ಭಾಜಪದ ನಾಯಕಿ ಶೋಭಾ ಕರಂದ್ಲಾಜೆಯವರಿಂದ ಕಾಂಗ್ರೆಸ್ಸಿನ ಮುಖಂಡರ ಮೇಲೆ ಆರೋಪ

ಬೆಂಗಳೂರು (ಕರ್ನಾಟಕ) – ಸಿದ್ದರಾಮಯ್ಯ ಮುಸಲ್ಮಾನರ ಹಾಗೂ ಡಿ .ಕೆ. ಶಿವಕುಮಾರ ಅಪರಾಧಿಗಳ ಮುಖಂಡರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಲು ನಮಗೆ ಭಯವಾಗುತ್ತದೆ, ಎಂದು ಭಾಜಪದ ರಾಷ್ಟ್ರೀಯ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಇವರು ಟೀಕಿಸಿದ್ದಾರೆ. ಅವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.
ಮುಸಲ್ಮಾರ ನಾಯಕ ಸಿದ್ದರಾಮಯ್ಯ, ಕ್ರಿಮಿನಲ್ಸ್ ನಾಯಕ ಡಿ.ಕೆ.ಶಿವಕುಮಾರ್ -ಶೋಭಾ ಕರಂದ್ಲಾಜೆ ವಾಗ್ದಾಳಿ @ShobhaBJP @siddaramaiah @DKShivakumar #Congress https://t.co/gzkh6LtZx8
— NewsFirst Kannada (@NewsFirstKan) April 20, 2023
ಶೋಭಾ ಕರಂದ್ಲಾಜೆ ಮಾತು ಮುಂದುವರಿಸಿ , ನಮ್ಮ ಕಾರು ಹೋಗುವಾಗ ಕೆಲವು ಜನರು ಹಿಂದಿನಿಂದ ಹಸಿರು ಧ್ವಜಗಳನ್ನು ಹಿಡಿದು ಬರುತ್ತಾರೆ ಮತ್ತು ‘ಸಿದ್ದರಾಮಯ್ಯ ಬರುತ್ತಾರೆ ಮತ್ತು ನಿಮ್ಮನ್ನು ನೋಡಿಕೊಳ್ಳುತ್ತಾರೆ’, ಎನ್ನುತ್ತಾರೆ. ಕಾಂಗ್ರೆಸ್. ಅಧಿಕಾರಕ್ಕೆ ಬಂದರೆ ಗೋಹತ್ಯೆ ಕಾನೂನು ರದ್ದುಪಡಿಸುವುದು , ಎಂದು ಕಾಂಗ್ರೆಸ್ ಹೇಳಿದೆ. ಕೇರಳದಲ್ಲಿ ನಡು ರಸ್ತೆಯಲ್ಲಿ ಗೋಹತ್ಯೆ ಮಾಡಿರುವ ರಸುಲನಿಗೆ ಕಾಂಗ್ರೆಸ್ಸಿನ ಯುವಾ ಮೋರ್ಚಾದ ಅಧ್ಯಕ್ಷ ಮಾಡಲಾಗಿದೆ. ಇಂತಹವರ ಜೊತೆ ಡಿ.ಕೆ. ಶಿವಕುಮಾರರ ಒಡನಾಟ ಇದೆ . ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೧ ಸಾವಿರ ೭೦೦ ಕಾರ್ಯಕರ್ತರ ಮೇಲಿನ ಮೋಕ್ಕದಮೆ ರದ್ದುಪಡಿಸಿದರು.
(ಸೌಜನ್ಯ : Tv9 Kannada)
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ