ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಇವು ಭಾಜಪದ ವೈಯಕ್ತಿಕ ಆಸ್ತಿಯಲ್ಲ ! – ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

ಡಿ.ಕೆ. ಶಿವಕುಮಾರ್

ಉಜ್ಜಯಿನಿ (ಮಧ್ಯಪ್ರದೇಶ) – ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಭಾಜಪ ಪಕ್ಷದ ವೈಯಕ್ತಿಕ ಆಸ್ತಿಯಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳೀದರು. ಅವರು ಮಧ್ಯಪ್ರದೇಶದ ಪ್ರವಾಸದಲ್ಲಿದ್ದಾರೆ. ಅವರು ಜೂನ್ ೧೧ ರಂದು ಮುಂಜಾನೆ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿದರು, ಹಾಗೇಯೆ ಭಸ್ಮಾರತಿಗೂ ಉಪಸ್ಥಿತರಾಗಿದ್ದರು. ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮಹಾಕಾಳ ಮತ್ತು ಕಾಲಭೈರವನ ಭಕ್ತರಾಗಿದ್ದಾರೆ. ಅವರು, ”ಕೆಟ್ಟಗಳಿಗೆ ನಡೆಯುತ್ತಿರುವಾಗ ನಾನು ಮಹಾಲಾಲನ ದರ್ಶನಕ್ಕಾಗಿ ಉಜ್ಜಯಿನಿಗೆ ೩ ಬಾರಿ ಬಂದಿದ್ದೇ” ಎಂದ ಹೇಳಿದರು.