ಪಾಕಿಸ್ತಾನ ಸಂಸತ್ತಿನಿಂದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರನ್ನು ‘ನಿಶಾನ್-ಎ-ಪಾಕಿಸ್ತಾನ’ ಪ್ರಶಸ್ತಿಗೆ ಶಿಫಾರಸ್ಸು

ಪಾಕಿಸ್ತಾನದ ಬೆಂಬಲದಿಂದಾಗಿಯೇ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಕಾರ್ಯ ಮಾಡುತ್ತಿದ್ದರಿಂದ ಪಾಕಿಸ್ತಾನವು ಅವರಿಗೆ ಬಹುಮಾನ ನೀಡುತ್ತಿದೆ, ಇದು ಮತ್ತೊಮ್ಮೆ ಸಾಬೀತಾಯಿತು ! ಭಾರತವು ಗಿಲಾನಿಯವರಿಗೆ ಪಾಕಿಸ್ತಾನಕ್ಕೆ ಹೋಗಲು ಬಿಡಬಾರದು ಹಾಗೂ ಒಂದುವೇಳೆ ಅವರು ಹೋದರೆ ಅವರನ್ನು ಪುನಃ ಸೇರಿಸಿಕೊಳ್ಳಬಾರದು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

ಸೈಯದ್ ಅಲಿ ಶಾ ಗಿಲಾನಿ

ಇಸ್ಲಾಮಾಬಾದ (ಪಾಕಿಸ್ತಾನ) – ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸಯ್ಯದ ಅಲಿ ಶಾಹ ಗಿಲಾನಿಯವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನಿಶಾನ್-ಎ-ಪಾಕಿಸ್ತಾನ’ ನೀಡುವಂತೆ ಪಾಕಿಸ್ತಾನದ ಸಂಸತ್ತು ಶಿಫಾರಸ್ಸನ್ನು ಮಾಡಿದೆ. ಸಯ್ಯದ ಅಲಿ ಶಾಹ ಗಿಲಾನಿಯವರ ಜೀವನದ (ಪ್ರತ್ಯೇಕತಾದಿ) ಪ್ರವಾಸದ ಬಗ್ಗೆ ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು, ಇಸ್ಲಾಮಾಬಾದ್ ಒಂದು ಇಂಜಿನಿಯರಿಂಗ್ ವಿದ್ಯಾಪೀಠಕ್ಕೆ ಗಿಲಾನಿಯವರ ಹೆಸರು ನೀಡಬೇಕು’, ಎಂಬ ಶಿಫಾರಸ್ಸನ್ನು ಮಾಡಲಾಗಿದೆ. ಸಯ್ಯದ ಅಲಿ ಶಾಹ ಗಿಲಾನಿಯವರು ‘ಹುರ್ರಿಯತ್ ಕಾನ್ಫರೆನ್ಸ್’ ಈ ಪ್ರತ್ಯೇಕವಾದಿ ಸಂಘಟನೆಗೆ ರಾಜೀನಾಮೆ ನೀಡಲು ಘೋಷಿಸಿದ ನಂತರ ಈ ಶಿಫಾರಸ್ಸನ್ನು ಮಾಡಲಾಯಿತು. ೯೦ ವರ್ಷದ ಗಿಲಾನಿಯವರು ಸುದೀರ್ಘ ಕಾಲ ‘ಹುರ್ರಿಯತ್’ನ ನೇತೃತ್ವವನ್ನು ವಹಿಸಿದ್ದರು.