ತು ಮಾನವನ ಜೀವನಕ್ಕೆ ಯೋಗ್ಯ ದಿಶೆಯನ್ನು ತೋರಿಸಿದ ಋಷಿಗಳನ್ನು ಈ ದಿನ ಸ್ಮರಿಸಲಾಗುತ್ತದೆ. – (ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
ಆ. ಮಾಸಿಕ ಸರದಿ, ಅಶೌಚ ಮತ್ತು ಸ್ಪರ್ಶಾಸ್ಪರ್ಶಗಳಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಈ ವ್ರತದಿಂದ ಹಾಗೂ ಗೋಕುಲಾಷ್ಟಮಿಯ ದಿನ ಮಾಡಿದ ಉಪವಾಸದಿಂದ ಕಡಿಮೆಯಾಗುತ್ತದೆ. (ಪುರುಷರ ಮೇಲಾಗುವ ಪರಿಣಾಮಗಳು ಕ್ಷೌರ ಮುಂತಾದ ಪ್ರಾಯಶ್ಚಿತ್ತ ಕರ್ಮದಿಂದ ಮತ್ತು ವಾಸ್ತುವಿನ ಮೇಲಾಗುವ ಪರಿಣಾಮವು ಉದಕಶಾಂತಿಯಿಂದ ಕಡಿಮೆಯಾಗುತ್ತದೆ.)
ವ್ರತವನ್ನು ಆಚರಿಸುವ ಪದ್ಧತಿ
ಅ. ಈ ದಿನ ಸ್ತ್ರೀಯರು ವನಸ್ಪತಿಯ (ಆಘಾಡಾ) ಕಡ್ಡಿಯಿಂದ ಹಲ್ಲುಜ್ಜಬೇಕು.
ಆ. ಸ್ನಾನವಾದ ನಂತರ ‘ಮಾಸಿಕ ಸರದಿಯ ಸಮಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಆಗಿರುವ ಸ್ಪರ್ಶದಿಂದ ಉಂಟಾದ ದೋಷಗಳ ನಿವಾರಣೆಗಾಗಿ, ಅರುಂಧತಿ ಸಮೇತ ಸಪ್ತರ್ಷಿಗಳನ್ನು ಪ್ರಸನ್ನಗೊಳಿಸಲು ನಾನು ಈ ವ್ರತವನ್ನು ಮಾಡುತ್ತಿದ್ದೇನೆ ಎಂದು ಪೂಜೆಗೆ ಮುಂಚೆ ಸಂಕಲ್ಪ ಮಾಡಬೇಕು.
ಇ. ಮಣೆಯ ಮೇಲೆ ಅಕ್ಕಿಯ ಎಂಟು ರಾಶಿಗಳನ್ನು ಹಾಕಿ ಅವುಗಳ ಮೇಲೆ ಎಂಟು ಅಡಕೆಗಳನ್ನಿಟ್ಟು ಕಶ್ಯಪಾದಿ ಸಪ್ತರ್ಷಿ ಮತ್ತು ಅರುಂಧತಿಯ ಅವಾಹನೆಯನ್ನು ಮಾಡಿ ಶೋಡಷೋಪಚಾರ ಪೂಜೆಯನ್ನು ಮಾಡಬೇಕು.
ಈ. ಈ ದಿನ ಕೇವಲ ಗೆಡ್ಡೆಗೆಣಸುಗಳ ಆಹಾರವನ್ನು ಸೇವಿಸಬೇಕು. ಎತ್ತುಗಳ ಶ್ರಮದ ಏನನ್ನೂ ತಿನ್ನಬಾರದು ಎಂದು ಹೇಳಲಾಗಿದೆ.
ಉ. ಮರುದಿನ ಕಶ್ಯಪಾದಿ ಸಪ್ತರ್ಷಿ ಮತ್ತು ಅರುಂಧತಿ ಇವರ ವಿಸರ್ಜನೆಯನ್ನು ಮಾಡಬೇಕು.
ಹನ್ನೆರಡು ವರ್ಷಗಳ ನಂತರ ಅಥವಾ ವಯಸ್ಸಿನ ಐವತ್ತನೆಯ ವರ್ಷದ ನಂತರ ಈ ವ್ರತದ ಸಮಾಪ್ತಿಯನ್ನು (ಉದ್ಯಾಪನೆ) ಮಾಡಬಹುದು. ಬೇಕಿದ್ದಲ್ಲಿ ಉದ್ಯಾಪನೆಯ ನಂತರವೂ ವ್ರತವನ್ನು ಮುಂದುವರಿಸಬಹುದು. (ಮುಂದುವರಿಯುವುದು)
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !