|
ನವದೆಹಲಿ – ನಾಲ್ಕು ದಿನಗಳ ಹರಸಾಹಸದ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ಡಿ.ಕೆ. ಶಿವಕುಮಾರ ಇವರು ಸಧ್ಯಕ್ಕೆ ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿ ಪಟ್ಟಿದ್ದಾರೆ. ಸೋನಿಯಾ ಗಾಂಧಿ ಮಧ್ಯಸ್ಥಿಕೆಯಿಂದ ಶಿವಕುಮಾರ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ, ಮುಂದಿನ ಎರಡೂವರೆ ವರ್ಷ ಶಿವಕುಮಾರ ಮುಖ್ಯಮಂತ್ರಿಯಾಗಲಿದ್ದಾರೆ.
(ಸೌಜನ್ಯ : Vijay Karnataka | ವಿಜಯ ಕರ್ನಾಟಕ)
1. ಡಿ.ಕೆ. ಶಿವಕುಮಾರ ಇವರು, ಪಕ್ಷದ ಸೂತ್ರಕ್ಕೆ ನನ್ನ ಸಹಮತವಿದೆ. ಲೋಕಸಭೆ ಚುನಾವಣೆ ಮುಂದಿದ್ದು, ಅದರ ಹೊಣೆ ಹೊರಲು ಸಿದ್ಧನಿದ್ದೇನೆ.
2. ಮೇ 20 ರಂದು ಬೆಂಗಳೂರಿನಲ್ಲಿ ನೂತನ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.